ದಾಂಪತ್ಯದಲ್ಲಿ ಸಮರಸವಿಲ್ಲದೇ ವಿಚ್ಛೇದನ ಪಡೆದು ದೂರಾದ ನಂತರವೂ ಮತ್ತೆ ಪ್ರೀತಿ ಹುಟ್ಟುತ್ತಾ? ಹೌದು ಎನ್ನುತ್ತಾರೆ ಬಾಲಿವುಡ್‌ನ ಖ್ಯಾತ ನಟ ಗುಲ್ಶನ್ ದೇವಯ್ಯ,
29
2020ರಲ್ಲಿ ಗುಲ್ಶನ್ ದೇವಯ್ಯ ತಮ್ಮ ಪತ್ನಿ ಕಲ್ಲಿರೊಯ್ ಟಿಜಿಯಾಫೆಟಾ ಅವರೊಂದಿಗೆ ತಮ್ಮ ಮದುವೆಯನ್ನು ಕೊನೆಗೊಳಿಸಿದ್ದರು. ಪರಸ್ಪರ ವಿಚ್ಚೇದನ ಪಡೆದುಕೊಂಡು ಈ ಜೋಡಿ ದೂರಾಗಿತ್ತು. ಆದರೆ ಈಗ ಮತ್ತೆ ಹಳೆ ಹೆಂಡ್ತಿ ಮೇಲೆಯೇ ಈ ನಟನಿಗೆ ಪ್ರೀತಿ ಮೂಡಿದ್ದು ಮತ್ತೆ ಜೊತೆಯಾಗಿ ಬಾಳಲು ನಿರ್ಧರಿಸಿದ್ದಾರೆ ಈ ಜೋಡಿ.
39
ಬಾಲಿವುಡ್‌ನ ಖ್ಯಾತ ನಟ, ಕೊಡಗಿನ ಕುವರ ಗುಲ್ಶನ್ ದೇವಯ್ಯ ಅವರು ಭಾರತದ ಚಲನಚಿತ್ರ ಉದ್ಯಮದಲ್ಲಿ ಒಳ್ಳೆ ಹೆಸರು ಮಾಡಿರುವುದು ಎಲ್ಲರಿಗೂ ಗೊತ್ತೆ ಇದೆ. ಹಂಟರ್, ಬದಾಯಿ ದೋ, ಗೊಲಿಯೊನ್ ಕಿ ರಾಸ್‌ಲೀಲಾ ರಾಮ್ ಲೀಲಾ, ಮರ್ದ್ ಕೊ ದರ್ದ್ ನಹೀ ಹೊತಾ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು.
49
ಇದರ ಜೊತೆಗೆ ಹಲವು ಕ್ರೈಂ ಥ್ರಿಲ್ಲರ್ ವೆಬ್ ಸಿರೀಸ್‌ಗಳಾದ ದಹಾದ್, ಗನ್ಸ್ & ಗುಲಾಬ್ಸ್‌ನಲ್ಲಿ ನಟಿಸಿದ್ದಾರೆ. ಹೀಗಾಗಿ 2023ರ ವರ್ಷದಲ್ಲಿ ಅವರು ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದರಿಂದ ಅವರ ವೃತ್ತಿ ಜೀವನ ಬಹಳ ಚೆನ್ನಾಗಿತ್ತು. ಆದರೆ ಇವರ ವೈಯಕ್ತಿಕ ಜೀವನ ಮಾತ್ರ ಏಳು ಬೀಳಿನಿಂದ ಕೂಡಿತ್ತು.
59
ಆದರೆ ಈ ವರ್ಷಾಂತ್ಯಕ್ಕೆ ಗುಲ್ಶನ್ ದೇವಯ್ಯ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಗುಡ್‌ನ್ಯೂಸ್ ಕೊಟ್ಟಿದ್ದು, ಸುಮಾರು ಮೂರು ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ ಗುಲ್ಶನ್ ಮತ್ತು ಕಲ್ಲಿರೋಯ್ ಜೋಡಿ. ಇಬ್ಬರು ಪರಸ್ಪರ ಡೇಟಿಂಗ್‌ನಲ್ಲಿದ್ದು, ತಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೇವೆ. ಸಂಬಂಧದ ವಿಚಾರದಲ್ಲಿ ಮುಕ್ತ ಮನಸ್ಸನ್ನು ಇಟ್ಟುಕೊಂಡಿದ್ದೇವೆ ಎನ್ನುತ್ತಾರೆ ಈ ಜೋಡಿ.
69
ಇಂಡಿಯಾ ಟುಡೇಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ 45 ವರ್ಷದ ನಟ ಗುಲ್ಶನ್ ದೇವಯ್ಯ, ತಾವು ತಮ್ಮ ಮಾಜಿ ಪತ್ನಿ ಕೆಲ್ಲಿರೋಯ್ ಜೊತೆ ಮತ್ತೆ ಒಂದಾಗಿ ಬದುಕುತ್ತೇನೆ ಎಂದು ಊಹೆಯೇ ಮಾಡಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
79
ತಮ್ಮ ಹಾಗೂ ಪತ್ನಿ ಕೆಲ್ಲಿರೋಯ್ ನಡುವೆ ಹಲವು ಭಿನ್ನಾಭಿಪ್ರಾಯಗಳಿದ್ದವು, ಅವುಗಳೆಲ್ಲವನ್ನು ನಿವಾರಿಸಿಕೊಂಡು ಸಂಬಂಧದಲ್ಲಿರುವ ಸಕರಾತ್ಮಕ ಅಂಶಗಳತ್ತ ಮಾತ್ರ ನಮ್ಮ ಗಮನವನ್ನು ಹರಿಸಲು ಧೈರ್ಯ, ಶಕ್ತಿ, ತಾಳ್ಮೆಯನ್ನು ತಂದುಕೊಂಡಿದ್ದೇವೆ ಎಂದು ಗುಲ್ಶನ್ ದೇವಯ್ಯ ಹೇಳಿದ್ದಾರೆ. ಕೆಲವೊಂದು ವಿಚಾರಗಳು ನಾವು ಊಹಿಸಿದಂತೆ ನಡೆಯದೇ ಹೋದರೂ ನಾವು ಒಳ್ಳೆಯ ಗೆಳೆಯರಾಗಿ ಇರಲು ಬಯಸಿದ್ದೇವೆ ಎಂದು ಹೇಳಿದ್ದಾರೆ ಗುಲ್ಶನ್.
89
ನಾವು ನಮ್ಮ ಜೊತೆ ಇದ್ದ ಒಳ್ಳೆಯ ವಿಚಾರಗಳನ್ನು ಬೆಳೆಸಲು ಬಯಸುತ್ತೇವೆ. ಇದು ನಮ್ಮ ಸಂಬಂಧವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದೆ. ನಾವು ಈ ಸಂಬಂಧವನ್ನು ಮತ್ತೊಮ್ಮೆ ಚೆನ್ನಾಗಿರಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಬಹುದು. ಈ ಸಮಯದಲ್ಲಿ ಈ ವಿಚಾರವೂ ತುಂಬಾ ಪ್ರಬುದ್ಧ, ಹಾಗೂ ವಿಭಿನ್ನ ಎನಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.
99
ಇನ್ನು 2023ರ ವೃತ್ತಿ ಬದುಕಿನ ಬಗ್ಗೆ ಮಾತನಾಡಿದ ನಟ, ನನ್ನ ವೃತ್ತಿ ಜೀವನ ಬಹಳ ಚೆನ್ನಾಗಿತ್ತು. ಈ ವರ್ಷ ನಾನು ಮಮೂಲಿಗಿಂತ ಬಹಳ ಬ್ಯುಸಿಯಾಗಿದೆ. ನನಗೆ ವಿಭಿನ್ನವಾದ ಪ್ರಾಜೆಕ್ಟ್‌ಗಳು ಸಿಕ್ಕಿದವು. ಕೆಲವು ಅದ್ಭುತ ದೃಶ್ಯಗಳು, ಕೆಲವು ಅದ್ಭುತ ಪಾತ್ರಗಳು ಸಿಕ್ಕಿದವು. ನನಗೆ ಸಿಕ್ಕಿದ ಎಲ್ಲರೂ ಬಹಳ ಅದ್ಭುತ ನಟರಾಗಿದ್ದರು ಎಂದು ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.