ಪ್ರೀತಿ ಎಲ್ಲರ ಜೀವನದಲ್ಲೂ ಒಂದೇ ರೀತಿ ಇರಲ್ಲ. ಕೆಲವು ಪ್ರೀತಿ ಹೊರಗಿನಿಂದ ನೋಡಲು ಚೆನ್ನಾಗಿ ಕಾಣಿಸುತ್ತವೆ. ಒಳಗೊಳಗೆ ಆತ್ಮವಿಶ್ವಾಸ, ಸ್ಥಿರತೆಯನ್ನು ಹಾಳುಮಾಡುತ್ತವೆ. ಅಂತಹ ಪ್ರೀತಿಯನ್ನೇ ಟಾಕ್ಸಿಕ್ ಲವ್ ಎನ್ನುತ್ತಾರೆ. ಅಸಲಿಗೆ ಟಾಕ್ಸಿಕ್ ಲವ್ ಹೇಗಿರುತ್ತೆ? ಅವರ ಬಗ್ಗೆ ಸೈಕಾಲಜಿ ಏನು ಹೇಳುತ್ತೆ?
ಸೈಕಾಲಜಿ ಪ್ರಕಾರ, ಪ್ರೀತಿ ಮನಸ್ಸಿಗೆ ಭದ್ರತೆ, ಶಾಂತಿ ನೀಡಬೇಕು. ಆದರೆ ಕೆಲವೊಮ್ಮೆ ಪ್ರೀತಿಯ ಹೆಸರಲ್ಲಿ ಮನಸ್ಸಿಗೆ ನೋವು ಕೊಡುವ ಸಂಬಂಧಗಳು ಬೆಳೆಯುತ್ತವೆ. ಇವನ್ನೇ ಟಾಕ್ಸಿಕ್ ಸಂಬಂಧ ಎನ್ನುತ್ತಾರೆ. ಇದು ಹೊರನೋಟಕ್ಕೆ ಹೆಚ್ಚು ಪ್ರೀತಿ, ಕಾಳಜಿಯಂತೆ ಕಂಡರೂ, ನಮ್ಮ ಆತ್ಮವಿಶ್ವಾಸ, ವ್ಯಕ್ತಿತ್ವವನ್ನು ನಿಧಾನವಾಗಿ ನಾಶಮಾಡುತ್ತದೆ.
27
ಕಂಟ್ರೋಲ್ ಮಾಡ್ತಾರೆ
ಟಾಕ್ಸಿಕ್ ವ್ಯಕ್ತಿ ಆರಂಭದಲ್ಲಿ ಹೆಚ್ಚು ಆಕರ್ಷಕನಾಗಿ, ಹೆಚ್ಚು ಪ್ರೀತಿ, ಭರವಸೆ ಕೊಡುತ್ತಾನೆ. ಇದು ನಮ್ಮನ್ನು ಭಾವನಾತ್ಮಕವಾಗಿ ಅವಲಂಬಿತರನ್ನಾಗಿಸುವ ತಂತ್ರ. ಒಮ್ಮೆ ನಾವು ಕನೆಕ್ಟ್ ಆದ ಮೇಲೆ, ಆ ಪ್ರೀತಿ ನಿಯಂತ್ರಣವಾಗಿ ಬದಲಾಗುತ್ತದೆ. ಟಾಕ್ಸಿಕ್ ಲವ್‌ನ ಮುಖ್ಯ ಲಕ್ಷಣವೇ ನಿಯಂತ್ರಣ. ಸಂಗಾತಿಯ ಜೀವನದ ಪ್ರತಿಯೊಂದು ನಿರ್ಧಾರವನ್ನು ಅವರೇ ತೆಗೆದುಕೊಳ್ಳಲು ಬಯಸುತ್ತಾರೆ. ಮೊದಲು 'ನಿನ್ನ ಒಳ್ಳೆದಕ್ಕೆ' ಎನ್ನುತ್ತಾರೆ. ಆದರೆ ಸಮಯ ಕಳೆದಂತೆ ನಮ್ಮ ಸ್ವಾತಂತ್ರ್ಯ ಕಡಿಮೆಯಾಗಿ, ನಮ್ಮ ಮೇಲಿನ ನಂಬಿಕೆಯೇ ಹೋಗುತ್ತದೆ.
37
ಗ್ಯಾಸ್‌ಲೈಟಿಂಗ್
ಮತ್ತೊಂದು ಲಕ್ಷಣ ಗ್ಯಾಸ್‌ಲೈಟಿಂಗ್. ಅಂದರೆ, ನಮ್ಮದೇ ತಪ್ಪು ಎಂದು ನಮಗೇ ಅನಿಸುವಂತೆ ಮಾಡುವುದು. "ನೀನೇ ಜಾಸ್ತಿ ಯೋಚನೆ ಮಾಡ್ತಿದ್ದೀಯಾ" ಎಂಬ ಮಾತುಗಳಿಂದ ನಮ್ಮ ಭಾವನೆಗಳನ್ನು ಕಡೆಗಣಿಸುತ್ತಾರೆ. ಇದರಿಂದ ನಮ್ಮ ಆಲೋಚನೆಗಳ ಮೇಲೆ ನಮಗೇ ಅನುಮಾನ ಮೂಡುತ್ತದೆ.
ಟಾಕ್ಸಿಕ್ ಲವ್‌ನಲ್ಲಿ ಪ್ರೀತಿ ಷರತ್ತುಬದ್ಧ. ಅವರಿಗೆ ಇಷ್ಟವಾದಂತೆ ಇದ್ದರೆ ಮಾತ್ರ ಪ್ರೀತಿ ಸಿಗುತ್ತದೆ. ಇಲ್ಲದಿದ್ದರೆ ಮೌನ, ಕೋಪ ಅಥವಾ ಭಾವನಾತ್ಮಕ ಬ್ಲ್ಯಾಕ್‌ಮೇಲ್ ಶುರುವಾಗುತ್ತದೆ. ನಿಜವಾದ ಪ್ರೀತಿಯಲ್ಲಿ ಭಯವಿರುವುದಿಲ್ಲ.
57
ಮನಸ್ಸು ಕೂಲ್ ಇರಲ್ಲ
ಟಾಕ್ಸಿಕ್ ಲವ್‌ನಲ್ಲಿದ್ದಾಗ ಮನಸ್ಸು ಶಾಂತವಾಗಿರಲ್ಲ. ಯಾವಾಗಲೂ ಸುಸ್ತು, ಟೆನ್ಶನ್ ಮತ್ತು ಭಯ ಕಾಡುತ್ತದೆ. "ಅವರು ಹೇಗೆ ಪ್ರತಿಕ್ರಿಯಿಸುತ್ತಾರೋ?" ಎಂಬ ಆಲೋಚನೆ ಇರುತ್ತದೆ. ಮಾನಸಿಕ ಆರೋಗ್ಯ ಹಾಳುಮಾಡುವ ಸಂಬಂಧ ಪ್ರೀತಿಯಲ್ಲ.
67
ತಪ್ಪು ಒಪ್ಪಿಕೊಳ್ಳಲ್ಲ
ಟಾಕ್ಸಿಕ್ ವ್ಯಕ್ತಿಗಳು ತಮ್ಮ ತಪ್ಪನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಪ್ರತಿ ಬಾರಿಯೂ ಸಮಸ್ಯೆಯನ್ನು ನಮ್ಮ ಮೇಲೆಯೇ ಹಾಕುತ್ತಾರೆ. ಕೊನೆಗೆ ನಾವೇ ಬದಲಾಗಬೇಕೆಂದು ಒತ್ತಡ ಹೇರುತ್ತಾರೆ. ಇದರಿಂದ ನಮ್ಮ ವ್ಯಕ್ತಿತ್ವ, ಆಸಕ್ತಿ, ಸಂತೋಷ ಎಲ್ಲವೂ ನಾಶವಾಗುತ್ತದೆ.
77
ಆತ್ಮಗೌರವ ಕಾಪಾಡಿಕೊಳ್ಳಬೇಕು
ಸೈಕಾಲಜಿ ಪ್ರಕಾರ, ಪ್ರೀತಿ ನಮ್ಮನ್ನು ಬಲಶಾಲಿಯಾಗಿಸಬೇಕು, ದುರ್ಬಲರನ್ನಾಗಿ ಅಲ್ಲ. ನಮ್ಮನ್ನು ನಾವೇ ಕಳೆದುಕೊಳ್ಳುವ ಪ್ರೀತಿ ಒಳ್ಳೆಯದಲ್ಲ. ಅಗತ್ಯವಿದ್ದರೆ ಗಡಿಗಳನ್ನು ಹಾಕಿಕೊಂಡು, ಆತ್ಮಗೌರವ ಕಾಪಾಡಿಕೊಳ್ಳಬೇಕು. ಮನಸ್ಸಿಗೆ ನೋವು ಕೊಡುವವರಿಂದ ದೂರವಿರುವುದೇ ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.