ಆರ್‌ಸಿಬಿ ಹೊಸ ಚೇರ್ಮನ್ ಆರ್ಯಮನ್ ಬಿರ್ಲಾ ಅವರ ಅಕ್ಕ ಅನನ್ಯ ಬಿರ್ಲಾ, ಕೇವಲ ಉದ್ಯಮಿಯ ಮಗಳಲ್ಲದೆ ಸ್ವಂತ ಪರಿಶ್ರಮದಿಂದ ಉದ್ಯಮಿ, ಗಾಯಕಿ ಮತ್ತು ಹೂಡಿಕೆದಾರರಾಗಿ ಬೆಳೆದಿದ್ದಾರೆ. 17ನೇ ವಯಸ್ಸಿಗೆ 'ಸ್ವತಂತ್ರ ಮೈಕ್ರೋಫಿನ್' ಸ್ಥಾಪಿಸಿ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ.
ಆರ್‌ಸಿಬಿ ಹೊಸ ಚೇರ್ಮನ್ ಆರ್ಯಮಾನ್ ವಿಕ್ರಮ್ ಬಿರ್ಲಾ ಅವರ ಅಕ್ಕ, ಕುಮಾರ ಮಂಗಲಂ ಬಿರ್ಲಾ ಅವರ ಪುತ್ರಿ ಅನನ್ಯ ಬಿರ್ಲಾ ಕೇವಲ ಒಬ್ಬ ಉದ್ಯಮಿಯ ಮಗಳಷ್ಟೇ ಅಲ್ಲ, ಸ್ವಂತ ಪರಿಶ್ರಮದಿಂದ ಆಗಿರುವ ಉದ್ಯಮಿ, ಗಾಯಕಿ ಮತ್ತು ಹೂಡಿಕೆದಾರರಾಗಿ ತಮ್ಮದೇ ಆದ ಗುರುತು ಮೂಡಿಸಿಕೊಂಡಿದ್ದಾರೆ.
29
ಪರಿಚಯ ಮತ್ತು ಕೌಟುಂಬಿಕ ಹಿನ್ನೆಲೆ
ಅನನ್ಯ ಬಿರ್ಲಾ ಭಾರತದ ಖ್ಯಾತ ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ ಅವರ ಹಿರಿಯ ಪುತ್ರಿ. ಇತ್ತೀಚೆಗಷ್ಟೇ ಆರ್‌ಸಿಬಿ ತಂಡದ ಚುಕ್ಕಾಣಿ ಹಿಡಿದ ಆರ್ಯಮನ್ ವಿಕ್ರಮ್ ಬಿರ್ಲಾ ಇವರ ಸಹೋದರ. ಬಿರ್ಲಾ ಕುಟುಂಬದ ಪರಂಪರೆಯನ್ನು ಮುಂದುವರಿಸುವುದರ ಜೊತೆಗೆ ಇವರು ಸ್ವತಂತ್ರವಾಗಿ ಬೆಳೆದಿದ್ದಾರೆ. 1994 ರಲ್ಲಿ ಮುಂಬೈನಲ್ಲಿ ಜನಿಸಿದ ಅನನ್ಯ, ಮುಂಬೈನ ಅಮೇರಿಕನ್ ಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ ಮುಗಿಸಿದ್ದಾರೆ. ನಂತರ ವಿಶ್ವವಿಖ್ಯಾತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ಮ್ಯಾನೇಜ್‌ಮೆಂಟ್ ವ್ಯಾಸಂಗ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಇವರಿಗೆ ಸಂಗೀತ ಮತ್ತು ಉದ್ಯಮ ಎರಡರಲ್ಲೂ ಆಸಕ್ತಿ ಇತ್ತು.
39
17ನೇ ವಯಸ್ಸಿಗೆ ಉದ್ಯಮ ಲೋಕಕ್ಕೆ ಎಂಟ್ರಿ
ಕೇವಲ 17 ವರ್ಷ ವಯಸ್ಸಿನಲ್ಲೇ ಅನನ್ಯ 'ಸ್ವತಂತ್ರ ಮೈಕ್ರೋಫಿನ್' (Svatantra Microfin) ಎಂಬ ಕಂಪನಿಯನ್ನು ಪ್ರಾರಂಭಿಸುವ ಮೂಲಕ ಉದ್ಯಮ ಜೀವನ ಆರಂಭಿಸಿದರು. ಈ ಸಂಸ್ಥೆಯು ಗ್ರಾಮೀಣ ಮಹಿಳಾ ಉದ್ಯಮಿಗಳಿಗೆ ಸಣ್ಣ ಸಾಲಗಳನ್ನು ನೀಡುವ ಮೂಲಕ ಅವರನ್ನು ಉದ್ಯಮಶೀಲರನ್ನಾಗಿ ಮಾಡುವ ಗುರು ಹೊಂದಿದೆ.
ಇಂದು ಸ್ವತಂತ್ರ ಮೈಕ್ರೋಫಿನ್ ಭಾರತದ ಪ್ರಮುಖ ಕಿರುಬಂಡವಾಳ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ. ಇದರೊಂದಿಗೆ ಇವರು 'ಇಕೈ ಅಸೈ' (Ikai Asai) ಎಂಬ ಐಷಾರಾಮಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅನ್ನು ಸಹ ಪ್ರಾರಂಭಿಸಿದ್ದಾರೆ.
59
ಬಹುಮುಖಿ ಉದ್ಯಮ ವಿಸ್ತರಣೆ
ಸೌಂದರ್ಯ (Beauty), ತಂತ್ರಜ್ಞಾನ (Tech) ಮತ್ತು ಹಣಕಾಸು ವಲಯಗಳಲ್ಲಿ ಇವರು ಹೂಡಿಕೆ ಮಾಡಿದ್ದಾರೆ. ಪ್ರಸ್ತುತ ಆದಿತ್ಯ ಬಿರ್ಲಾ ಗ್ರೂಪ್‌ನ ಹಲವು ಕಂಪನಿಗಳಲ್ಲಿ ಇವರು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ.
69
ಜಾಗತಿಕ ಪಾಪ್ ಸ್ಟಾರ್
ಉದ್ಯಮದ ಹೊರತಾಗಿ ಅನನ್ಯ ಸಂಗೀತ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಇಂಗ್ಲಿಷ್ ಸಿಂಗಲ್ಸ್‌ನಲ್ಲಿ 'ಪ್ಲಾಟಿನಂ' ಗೌರವ ಪಡೆದ ಮೊದಲ ಭಾರತೀಯ ಕಲಾವಿದೆ. ಆದರೆ, ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಸಂಗೀತದಿಂದ ವಿರಾಮ ಪಡೆದು ಉದ್ಯಮ ಮತ್ತು ಹೂಡಿಕೆಯತ್ತ ಸಂಪೂರ್ಣ ಗಮನ ಹರಿಸಿದರು.
79
ನಿವ್ವಳ ಆಸ್ತಿ ಮತ್ತು ಐಷಾರಾಮಿ ಜೀವನ
ವರದಿಗಳ ಪ್ರಕಾರ ಅನನ್ಯ ಬಿರ್ಲಾ ಅವರ ವೈಯಕ್ತಿಕ ನಿವ್ವಳ ಆಸ್ತಿ ಸುಮಾರು ₹1,000 ಕೋಟಿಯಿಂದ ₹1,770 ಕೋಟಿ ಎಂದು ಅಂದಾಜಿಸಲಾಗಿದೆ. ಮುಂಬೈನಲ್ಲಿ ಸುಮಾರು ₹425 ಕೋಟಿ ಮೌಲ್ಯದ ಭವ್ಯ ಬಂಗಲೆಯಲ್ಲಿ ಇವರು ವಾಸಿಸುತ್ತಿದ್ದಾರೆ.
89
ಸಮಾಜ ಸೇವೆ ಮತ್ತು ಮಾನಸಿಕ ಆರೋಗ್ಯ
ಇವರು ಸಮಾಜ ಸೇವೆಯಲ್ಲೂ ಮುಂಚೂಣಿಯಲ್ಲಿದ್ದಾರೆ. 'ಎಂಪವರ್' (MPower) ಎಂಬ ಉಪಕ್ರಮದ ಮೂಲಕ ಭಾರತದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಮತ್ತು ಅಗತ್ಯವಿರುವವರಿಗೆ ಚಿಕಿತ್ಸೆ ಒದಗಿಸಲು ಶ್ರಮಿಸುತ್ತಿದ್ದಾರೆ.
99
ಹೊಸ ತಲೆಮಾರಿನ ಐಕಾನ್
ಕೇವಲ ಒಬ್ಬ ಬಿರ್ಲಾ ವಂಶದ ಕುಡಿಯಾಗಿ ಉಳಿಯದೆ, ಹಣಕಾಸು, ಸಂಗೀತ ಮತ್ತು ಲೋಕೋಪಕಾರದ ಮೂಲಕ ಸ್ವಂತ ಅಸ್ತಿತ್ವ ಕಂಡುಕೊಂಡಿರುವ ಅನನ್ಯ ಬಿರ್ಲಾ, ಇಂದಿನ ಯುವ ಉದ್ಯಮಿಗಳಿಗೆ ದೊಡ್ಡ ಪ್ರೇರಣೆಯಾಗಿದ್ದಾರೆ. ಇತ್ತೀಚೆಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದ ವೇಳೆ, ಸಂಗೀತ ಕ್ಷೇತ್ರವನ್ನು ಬಿಟ್ಟಿರುವ ಬಗ್ಗೆ ಪ್ರಶ್ನೆ ಮಾಡಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.