ಸಂಗಾತಿಯಲ್ಲಿ ಈ ಗುಣಗಳಿದ್ದರೆ, ನೀವು ಲಕ್ಕಿ ಎನ್ನೋದರಲ್ಲಿ ಅನುಮಾನವೇ ಇಲ್ಲ

First Published | Dec 22, 2022, 5:48 PM IST

ವಯಸ್ಸು 20-25 ದಾಟುತ್ತಿದ್ದಂತೆ ಮದುವೆಗೆ ಗಂಡು ನೋಡಲು ಆರಂಭಿಸುತ್ತಾರೆ. ಕೆಲವೊಮ್ಮೆ ಏನಾಗುತ್ತೆ ಅಂದ್ರೆ, ಗಂಡು ನೋಡಿದೊಡನೆ, ಎರಡೂ ಮನೆಯವರಿಗೆ ಒಪ್ಪಿಗೆಯಾದ್ರೆ ತಿಂಗಳೊಳಗೆ ಮದುವೆ ಮಾಡಿ ಮುಗಿಸ್ತಾರೆ. ಆದ್ರೆ ಹುಡುಗನ ಬಗ್ಗೆ ತಿಳಿಯದೇ ಮದ್ವೆ ಆಗೋದು ಸರಿ ಅಲ್ಲ ಅಲ್ವಾ? 

ಸ್ವಲ್ಪ, ಎಲ್ಲಾ ಕೆಲಸ ಬದಿಗಿಟ್ಟು ಇಲ್ಲಿ ಕೇಳಿ. ಯಾಕಂದ್ರೆ ಇಂದು ನಾವು ಜೀವನ ಸಂಗಾತಿಗೆ (life partner) ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ತಿಳಿಸುತ್ತೇವೆ. ನಿಮ್ಮ ಸಂಗಾತಿ ನಿಮ್ಮನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರ ಮೇಲೆ ಸಂಬಂಧವು ಅವಲಂಬಿತವಾಗಿರುತ್ತದೆ ಅಲ್ವಾ?. ಹಾಗಿದ್ರೆ ನಿಮ್ಮ ಸಂಗಾತಿ ಒಳ್ಳೆಯವರೋ ಅಥವಾ ಕೆಟ್ಟವರೋ ತಿಳಿಯೋದು ಹೇಗೆ? ನೀವೂ ಈ ಬಗ್ಗೆ ಯೋಚನೆ ಮಾಡುತ್ತಿದ್ದರೆ, ಇಲ್ಲಿದೆ ನಿಮಗಾಗಿ ಕೆಲವು ಸಲಹೆಗಳು. 

ನಿಮ್ಮ ಪತಿ ಅಥವಾ ಪ್ರೇಮಿ ಈ 5 ಗುಣಗಳನ್ನು (5 qualities of ideal partner) ಹೊಂದಿದ್ದರೆ, ಖಂಡಿತವಾಗಿಯೂಅವರು ತುಂಬಾ ಒಳ್ಳೆಯವರಾಗಿರುತ್ತಾರೆ, ಜೊತೆಗೆ ಅವರು ಯಾವಾಗಲೂ ಸಂಬಂಧಕ್ಕೆ ನಿಷ್ಠರಾಗಿರುತ್ತಾರೆ, ಜೊತೆಗೆ ನಿಮ್ಮನ್ನು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ, ಈ ಬಗ್ಗೆ ತಿಳಿಯೋಣ. 

Tap to resize

ಕೆಲವು ಸಮಯದ ಹಿಂದೆ, ಹಾರ್ವರ್ಡ್ ಹೆಲ್ತ್ ವೆಬ್‌ಸೈಟಿನಲ್ಲಿ (health.harvard.edu) ಪ್ರಕಟವಾದ ಒಂದು ಅಧ್ಯಯನವು ಆರೋಗ್ಯಕರ ಸಂಬಂಧದ (healthy relationship) ಗುಣಗಳು ಯಾವುವು ಮತ್ತು ನಿಮ್ಮ ಸಂಗಾತಿಯು ಅಂತಹ ಗುಣಗಳನ್ನು ಹೊಂದಿದ್ದರೆ, ಸಂಬಂಧವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದೆ. ಆ ಅಧ್ಯಯನದಲ್ಲಿ, ಆರೋಗ್ಯಕರ ಸಂಬಂಧಗಳಿಗಾಗಿ ಕೆಲವು ಸಲಹೆಗಳನ್ನು ಸಹ ತಿಳಿಸಲಾಯಿತು. 
 

ಭಾವನಾತ್ಮಕ ವಿಷಯಗಳನ್ನು ಆಲಿಸುವ ಸಂಗಾತಿ

ಸಂಗಾತಿಯು ನಿಮ್ಮ ಮಾತನ್ನು ಜಾಗರೂಕತೆಯಿಂದ ಆಲಿಸಿದರೆ ಮತ್ತು ಅದೇ ಸಮಯದಲ್ಲಿ ನಿಮ್ಮ ಭಾವನೆಗಳನ್ನು ಗೌರವಿಸಿದರೆ (Respect your Emotions), ಅದು ತುಂಬಾ ಒಳ್ಳೆಯದು. ದೀರ್ಘಕಾಲದವರೆಗೆ ಸಂಬಂಧವನ್ನು ನಡೆಸಲು ಇದು ಬಹಳ ಉತ್ತಮ ಗುಣವಾಗಿದೆ. ಸಂಗಾತಿಯು ನಿಮ್ಮ ಬಗ್ಗೆ ಕಾಳಜಿ ವಹಿಸದಿದ್ದರೆ ಆ ಸಂಬಂಧವು ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ, ಆಲಿಸುವುದರ ಜೊತೆಗೆ, ಸಂಗಾತಿ ನಿಮ್ಮ ಭಾವನೆಗಳನ್ನು ಮೆಚ್ಚುತ್ತಾನೆ ಮತ್ತು ಅದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾನೆ ಎಂಬುದು ಬಹಳ ಮುಖ್ಯ. 

ಸ್ಪಾಟ್ ಲೈಟ್ ಹಂಚಿಕೊಳ್ಳುವ ವ್ಯಕ್ತಿ

ತನ್ನ ಬಗ್ಗೆ ಯೋಚಿಸುವ ಮತ್ತು ತನ್ನನ್ನು ತಾನು ಮನವರಿಕೆ ಮಾಡಿಕೊಳ್ಳಲು ಪ್ರಯತ್ನಿಸುವ ಅಥವಾ ಯಾವಾಗಲೂ ಇತರರ ಮುಂದೆ ತನ್ನನ್ನು ಮುಂದಿಡುವ ವ್ಯಕ್ತಿಯ ಜೊತೆಗಿನ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಆದರೆ ನಿಮ್ಮ ಸಂಗಾತಿ ಎಲ್ಲಾ ವಿಷಯದಲ್ಲೂ ತನ್ನ ಜೊತೆ, ನಿಮ್ಮನ್ನೂ ಸೇರಿಸಿಕೊಂಡರೆ, ನಿಮಗೂ ಸ್ಪೇಸ್ ನೀಡಿದರೆ ಆ ಸಂಬಂಧ ಉತ್ತಮವಾಗಿರುತ್ತೆ. 

ಶಾಂತಿ ಕಾಪಾಡುವ ವ್ಯಕ್ತಿ

ಸಣ್ಣ ವಿಷಯಗಳನ್ನು ದೊಡ್ಡದು ಮಾಡದೇ ಮತ್ತು ಮನೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸೋ ಸಂಗಾತಿಯು ನಿಜಕ್ಕೂ ಆದರ್ಶಪ್ರಾಯರು. ನೋಡಿ, ಜಗಳವಿದ್ದರೆ, ವಿವಾದವನ್ನು ಶಾಂತಿಯುತವಾಗಿ ಪರಿಹರಿಸಲು ಪ್ರಯತ್ನಿಸಬೇಕು. ವಿವಾದ ಉಲ್ಬಣಗೊಂಡರೆ, ಅದು ಸಂಬಂಧಕ್ಕೆ ಮುಳುವಾಗುತ್ತೆ.

ನಿಮ್ಮ ಬಗ್ಗೆ ಗೌರವ

ಸಂಬಂಧದಲ್ಲಿ ಹೆಚ್ಚಿನ ಒತ್ತಡವಿದ್ದರೆ, ಸೋಶಿಯಲ್ ಮೀಡಿಯಾದಿಂದಾಗಿ ಅದು ಇನ್ನೂ ಹೆಚ್ಚಬಹುದು. ಆಕ್ರಮಣಕಾರಿ ಕಾಮೆಂಟ್ ಗಳು ಮತ್ತು ಜನರ ಪ್ರಚೋದನಕಾರಿ ಮಾತುಗಳು ನಿಮ್ಮ ಸಂಬಂಧವನ್ನು ಹದಗೆಡಿಸಬಹುದು. ಇತರರು ನಿಮ್ಮ ಬಗ್ಗೆ ಏನೂ ಹೇಳಿದರೂ, ಅದನ್ನು ನಿಮ್ಮ ಬಳಿ ಕೇಳಿ ಸಮಸ್ಯೆ ಪರಿಹರಿಸಿ, ನಿಮಗೆ ಗೌರವ ನೀಡುವ (respect you) ವ್ಯಕ್ತಿ ನಿಜಕ್ಕೂ ಉತ್ತಮನಾಗಿರುತ್ತಾರೆ.

ಪಾಸಿಟಿವ್ ಥಿಂಕಿಂಗ್ ವ್ಯಕ್ತಿ

ಯಾವಾಗಲೂ ಪಾಸಿಟಿವ್ ಆಗಿ ಯೋಚನೆ ಮಾಡುವ ವ್ಯಕ್ತಿಯ ಜೀವನವು ತುಂಬಾ ಸಂತೋಷವಾಗಿರುತ್ತದೆ. ಸಂಗಾತಿಯು ತನ್ನ ಮಾತುಗಳಿಂದ ವಾತಾವರಣವನ್ನು ಹಗುರಗೊಳಿಸುವ ಮತ್ತು ಕೆಟ್ಟ ಪರಿಸ್ಥಿತಿಯಲ್ಲಿಯೂ ಸಕರಾತ್ಮಕವಾಗಿ ಯೋಚಿಸುವ (positive thinking) ಗುಣ ಹೊಂದಿದ್ದರೆ, ಅದು ನಿಮಗೆ ಒಳ್ಳೆಯದು.. ಇದು ಸಂಬಂಧಕ್ಕೆ ಒಳ್ಳೆಯದು ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು.  

ನಿಮ್ಮ ಕನಸುಗಳನ್ನು ನೆರವೇರಿಸೋ ವ್ಯಕ್ತಿ

ಯಾವಾಗಲೂ ತನ್ನ ಕರಿಯರ್, ತನ್ನ ಗುರಿ ಬಗ್ಗೆಯೇ ಮಾತನಾಡುತ್ತಾ ಅದರ ಬಗ್ಗೆ ಹೆಚ್ಚು ಫೋಕಸ್ ಮಾಡುವ ವ್ಯಕ್ತಿಯ ಜೊತೆ ಚೆನ್ನಾಗಿ ಬದುಕಲು ಸಾಧ್ಯವಾಗೋದಿಲ್ಲ. ಆದರೆ ಒಬ್ಬ ವ್ಯಕ್ತಿಯು ನಿಮ್ಮ ಕನಸುಗಳನ್ನು ನೆರವೇರಿಸಲು, ನಿಮ್ಮ ಗುರಿ ತಲುಪಲು ನಿಮಗೆ ಬೆನ್ನೆಲುಬಾಗಿ ನಿಂತರೆ ಅಂತಹ ಸಂಗಾತಿಯನ್ನು ಪಡೆದ ನೀವು ನಿಜಕ್ಕೂ ಗ್ರೇಟ್. 

Latest Videos

click me!