ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಾದ ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರಿ, ನದಿ ತೀರದಲ್ಲಿ ರೋಮ್ಯಾಂಟಿಕ್ ಡ್ಯಾನ್ಸ್ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಈ ಹಿಂದೆ ತಮ್ಮಿಬ್ಬರ ನಡುವೆ ಏನೂ ಇಲ್ಲ ಎಂದಿದ್ದ ಈ ಜೋಡಿ, ಈಗ ಮದುವೆಯ ಬಗ್ಗೆ ಪರೋಕ್ಷ ಸುಳಿವು ನೀಡಿದೆ.
ಬಿಗ್‌ಬಾಸ್ ಮನೆಯಲ್ಲಿ ಲವ್, ರೊಮಾನ್ಸ್ ಅಲ್ಲಿಂದ ಹೊರಕ್ಕೆ ಬರುತ್ತಿದ್ದಂತೆಯೇ ಕಿತ್ತಾಟ, ನಾನ್ಯಾರೋ ನೀನ್ಯಾರೋ ಎಂದುಕೊಳ್ಳುವುದೆಲ್ಲ ಸರ್ವೇ ಸಾಮಾನ್ಯ. ಇದು ಎಲ್ಲಾ ಭಾಷೆಗಳ ಬಿಗ್‌ಬಾಸ್‌ನಲ್ಲಿ ಕೇಳಿ ಬರುವುದೇ. ಆದರೆ ಹಾಗೆ ಮಾಡದೇ ʼಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಹೊರಕ್ಕೆ ಬಂದ ಮೇಲೂ ಅದೇ ರೀತಿ ಫ್ರೆಂಡ್‌ಷಿಪ್ ಉಳಿಸಿಕೊಂಡವರು ಐಶ್ವರ್ಯ ಸಿಂಧೋಗಿ (Aishwarya Sindhogi) ಮತ್ತು ಶಿಶಿರ್ ಶಾಸ್ತ್ರಿ (Shishir Shastry)
26
ಸಾಕಷ್ಟು ಬಾರಿ ಜೊತೆ
ಈ ಜೋಡಿ ಹೊರಗಡೆ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದರಿಂದ, ಜೊತೆಗೆ ಒಟ್ಟಾಗಿ ಧರ್ಮಸ್ಥಳಕ್ಕೂ ಹೋಗಿ ಬಂದಿದ್ದರಿಂದ ಇವರಿಬ್ಬರ ಬಾಂಡಿಂಗ್ ಬೇರೆಯದ್ದೇ ಹೇಳುತ್ತಿದೆ ಎಂದು ಸಕತ್ ಚರ್ಚೆಯಾಗಿತ್ತು. ಇವರಿಬ್ಬರೂ ನಿಜ ಜೀವನದಲ್ಲಿ ಒಂದಾಗಲಿ, ಮದುವೆಯಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದರು. ಅದೇ ರೀತಿ, ಇವರಿಬ್ಬರ ಸ್ನೇಹ ಗಟ್ಟಿಯಾಗುತ್ತಲೇ ಸಾಗಿದೆ.
36
ಮೈಚಳಿ ಬಿಟ್ಟು ರೊಮಾನ್ಸ್
ಇದೀಗ ಇವರಿಬ್ಬರೂ ನದಿ ತೀರದಲ್ಲಿ ಮೈಚಳಿ ಬಿಟ್ಟು ಭರ್ಜರಿ ರೊಮಾನ್ಸ್ ಮಾಡಿದ್ದಾರೆ. ಸಾಗರಿಯೇ, ಸಾಗರಿಯೇ ಹಾಡಿಗೆ ಇಬ್ಬರೂ ಸಕತ್ ಸ್ಟೆಪ್ ಹಾಕಿದ್ದು, ಅದನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ. ಇವರಿಬ್ಬರ ಕೆಮೆಸ್ಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದು, ಬೇಗ ಗುಡ್‌ನ್ಯೂಸ್ ಕೊಡಿ ಅಂತಿದ್ದಾರೆ.
ಆದರೆ ಇದುವರೆಗೂ ಅವರು ತಮ್ಮ ಮದುವೆಯ ಬಗ್ಗೆ ಮಾತನಾಡಿರಲಿಲ್ಲ. ಮದುವೆಯ ಬಗ್ಗೆ ಪ್ರಶ್ನೆ ಕೇಳಿದ್ದ ಸಂದರ್ಭದಲ್ಲಿ, ಅವರು, ನಮಗಿಬ್ಬರಿಗೂ ಸಾಕಷ್ಟು ಮದುವೆ ಪ್ರಪೋಸಲ್ ಬಂದಿವೆ. ನಾವಿಬ್ಬರೂ ಬ್ಯುಸಿನೆಸ್ ಪಾರ್ಟನರ್ ಆಗಬಹುದು ಅಷ್ಟೇ, ಆದರೆ ಸಂಗಾತಿಗಳಾಗಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಹೀಗಾಗಿ ಈ ಮೂಲಕ ನಾವು ಪ್ರೇಮಿಗಳಲ್ಲ, ಮದುವೆ ಆಗಲ್ಲ ಎಂದಿದ್ದರು.
56
ಏನಿಲ್ಲ ಏನಿಲ್ಲ ಎನ್ನುತ್ತಿದ್ದಾರೆ
ಕೆಲವು ದಿನಗಳ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಈ ಜೋಡಿ ಸ್ವಲ್ಪ ಭಿನ್ನ ಪ್ರತಿಕ್ರಿಯೆ ಕೊಟ್ಟಿತ್ತು. ನಮ್ಮ ಅಭಿಮಾನಿಗಳು ಸದಾ ಮದುವೆಯ ಬಗ್ಗೆ ಕೇಳುತ್ತಿರುತ್ತಾರೆ. ನಿಮ್ಮನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ. ಯಾವಾಗ ಗುಡ್‌ನ್ಯೂಸ್ ಕೊಡುತ್ತೀರಿ ಎಂದು ಪ್ರಶ್ನಿಸುತ್ತಿರುತ್ತಾರೆ, ಆದರೆ ಸದ್ಯ ಏನಿಲ್ಲಾ ಎಂದಿದ್ದರು.
66
ಬೇಗ ಅನ್ನಿಸತ್ತೆ
ಇದಕ್ಕೆ ಉತ್ತರ ಕೊಡುವುದು ತುಂಬಾ ಬೇಗ ಆಯ್ತು ಅನಿಸತ್ತೆ ಎನ್ನುವ ಮೂಲಕ ಮದುವೆ ಆಗುವ ಛಾನ್ಸ್ ಇರುವ ಬಗ್ಗೆ ಪರೋಕ್ಷವಾಗಿ ನುಡಿದಿದ್ದಾರೆ. ಶಿಶಿರ್ ಹೇಳಿದ್ದು ಏನೆಂದರೆ, ಕಾಲಾವೇ ಇದಕ್ಕೆ ಉತ್ತರಿಸುತ್ತದೆ. ಯಾವಾಗ ಏನು ಆಗಬೇಕು ಅದು ಖಂಡಿತ ಆಗುತ್ತದೆ. ಈಗಲೇ ಏನೂ ಆ ಬಗ್ಗೆ ನಾವು ಯೋಚನೆ ಮಾಡಲಿಲ್ಲ. ಹೇಳಿಕೊಳ್ಳುವಂಥ ಕ್ಲಾರಿಟಿಗೆ ನಾವೂ ಬಂದಿಲ್ಲ ಎನ್ನುತ್ತಲೇ ಇದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.