ಮದುವೆ ಆದ್ರೆ ಖಾಲಿ, ಲಿವಿಂಗ್‌ ಟುಗೆದರ್‌ ಅಂದ್ರೆ ಜಾಲಿ ಎಂದ ಬಿಗ್‌ಬಾಸ್‌ ಸ್ಪರ್ಧಿ!

Published : Jan 30, 2026, 03:17 PM IST

ತೆಲುಗು ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ದಿವಿ ವಾದ್ತ್ಯಾ, ಮದುವೆ ವ್ಯವಸ್ಥೆಯ ಮೇಲೆ ತನಗೆ ನಂಬಿಕೆಯಿಲ್ಲ ಎಂದು ಹೇಳಿದ್ದಾರೆ. ತನ್ನ ಸ್ನೇಹಿತರ ವಿಚ್ಛೇದನಗಳನ್ನು ನೋಡಿ ಮದುವೆಗಿಂತ ಪ್ರಾಮಾಣಿಕತೆಯಿರುವ ಲಿವಿಂಗ್ ಟುಗೆದರ್ ಸಂಬಂಧವೇ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

PREV
17

ತೆಲುಗು ಚಿತ್ರರಂಗದ ಉದಯೋನ್ಮುಖ ನಟಿ ಹಾಗೂ ಬಿಗ್ ಬಾಸ್ ಸೀಸನ್ 4ರ ಸ್ಪರ್ಧಿ ದಿವಿ ವಾದ್ತ್ಯಾ ವಿವಾಹ ವ್ಯವಸ್ಥೆಯ ಕುರಿತು ನೀಡಿರುವ ಹೇಳಿಕೆ ಈಗ ಹೊಸ ಚರ್ಚೆಗೆ ನಾಂದಿ ಹಾಡಿದೆ.

27

ಮದುವೆ ಎಂಬ ಕಾನ್ಸೆಪ್ಟ್‌ನಲ್ಲಿ ತನಗೆ ಹೆಚ್ಚಿನ ನಂಬಿಕೆಯಿಲ್ಲ ಎಂದು ಹೇಳುವ ಮೂಲಕ ಅವರು ಸಂಪ್ರದಾಯವಾದಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

37

ಇತ್ತೀಚಿನ ಟಾಕ್ ಶೋವೊಂದರಲ್ಲಿ ಮಾತನಾಡಿದ ದಿವಿ, "ನನ್ನ ಫ್ರೆಂಡ್ಸ್ ಸರ್ಕಲ್‌ನಲ್ಲಿ ಮದುವೆಯಾದವರ ಪೈಕಿ ಶೇ. 90 ರಷ್ಟು ಮಂದಿ ಎರಡೇ ವರ್ಷದಲ್ಲಿ ಡಿವೋರ್ಸ್ ಪಡೆದಿದ್ದಾರೆ. ಅವರ ಬದುಕು ನೋಡಿ ನನಗೆ ಮದುವೆಯ ಬಗ್ಗೆ ಭಯ ಶುರುವಾಗಿದೆ. ಮದುವೆಯಾದ ಮೇಲೆ ಅನೇಕರು ತಮ್ಮ ಸ್ವಂತಿಕೆ ಮತ್ತು ಸಂತೋಷವನ್ನು ಕಳೆದುಕೊಳ್ಳುತ್ತಿದ್ದಾರೆ," ಎಂದು ಅಭಿಪ್ರಾಯಪಟ್ಟಿದ್ದಾರೆ.

47

ಮದುವೆ ಎಂಬ ಸಾಮಾಜಿಕ ಕಟ್ಟುಪಾಡಿಗಿಂತ ಲಿವಿಂಗ್ ಟುಗೆದರ್ ಸಂಬಂಧವೇ ಉತ್ತಮ ಎಂದಿರುವ ನಟಿ, "ಇಬ್ಬರ ನಡುವೆ ಪ್ರಾಮಾಣಿಕತೆ ಮತ್ತು ಬದ್ಧತೆ ಇದ್ದರೆ ಮದುವೆಯಾಗುವ ಅವಶ್ಯಕತೆಯಿಲ್ಲ. ನನ್ನ ಆಸೆಗಳನ್ನು ಕೊಂದು, ಅಸ್ತಿತ್ವವನ್ನೇ ಕಳೆದುಕೊಂಡು ನಾನು ಸಂಬಂಧದಲ್ಲಿರಲು ಬಯಸುವುದಿಲ್ಲ. ಹೊಂದಾಣಿಕೆಯಾಗದಿದ್ದರೆ ಇನ್ನೊಬ್ಬರ ಜೀವನ ಹಾಳು ಮಾಡುವ ಬದಲು ಬೇರೆಯಾಗುವುದೇ ಲೇಸು," ಎಂದು ಖಡಕ್ ಆಗಿ ನುಡಿದಿದ್ದಾರೆ.

57

"ನನ್ನ ಅಸ್ತಿತ್ವ ಮತ್ತು ಆಸೆಗಳನ್ನು ಹತ್ತಿಕ್ಕಿ ಯಾವುದೇ ಸಂಬಂಧದಲ್ಲಿರಲು ನಾನು ಸಿದ್ಧವಿಲ್ಲ. ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಿದ್ದರೆ ಮಾತ್ರ ನಾನು ಹೊಂದಾಣಿಕೆ ಮಾಡಿಕೊಳ್ಳುತ್ತೇನೆ," ಎಂದು ನಟಿ ದಿವಿ ವಾದ್ತ್ಯಾ ಖಡಕ್ ಆಗಿ ನುಡಿದಿದ್ದಾರೆ. 

67

ಮದುವೆ ಮತ್ತು ಲಿವಿಂಗ್ ಟುಗೆದರ್ ಕುರಿತಾದ ಅವರ ಈ ನೇರ ಮಾತುಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ ಹುಟ್ಟುಹಾಕಿವೆ.

77

ಮಾಡೆಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ದಿವಿ, ಬಿಗ್ ಬಾಸ್ ಮೂಲಕ ಭಾರಿ ಫೇಮಸ್ ಆದವರು. 'ಎ1 ಎಕ್ಸ್‌ಪ್ರೆಸ್', 'ರುದ್ರಂಗಿ'ಯಂತಹ ಸಿನಿಮಾಗಳಲ್ಲಿ ನಟಿಸಿದ್ದ ಅವರು ಇತ್ತೀಚೆಗೆ ಪ್ಯಾನ್ ಇಂಡಿಯಾ ಹಿಟ್ 'ಪುಷ್ಪ 2' ಹಾಗೂ 'ಡಾಕು ಮಹಾರಾಜ್'ನಂತಹ ದೊಡ್ಡ ಬಜೆಟ್ ಚಿತ್ರಗಳಲ್ಲೂ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories