Long distance Relationship ನಲ್ಲಿ ಪ್ರೀತಿನೇ ಇರಲ್ಲ ಅನ್ನೋರು ಇದನ್ನ ಓದಿ

Published : Dec 19, 2022, 05:46 PM IST

ಇಲ್ಲಿವರೆಗೆ ನೀವು ಲಾಂಗ್ ಡಿಸ್ಟನ್ಸ್ ರಿಲೇಶನ್ ಶಿಪ್‌ನ  ಅನಾನುಕೂಲಗಳ ಬಗ್ಗೆ ಕೇಳಿರಬಹುದು. ದೂರದಲ್ಲಿದ್ದರೆ ನಿಮ್ಮ ಸಂಬಂಧವನ್ನು ದೂರ ಮಾಡುತ್ತೆ ಅಥವಾ ದುರ್ಬಲಗೊಳಿಸುತ್ತದೆ ಎಂದು ನೀವು ಕೇಳಿರಬಹುದು. ಆದರೆ ಈ ಪರಿಸ್ಥಿತಿ ಹೀಗೇ ಇರಬೇಕೆಂದೇನಿಲ್ಲ, ಕೆಲವೊಮ್ಮೆ ನಿಮ್ಮ ನಡುವಿನ ಪ್ರೀತಿಯು ದೂರದಿಂದ ಹೆಚ್ಚಾಗುತ್ತದೆ. 

PREV
19
Long distance Relationship ನಲ್ಲಿ ಪ್ರೀತಿನೇ ಇರಲ್ಲ ಅನ್ನೋರು ಇದನ್ನ ಓದಿ

ಲಾಂಗ್ ಡಿಸ್ಟನ್ಸ್ ರಿಲೇಶನ್ ಶಿಪ್ (long distance relationship) ಆರಂಭದಲ್ಲಿ, ಈ ಸಂಬಂಧವು ಕೆಲಸ ಮಾಡುವುದಿಲ್ಲ ಎಂದು ನೀವು ಭಾವಿಸುತ್ತೀರಿ. ಆದರೆ ಅದು ಹಾಗಲ್ಲ, ಲಾಂಗ್ ಡಿಸ್ಟನ್ಸ್ ರಿಲೇಶನ್ ಶಿಪ್ ನಲ್ಲಿ ಉಳಿಯುವ ಮೂಲಕ, ನೀವು ನಿಮ್ಮ ಸಂಗಾತಿಗೆ ಎಷ್ಟು ನಿಷ್ಠಾವಂತರಾಗಿದ್ದೀರಿ ಎಂಬುದನ್ನು ಪರೀಕ್ಷಿಸಿಕೊಳ್ಳಬಹುದು. ಈ ಸಂಬಂಧದಲ್ಲಿ ಉಳಿಯುವುದು ನಿಮ್ಮ ಪ್ರೀತಿಯನ್ನು, ಡೆಡಿಕೆಶನ್ ನ್ನು ಹೆಚ್ಚಿಸುತ್ತದೆ. ಹೀಗಿರೋವಾಗ, ನಿಮ್ಮ ಸಂಗಾತಿಯನ್ನು ಭೇಟಿಯಾಗುವ ಉತ್ಸಾಹವೂ ಹೆಚ್ಚಾಗುತ್ತದೆ. ಅದೇ ಸಮಯದಲ್ಲಿ, ಇಂದಿನ ಸಮಯದಲ್ಲಿ, ಜನರು ಸಹ ಲಾಂಗ್ ಡಿಸ್ಟನ್ಸ್ ರಿಲೇಶನ್ ಶಿಪ್ ಗೆ ಓಕೆ ಎನ್ನುತ್ತಾರೆ. ಇಲ್ಲಿ ಲಾಂಗ್ ಡಿಸ್ಟನ್ಸ್ ರಿಲೇಶನ್ ಶಿಪ್ ನಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದರ ಬಗ್ಗೆ ತಿಳಿಸುತ್ತೇವೆ. 

29
ನಿಜವಾದ ಪ್ರೀತಿ (definition of true love)

ದೂರ ಉಳಿಯುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ನೀವು ಯೋಚನೆ ಮಾಡಿದ್ದಿರಬಹುದು. ಆದರೆ ಲಾಂಗ್ ಡಿಸ್ಟನ್ಸ್ ರಿಲೇಶನ್ ಶಿಪ್ ನಲ್ಲಿ ಇರುವಾಗ, ನೀವು ನಿಜವಾದ ಪ್ರೀತಿಯನ್ನು ಅರ್ಥಮಾಡಿಕೊಳ್ಳುತ್ತೀರಿ. ದೂರ ಉಳಿಯುವುದು ನಿಮ್ಮ ನಡುವಿನ ಪ್ರೀತಿಯನ್ನು ಹೆಚ್ಚಿಸುತ್ತೆ. ಜೊತೆಗೆ ಸಂಬಂಧವನ್ನು ಬಲಪಡಿಸುತ್ತದೆ.

39
ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿ (test your love)

ನೀವು ಲಾಂಗ್ ಡಿಸ್ಟನ್ಸ್ ರಿಲೇಶನ್ ಶಿಪ್ ನಲ್ಲಿ ಉಳಿಯುವ ಮೂಲಕ ನಿಮ್ಮನ್ನು ಪರೀಕ್ಷಿಸಿಕೊಳ್ಳಬಹುದು. ನಿಮ್ಮ ಬಗ್ಗೆ ಅಥವಾ ನಿಮ್ಮ ಸಂಗಾತಿಯ ಬಗ್ಗೆ ನೀವು ಒಬ್ಬರಿಗೊಬ್ಬರು ಎಷ್ಟು ಪ್ರಾಮಾಣಿಕರಾಗಿದ್ದೀರಿ ಎಂದು ನೀವು ಕಂಡುಹಿಡಿಯಬಹುದು.

49
ಪ್ರೀತಿ ಬೆಳೆಯುತ್ತದೆ (love keep growing)

ಲಾಂಗ್ ಡಿಸ್ಟನ್ಸ್ ರಿಲೇಶನ್ ಶಿಪ್ ನಲ್ಲಿರೋ ಕಪಲ್ಸ್ ನಡುವೆ ಪ್ರೀತಿ ಹೆಚ್ಚಾಗಿಯೇ ಇರುತ್ತೆ. ದೂರವಿರುವುದು ಯಾವಾಗಲೂ ಪ್ರೀತಿಯನ್ನು ಆಳಗೊಳಿಸುತ್ತದೆ. ನಿಮ್ಮ ಸಂಗಾತಿಯನ್ನು ದೀರ್ಘಕಾಲದವರೆಗೆ ಭೇಟಿಯಾಗಲು ನಿಮಗೆ ಸಾಧ್ಯವಾಗದಿದ್ದಾಗ, ಅವರನ್ನು ಭೇಟಿಯಾಗುವ ಉತ್ಸಾಹವೂ ನಿಮ್ಮಲ್ಲಿ ಹೆಚ್ಚಾಗುತ್ತದೆ. ಎಲ್ಲವನ್ನೂ ಮರೆತು ಅವರೊಂದಿಗೆ ಮಾತನಾಡಲು ಮತ್ತು ತುಂಬಾ ಪ್ರೀತಿ ಮಾಡಲು ಬಯಸುತ್ತೀರಿ. 

59
ಉತ್ಸಾಹ ಹೆಚ್ಚಾಗುತ್ತದೆ

ನೀವು ದೀರ್ಘಕಾಲದಿಂದ ಸಂಬಂಧದಲ್ಲಿದ್ದಾಗ ಅಥವಾ ಒಬ್ಬ ವ್ಯಕ್ತಿಯೊಂದಿಗೆ ಇದ್ದಾಗ, ನೀವು ಬೇಗನೆ ಅವನ ಬಗ್ಗೆ ಬೇಸರಗೊಳ್ಳುತ್ತೀರಿ. ಆದರೆ ನೀವು ಪರಸ್ಪರ ದೂರವಿರುವಾಗ, ನಿಮ್ಮ ಸಂಗಾತಿಯನ್ನು ಭೇಟಿಯಾಗುವ ಉತ್ಸಾಹ ಹೆಚ್ಚಾಗುತ್ತದೆ. ನೀವು ಅವರನ್ನು ಭೇಟಿಯಾಗಲು ಮತ್ತು ಅವರೊಂದಿಗೆ ಮಾತನಾಡಲು ಬಯಸುತ್ತೀರಿ.

69
ಜಗಳಗಳು ಕಡಿಮೆ ಇರುತ್ತವೆ

ನೀವು ಸಂಗಾತಿಯ ಬಳಿ ಇದ್ದಾಗ, ಅವರ ಸಣ್ಣ ತಪ್ಪುಗಳನ್ನು ಸಹ ನೀವು ಗಮನಿಸುತ್ತೀರಿ. ಇದರಿಂದ ಇಬ್ಬರ ನಡುವೆ ಹೆಚ್ಚು ಜಗಳ (less fighting) ನಡೆಯುವ ಸಾಧ್ಯತೆ ಇದೆ. ಆದರೆ ನೀವು ಅವರಿಂದ ದೂರವಿರುವಾಗ, ನೀವು ಅವರೊಂದಿಗೆ ಮಾತನಾಡಲು ಬಯಸುತ್ತೀರಿ. ಹಾಗಾಗಿ ಇಲ್ಲಿ ಜಗಳಕ್ಕೆ ಜಾಗವೇ ಇರೋದಿಲ್ಲ..

79
ಗೌರವ ಹಾಗೆಯೇ ಉಳಿಯುತ್ತೆ

ದಂಪತಿಗಳು ಒಟ್ಟಿಗೆ ವಾಸಿಸುವಾಗ, ಅವರಿಬ್ಬರೂ ಪರಸ್ಪರರೊಂದಿಗೆ ಇರುವ ಕಾರಣದಿಂದಾಗಿ ಪರಸ್ಪರ ಗೌರವಿಸಲು ಬಹುತೇಕ ಮರೆತುಬಿಡುತ್ತಾರೆ. ಆದರೆ ಲಾಂಗ್ ಡಿಸ್ಟನ್ಸ್ ರಿಲೇಶನ್ ಶಿಪ್’ನಲ್ಲಿದ್ರೆ, ಗೌರವವು ಉಳಿಯುತ್ತದೆ ಮತ್ತು ನೀವು ಭೇಟಿಯಾದಾಗ ರೆಸ್ಪೆಕ್ಟ್ ಕೊಡುವ ಬಗ್ಗೆಯೂ ನೀವು ತುಂಬಾನೆ ಕನ್ಸರ್ನ್ ಆಗಿರುತ್ತೀರಿ.

89
ಭವಿಷ್ಯಕ್ಕೆ ಸಿದ್ಧ

ಲಾಂಗ್ ಡಿಸ್ಟನ್ಸ್ ರಿಲೇಶನ್ ಶಿಪ್ ನಲ್ಲಿರುವ ಒಂದು ಪ್ರಯೋಜನವೆಂದರೆ, ಭವಿಷ್ಯದಲ್ಲಿ ಕೆಲವು ಕಾರಣಗಳಿಗಾಗಿ ನೀವು ಎಂದಾದರೂ ಸಂಗಾತಿಯಿಂದ ದೂರವಿರಬೇಕಾದರೆ, ನೀವು ಅದಕ್ಕೆ ಈಗಲೇ ಸಂಪೂರ್ಣವಾಗಿ ಸಿದ್ಧರಾಗಿರುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ, ನಿಮಗೆ ಯಾವುದೇ ಸಮಸ್ಯೆಯಿರೋದಿಲ್ಲ..

99

ನೀವು ಲಾಂಗ್ ಡಿಸ್ಟನ್ಸ್ ರಿಲೇಶನ್ ಶಿಪ್ ನಲ್ಲಿದ್ದರೆ, ಇದರಿಂದ ನೀವು ಪರಸ್ಪರರ ಮೌಲ್ಯವನ್ನು ಅರ್ಥಮಾಡಿಕೊಳ್ಳುವಂತೆ ಮಾಡುತ್ತದೆ.  ಹಾಗಾಗಿ ಲಾಂಗ್ ಡಿಸ್ಟನ್ಸ್ ರಿಲೇಶನ್ ಶಿಪ್ ಇದ್ರೆ ಕೇವಲ ಮೋಸ ಮಾಡ್ತಾರೆ ಎಂದು ಮಾತ್ರ ಹೇಳಲು ಸಾಧ್ಯವಿಲ್ಲ. ಇದರಿಂದ ಬಾಂಡಿಂಗ್ ತುಂಬಾನೆ ಹೆಚ್ಚುತ್ತೆ.

Read more Photos on
click me!

Recommended Stories