ಬಾಲಿವುಡ್ ನಟಿಯರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭಾರತೀಯ ಕ್ರಿಕೆಟಿಗರು ಯಾರೆಲ್ಲಾ?

First Published | Dec 23, 2023, 3:01 PM IST

ಕ್ರಿಕೆಟ್ ಮತ್ತು ಬಾಲಿವುಡ್ ಗೆ ಬಿಟ್ಟೂ ಬಿಡಲಾಗದ ನಂಟು. ಹಲವಾರು ಮಂದಿ ಭಾರತೀಯ ಕ್ರಿಕೆಟಿಗರು ಬಾಲಿವುಡ್ ನಟಿಯರ ಪ್ರೀತಿಯಲ್ಲಿ ಬಿದ್ದು ಮದುವೆಯಾಗಿದ್ದಾರೆ. ವರ್ಷಗಳ ಹಿಂದಿನ ಮೊಹಮ್ಮದ್ ಅಜರುದ್ದೀನ್ ಮತ್ತು ಸಂಗೀತಾ ಬಿಜಲಾನಿ ಜೋಡಿಯಿಂದ ಹಿಡಿದು ಇತ್ತೀಚಿನ ರಾಹುಲ್-ಅತಿಯಾ ಜೋಡಿಯೂ ಇದರಲ್ಲಿ ಸೇರಿದೆ. ಅಂಥಾ ಜೋಡಿಗಳ ಬಗ್ಗೆ ಇಲ್ಲಿದೆ ಮಾಹಿತಿ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ
ಅತ್ಯಂತ ಪ್ರಸಿದ್ಧ ಕ್ರಿಕೆಟ್-ಬಾಲಿವುಡ್ ಜೋಡಿ, ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ.  2017ರಲ್ಲಿ ಇಟಲಿಯಲ್ಲಿ ಖಾಸಗಿ ಸಮಾರಂಭದಲ್ಲಿ ಇವರಿಬ್ಬರೂ ವಿವಾಹವಾದರು. ವಿರಾಟ್ ಮತ್ತು ಅನುಷ್ಕಾ ಇಬ್ಬರೂ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಯಶಸ್ಸನ್ನು ಕಂಡಿದ್ದಾರೆ. ಅಭಿಮಾನಿಗಳು ಇವರನ್ನು ಪ್ರೀತಿಯಿಂದ ವಿರುಷ್ಕಾ ಎಂದು ಕರೆಯುತ್ತಾರೆ. 

ಕ್ರಿಕೆಟಿಗ ರಾಹುಲ್, ಬಾಲಿವುಡ್ ನಟಿ ಅಥಿಯಾ ಶೆಟ್ಟಿಯನ್ನು ವಿವಾಹವಾಗಿದ್ದಾರೆ. ಸುನೀಲ್ ಶೆಟ್ಟಿ ಅವರ ಫಾರ್ಮ್ ಹೌಸ್‌ನಲ್ಲಿ ಕೆ. ಎಲ್. ರಾಹುಲ್ ಹಾಗೂ ಅಥಿಯಾ ಶೆಟ್ಟಿ ವಿವಾಹ ಮಹೋತ್ಸವ ಜನವರಿ 23 ರಂದು ಅದ್ಧೂರಿಯಾಗಿ ನೆರವೇರಿತು.

Tap to resize

ಯುವರಾಜ್ ಸಿಂಗ್ ಮತ್ತು ಹೇಜಲ್ ಕೀಚ್
ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಬಹುಕಾಲದ ಗೆಳತಿ ಹೇಜಲ್ ಕೀಚ್ ಅವರನ್ನು ನವೆಂಬರ್ 30 ರಂದು ಬುಧವಾರ ಪಂಜಾಬ್‌ನ ಫತೇಘರ್ ಸಾಹಿಬ್ ಜಿಲ್ಲೆಯ ದಫೆರಾ ಗ್ರಾಮದ ಡೇರಾ ಬಾಬಾ ರಾಮ್ ಸಿಂಗ್‌ನಲ್ಲಿ ವಿವಾಹವಾದರು. ಮದುವೆ ಸಮಾರಂಭದಲ್ಲಿ ಆಪ್ತರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಹೇಜಲ್ ಕೀಚ್, ನಟಿ ಮತ್ತು ರೂಪದರ್ಶಿಯಾಗಿದ್ದರು. ಇವರಿಬ್ಬರ ಪ್ರೀತಿ ಮತ್ತು ಮದುವೆ ಸಂಸ್ಕೃತಿಗಳ ಗಡಿಗಳನ್ನೂ ಮೀರಿದ್ದಾಗಿದೆ.

ಹರ್ಭಜನ್ ಸಿಂಗ್ ಮತ್ತು ಗೀತಾ ಬಸ್ರಾ:
ಭಾರತದ 'ಟರ್ಬನೇಟರ್' ನಟಿ ಗೀತಾರನ್ನು ವಿವಾಹವಾದರು. ಸ್ಪಿನ್ ಬೌಲಿಂಗ್‌ಗೆ ಹೆಸರುವಾಸಿಯಾದ ಹರ್ಭಜನ್ ಸಿಂಗ್ ಬಾಲಿವುಡ್ ನಟಿ ಗೀತಾ ಅವರೊಂದಿಗೆ ಹಲವಾರು ವರ್ಷಗಳ ಡೇಟಿಂಗ್ ನಂತರ 2015ರಲ್ಲಿ ವಿವಾಹವಾದರು. ಐದು ದಿನಗಳ ಕಾಲ ಈ ವಿವಾಹ ಸಮಾರಂಭ ನಡೆಯಿತು.

ಜಹೀರ್ ಖಾನ್ ಮತ್ತು ಸಾಗರಿಕಾ ಘಾಟ್ಗೆ
ಭಾರತದ ಮಾಜಿ ವೇಗಿ ಜಹೀರ್ ಖಾನ್ ನಟಿ ಸಾಗರಿಕಾ ಘಾಟ್ಗೆ ಅವರನ್ನು ಪ್ರೀತಿಸಿದ್ರು. ಬಳಿಕ ಈ ಜೋಡಿ 2017, ನವೆಂಬರ್ 23 ರಂದು ವಿವಾಹವಾದರು. ಅವರ ವಿವಾಹದಲ್ಲಿ ಕುಟುಂಬದವರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ನವೆಂಬರ್ 27 ರಂದು ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಮತ್ತು ಟವರ್‌ನಲ್ಲಿ ಬಾಲಿವುಡ್ ಸೆಲೆಬ್ಸ್ ಮತ್ತು ಜಹೀರ್ ಟೀಮ್ ಇಂಡಿಯಾ ಸಹೋದ್ಯೋಗಿಗಳಿಗೆ ಭವ್ಯವಾದ ಆರತಕ್ಷತೆ ನಡೆಯಿತು.

ಮನ್ಸೂರ್ ಅಲಿ ಖಾನ್ ಪಟೌಡಿ ಮತ್ತು ಶರ್ಮಿಳಾ ಟ್ಯಾಗೋರ್
1960ರ ದಶಕದಲ್ಲಿ ಮನ್ಸೂರ್ ಅಲಿ ಖಾನ್ ಪಟೌಡಿ ಮತ್ತು ಶರ್ಮಿಳಾ ಟ್ಯಾಗೋರ್, ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, 27 ಡಿಸೆಂಬರ್, 1968 ರಂದು ರಾಜಮನೆತನದ ಸಮಾರಂಭದಲ್ಲಿ ವಿವಾಹವಾದರು, ಇದು ಆ ಸಮಯದಲ್ಲಿ ಭಾರತದ ಅತ್ಯಂತ ಚರ್ಚೆಯ ವಿವಾಹಗಳಲ್ಲಿ ಒಂದಾಗಿದೆ. ಬಾಲಿವುಡ್‌ನ ಅತ್ಯಂತ ಮನಮೋಹಕ ಚಲನಚಿತ್ರ ತಾರೆಗಳಲ್ಲಿ ಒಬ್ಬರಾಗಿದ್ದ ಬಂಗಾಳದ ಸುಂದರಿ ಶರ್ಮಿಳಾ ಮತ್ತು ಭಾರತೀಯ ಕ್ರಿಕೆಟ್ ತಂಡದ ಕಿರಿಯ ನಾಯಕನ ವಿವಾಹವು ಹೆಚ್ಚು ಸುದ್ದಿಯಾಗಿತ್ತು.

ಮೊಹಮ್ಮದ್ ಅಜರುದ್ದೀನ್ ಮತ್ತು ಸಂಗೀತಾ ಬಿಜಲಾನಿ:
ಭಾರತದ ಅತ್ಯಂತ ಯಶಸ್ವಿ ಕ್ರಿಕೆಟ್ ನಾಯಕರಲ್ಲಿ ಒಬ್ಬರಾದ ಮೊಹಮ್ಮದ್ ಅಜರುದ್ದೀನ್ ಅವರು 1996 ರಲ್ಲಿ ನಟಿ ಸಂಗೀತಾ ಬಿಜಲಾನಿ ಅವರೊಂದಿಗೆ ಮದುವೆಯಾದ್ರು. ಆದರೆ, ಇವರಿಬ್ಬರ ಮದುವೆಯು ಹೆಚ್ಚು ಸಮಯ ಉಳಿಯಲಿಲ್ಲ. ವಿಚ್ಛೇದನದಲ್ಲಿ ಕೊನೆಗೊಂಡಿತು. ಅಜರ್ ಮೊದಲು ನೌರೀನ್ ಅವರನ್ನು ವಿವಾಹವಾದರು, ಅವರಿಗೆ ಅಸದ್ ಮತ್ತು ಅಯಾಜ್ ಎಂಬ ಇಬ್ಬರು ಗಂಡು ಮಕ್ಕಳಿದ್ದರು. 9 ವರ್ಷಗಳ ಮದುವೆಯ ನಂತರ ಅವರು ವಿಚ್ಛೇದನ ಪಡೆದರು. ನಂತರ ಅವರು ರೂಪದರ್ಶಿ-ನಟ ಸಂಗೀತಾ ಬಿಜಲಾನಿ ಅವರನ್ನು 1996ರಲ್ಲಿ ವಿವಾಹವಾದರು. ದಂಪತಿಗಳು 2010 ರಲ್ಲಿ ಬೇರ್ಪಟ್ಟರು.

Latest Videos

click me!