ಮಣಿಪುರಿ ಮಾಡೆಲ್ ಮದುವೆಯಾದ ನಟ ಹೂಡಾಗೆ ಜಾತಿಗೆಡಿಸಿದೆ ಎಂದು ನಿಂದನೆ: ನೆಟ್ಟಿಗರಿಂದ ಕ್ಲಾಸ್‌

First Published | Dec 12, 2023, 7:32 PM IST

ಹರ್ಯಾಣದ ಜಾಟ್ ಸಮುದಾಯದ ರಣ್‌ ದೀಪ್ ಹೂಡ ತಮ್ಮ ಪತ್ನಿ ಮಣಿಪುರ ಮೂಲದ ಮಾಡೆಲ್ ಲಿನ್ ಲೈಶ್ರಾಮ್  ಜೊತೆ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ ಫೋಟೋಗೆ ವ್ಯಕ್ತಿಯೊಬ್ಬ ಜಾತಿಗೆಡಿಸಿದೆ ಎಂದು ಕಾಮೆಂಟ್ ಮಾಡಿದ್ದು, ಈತನಿಗೆ ಈಗ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. 

ಬಾಲಿವುಡ್ ನಟ ರಣ್‌ದೀಪ್ ಹೂಡಾ ಅವರು ತಮ್ಮ 47ರ ಹರೆಯದಲ್ಲಿ ಗೆಳತಿ ಮಣಿಪುರ ಮೂಲದ ಮಾಡೆಲ್  ಲಿನ್ ಲೈಶ್ರಾಮ್ ಮದುವೆಯಾಗಿದ್ದು ಮಣಿಪುರದ ಮೈಥಿಯಿ ಸಂಪ್ರದಾಯದಂತೆ ಈ  ನವಂಬರ್ 29 ರಂದು ಈ ವಿವಾಹ ನಡೆದಿತ್ತು.

ಮಣಿಪುರದಲ್ಲಿ ಸರಳವಾಗಿ ಮದುವೆಯಾದ ಈ ಜೋಡಿ ಮುಂಬೈನಲ್ಲಿ ಬಾಲಿವುಡ್ ಗಣ್ಯರಿಗಾಗಿ ಅದ್ದೂರಿ ರಿಸೆಪ್ಷನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

Latest Videos


ಈ ರಿಸೆಪ್ಷನ್ ಕಾರ್ಯಕ್ರಮದಲ್ಲಿ ಬಾಲಿವುಡ್‌ ಸೆಲೆಬ್ರಿಟಿಗಳು ಭಾಗಿಯಾಗಿದ್ದು ನಟ ಕಪ್ಪು ಬಣ್ಣದ ಸೂಟ್‌ನಲ್ಲಿ ರೆಡಿಯಾಗಿದ್ದರೆ ಇತ್ತ ಪತ್ನಿ ಲಿನ್ ಲೈಶ್ರಾಮ್ ಅವರು ಅದ್ದೂರಿಯಾದ ಕಣ್ಣು ಕೋರೈಸುವ ಕೆಂಪು ಬಣ್ಣದ ಮಿರಿಮಿರಿ ಮಿಂಚುವ ಸೀರೆ ಧರಿಸಿದ್ದರು.

ಈ ಲೈಶ್ರಾಮ್ ಧರಿಸಿದ ಈ ಸಾರಿ ಬೆಲೆ ಬಹಳ ದುಬಾರಿಯಾಗಿದ್ದು, ಇಂಟರ್‌ನೆಟ್‌ನಲ್ಲಿ ಇದರ ಬೆಲೆ ತಲೆ ತಿರುಗುವಂತಿದೆ. 
ಲಿನ್ ಲೈಶ್ರಾಮ್ ಧರಿಸಿರುವ  ಈ ರಿಸೆಪ್ಷನ್ ಸೀರೆಯೂ ರೆಡ್ ಮೆರೂನ್ ಮಿಶ್ರಿತ  ಬಣ್ಣದಲ್ಲಿದ್ದು, ಡಿಸೈನರ್‌ಗಳಾದ ರೋಹಿತ್ ಗಾಂಧಿ ಹಾಗೂ ರಾಹುಲ್ ಖನ್ನಾ ಅವರು ಇದನ್ನು ಡಿಸೈನ್ ಮಾಡಿದ್ದಾರೆ.

ಆ ಸೀರೆಯ ಅದ್ಧೂರಿತನ ನೋಡಿಯೇ ಸೀರೆ ಸಾಮಾನ್ಯದಂತೂ ಅಲ್ಲ ಎಂದು ಹೇಳುವಂತಿದ್ದು, ಇವುಗಳ ಬೆಲೆ ಬರೋಬ್ಬರಿ 1.95 ಲಕ್ಷ ರೂಪಾಯಿಗಳು ಎಂದು ತಿಳಿದು ಬಂದಿದೆ.

ತಮ್ಮ ಮದುವೆಯ ದಿನ ಲಿನ್ ಲೈಶ್ರಾಮ್ ಹಾಗೂ ರಣ್‌ದೀಪ್ ಹೂಡಾ ಇಬ್ಬರೂ ಮಣಿಪುರಿ ಧಿರಿಸಿನಲ್ಲಿ ಕಂಗೊಳಿಸಿದ್ದರು. ಮಣಿಪುರ ರಾಜಧಾನಿ ಇಂಫಾಲ್‌ದಲ್ಲಿ ಈ ಮದುವೆ ನಡೆದಿತ್ತು.

ರಣ್‌ದೀಪ್ ಹೂಡ ಮೂಲತ ಹರ್ಯಾಣದ ಜಾಟ್ ಸಮುದಾಯದವರಾಗಿದ್ದು, ಜಾಟ್ ದಿವಾಸ್ ಎಂಬ ಯೂಸರ್‌ ನೇಮ್‌ನಿಂದ ಈ ಕಾಮೆಂಟ್ ಬಂದಿದ್ದು, ಈ ರೀತಿ ಕಾಮೆಂಟ್ ಮಾಡಿದವನ ವಿರುದ್ಧ ನೆಟ್ಟಿಗರು ಹೂಡಾ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ರೀತಿ ಕಾಮೆಂಟ್ ಮಾಡಿದವನಿಗೆ ಶಿಕ್ಷಣದ ಕೊರತೆ ಇದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಕೊಚ್ಚೆ ನೀರು ಕುಡಿಯುವವರು ಕೂಡ ಇನ್ಸ್ಟಾಗ್ರಾಮ್ ಬಳಸುತ್ತಿದ್ದಾರೆ ಈ ರೀತಿಯ ಕೀಳು ಮನಸ್ಥಿತಿ ಒಳ್ಳೆಯದಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. 

ಆಕೆ ಭಾರತೀಯ ರಾಜ್ಯ ಅಸ್ಸಾಂನಲ್ಲಿ ಜನಿಸಿದ್ದು ಜಾತಿ ಮೈಥಿ ಧರ್ಮ ಹಿಂದೂ ಬಾಲಿವುಡ್‌ನ ಕೆಲವರು ವಿದೇಶಿಗರನ್ನು ಮದುವೆಯಾಗಿ ಬಂದರೆ ಈ ಜನರು ಬಾಯಿ ಮುಚ್ಚಿ ಕುಳಿತುಕೊಳ್ಳುತ್ತಾರೆ. ಆದರೆ ಭಾರತದಲ್ಲೇ ಇರುವ ಭಾರತೀಯರನ್ನು ಮದುವೆಯಾದರೆ ನಾಯಿಗಳಂತೆ ಬೊಗಳಲು ಶುರು ಮಾಡುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

ಉತ್ತರ ಭಾರತೀಯರು ಈಶಾನ್ಯ ಭಾರತೀಯರನ್ನು ಭಾರತೀಯರು ಎಂದು ಏಕೆ ಒಪ್ಪಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಇಲ್ಲಿ ಬಂದಿರುವ ಕಾಮೆಂಟ್‌ಗಳನ್ನು ನೋಡಿದರೆ ಸಾಕು ಭಾರತ ಏಕೆ ಹಿಂದುಳಿದಿದೆ ಎಂಬುದು ಇದರಲ್ಲೇ ತಿಳಿಯುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಟೀಕೆಗಳೆನೇ ಇರಲಿ ಸಂಪ್ರದಾಯಿಕವಾಗಿ ಹಿಂದೂ ಮೈಥಿಯಿ ಸಂಪ್ರದಾಯದಂತೆ ಸರಳವಾಗಿ ಮದುವೆಯಾದ ಈ ಜೋಡಿಯ ಫೋಟೋಗಳು ಇಂಟರ್‌ನೆಟ್‌ನಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದವು. ತಮ್ಮ ಮೂಲವನ್ನು ಸಂಪ್ರದಾಯವನ್ನು ಈ ಜೋಡಿ ಮರೆತಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು.

click me!