Amruthadhaare ಜೈದೇವ್- ಹಳೆಯ ಮಲ್ಲಿ ರಿಯಲ್​ ಮದ್ವೆಗೆ ರವಿಚಂದ್ರನ್​ ಜೊತೆ ದರ್ಶನ್ ಹಾಜರು?

Published : Mar 25, 2026, 05:07 PM IST

'ಅಮೃತಧಾರೆ' ಧಾರಾವಾಹಿಯ ಖಳನಾಯಕ ಜೈದೇವ್ ಅಲಿಯಾಸ್ ರಾಣವ್ ಗೌಡ ಮತ್ತು ನಟಿ ರಾಧಾ ಭಗವತಿ ನಿಜ ಜೀವನದಲ್ಲಿ ಒಂದಾಗುತ್ತಿದ್ದಾರೆ. ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ, ರಾಣವ್ ಅವರಲ್ಲಿ ನಟ ದರ್ಶನ್ ಅವರನ್ನು ಕಾಣುವ ರಾಧಾ, ತಮ್ಮ ಮದುವೆಗೆ ದರ್ಶನ್ ಬರಬೇಕೆಂದು ಆಶಿಸಿದ್ದಾರೆ.

PREV
16
ಅಮೃತಧಾರೆಯ ವಿಲನ್​ ಜೈದೇವ್​

ಅಮೃತಧಾರೆಯ ವಿಲನ್​, ಎಲ್ಲರಿಂದಲೂ ಉಗಿಸಿಕೊಳ್ತಿರೋ, ಅತ್ಯಂತ ಕೆಟ್ಟ ಸ್ವಭಾವದ ಜೈದೇವನ (Amruthadhaare Jaidev urf Ranav Gowda) ರಿಯಲ್​ ಲೈಫ್​ ಮುಗ್ಧತನ, ಮಗುವಿನಂಥ ಮನಸ್ಸಿಗೆ ಮನಸೋತವರು ಹಳೆಯ ಮಲ್ಲಿ, ಈಗಿನ ಭಾರ್ಗವಿ ಎಲ್​​ಎಲ್​ಬಿ ರಾಧಾ ಭಗವತಿ ಅವರು.

26
ಮೋಸ ಮಾಡಿ ಪ್ರೆಗ್ನೆಂಟ್​

ಅಮೃತಧಾರೆಯಲ್ಲಿ ಮೋಸ ಮಾಡಿ ಪ್ರೆಗ್ನೆಂಟ್​ ಮಾಡಿ ಇಲ್ಲದ ಹಿಂಸೆ ಕೊಟ್ಟಿರೋ ಜೈದೇವನನ್ನೇ ರಿಯಲ್​ ಲೈಫ್​ನಲ್ಲಿ ಲವ್​ ಮಾಡಿದ್ದಾರೆ ರಾಧಾ. ಇದೀಗ ಅವರ ಎಂಗೇಜ್​ಮೆಂಟ್​ ಕೂಡ ಆಗಿದ್ದು, ಶೀಘ್ರದಲ್ಲಿಯೇ ಮದುವೆನೂ ಆಗಲಿದ್ದಾರೆ.

36
ಹ್ಯಾಂಡ್​ಸಮ್​ ವಿಲನ್​

ಕ್ಯೂಟ್​, ಹ್ಯಾಂಡಸಮ್​ ಜೈದೇವ್​ ಉರ್ಫ್​ ರಾಣವ್​ ಗೌಡ ಅವರು ವಿಲನ್ ಆಗಿದ್ದರೂ ಸಿಕ್ಕಾಪಟ್ಟೆ ಹುಡುಗಿಯರಿಗೆ ಇವರು ಕ್ರಷ್​ ಆಗಿದ್ದಾರೆ. ರಿಯಲ್​ ಲೈಫ್​ನಲ್ಲಿ ತುಂಬಾ ಮೃದು, ಮಿತಭಾಷಿಯಾಗಿರುವ ರಾಣವ್​ ಅವರ ವರ್ಣನೆ ಮಾಡಿದ್ದಾರೆ ರಾಧಾ ಭಗವತಿ.

46
ದರ್ಶನ್​, ರವಿಚಂದ್ರನ್​ ಮದುವೆಗೆ

ಬಾಸ್​ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಅವರು, ನಾನು ರವಿಚಂದ್ರನ್​ ಮತ್ತು ದರ್ಶನ್ ಅವರ ಅಭಿಮಾನಿ. ರಾಣವ್​ ಅವರು ನಟನೆಯಲ್ಲಿ ದರ್ಶನ್​ ಅವರನ್ನು ಹೋಲುತ್ತಾರೆ. ಅವರಿಬ್ಬರಲ್ಲಿ ತುಂಬಾ ಸಾಮ್ಯತೆ ಇದೆ. ರವಿಚಂದ್ರನ್​ ಜೊತೆಗೆ ದರ್ಶನ್​ ಅವರು ನನ್ನ ಮದುವೆಗೆ ಬರಬೇಕು ಎನ್ನುವುದು ನನ್ನ ಆಶಯ, ಆ ದೇವರು ನನ್ನ ಆಸೆ ಈಡೇರಿಸುತ್ತಾನೆ ಎಂದು ಅಂದುಕೊಂಡಿದ್ದೇನೆ ಎಂದಿದ್ದಾರೆ ರಾಧಾ.

56
ದರ್ಶನ್​ ಬಗ್ಗೆ ರಾಧಾ

ಇದೇ ವೇಳ ದರ್ಶನ್​ ಅವರ ಬಗ್ಗೆ ಮಾತನಾಡಿರುವ ನಟಿ, ತಪ್ಪು ಮನುಷ್ಯನಿಂದ ಆಗುವುದು ಸಹಜ. ಹಾಗೆಯೇ ಒಂದಿಷ್ಟು ಟೈಮ್​ನಲ್ಲಿ ಕಷ್ಟಗಳೂ ಬರುತ್ತವೆ. ಅದೇ ರೀತಿ ದರ್ಶನ್​ ಅವರಿಗೂ ಆಗಿದೆ. ಅವರು ಆದಷ್ಟು ಬೇಗ ಹೊರಕ್ಕೆ ಬರುತ್ತಾರೆ ಎನ್ನುವ ನಂಬಿಕೆ ನನಗೆ ಇದೆ ಎಂದು ಹೇಳಿದ್ದಾರೆ.

66
ರಾಣವ್​ ಅವರಲ್ಲಿ ದರ್ಶನ್​ ಝಲಕ್​

ರಾಣವ್​ ಅವರ ಸ್ಟೈಲ್​, ಅವರ ನಟನೆ, ಅವರ ಮಾತು ಎಲ್ಲವನ್ನೂ ನೋಡಿದಾಗ ದರ್ಶನ್​ ಅವರೇ ನೆನಪಾಗುತ್ತಾರೆ. ದರ್ಶನ್​ ಅವರಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಅವರೆಲ್ಲರ ಹಾರೈಕೆ ನೆರವೇರುತ್ತದೆ. ನನ್ನ ಮದುವೆಗೆ ಮುನ್ನವೇ ದರ್ಶನ್​ ಅವರು ಬಿಡುಗಡೆಯಾಗುವ ನಂಬಿಕೆ ಇದೆ. ದೈವಿಚ್ಛೆ ಇದ್ದರೆ ಅವರು ನಮ್ಮ ಮದುವೆಗೆ ಬರುತ್ತಾರೆ ಎಂದಿದ್ದಾರೆ ರಾಧಾ ಭಗವತಿ (Radha Bhagavati)

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories