ಮತ್ತೆ ಸದ್ದು ಮಾಡ್ತಿರೋ Bigg Boss ಗಿಲ್ಲಿ ನಟ-ರಕ್ಷಿತಾ ಶೆಟ್ಟಿ! ಜಾಲತಾಣದಲ್ಲಿ ಜೋಡಿಯದ್ದೇ ಹವಾ

Published : Jul 19, 2026, 08:18 PM IST

ಬಿಗ್​ಬಾಸ್​ ಸೀಸನ್ 12ರ ವಿಜೇತ ಗಿಲ್ಲಿ ನಟ ಮತ್ತು ರನ್ನರ್ ಅಪ್ ರಕ್ಷಿತಾ ಶೆಟ್ಟಿ ಜೋಡಿ ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಸೃಷ್ಟಿಸಿದೆ. ಇದೀಗ 'ಕ್ವಾಟ್ಲೆ ಕಿಚನ್' ರಿಯಾಲಿಟಿ ಷೋನಲ್ಲಿ ಇಬ್ಬರೂ ಮತ್ತೆ ಒಂದಾಗಿದ್ದು, ಅಭಿಮಾನಿಗಳು ಈ ಜೋಡಿಯ ಬಗ್ಗೆ ಮತ್ತೆ ಚರ್ಚೆ ಆರಂಭಿಸಿದ್ದಾರೆ.

PREV
16
ಗಿಲ್ಲಿ-ರಕ್ಷಿತಾ ಜೋಡಿ

ಬಿಗ್​ಬಾಸ್​ನಲ್ಲಿ ಸಾಕಷ್ಟು ಸದ್ದು ಮಾಡಿ ಬೀಗಿದವರಲ್ಲಿ 12ನೇ ಸೀಸನ್​ ವಿಜೇತ ಗಿಲ್ಲಿ ನಟ ಮತ್ತು ಮೊದಲ ರನ್ನರ್ ಅಪ್​ ರಕ್ಷಿತಾ ಶೆಟ್ಟಿ. ಇವರಿಬ್ಬರೂ ಬಿಗ್​ಬಾಸ್​​ ನಂತರವೂ ಸಿಕ್ಕಾಪಟ್ಟೆ ಆ್ಯಕ್ಟೀವ್​ ಆಗಿದ್ದು, ಒಳ್ಳೊಳ್ಳೆ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.

26
ಹುಡುಗ ಬೇಕು

ಅಷ್ಟಕ್ಕೂ, ರಕ್ಷಿತಾ ಶೆಟ್ಟಿ ತಮಗೆ ಗಿಲ್ಲಿ ನಟನಂಥದ್ದೇ ಹುಡುಗ ಬೇಕು ಎನ್ನುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು. ಅವರು ಇಷ್ಟು ಹೇಳುತ್ತಿದ್ದಂತೆಯೇ ಅವರಿಬ್ಬರ ಫ್ಯಾನ್ಸ್​ ಇಬ್ಬರ ಜೋಡಿ ಮಾಡಿಯೇ ಬಿಟ್ಟಿದ್ದರು. ಎಐ ಮೂಲಕ ಮದುವೆಯನ್ನೂ ಮಾಡಿಸಿದ್ದರು!

36
ಮದ್ವೆ ಮಾಡಿಸ್ತಿರೋ ಫ್ಯಾನ್ಸ್​

ಒಂದೆಡೆ ಕಾವ್ಯಾ ಶೈವ ಅಭಿಮಾನಿಗಳು, ಗಿಲ್ಲಿ ನಟನ ಜೊತೆ ಅವರ ಮದುವೆ ಮಾಡಿಸಿದ್ದರೆ, ಇತ್ತ ರಕ್ಷಿತಾ ಶೆಟ್ಟಿ ಫ್ಯಾನ್ಸ್​ ಈ ಇಬ್ಬರ ಜೋಡಿ ಮಾಡಿದ್ದರು.

46
ಜೋಡಿ ಹವಾ

ಇದೀಗ ಮತ್ತೆ ಈ ಜೋಡಿ ಹವಾ ಸೃಷ್ಟಿಸ್ತಿದೆ. ಇದಕ್ಕೆ ಕಾರಣ, ರಕ್ಷಿತಾ ಶೆಟ್ಟಿ ಸದ್ಯ ಕ್ವಾಟ್ಲೆ ಕಿಚನ್ ರಿಯಾಲಿಟಿ ಷೋನಲ್ಲಿ ಭಾಗಿಯಾಗಿದ್ದು, ಅದಕ್ಕೀಗ ಗಿಲ್ಲಿ ನಟನ ಎಂಟ್ರಿಯಾಗಿದೆ. ರಕ್ಷಿತಾ ಅವರು ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಗಿಲ್ಲಿ ನಟನ ಜೊತೆಗಿನ ಫೋಟೋ ಶೇರ್​ ಮಾಡಿದ್ದೇ ತಡ, ಮತ್ತ ಅವರ ಫ್ಯಾನ್ಸ್​ ಎದ್ದು ಬಿಟ್ಟಿದ್ದಾರೆ.

56
ಮತ್ತೆ ಮುನ್ನೆಲೆಗೆ

ಥರಹೇವಾರಿ ಮ್ಯೂಸಿಕ್​ ಹಿನ್ನೆಲೆಯಲ್ಲಿ ಈ ಜೋಡಿ ಒಂದಾಗಬೇಕು ಎಂದು ಪೋಸ್ಟ್​ ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಕೆಲ ಸಮಯದಿಂದ ಸೈಲಾಂಟಿದ್ದ ಜೋಡಿಯ ವಿಷ್ಯ ಮತ್ತೆ ಮುನ್ನೆಲೆಗೆ ಬರುತ್ತಿದೆ.

66
ಬಿಗ್​ಬಾಸ್​ ದಿನಗಳು

ಒಟ್ಟಿನಲ್ಲಿ ಅಭಿಮಾನಿಗಳ ಅಭಿಮಾನ ಹೆಚ್ಚಾದಂತೆ ಸೆಲೆಬ್ರಿಟಿಗಳಿಗೆ ತಲೆ ಬಿಸಿ ಆಗುತ್ತದೆ. ಇದೀಗ ಮತ್ತೆ ಹೀಗೆ ಮಾಡುವ ಮೂಲಕ, ಬಿಗ್​ಬಾಸ್​​ನ ದಿನಗಳನ್ನು ಮತ್ತೆ ನೆನಪಿಸುತ್ತಿದ್ದಾರೆ ಫ್ಯಾನ್ಸ್​.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories