Relationship Tips: ಮದ್ವೆ ಮೊದ್ಲು ಇವುಗಳನ್ನು ತಿಳ್ಕೊಂಡ್ರೆ ಮ್ಯಾರೀಡ್ ಲೈಫ್ ಚೆನ್ನಾಗಿರುತ್ತೆ

Published : Aug 31, 2022, 04:28 PM IST

ಮದುವೆಗೆ ಮೊದಲು, ಹುಡುಗ ಮತ್ತು ಹುಡುಗಿ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ. ಪರಸ್ಪರ ತಿಳುವಳಿಕೆ ಮತ್ತು ವಿಶ್ವಾಸದ ಕೊರತೆಯಿಂದಾಗಿ ಅನೇಕ ಬಾರಿ, ಸಂಬಂಧದಲ್ಲಿ ಬಿರುಕು ಮೂಡಲು ಪ್ರಾರಂಭಿಸುತ್ತದೆ. ಹಾಗಾಗಿ ಆರಂಭದಲ್ಲಿ ಅರ್ಥ ಮಾಡಿಕೊಳ್ಳೋದು ತುಂಬಾನೆ ಮುಖ್ಯ. ಮದುವೆಯಾಗಲಿರುವ ಹುಡುಗಿಯರು ಕೆಲವು ವಿಷಯಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ವೈವಾಹಿಕ ಜೀವನವನ್ನು ಸುಲಭವಾಗಿ ಸಂತೋಷಗೊಳಿಸಬಹುದು.  ಆ ವಿಷ್ಯಗಳ ಬಗ್ಗೆ ತಿಳಿದುಕೊಳ್ಳೋಣ.

PREV
19
Relationship Tips: ಮದ್ವೆ ಮೊದ್ಲು ಇವುಗಳನ್ನು ತಿಳ್ಕೊಂಡ್ರೆ ಮ್ಯಾರೀಡ್ ಲೈಫ್ ಚೆನ್ನಾಗಿರುತ್ತೆ

ಇಂದಿನ ಕಾಲದಲ್ಲಿ, ಹುಡುಗರು ಮತ್ತು ಹುಡುಗಿಯರು ಮದುವೆಗೆ ಮೊದಲು ಒಬ್ಬರಿಗೊಬ್ಬರು ಸಾಕಷ್ಟು ಸಮಯವನ್ನು ನೀಡುತ್ತಾರೆ, ಇದರಿಂದ ಅವರು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಬಹುದು. ಮದುವೆಯ ಮೊದಲು ಪರಸ್ಪರರ ಇಷ್ಟಗಳು ಮತ್ತು ಇಷ್ಟವಿಲ್ಲದಿರುವಿಕೆಗಳು, ನ್ಯೂನತೆಗಳು, ಒಳ್ಳೆಯತನ, ಆಲೋಚನೆ ಇತ್ಯಾದಿಗಳ ಬಗ್ಗೆ ಅರ್ಥಮಾಡಿಕೊಂಡರೆ, ಮದುವೆಯ ನಂತರ ವೈವಾಹಿಕ ಜೀವನವು ಉತ್ತಮವಾಗಿ ಮುಂದುವರಿಯುತ್ತದೆ. 

29

ನೀವು ಯಾರನ್ನಾದರೂ ಎಷ್ಟು ಪ್ರೀತಿಸುತ್ತೀರಿ ಎಂಬುದು ಮುಖ್ಯವಲ್ಲ. ಪರಸ್ಪರ ಡೇಟಿಂಗ್ ಮಾಡುವುದು ಮತ್ತು ಒಟ್ಟಿಗೆ ವಾಸಿಸುವುದು ಎರಡು ವಿಭಿನ್ನ ವಿಷಯಗಳು. ಯಾಕೆಂದರೆ ಪ್ರೀತಿ ಮಾಡುವಾಗ ಎಲ್ಲವೂ ಸರಿ ಎಂದೆನಿಸಿದರೂ, ಮದುವೆಯ ಬಳಿಕ ನಿಮಗೆ ಕಷ್ಟವಾಗಬಹುದು. ಆದುದರಿಂದ ಮದುವೆಗಾಗಿ ಸಾಕಷ್ಟು ವಿಷಯಗಳು ಮತ್ತು ತಿಳುವಳಿಕೆಯನ್ನು ಹೊಂದಿರುವುದು ಮುಖ್ಯ. 

39

ಪ್ರತಿಯೊಬ್ಬ ಹುಡುಗಿಯೂ ಸಂಬಂಧವನ್ನು ಹೇಗೆ ಮುಂದುವರೆಸಿಕೊಂಡು ಹೋಗುವುದು ಅನ್ನೋದನ್ನು ತಿಳಿಯುತ್ತಾಳೆ ಮತ್ತು ಮದುವೆಯ ನಂತರ ವೈವಾಹಿಕ ಜೀವನವನ್ನು ಹೇಗೆ ನಿರ್ವಹಿಸಬೇಕೆಂದು ಸಹ ಕಲಿಯುತ್ತಾಳೆ. ಒಬ್ಬ ಹುಡುಗಿ ಮದುವೆಯಾಗಲು ಹೊರಟಿದ್ದರೆ, ಅವಳು ಕೆಳಗೆ ಉಲ್ಲೇಖಿಸಿದ ಸಲಹೆಗಳನ್ನು ಅರ್ಥ ಮಾಡಿಕೊಂಡರೆ, ಇದು ಮದುವೆಯ ನಂತರದ ವೈವಾಹಿಕ ಜೀವನದಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ. 

49

ನಿಮ್ಮ ಭಾವಿ ಪತಿಯೊಂದಿಗೆ ಮಾತನಾಡಿ 
ಹುಡುಗಿಗೆ ಸಮಸ್ಯೆಯಿದ್ದರೆ, ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಬದಲು, ನೀವು ಅದರ ಬಗ್ಗೆ ಅವಳ ಭಾವಿ ಪತಿಯೊಂದಿಗೆ ಮಾತನಾಡಬೇಕು. ಎಲ್ಲವನ್ನೂ ಸಂಪೂರ್ಣವಾಗಿ ಹೇಳೋದ್ರಿಂದ ಸಮಸ್ಯೆ ಸರಿಯಾಗಬಹುದು. ನಿಮ್ಮ ಮನಸ್ಸಿನ ಗೊಂದಲದ ಬಗ್ಗೆ ನೀವು ಮಾತನಾಡದೆ ಇದ್ದರೆ, ಮದುವೆಯ ನಂತರವೂ ನೀವು ಗೊಂದಲದಲ್ಲೇ ಇರುತ್ತೀರಿ. ಆದುದರಿಂದ ಮೊದಲೇ ಮಾತನಾಡುವುದು ಉತ್ತಮ.  

59

ಮಕ್ಕಳೊಂದಿಗೆ ಗಂಡನಿಗೆ ಪ್ರಾಮುಖ್ಯತೆ ನೀಡಿ 
ಅನೇಕ ಸಂಬಂಧಗಳಲ್ಲಿ, ಮದುವೆಯ ನಂತರ ಮಕ್ಕಳಿದ್ದಾಗ, ಮಹಿಳೆಯರ ಗಮನವು ತನ್ನ ಮಗುವಿನ ಕಡೆಗೆ ಹೆಚ್ಚು ತಿರುಗುತ್ತದೆ, ಗಂಡನ ಕಡೆ ಹೆಚ್ಚು ಗಮನ ಹರಿಸಲು ಸಾಧ್ಯವಾಗೋದಿಲ್ಲ, ಆದರೆ ಆರೋಗ್ಯಕರ ಸಂಬಂಧಕ್ಕಾಗಿ ಮಗು ಮತ್ತು ಗಂಡ ಇಬ್ಬರಿಗೂ ಸಮಾನ ಪ್ರಾಮುಖ್ಯತೆ ನೀಡುವುದು ಮುಖ್ಯ.   

69

ಸೋಲು ಮತ್ತು ಗೆಲುವಿನ ಯೋಚನೆ ಬೇಡ
ಮದುವೆಯ ನಂತರ ದಂಪತಿಗಳ ನಡುವೆ ಜಗಳಗಳು ಮತ್ತು ವಿರಸಗಳು ಸಾಮಾನ್ಯ. ಆದರೆ ವಿವಾದದಲ್ಲಿ ಗೆಲುವು ಮತ್ತು ಸೋಲಿನಿಂದಾಗಿ ಭಿನ್ನಾಭಿಪ್ರಾಯಗಳು ಉಂಟಾದರೆ, ಆಗ ಸಂಬಂಧವದಲ್ಲಿ ಅಂತರ ಹೆಚ್ಚಾಗುತ್ತದೆ. ಆದ್ದರಿಂದ ಯಾವಾಗಲೂ ಸೋಲು ಮತ್ತು ಗೆಲುವಿನ ಭಾವನೆಯಿಂದ ದೂರವಿರಿ ಮತ್ತು ಯಾವುದೇ ಜಗಳವನ್ನು ತಕ್ಷಣವೇ ಕೊನೆಗೊಳಿಸಿ.  

79

ಮದುವೆಯ ನಂತರವೂ ಡೇಟಿಂಗ್ ಗೆ ಹೋಗಿ 
ಸಮಯ ಸಿಗದ ಕಾರಣ ದಂಪತಿಗಳು ವಿಹಾರ ಅಥವಾ ಡಿನ್ನರ್ ಹೋಗಲು ಸಾಧ್ಯವಾಗುವುದಿಲ್ಲ ಅನ್ನೋದು ಅನೇಕ ಜನರ ಕಂಪ್ಲೇಂಟ್ ಆಗಿರುತ್ತೆ. ಹಾಗೆ ಮಾಡುವುದರಿಂದ ಅವರ ಪ್ರೀತಿ-ಜೀವನದಲ್ಲಿ ಪ್ರೀತಿ ಕಡಿಮೆಯಾಗುತ್ತೆ, ಆದ್ದರಿಂದ ನಿಮಗೆ ಸಮಯ ಸಿಕ್ಕಾಗ ಗಂಡನೊಂದಿಗೆ ಡೇಟಿಂಗ್ ಗೆ ಹೋಗಿ.  

89

ಪ್ರತಿದಿನ ಬೆಳಿಗ್ಗೆ ಹೊಸ ಮುಂಜಾನೆಯಂತೆ ಆರಂಭಿಸಿ
ಗುಡ್ ಮಾರ್ನಿಂಗ್, ಗುಡ್ ನೈಟ್ ನಂತಹ ಪದಗಳು ಮದುವೆಯ ನಂತರವೂ ನಿಮ್ಮ ಸಂಬಂಧದಲ್ಲಿ ಪ್ರೀತಿಯ ಮಾಧುರ್ಯ ಹೆಚ್ಚಿಸುತ್ತೆ. ನೀವಿಬ್ಬರೂ ಹಿಂದಿನ ರಾತ್ರಿ ಜಗಳವಾಡಿರಬಹುದು ಮತ್ತು ನೀವು ಬೆಳಿಗ್ಗೆ ಎದ್ದ ಕೂಡಲೇ ಪತಿಗೆ ವಿಶ್ ಮಾಡಲು ಬಯಸಿದರೆ, ಖಂಡಿತವಾಗಿಯೂ ಹೇಳಿ, ಇದರಿಂದ ಕೋಪ ದೂರಾಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ಹಗ್ ಮಾಡೋದು, ಕಿಸ್ ಮಾಡೋದು ಮುಂತಾದ ವಿಷಯಗಳು ಸಂಬಂಧದಲ್ಲಿ ಸಕಾರಾತ್ಮಕತೆಯನ್ನು ತರುತ್ತವೆ.

99

ಒಬ್ಬರಿಗೊಬ್ಬರು ಸ್ಪೇಸ್ ನೀಡಿ 
ನಿಮ್ಮ ಪತಿ ಎಲ್ಲಾದರೂ ಕೆಲಸ ಮಾಡುತ್ತಿದ್ದರೆ ಮತ್ತು ನೀವು ಅವರಿಗೆ ಸ್ನೇಹಿತರು ಅಥವಾ ಸಹೋದ್ಯೋಗಿಗಳೊಂದಿಗೆ ಹೊರಗೆ ಹೋಗಲು ಸ್ಪೇಸ್ ನೀಡದಿದ್ದರೆ, ಇದರಿಂದ ಅವರಿಗೆ ನಿಮ್ಮ ಮೇಲೆ ಕೋಪ ಬರಲು ಆರಂಭಿಸುತ್ತೆ. ಆದುದರಿಂದ ಸಂಬಂಧದಲ್ಲಿ ಯಾವಾಗಲೂ ಪರ್ಸನಲ್ ಸ್ಪೇಸ್ ನೀಡಲು ಕಲಿಯಿರಿ. ಇದರಿಂದ ಸಂಬಂಧ ಸ್ಟ್ರಾಂಗ್ ಆಗುತ್ತೆ. 
 

Read more Photos on
click me!

Recommended Stories