ತಾಯ್ತನದಿಂದ… ಋತುಬಂಧದವರೆಗೆ, ಮಹಿಳೆಯರಲ್ಲಿ ಕಾಮಾಸಕ್ತಿ ಕುಂದೋದು ಯಾವಾಗ?

Published : Dec 12, 2023, 04:39 PM IST

ವಯಸ್ಸಾದಾಗ ಕಾಮಾಸಕ್ತಿ ಕಡಿಮೆ ಆಗೋದು ಸಾಮಾನ್ಯ. ಆದರೆ ನಿಮಗೆ ಸಮಯಕ್ಕಿಂತ ಮೊದಲು ಕಡಿಮೆ ಕಾಮಾಸಕ್ತಿಯ ಸಮಸ್ಯೆ ಇದ್ದರೆ ಅದಕ್ಕೆ ಕಾರಣಗಳನ್ನು ತಿಳಿಯಲು ಪ್ರಯತ್ನಿಸಿ. ಕಡಿಮೆ ಕಾಮಾಸಕ್ತಿಗೆ ಕಾರಣಗಳು ಯಾವುವು ಮತ್ತು ಅದನ್ನು ಹೇಗೆ ಎದುರಿಸುವುದು ಎಂದು ತಿಳಿಯಿರಿ.  

PREV
110
ತಾಯ್ತನದಿಂದ…  ಋತುಬಂಧದವರೆಗೆ, ಮಹಿಳೆಯರಲ್ಲಿ ಕಾಮಾಸಕ್ತಿ ಕುಂದೋದು ಯಾವಾಗ?

ವಯಸ್ಸಾದಂತೆ ಲೈಂಗಿಕ ಪ್ರಚೋದನೆ (sexual desire) ಕಡಿಮೆಯಾಗುವುದು ತುಂಬಾ ಸಾಮಾನ್ಯ. ಕೆಲವೊಮ್ಮೆ ಸಂಬಂಧಗಳಲ್ಲಿ ಪರಸ್ಪರ ಪ್ರತ್ಯೇಕತೆ ಮತ್ತು ಕೆಲವೊಮ್ಮೆ ದೈಹಿಕ ಸಮಸ್ಯೆಗಳಿಂದಾಗಿ ಕಾಮಾಸಕ್ತಿ ಕಡಿಮೆಯಾಗುತ್ತೆ. ಲೈಂಗಿಕ ಅನ್ಯೋನ್ಯತೆಯ ಕೊರತೆಯಿಂದಾಗಿ,  ಅನ್ಯೋನ್ಯವಾಗಿರೋ ದಾಂಪತ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತವೆ. ಇದು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ನೀವು ಸಮಯಕ್ಕಿಂತ ಮೊದಲು ಕಡಿಮೆ ಕಾಮಾಸಕ್ತಿಯ ಸಮಸ್ಯೆ ಹೊಂದಿದ್ರೆ, ಅದು ಯಾಕೆ ಹಾಗಾಗುತ್ತೆ ಅನ್ನೋದನ್ನು ತಿಳಿಯಿರಿ. 
 

210

ಕಾಮಾಸಕ್ತಿ ಎಂದರೇನು?
ಕಾಮಾಸಕ್ತಿ ಎಂಬುದು ವ್ಯಕ್ತಿಯ ಲೈಂಗಿಕ ಬಯಕೆಯಾಗಿದ್ದು, ಇದು ಹಾರ್ಮೋನುಗಳು, ಮಾನಸಿಕ ಆರೋಗ್ಯ (mental health), ಒತ್ತಡ, ಮೆದುಳಿನ ಕಾರ್ಯ ಮತ್ತು ನಡವಳಿಕೆಯ ಮಾದರಿಗಳಿಂದ ಪ್ರಭಾವಿತವಾಗಿರುತ್ತದೆ. ಹಾಗಿದ್ರೆ ಕಾಮಾಸಕ್ತಿ ಕಡಿಮೆಯಾಗಲು ಕಾರಣವೇನು? ಅನ್ನೋದನ್ನು ತಿಳಿಯಿರಿ. 

310

ಹೆಚ್ಚಿದ ಒತ್ತಡ
ಜೀವನದಲ್ಲಿ ಹೆಚ್ಚಾಗುವ ಒತ್ತಡವು (more stress) ಕಾಮಾಸಕ್ತಿಯನ್ನು ಕಡಿಮೆ ಮಾಡಲು ಮುಖ್ಯ ಕಾರಣವೆಂದು ತಿಳಿದು ಬಂದಿದೆ. ಇದು ಲೈಂಗಿಕ ಜೀವನದಲ್ಲಿ ಆಸಕ್ತಿಯ ಇಳಿಕೆಗೆ ಕಾರಣವಾಗುತ್ತದೆ, ಇದು ಸಂಬಂಧ ದೂರವಾಗಲು ಕಾರಣವಾಗುತ್ತದೆ. ವಾಸ್ತವವಾಗಿ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಒತ್ತಡವು ಪರಸ್ಪರ ಮೇಲಿನ ಆಸಕ್ತಿ ಕಡಿಮೆ ಮಾಡುತ್ತದೆ ಅಲ್ಲದೇ ಸೆಕ್ಸ್ ಡ್ರೈವ್ (Sex Drive) ಕಡಿಮೆ ಮಾಡುತ್ತೆ.

410

ಋತುಬಂಧದ ಹಂತ
ಅಂತಹ ಸಮಯದಲ್ಲಿ, ಮಹಿಳೆಯರ ದೇಹದಲ್ಲಿ ಅನೇಕ ರೀತಿಯ ಬದಲಾವಣೆಗಳು ಸಂಭವಿಸುತ್ತವೆ, ಇದು ಈಸ್ಟ್ರೊಜೆನ್ ಕೊರತೆಯನ್ನು ತೋರಿಸುತ್ತದೆ. ಅಲ್ಲದೇ ಇದು ದೇಹದಲ್ಲಿ ಲೈಂಗಿಕ ಪ್ರಚೋದನೆಯನ್ನು ಕಡಿಮೆ ಮಾಡುತ್ತದೆ. ಋತುಬಂಧದ ಸಮಯದಲ್ಲಿ, ಮಹಿಳೆಯರು ಮೂಡ್ ಸ್ವಿಂಗ್ (mood swing), ನಿದ್ರೆಯ ಕೊರತೆ, ತಲೆನೋವು, ಆಯಾಸ ಮತ್ತು ದೇಹದ ದೌರ್ಬಲ್ಯ ಅನುಭವಿಸುತ್ತಾರೆ.
 

510

ಅತಿಯಾದ ಮದ್ಯ ಸೇವನೆ
ಆಲ್ಕೋಹಾಲ್ (alcohol) ಲೈಂಗಿಕ ಹಾರ್ಮೋನುಗಳ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಸಾಬೀತಾಗಿದೆ. ಇದರ ನಿಯಮಿತ ಸೇವನೆಯು ಮೂಡ್ ಸ್ವಿಂಗ್ (Mood Swing) ಸಮಸ್ಯೆಯನ್ನು ಹೆಚ್ಚಿಸುತ್ತದೆ, ಇದು ಲೈಂಗಿಕ ಹಾರ್ಮೋನುಗಳಾದ ಟೆಸ್ಟೋಸ್ಟೆರಾನ್ ಮತ್ತು ಡೋಪಮೈನ್ ಅನ್ನು ಮತ್ತೆ ಮತ್ತೆ ಪ್ರಚೋದಿಸುತ್ತದೆ. ಇದು ಕಾಮಾಸಕ್ತಿ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಅವು ಕಾಲಾನಂತರದಲ್ಲಿ ಏರುತ್ತವೆ ಮತ್ತು ಇಳಿಯುತ್ತವೆ. ಈ ಕಾರಣಕ್ಕಾಗಿ, ಕಾಮಾಸಕ್ತಿಯು ಏರಿಳಿತಗೊಳ್ಳಲು ಪ್ರಾರಂಭಿಸುತ್ತದೆ.

610

ತಾಯ್ತನದ ಆರಂಭ 
ತಾಯ್ತನದ ಆರಂಭದಲ್ಲಿ, ಹೊಸ ತಾಯಂದಿರು ಮಗುವನ್ನು ನೋಡಿಕೊಳ್ಳುವತ್ತ ಸಂಪೂರ್ಣವಾಗಿ ಗಮನ ಹರಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರಿಗೆ ತಮ್ಮನ್ನು ತಾವು ನೋಡಿಕೊಳ್ಳಲು ಸಹ ಸಮಯ ಇರೋದಿಲ್ಲ. ಈ ಕಾರಣದಿಂದಾಗಿ, ಅವರು ಆಗಾಗ್ಗೆ ಮೂಡ್ ಸ್ವಿಂಗ್, ಆತಂಕ (Stress), ದೇಹದ ಸೆಳೆತ ಮತ್ತು ಅನೇಕ ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಾರೆ, ಇದು ಕಾಮಾಸಕ್ತಿಯ ಕೊರತೆಗೆ ಕಾರಣವಾಗುತ್ತದೆ.

710

ಹಾಗಿದ್ರೆ ಕಾಮಾಸಕ್ತಿ ಹೆಚ್ಚಿಸೋದು ಹೇಗೆ ತಿಳಿಯೋಣ… 
ಲೈಂಗಿಕತೆಯನ್ನು ಆನಂದಿಸಿ

ಲೈಂಗಿಕ ಜೀವನವನ್ನು ಸಂತೋಷವಾಗಿಡಲು (enjoy sex life) ಮತ್ತು ಕಾಮಾಸಕ್ತಿಯನ್ನು ಹೆಚ್ಚಿಸಲು, ಲೈಂಗಿಕತೆಯನ್ನು ಒಂದು ಕೆಲಸ ಎಂದು ಪರಿಗಣಿಸದೆ ಎಂಜಾಯ್ ಮಾಡಲು ಪ್ರಯತ್ನಿಸಿ. ಇದು ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಬಂಧವನ್ನು ಸುಧಾರಿಸುತ್ತದೆ. ನಿಮ್ಮ ಸಂಗಾತಿಯ ಮೇಲೆ ಯಾವಾಗಲೂ ಕೋಪಗೊಳ್ಳುವುದು ಸಂಬಂಧಗಳಲ್ಲಿ ಅಂತರವನ್ನು ಉಂಟುಮಾಡಲು ಪ್ರಾರಂಭಿಸುತ್ತದೆ.
 

810

ಸಾಕಷ್ಟು ನಿದ್ರೆ ಮಾಡಿ (sleep well)
ಎನ್ಐಎಚ್ ಸಂಶೋಧನೆಯ ಪ್ರಕಾರ, ನಿದ್ರೆಯ ಕೊರತೆಯು ಒತ್ತಡ ಮತ್ತು ಕಾಮಾಸಕ್ತಿಯ ಕೊರತೆಗೆ ಕಾರಣವಾಗಿದೆ. ಒತ್ತಡದಿಂದಾಗಿ, ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್ ಹೆಚ್ಚಾಗಲು ಪ್ರಾರಂಭಿಸುತ್ತದೆ, ಇದು ಲೈಂಗಿಕ ಬಯಕೆ ಕಡಿಮೆಯಾಗಲು ಮುಖ್ಯ ಕಾರಣವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಗುಣಮಟ್ಟದ ನಿದ್ರೆಯನ್ನು ತೆಗೆದುಕೊಳ್ಳಿ, ಇದು ಸೆಕ್ಸ್ ಡ್ರೈವ್ ಹೆಚ್ಚಿಸಲು ಸಹಾಯ ಮಾಡುತ್ತದೆ.
 

910

ನಿಯಮಿತ ವ್ಯಾಯಾಮಗಳು ಮುಖ್ಯ
ದಿನವಿಡೀ ದೇಹದಲ್ಲಿ ಆಯಾಸದ ಭಾವನೆಯೂ ಸೆಕ್ಸ್ ಡ್ರೈವ್ ಕಡಿಮೆಯಾಗಲು ಕಾರಣವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನಿಯಮಿತವಾಗಿ ವ್ಯಾಯಾಮ ಮಾಡಿ ಮತ್ತು ಧ್ಯಾನಕ್ಕೂ ಸ್ವಲ್ಪ ಸಮಯ ತೆಗೆದುಕೊಳ್ಳಿ. ಇದು ವ್ಯಕ್ತಿಯ ದೇಹ ಮತ್ತು ಮನಸ್ಸನ್ನು ಶಾಂತವಾಗಿರಿಸುತ್ತದೆ, ಇದು ದೇಹದಲ್ಲಿ ಸಂತೋಷದ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ. ಪ್ರತಿದಿನ 30 ನಿಮಿಷಗಳ ವ್ಯಾಯಾಮವು ನಿಮ್ಮನ್ನು ಆರೋಗ್ಯವಂತರನ್ನಾಗಿ ಮಾಡುತ್ತದೆ.

1010

ಅಶ್ವಗಂಧ ಸೇವಿಸಿ
ಅಶ್ವಗಂಧ (ashwagandha) ಸೇವನೆಯು ಲೈಂಗಿಕ ಬಯಕೆಯನ್ನು ಹೆಚ್ಚಿಸಲು ಅತ್ಯಂತ ಪ್ರಯೋಜನಕಾರಿ. ಇದು ದೇಹದಲ್ಲಿ ಅಸಮತೋಲಿತ ಹಾರ್ಮೋನುಗಳ (Imbalanced Harmons) ಕಾರ್ಯಗಳಿಗೆ ಕಾರಣವಾಗುತ್ತದೆ. ಟೆಸ್ಟೋಸ್ಟೆರಾನ್ ಮಟ್ಟವನ್ನು ನಿಯಂತ್ರಿಸಲು, ಒಂದು ಚಿಟಿಕೆ ಅಶ್ವಗಂಧವನ್ನು 1 ಲೋಟ ಉಗುರುಬೆಚ್ಚಗಿನ ನೀರಿನೊಂದಿಗೆ (Warm Water) ಬೆರೆಸಿ ಕುಡಿಯುವುದು ಪ್ರಯೋಜನಕಾರಿ. ಇದು ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹವನ್ನು ಸಕ್ರಿಯವಾಗಿರಿಸುತ್ತದೆ.

Read more Photos on
click me!

Recommended Stories