ಅವನು ನಿಮ್ಮನ್ನು ಪ್ರೀತಿಸುತ್ತಾನಾ? ಹೀಗೆ ಮಾಡಿದ್ರೆ ನಿಮ್ಮ ಮೇಲೆ ಲವ್ವಾಗಿದೆ ಎಂದರ್ಥ !

First Published | Dec 22, 2023, 5:37 PM IST

ಕೆಲವೊಮ್ಮೆ ನಮಗೂ ಸಹ ತುಂಬಾನೆ ಪ್ರೀತಿಸುವ ಹುಡುಗ ಬೇಕು ಅಂದೆನಿಸುತ್ತೆ. ಆದರೆ ಅಂತಹ ಹುಡುಗ ಸಿಗೋದಕ್ಕೆ ಸಾಧ್ಯಾನ ಅಂತಾನೂ ಅನಿಸುತ್ತೆ. ನಿಮ್ಮ ಹುಡುಗ ನಿಜವಾಗಿಯೂ ನಿಮ್ಮನ್ನು ಹುಚ್ಚರಂತೆ ಪ್ರೀತಿಸುತ್ತಾನ ತಿಳಿಯೋದು ಹೇಗೆ? 
 

ಇತ್ತೀಚಿಗೆ ರಿಯಲ್ ಲವ್ (real love) ಸಿಗೋದು ತುಂಬಾ ಕಷ್ಟ. ಪ್ರೀತಿ ಅಂದ್ರೆ ಟೈಮ್ ಪಾಸ್ ಅನ್ನೋ ಹಾಗಾಗಿದೆ. ಆದರೆ ನಿಮಗೂ ನಿಮ್ಮ ಎದೆಯ ಮೂಲೆಯಲ್ಲಿ ತನ್ನನ್ನು ಹುಚ್ಚರಂತೆ ಪ್ರೀತಿಸುವ ಒಬ್ಬ ಹುಡುಗ ಬೇಕು ಎಂದು ಅನಿಸುತ್ತೆ ಅಲ್ವಾ? ಅಂತಹ ಹುಡುಗ ನಿಜವಾಗಿಯೂ ಸಿಕ್ಕಿರುವನೇ? ಅದನ್ನ ತಿಳಿಯೋದು ಹೇಗೆ? ನಿಮ್ಮ ಹುಡುಗನಲ್ಲೂ ಈ ಎಲ್ಲಾ ಚಿಹ್ನೆಗಳಿದ್ರೆ, ಅವರು ಖಂಡಿತವಾಗಿಯೂ ನಿಮ್ಮನ್ನು ತುಂಬಾನೆ ಪ್ರೀತಿಸುತ್ತಾರೆ ಎಂದು ಅರ್ಥ. 
 

ನಿಮ್ಮ ಸಂತೋಷ ಮತ್ತು ಅಗತ್ಯಗಳನ್ನು ತನ್ನ ಅಗತ್ಯಕ್ಕಿಂತ ಹೆಚ್ಚಾಗಿ ಪರಿಗಣಿಸುತ್ತಾನೆ.
ತನ್ನ ಅಗತ್ಯಗಳನ್ನು ಕಡೆಗಣಿಸಿ, ನಿಮ್ಮ ಅಗತ್ಯಗಳು ಮತ್ತು ವೈಯಕ್ತಿಕ ಸಂತೋಷವನ್ನು (self happiness) ಕಾಪಾಡುವ ಹುಡುಗ ನಿಜವಾಗಿಯೂ ನಿಮ್ಮನ್ನ ಪ್ರೀತಿಸುತ್ತಾನೆ. ಅವನು ಯಾವಾಗಲೂ ನಿಮ್ಮನ್ನು ಸಂತೋಷಪಡಿಸಲು ಸಿದ್ಧನಿರುತ್ತಾನೆ. ಯಾವಾಗಲೂ ನಿಮ್ಮ ಜೀವನವನ್ನು ಸುಲಭ ಮತ್ತು ಹೆಚ್ಚು ಅನುಕೂಲಕರವಾಗಿಸುವ ಮಾರ್ಗಗಳನ್ನು ಹುಡುಕುತ್ತಿರುತ್ತಾನೆ ಅಂದರೆ  ಆ ಹುಡುಗನ ಪ್ರೀತಿ ಬೆಟ್ಟದಷ್ಟು. 

Tap to resize

ನಿಮಗಾಗಿ ಸಮಯ ನೀಡುತ್ತಾನೆ (spend time with you)
ಸಮಯವು ನಾವು ಇನ್ನೊಬ್ಬ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬಹುದಾದ ಅತ್ಯಂತ ಅಮೂಲ್ಯ ವಿಷಯ ಎಂದು ನಮಗೆಲ್ಲರಿಗೂ ತಿಳಿದಿದೆ. ಒಮ್ಮೆ ಸಮಯ ಕಳೆದ ನಂತರ, ಅದನ್ನು ಎಂದಿಗೂ ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಅವರು ತಮ್ಮ ಹೆಚ್ಚಿನ ಸಮಯವನ್ನು ನಿಮಗಾಗಿ ನಿಮ್ಮ ಜೊತೆ ಕಳೆಯಲು ಸಿದ್ಧರಿದ್ದಾರೆ ಎಂಬುದು ಅವರ ಪ್ರೀತಿಯನ್ನು ತೋರಿಸುತ್ತೆ.

ಕನಸು ನನಸಾಗಿಸಲು ಅವರು ನಿಮ್ಮನ್ನು ಬೆಂಬಲಿಸುತ್ತಾರೆ
ರಿಲೇಶನ್ ಶಿಪ್ ನಲ್ಲಿರಲು ಬಯಸುವ ಪುರುಷನು ನಿಮ್ಮ ಜೀವನವನ್ನು ನಡೆಸುವ ವಿಧಾನವನ್ನು ನಿಯಂತ್ರಿಸಲು ಬಯಸಬಹುದು, ಅದು ನಿಜವಾದ ಪ್ರೀತಿಯಲ್ಲ. ನಿಜವಾದ ಪ್ರೀತಿ ಅಂದ್ರೆ ನಿಮ್ಮನ್ನು ನೀವು ಇದ್ದಂತೆ ಸ್ವೀಕರಿಸೋದು, ಜೊತೆಗೆ ನಿಮ್ಮ ಕನಸುಗಳ ಕಡೆಗೆ ನಿಮ್ಮನ್ನು ಪ್ರಚೋದಿಸುವ ವ್ಯಕ್ತಿ, ನಿಮ್ಮ ಕನಸುಗಳಿಗೆ ಬೆನ್ನೆಲುಬಾಗಿ (support your dream) ನಿಲ್ಲುವ ವ್ಯಕ್ತಿಯ ಪ್ರೀತಿ ನಿಜವಾದುದು. 

ನಿಮ್ಮ ಬಗ್ಗೆ ತಿಳಿದುಕೊಳ್ಳಲು ಬಯಸುವ ವ್ಯಕ್ತಿ
ಅವನು ನಿಜವಾಗಿಯೂ ನಿಮ್ಮನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ತಿಳಿದುಕೊಳ್ಳಲು ಬಯಸುತ್ತಾನೆ. ಮತ್ತು ಅದಕ್ಕಾಗಿಯೇ ಅವರು ನಿಮ್ಮ ಭಾವೋದ್ರೇಕಗಳು, ಆಸಕ್ತಿಗಳು, ಆಲೋಚನೆಗಳು ಮತ್ತು ಅಭಿಪ್ರಾಯಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಾರೆ. ಅವನು ಯಾವಾಗಲೂ ನಿಮ್ಮ ಮಾತನ್ನು ಕೇಳುತ್ತಿರುವಂತೆ ನಿಮಗೆ ಅನಿಸುವಂತೆ ಮಾಡುತ್ತಾನೆ.

ಮುಕ್ತವಾಗಿ ಮಾತನಾಡುತ್ತಾರೆ
ಆ ವ್ಯಕ್ತಿ ನಿಮ್ಮನ್ನು ನಿಜವಾಗಿ ಪ್ರೀತಿಸುತ್ತಿದ್ದರೆ, ತಾನು ಹೇಗಿದ್ದೇನೋ ಹಾಗೆಯೇ ನಿಮ್ಮ ಮುಂದೆ ತನ್ನನ್ನು ಸಂಪೂರ್ಣವಾಗಿ ತೆರೆದಿಡುತ್ತಾನೆ. ತಾನು ಪ್ರೀತಿಸೋದಾಗಿ ಬಾಯಿ ಬಿಟ್ಟು ಹೇಳದೇ ಹೋದರೂ ಅವರ ಗುಣಗಳಿಂದ ಅವರು ನಿಮ್ಮನ್ನೆಷ್ಟು ಪ್ರೀತಿಸುತ್ತಾರೆ ಅನ್ನೋದು ಗೊತ್ತಾಗುತ್ತೆ. 

ತನ್ನ ಸ್ನೇಹಿತರು ಮತ್ತು ಕುಟುಂಬಕ್ಕೆ ನಿಮ್ಮನ್ನು ಪರಿಚಯಿಸುತ್ತಾನೆ.
ನಿಜವಾಗಿಯೂ ನಿಮ್ಮನ್ನು ತನ್ನ ಬಾಳ ಸಂಗಾತಿಯಾಗಿ ಬಯಸುವ ವ್ಯಕ್ತಿ ಅವರಾಗಿದ್ದರೆ ನೀವು ಅವರ ಜೀವನದ ಎಲ್ಲಾ ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗಬೇಕೆಂದು ಅವರು ಬಯಸುತ್ತಾರೆ. ಏಕೆ? ಏಕೆಂದರೆ ನೀವು ಅವರ ಜೀವನದ ಪ್ರಮುಖ(important person)  ವ್ಯಕ್ತಿಗಳಲ್ಲಿ ಒಬ್ಬರಾಗುತ್ತೀರಿ. ತನ್ನ ಸ್ನೇಹಿತರು ಮತ್ತು ಕುಟುಂಬಕ್ಕೆ ತನ್ನನ್ನು ಪರಿಚಯಿಸುತ್ತಾನೆ. 

ನಿಮ್ಮ ಫ್ಯೂಚರ್ ಬಗ್ಗೆ ಮಾತನಾಡುತ್ತಾರೆ
ನಿಮ್ಮನ್ನು ನಿಜವಾಗಿ ಪ್ರೀತಿಸುತ್ತಿದ್ದರೆ, ಈವಾಗಿನ ನಿಮ್ಮ ಸ್ಥಿತಿಯ ಬಗ್ಗೆ ಅವರು ಚಿಂತಿಸೋದೆ ಇಲ್ಲ. ಯಾಕೆಂದರೆ ಅವರು ಇಬ್ಬರು ಜೊತೆಯಾಗಿ ಕಳೆಯುವ ದಿನಗಳ ಬಗ್ಗೆ ಯೋಚನೆ ಮಾಡುತ್ತಾರೆ. 
 

ಅವನು ನಿಮ್ಮೊಂದಿಗೆ ಇದ್ದಾಗಲೆಲ್ಲಾ ಯಾವಾಗಲೂ ನಗುತ್ತಾನೆ
ಆ ವ್ಯಕ್ತಿಯು ನಿಮ್ಮ ಜೊತೆ ಇರುವಾಗಲೆಲ್ಲಾ ತುಂಬಾ ಸಂತೋಷದಿಂದ ನಗು ನಗುನಗುತ್ತಲೇ ಇರುತ್ತಾರೆ ಎಂದಾದರೆ, ಅವರಿಗೆ ನಿಮ್ಮ ಜೊತೆ ಕಳೆಯುವ ಪ್ರತಿಯೊಂದು ಕ್ಷಣವೂ ಇಷ್ಟವಾಗಿರುತ್ತೆ ಎಂದು.  

Latest Videos

click me!