ಇನ್ಯಾರಿಗೋ ಕಾಯ್ಬೇಡಿ… ನಿಮ್ಮನ್ನೇ ನೀವು ತಬ್ಬಿಕೊಂಡು ನೋಡಿ, ಆಗುತ್ತೆ ಕಮಾಲ್

First Published | Apr 4, 2024, 4:44 PM IST

ಯಾರಾದರೂ ನಮ್ಮನ್ನು ತಬ್ಬಿಕೊಂಡಾಗ, ನಮಗೆ ತುಂಬಾನೆ ರಿಲ್ಯಾಕ್ಸ್ ಆಗುತ್ತೆ ಅಲ್ವಾ?  ಆದರೆ ಬೇರೆಯವರೇ ನಮ್ಮನ್ನು ಹಗ್ ಮಾಡಿ ಈ ರೀತಿಯ ಭಾವನೆ ಬರುವವರೆಗೆ ಕಾಯುವುದು ಅಗತ್ಯವೇ? ಇಲ್ಲ, ನಿಮ್ಮನ್ನೇ ನೀವು ತಬ್ಬಿಕೊಂಡು ನೋಡಿ… ಹೆಚ್ಚಿನ ಪ್ರಯೋಜನ ಪಡೆಯುತ್ತೀರಿ. 
 

ನಿಮ್ಮನ್ನು ನೀವು ಆಕ್ಟೀವ್ ಆಗಿರಿಸಲು ಸೆಲ್ಫ್ ಲವ್ (self love) ಅತ್ಯಗತ್ಯ ಅನ್ನೋದನ್ನು ನೀವು ಕೇಳಿರುತ್ತೀರಿ ಅಲ್ವಾ?, ಅದೇ ರೀತಿ ಸೆಲ್ಫ್ ಲವ್ ಇದ್ದ ಹಾಗೇ  ಸೆಲ್ಫ್ ಹಗ್ ಕೂಡ ನಿಮ್ಮನ್ನು ನೋವಿನಿಂದ ದೂರವಿಡಲು ಸಹಾಯ ಮಾಡುತ್ತೆ. ಸೆಲ್ಫ್ ಹಗ್ ಎಂದರೆ ನಿಮ್ಮನ್ನು ನೀವೇ ತಬ್ಬಿಕೊಳ್ಳುವುದು. ನಾವು ದುಃಖಿತರಾದಾಗ ಅಥವಾ ಕೆಟ್ಟ ಪರಿಸ್ಥಿತಿಯಲ್ಲಿದ್ದಾಗ, ನಾವು ನಮ್ಮ ಹೆತ್ತವರು, ಸ್ನೇಹಿತರು, ಸಂಗಾತಿ ಅಥವಾ ಹತ್ತಿರದ ಯಾರನ್ನಾದರೂ ತಬ್ಬಿಕೊಳ್ಳುತ್ತೇವೆ. ಈ ರೀತಿ ಹಗ್ ಮಾಡೋದ್ರಿಂದ ನಮ್ಮ ಮನಸ್ಸು ಹಗುರಾಗುತ್ತೆ. ಆದರೆ  ನಮ್ಮ ಎಲ್ಲಾ ಪರಿಸ್ಥಿತಿಯಲ್ಲೂ ಜನರು ನಮ್ಮೊಂದಿಗೆ ಇರುತ್ತಾರೆ ಎಂದು ಹೇಳೋದಕ್ಕೆ ಸಾಧ್ಯವಿಲ್ಲ. ಹಾಗಾಗಿ ನಮ್ಮನ್ನು ನಾವು ಹಗ್(self hug) ಮಾಡೋ ಕಲೆ ಗೊತ್ತಿರಬೇಕು. ಇದರಿಂದ ಹೆಚ್ಚಿನ ಪ್ರಯೋಜನಗಳೂ ಇವೆ. 
 

ಸೆಲ್ಫ್ ಹಗ್ ಬಗ್ಗೆ ತಜ್ಞರು ಏನ್ ಹೇಳ್ತಾರೆ ನೋಡಿ
ನಿಮ್ಮನ್ನು ಇಷ್ಟಪಡುವುದು ಮತ್ತು ನಿಮ್ಮ ಬಗ್ಗೆ ದಯೆ ತೋರಿಸುವುದು ಬಹಳ ಮುಖ್ಯ. ನೀವು ಜೀವನದಲ್ಲಿ ವಿಭಿನ್ನ ಸಂದರ್ಭಗಳನ್ನು ಎದುರಿಸುತ್ತಿರುವಾಗ, ನಿಮಗೆ ಬೆಂಬಲ ನೀಡಲು, ನಿಮ್ಮ ಕಣ್ಣೀರು ಒರೆಸಲು ಯಾವಾಗಲೂ ಯಾರದರು ಇರೋದಕ್ಕೆ ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಅವರ ಪಾತ್ರವನ್ನು ನಿಮಗಾಗಿ ನಿರ್ವಹಿಸಬೇಕಾಗಬಹುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ನಿಮ್ಮ ಬಗ್ಗೆ ದಯೆ ಮತ್ತು ಸಂವೇದನಾಶೀಲರಾಗಿರುವುದು ಮುಖ್ಯ.

Tap to resize

ಯಾವುದೇ ಪರಿಸ್ಥಿತಿಯಲ್ಲಿ, ಇತರರಿಗಾಗಿ ಕಾಯುವುದಕ್ಕಿಂತ ನಿಮ್ಮನ್ನು ನೀವೇ ಅಪ್ಪಿಕೊಳ್ಳುವುದು ಉತ್ತಮ, ನಿಮ್ಮ ಸಮಸ್ಯೆಗಳನ್ನು ನಿಮ್ಮೊಂದಿಗೆ ಚರ್ಚಿಸಿ. ನಿಮ್ಮ ಸಮಸ್ಯೆಗಳ ಬಗ್ಗೆ ನೀವೇ ಯೋಚಿಸಿ, ಆದರೆ ನಿಮ್ಮ ಬಗ್ಗೆ ತೀರ್ಪು ನೀಡಬೇಡಿ. ನೀವು ಇತರರಿಂದ ನಿರೀಕ್ಷಿಸುವ ದಯೆಯನ್ನು ನೀವೇ ನಿಮ್ಮ ಮೇಲೆ ನೀಡುವಂತಿರಲಿ. ಸೆಲ್ಫ್ ಹಗ್ ನಿಮಗೆ ಉತ್ತಮ ಭಾವನೆ ಮೂಡಿಸಲು ಸಹಾಯ ಮಾಡುತ್ತದೆ.  
 

ಸೆಲ್ಫ್ ಹಗ್ ಮಾಡೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ. 
ನೋವನ್ನು ಕಡಿಮೆ ಮಾಡುತ್ತೆ (decrease the pain)

ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ ಅಧ್ಯಯನದ ಪ್ರಕಾರ, ನಿಮ್ಮನ್ನೇ ನೀವು ತಬ್ಬಿಕೊಳ್ಳುವುದು ನೋವು ಕಡಿಮೆ ಮಾಡುತ್ತದೆ. ಈ ಅಧ್ಯಯನವು ನೋವನ್ನು ಅನುಭವಿಸುತ್ತಿರುವ 20 ಜನರನ್ನು ಒಳಗೊಂಡಿತ್ತು. ಅದೇ ಸಮಯದಲ್ಲಿ, ಎರಡೂ ಕೈಗಳನ್ನು ಕ್ರಾಸ್ ಮಾಡಿ ತಮ್ಮನ್ನು ತಬ್ಬಿಕೊಂಡ ನಂತರ, ಅವರೆಲ್ಲರ ನೋವು ಕಡಿಮೆಯಾಗಿದೆ. ತನ್ನನ್ನು ತಾನು ತಬ್ಬಿಕೊಂಡ ಒಬ್ಬ ವ್ಯಕ್ತಿಗೆ ಎಷ್ಟು ಆರಾಮ ಎನಿಸಿತು ಅಂದರೆ, ಆತನಿಗೆ ಎಲ್ಲಿ ನೋವಾಗಿತ್ತು ಅನ್ನೋದೆ ಮರೆತು ಹೋಯಿತು. 

ಸುರಕ್ಷಿತ ಮತ್ತು ಸುಭದ್ರ ಭಾವನೆ (feeling safe and Secured)
ಪ್ರತಿಯೊಬ್ಬ ಮನುಷ್ಯನಿಗೂ ಮಾನವ ಸಂಪರ್ಕ ಬಹಳ ಮುಖ್ಯ, ಆದರೆ ಸ್ವಯಂ-ಸಂಪರ್ಕವೂ ಅಷ್ಟೇ ಮುಖ್ಯ. ನಿಮ್ಮ ಎರಡೂ ತೋಳುಗಳನ್ನು ಕಟ್ಟಿ ನಿಮ್ಮನ್ನು ತಬ್ಬಿಕೊಳ್ಳುವುದು ನಿಮಗೆ ಆರಾಮದಾಯಕ ಅನುಭವವನ್ನು ನೀಡುತ್ತದೆ, ಮತ್ತು ನೀವು ಒಂಟಿತನವನ್ನು ಅನುಭವಿಸುವುದಿಲ್ಲ. ಸೆಲ್ಫ್ ಹಗ್ (Self Hug) ನಿಮ್ಮ ಸ್ವಂತ ಶಕ್ತಿಯ ಬಗ್ಗೆ ನಿಮಗೆ ಅರಿವು ಮೂಡಿಸುತ್ತದೆ, ಯಾರೂ ನಿಮ್ಮೊಂದಿಗೆ ಇರಲು ಸಾಧ್ಯವಿಲ್ಲ ಆದರೆ ನೀವು ನಿಮ್ಮೊಂದಿಗೆ ಇರಬಹುದು ಅನ್ನೋದನ್ನು ಇದು ಮನವರಿಕೆ ಮಾಡುತ್ತೆ. 

ಮೂಡ್ ಚೆನ್ನಾಗಿರಲು ಸಹಾಯ ಮಾಡುತ್ತೆ
ನಿಮ್ಮ ಬ್ಯುಸಿ ಶೆಡ್ಯೂಲ್ ನಂತರ ನೀವು ದಣಿದಿದ್ದರೆ ಅಥವಾ ಕೆಟ್ಟ ಮೂಡ್ ನಲ್ಲಿದ್ರೆ, ನಿಮ್ಮನ್ನು ದೀರ್ಘವಾಗಿ ತಬ್ಬಿಕೊಳ್ಳುವುದು ನಿಮಗೆ ರಿಲ್ಯಾಕ್ಸ್ ಆಗಲು ಸಹಾಯ ಮಾಡುತ್ತದೆ. ಈ ಪರಿಸ್ಥಿತಿಯಲ್ಲಿ ಜನರೊಂದಿಗೆ ಸಮಯ ಕಳೆಯೋದು ಉತ್ತಮ. ನೀವು ಒಂಟಿತನವನ್ನು ಅನುಭವಿಸಿದಾಗ ತಿಂಗಳಿಗೆ ಒಂದು ಅಥವಾ ಎರಡು ಬಾರಿ ನಿಮ್ಮೊಂದಿಗೆ ಸಮಯ ಕಳೆಯಲು ಪ್ರಯತ್ನಿಸಿ, ನಿಮ್ಮ ಒಂಟಿತನ (Loneliness) ದೂರವಾಗುತ್ತೆ. ನಿಮ್ಮ ಎರಡೂ ಕೈಗಳಿಂದ ನಿಮ್ಮನ್ನು ತಬ್ಬಿಕೊಳ್ಳಿ, ಇದು ನಿಮಗೆ ರಿಲ್ಯಾಕ್ಸ್ ನೀಡುತ್ತದೆ, ಜೊತೆಗೆ ಕಾರ್ಟಿಸೋಲ್ ಹಾರ್ಮೋನ್ (cartisol hormone) ಮಟ್ಟ ಕಡಿಮೆ ಮಾಡುತ್ತದೆ. ಇದು ಒತ್ತಡ ಮತ್ತು ಉದ್ವೇಗವನ್ನು (Tension) ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.

ಹ್ಯಾಪಿ ಹಾರ್ಮೋನ್ಸ್ ಬಿಡುಗಡೆ ಮಾಡುತ್ತೆ
ಸೆಲ್ಫ್ ಹಗ್ ದೇಹದಲ್ಲಿ ಆಕ್ಸಿಟೋಸಿನ್, ಸಿರೊಟೋನಿನ್ ಮತ್ತು ಎಂಡಾರ್ಫಿನ್ ಹಾರ್ಮೋನ್ಸ್ (endorphin hormon) ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ಮೂಡ್ ಚೆನ್ನಾಗಿರುವಂತೆ ಮಾಡುತ್ತೆ, ಜೊತೆಗೆ ಕೋಪ, ಒಂಟಿತನದ ಭಾವನೆಗಳನ್ನು ನಿಯಂತ್ರಿಸುತ್ತದೆ. ಇದು ಮಾತ್ರವಲ್ಲ, ಈ ಹಾರ್ಮೋನುಗಳು ಆರೋಗ್ಯಕರ ನಿದ್ರೆಯ ಚಕ್ರಗಳನ್ನು ನಿಯಂತ್ರಿಸುತ್ತವೆ.

Latest Videos

click me!