Break Up: ತಲೆ ಕೆಡಿಸಿಕೊಂಡರೆ ಸಾಗದು ಜೀವನ ಮುಂದೆ, ಹೀಗ್ ಮಾಡಿ ನೋವು ದೂರ ಮಾಡಿಕೊಳ್ಳಿ!

First Published | Dec 21, 2022, 6:14 PM IST

ಬ್ರೇಕ್ ಅಪ್ ನಂತರ, ನೀವು ಸತ್ಯವನ್ನು ಸ್ವೀಕರಿಸಲು ಸಾಧ್ಯವಾಗದ ಕಾರಣ ತುಂಬಾ ಬೇಸರದಲ್ಲಿ ಸಮಯ ಕಳೆಯುತ್ತೀರಿ. ಯಾವುದೇ ರೀತಿಯ ಕೆಲಸ ಮಾಡಲು ಸಹ ಸಾಧ್ಯವಾಗೋದಿಲ್ಲ. ಇಂತಹ ಸಂದರ್ಭದಲ್ಲಿ ಬ್ರೇಕ್ ಅಪ್ ನೋವಿನಿಂದ ಹೊರಬರೋದು ಹೇಗೆ ಅನ್ನೋದನ್ನು ನೋಡೋಣ.

ಪ್ರೇಮ ಸಂಬಂಧದಲ್ಲಿ ಇರುವಾಗ (Love relationship) ನಮ್ಮ ಸುತ್ತಲೂ ಕೇವಲ ಸಂತೋಷ ಮತ್ತು ಪ್ರೀತಿ ಇರುತ್ತೆ. ಇಬ್ಬರೂ ಒಟ್ಟಿಗೆ ಸಮಯ ಕಳೆಯುತ್ತಾರೆ, ಪರಸ್ಪರ ಅರ್ಥಮಾಡಿಕೊಳ್ಳುತ್ತಾರೆ, ತಿಳಿದುಕೊಳ್ಳುತ್ತಾರೆ, ಪರಸ್ಪರರ ಅಭ್ಯಾಸಗಳೊಂದಿಗೆ ಪರಿಚಿತರಾಗುತ್ತಾರೆ. ಆದರೆ, ಎಲ್ಲರ ವಿಷ್ಯದಲ್ಲೂ ಪ್ರೀತಿ ಹೀಗೆ ಇರೋದಿಲ್ಲ. ಕೆಲವು ಸಂಬಂಧಗಳು ಅರ್ಧದಲ್ಲೇ ಮುರಿದು ಹೋಗುತ್ತವೆ. ಪ್ರೇಮಿಗಳು ಬ್ರೇಕ್ ಅಪ್ (breakup) ಹೆಸರಿನಲ್ಲಿ ದೂರ ಆಗ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅನೇಕ ಜನರು ತಮ್ಮ ಬ್ರೇಕ್’ಅಪ್ ನಿಂದ ಹೊರಬರಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಅವರ ಮನಸ್ಸು ಯಾವುದೇ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅವರ ಮನಸ್ಸು ತನ್ನ ಮಾಜಿಯೊಂದಿಗೆ ಮಾತನಾಡಲು ಬಯಸುತ್ತದೆ. ಜೊತೆಗೆ ಮೆಸೇಜ್ ಮೇಲೆ ಮೆಸೇಜ್ ಮಾಡ್ತಾರೆ, ಕಾಲ್ ಮಾಡ್ತಾರೆ… ಆದರೆ ಆ ಕಡೆಯಿಂದ ಬ್ಲಾಕ್… ಇದರಿಂದ ಮತ್ತಷ್ಟು ನೋವು… ನಿಮಗೂ ಈ ರೀತಿ ಆಗಿದ್ರೆ ಇದರಿಂದ ಹೊರ ಬರೋದು ಹೇಗೆ ಅನ್ನೋದನ್ನು ತಿಳಿಯೋಣ.

ಕರಿಯರ್ ಮೇಲೆ ಗಮನ ಹರಿಸಿ (focus on career)

ಕರಿಯರ್ ಮೇಲೆ ಗಮನ ಕೇಂದ್ರೀಕರಿಸುವುದು ಉತ್ತಮ ಜೀವನದ ಕಡೆಗೆ ಮೊದಲ ಹೆಜ್ಜೆ. ಇದು ಬಹಳ ಮುಖ್ಯವೂ ಹೌದು. ಬ್ರೇಕಪ್ ನಂತರ, ಹೆಚ್ಚಿನ ಜನ ಕೆಟ್ಟ ವಿಷ್ಯಗಳನ್ನೇ ಯೋಚನೆ ಮಾಡ್ತಾರೆ. ಬ್ರೇಕ್ ಅಪ್‌ನಿಂದ ನೀವು ಬೇಜಾರಲ್ಲಿದ್ದೀರಿ ನಿಜ. ಆದರೆ ಈ ಎಲ್ಲಾ ವಿಷಯಗಳು ನಿಮ್ಮ ವೃತ್ತಿ ಜೀವನ ಅಥವಾ ಕೆಲಸದ ಮೇಲೆ ಎಂದಿಗೂ ಪರಿಣಾಮ ಬೀರಬಾರದು. ನೀವು ಅಧ್ಯಯನ ಮಾಡುತ್ತಿದ್ದರೆ, ನಿಮ್ಮದೇ ಆದ ಒಂದು ಗುರಿಯನ್ನು ಇಟ್ಟುಕೊಳ್ಳಿ. ಇದಲ್ಲದೆ, ನೀವು ಉದ್ಯೋಗದಲ್ಲಿದ್ದರೆ, ನಿಮ್ಮ ಕೆಲಸದ ಮೇಲೆ ಎಲ್ಲಾ ಗಮನವನ್ನು ಕೇಂದ್ರೀಕರಿಸಿ.

Tap to resize

ಪಾಸಿಟಿವ್ ಆಗಿರಿ (be possitive)

ನೀವು ಇಲ್ಲಿವರೆಗೆ ನಿಮ್ಮ ಸಂಗಾತಿಯೇ ನಿಮ್ಮ ಪ್ರಪಂಚ ಎಂಬಂತೆ ಜೀವಿಸಿದ್ದೀರಿ. ಅಂತಹ ಪರಿಸ್ಥಿತಿಯಲ್ಲಿ, ಅವರು ನಿಮ್ಮನ್ನು ತೊರೆದಾಗ, ನಕಾರಾತ್ಮಕತೆಯು ನಿಮ್ಮನ್ನು ಸುತ್ತುವರೆಯುತ್ತದೆ. ಕೆಟ್ಟ ಆಲೋಚನೆಗಳು ಮನಸ್ಸಿಗೆ ಬರಲು ಪ್ರಾರಂಭಿಸುತ್ತವೆ. ನನ್ನಿಂದ ಇನ್ನೇನೂ ಮಾಡಲು ಸಾಧ್ಯವಿಲ್ಲ ಎಂಬ ಭಾವನೆ ಮೂಡುತ್ತದೆ. ಆದರೆ ಈ ಸಮಯದಲ್ಲಿ ನೀವು ಧನಾತ್ಮಕವಾಗಿ ಉಳಿಯುವುದು ಬಹಳ ಮುಖ್ಯ. ನೀವು ನಕಾರಾತ್ಮಕವಾಗಿ ಉಳಿದರೆ, ನಿಮ್ಮ ಜೀವನ ಮುಂದೆ ಹೋಗಲು ಸಾಧ್ಯವಿಲ್ಲ.

ಏಕಾಂಗಿಯಾಗಿರಬೇಡಿ (do not be alone)

ಬ್ರೇಕಪ್ ನಂತರ, ನೀವು ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಂದ ಅಂತರವನ್ನು ಕಾಯ್ದುಕೊಳ್ಳುತ್ತೀರಿ. ಜೊತೆಗೆ ಏಕಾಂತದಲ್ಲಿ ಬದುಕಲು ಇಷ್ಟಪಡುತ್ತೀರಿ. ಒಬ್ಬಂಟಿಯಾಗಿರುವುದರ ಮೂಲಕ, ಹಳೆಯ ನೆನಪುಗಳ ರೀಲ್ ಮಾತ್ರ ನಿಮ್ಮ ಮನಸ್ಸಿನಲ್ಲಿ ಹರಿದಾಡುತ್ತಿರುತ್ತದೆ. ಈ ರೀತಿ ಮಾಡಬೇಡಿ. ಬದಲಾಗಿ ನಿಮ್ಮ ಸ್ನೇಹಿತರೊಂದಿಗೆ ಸಾಧ್ಯವಾದಷ್ಟು ಇರಿ. ಅಥವಾ ನಿಮ್ಮ ಫ್ಯಾಮಿಲಿ ಜೊತೆ ಇರಿ. ನಿಮಗೆ ಇಷ್ಟವಾದ ತಿಂಡಿ ತಿನ್ನುತ್ತಾ ಹ್ಯಾಪಿಯಾಗಿರಿ. ಇದರಿಂದ ನೀವು ಹ್ಯಾಪಿ ಆಗಿರುವಿರಿ.

ಸತ್ಯವನ್ನು ಸ್ವೀಕರಿಸಿ (accept the truth)

ಪರಿಸ್ಥಿತಿ ಏನೇ ಇರಲಿ ಅದನ್ನು ಎದುರಿಸಿ. ನಿರಾಶೆಗೊಳ್ಳುವ ಬದಲು, ಸತ್ಯವನ್ನು ಸ್ವೀಕರಿಸಿ. ನಿಮ್ಮ ಮುಂದಿನ ಜೀವನದ ಬಗ್ಗೆ ಯೋಚಿಸಿ. ನೀವು ಹಳೆಯ ವಿಷಯಗಳ ಬಗ್ಗೆ ಯೋಚಿಸುತ್ತಲೇ ಇದ್ದರೆ, ಅದು ನಿಮ್ಮನ್ನು ನೋಯಿಸುತ್ತದೆ ಮತ್ತು ನಿಮ್ಮ ಸಮಯವೂ ವ್ಯರ್ಥವಾಗುತ್ತದೆ. ನಿಮ್ಮ ಸಂಗಾತಿಯನ್ನು ಬಲವಂತವಾಗಿ ಮರೆಯಲು ಪ್ರಯತ್ನಿಸಬೇಡಿ. ಇದು ನೀವು ಅವರನ್ನು ಹೆಚ್ಚು ಮಿಸ್ ಮಾಡಿಕೊಳ್ಳುವಂತೆ ಮಾಡುತ್ತದೆ. ಆದುದರಿಂದ ಜೀವನದಲ್ಲಿ ಏನೆ ಬಂದರೂ ಅದನ್ನು ಎದುರಿಸಿ, ಜೀವಿಸೋದನ್ನು ಕಲಿಯಿರಿ.

ನಿಮಗೆ ಇಷ್ಟವಾದ ಕೆಲಸ ಮಾಡಿ (do whatever you like)

ಬ್ರೇಕಪ್ ನಂತರ, ನೀವು ಎಲ್ಲವನ್ನೂ ಮರೆತು ಬಿಡುತ್ತೀರಿ ಮತ್ತು ಆಲೋಚನೆಗಳಲ್ಲಿ ಕಳೆದು ಹೋಗುತ್ತೀರಿ. ಈ ಸಮಯದಲ್ಲಿ ನೀವು ಇಷ್ಟಪಡುವ ಎಲ್ಲಾ ಕೆಲಸಗಳನ್ನು ಮಾಡಬೇಕು. ನೀವು ಸಂಬಂಧದಲ್ಲಿದ್ದಾಗ, ಯಾವ ವಿಷಯಗಳಿಗೆ ಸಮಯ ನೀಡಲು ಸಾಧ್ಯವಾಗಿಲ್ಲ, ಅವುಗಳನ್ನೆಲ್ಲಾ ಈಗ ಮಾಡಿ. ಹವ್ಯಾಸ ಸಣ್ಣದಾದರೂ ಪರವಾಗಿಲ್ಲ, ಅದನ್ನು ಮಾಡೋ ಮೂಲಕ ಬ್ರೇಕಪ್ ನೋವನ್ನು ಮರೆಯಬಹುದು.

ನಿಮಗೆ ನೀವೇ ಸಮಯ ನೀಡಿ (give time for yourself)

ಬ್ರೇಕಪ್ ನಿಂದ ಹೊರಬರಲು, ನೀವು ನಿಮಗೆ ಸಮಯ ನೀಡುವುದು ಮುಖ್ಯ. ಅದಕ್ಕಾಗಿ ಪುಸ್ತಕ ಓದಬಹುದು. ಇಷ್ಟೇ ಅಲ್ಲ, ನೀವು ನಿಮಗೆ ಸಮಯ ನೀಡಲು ಬಯಸಿದರೆ, ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಮೇಲೆ ಕೆಲಸ ಮಾಡಿ, ನಿಮಗಾಗಿ ಶಾಪಿಂಗ್ ಮಾಡಿ, ಮನೆಯಲ್ಲಿ ತಯಾರಿಸಿದ ಉತ್ತಮ ಆಹಾರ ಸವಿಯಿರಿ ಅಥವಾ ನಿಮ್ಮ ನೆಚ್ಚಿನ ರೆಸ್ಟೋರೆಂಟ್ ಗೆ ಹೋಗುವ ಮೂಲಕ ಹೊಸ ಆಹಾರ ಟ್ರೈ ಮಾಡಿ, ಟ್ರಾವೆಲ್ ಮಾಡಿ. ಮನಸ್ಸು ಹ್ಯಾಪಿಯಾಗಿರುತ್ತೆ.

ನಿಮ್ಮನ್ನು ನೀವೇ ದೂಷಿಸಿಕೊಳ್ಳಬೇಡಿ  (do not blame yourself)

ಬ್ರೇಕಪ್ ನಂತರ, ನೀವು ಎಲ್ಲದಕ್ಕೂ ನಿಮ್ಮನ್ನು ದೂಷಿಸಲು ಪ್ರಾರಂಭಿಸುತ್ತೀರಿ. ಈ ಸಮಯದಲ್ಲಿ ನಿಮ್ಮಿಂದಾಗಿ ನಿಮ್ಮ ಸಂಬಂಧ ಮುರಿದುಬಿದ್ದಿದೆ ಎಂದು ನೀವು ಭಾವಿಸುತ್ತೀರಿ. ಈ ರೀತಿ ಯೋಚಿಸುವ ಬದಲು, ನಿಮ್ಮ ಸಂಬಂಧವನ್ನು ಮುರಿದ ಕಾರಣವನ್ನು ನೀವು ಖಂಡಿತವಾಗಿಯೂ ಕಂಡುಹಿಡಿಯಬಹುದು. ಬ್ರೇಕಪ್ ಒಂದು ರೋಗವೆಂದು ಪರಿಗಣಿಸಬೇಡಿ ಮತ್ತು ನಿದ್ರೆ ಮತ್ತು ಖಿನ್ನತೆಯ ಔಷಧಿಗಳಿಂದ ದೂರವಿರಿ.

ಬ್ರೇಕಪ್ ನಿಂದ ಹೊರಬರಲು ನೀವು ಈ ವಿಧಾನಗಳಲ್ಲಿ ನಿಮ್ಮನ್ನು ಪ್ರೇರೇಪಿಸಬಹುದು. ನೀವು ವ್ಯಸನದಿಂದ ದೂರವಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಈ ಸಮಯದಲ್ಲಿ ಸಂಗೀತ ಕೇಳುವ ಮೂಲಕ ನಿಮ್ಮ ಮನಸ್ಥಿತಿಯನ್ನು ಸ್ವಲ್ಪ ಹಗುರಗೊಳಿಸಿ. ಯಾವಾಗಲೂ ಹ್ಯಾಪಿಯಾಗಿರಿ ಮತ್ತು ಸಕಾರಾತ್ಮಕ ಚಿಂತನೆಯನ್ನು ಹೊಂದಿರಿ.
 

Latest Videos

click me!