ಸಂಗಾತಿಗೆ ಪ್ರಪೋಸ್ ಪ್ಲ್ಯಾನ್ ಮಾಡಿದ್ರೆ, ಈ ತಪ್ಪುಗಳನ್ನು ಮಾಡಲೇಬೇಡಿ

First Published Dec 1, 2022, 1:11 PM IST

ಅವರನ್ನು ನೀವು ತುಂಬಾನೆ ಇಷ್ಟ ಪಡ್ತಾ ಇದೀರಿ, ಅವರಿಗೆ ನಿಮ್ಮ ಮನದ ಮಾತುಗಳನ್ನು ಹೇಳಲು ಪ್ರಪೋಸ್ ಮಾಡೊ ಯೋಚನೆ ಕೂಡ ಇದೆ ಅನ್ನೋರು ಇದನ್ನು ಓದಲೇಬೇಕು. ಯಾಕೆಂದರೆ ಇಲ್ಲಿ ಪ್ರಪೋಸ್ ಮಾಡುವಾಗ ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು ಅನ್ನೋದನ್ನು ಹೇಳುತ್ತೇವೆ.

ನಾವು ಯಾರನ್ನಾದರೂ ಪ್ರೀತಿಸಿದಾಗ, ನಮ್ಮ ಮುಂದಿರುವ ವ್ಯಕ್ತಿಯು ನಮ್ಮ ಹೃದಯವನ್ನು ಅರ್ಥಮಾಡಿಕೊಳ್ಳುತ್ತಾನೆ ಮತ್ತು ಅದನ್ನು ಸ್ವೀಕರಿಸುತ್ತಾನೆ ಎಂಬ ಬಯಕೆ ಮನಸ್ಸಿನಲ್ಲಿರುತ್ತದೆ. ಆದರೆ ಇದಕ್ಕಾಗಿ, ನೀವು ಮೊದಲು ಅವರಿಗೆ ಪ್ರಪೋಸ್ (propose) ಮಾಡುವುದು ಮತ್ತು ನಿಮ್ಮ ಮನದ ಮಾತನ್ನು ಅವರಿಗೆ ಹೇಳೋದು ಮುಖ್ಯ. ನಾವು ಸಂಗಾತಿಗೆ ಪ್ರಪೋಸ್ ಮಾಡಿದಾಗ, ನಾವು ಅವರ ಬಾಯಿಂದ ಯೆಸ್ ಎಂದು ಕೇಳಲು ಬಯಸುತ್ತೇವೆ. ಆದರೆ, ನಿಮ್ಮ ಪ್ರಪೋಸ್ ಮಾಡುವಾಗ ನೀವು ಕೆಲವು ತಪ್ಪುಗಳನ್ನು ತಪ್ಪಿಸಬೇಕು. ಇಲ್ಲಿ ಪ್ರಪೋಸ್ ಗೆ ಸಂಬಂಧಿಸಿದ ಕೆಲವು ತಪ್ಪುಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಆ ತಪ್ಪುಗಳನ್ನು ಯಾವತ್ತೂ ಮಾಡಬೇಡಿ.

ಸಾರ್ವಜನಿಕವಾಗಿ ಪ್ರಪೋಸ್ ಮಾಡಬೇಡಿ: ಇದು ಸಾಕಷ್ಟು ರೋಮಾಂಚನಕಾರಿಯಾಗಿ ತೋರಬಹುದು. ಆದರೆ ನಿಜವಾಗಿ ಇದು ಸರಿಯಲ್ಲ., ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವವು ಸಾಕಷ್ಟು ವಿಭಿನ್ನವಾಗಿರುತ್ತೆ. ನಿಮ್ಮ ಸಂಗಾತಿಯು ಸ್ವಭಾವತಃ ಸ್ವಲ್ಪ ಸಂಕೋಚ ಸ್ವಭಾವದವರಾಗಿರಬಹುದು ಮತ್ತು ಅಂತಹ ಪರಿಸ್ಥಿತಿಯಲ್ಲಿ, ಅವರು ಸಾರ್ವಜನಿಕವಾಗಿ ನಿಮಗೆ ಪ್ರಪೋಸ್ ಮಾಡಲು ಇಷ್ಟಪಡದಿರಬಹುದು.  ಆದ್ದರಿಂದ, ಸಾರ್ವಜನಿಕವಾಗಿ ಸಂಗಾತಿಗೆ ಪ್ರಪೋಸ್ ಮಾಡುವುದನ್ನು ತಪ್ಪಿಸಿ. ನೀವು ಇದನ್ನು ಮಾಡಲು ಬಯಸಿದರೆ, ಮೊದಲು ನಿಮ್ಮ ಸಂಗಾತಿಯ ಸ್ವಭಾವ ತಿಳಿದುಕೊಳ್ಳಿ.

ಅತ್ಯಂತ ಸಾಮಾನ್ಯ ರೀತಿಯಲ್ಲಿ ಪ್ರಪೋಸ್ ಮಾಡುವುದು: ಪ್ರತಿಯೊಬ್ಬ ವ್ಯಕ್ತಿಯ ಬಯಕೆಯು ತನ್ನ ಸಂಗಾತಿಯು ತನಗೆ ವಿಭಿನ್ನ ರೀತಿಯಲ್ಲಿ ಪ್ರಪೋಸ್ ಮಾಡಬೇಕು ಎಂದು. ನಿಮ್ಮ ಸಂಗಾತಿಗಾಗಿ ನೀವು ತುಂಬಾ ದುಬಾರಿ ಉಂಗುರ ಖರೀದಿಸಬೇಕಾಗಿಲ್ಲ. ಆದರೆ ಪ್ರಪೋಸ್ ಮಾಡುವ ರೀತಿ ಇತರರಿಗಿಂತ ಭಿನ್ನವಾಗಿರಬೇಕು ಮತ್ತು ಇದು ಎಲ್ಲೋ ನಿಮ್ಮ ಸಂಗಾತಿಯ ಸಂತೋಷವನ್ನು ಸಹ ಒಳಗೊಂಡಿದೆ ಎಂಬುದನ್ನು ನೀವು ನೆನಪಿನಲ್ಲಿಡಬೇಕು. ನೀವು ನಿಮ್ಮ ಸಂಗಾತಿಗೆ ಬಹಳ ಸರಳ ರೀತಿಯಲ್ಲಿ ಅಥವಾ ಬಹಳ ಸಾಮಾನ್ಯ ರೀತಿಯಲ್ಲಿ ಪ್ರಪೋಸ್ ಮಾಡಿದರೆ, ಅವನು ಅದನ್ನು ತಿರಸ್ಕರಿಸಬಹುದು.

ಹೆಚ್ಚು ಹೊತ್ತು ಮಾತನಾಡಬೇಡಿ: ಕೆಲವು ಜನರು ತಮ್ಮ ಸಂಗಾತಿಗೆ ಪ್ರಪೋಸ್ ಮಾಡಿದಾಗ,  ತಮ್ಮ ಸಂಗಾತಿಗಾಗಿ  ಎಲ್ಲವನ್ನೂ ಮಾಡಬಹುದು ಎಂಬಂತೆ ಅವರ ಮುಂದೆ ವರ್ತಿಸುತ್ತಾರೆ. ಆದರೆ ಇದನ್ನು ಮಾಡೋದರಿಂದ, ಮುಂದೆ ಇರುವ ವ್ಯಕ್ತಿಯು ಅದೇ ರೀತಿ ಯೋಚಿಸಲು ಪ್ರಾರಂಭಿಸುತ್ತಾರೆ. ಕೆಲವೊಮ್ಮೆ ನೀವು ನಿಮ್ಮ ಸಂಗಾತಿಯ ಪ್ರತಿಯೊಂದು ಬಯಕೆಯನ್ನು ಪೂರೈಸಲು ಸಾಧ್ಯವಿಲ್ಲ. ಇದರಿಂದ ಸಂಬಂಧದಲ್ಲಿ ಜಗಳ ಉಂಟಾಗಬಹುದು. ಇಷ್ಟೇ ಅಲ್ಲ, ಕೆಲವೊಮ್ಮೆ ನಿಮ್ಮ ಸುದೀರ್ಘ ಭಾಷಣ ಕೇಳಿದ ನಂತರ, ಮುಂದಿರುವ ವ್ಯಕ್ತಿಯು ನಿಮ್ಮನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಮತ್ತು ನಿಮ್ಮ ಪ್ರಪೋಸಲನ್ನು ತಿರಸ್ಕರಿಸುವ ಸಾಧ್ಯತೆ ಇದೆ.

ಬಹಳ ಬೇಗನೆ ಪ್ರಪೋಸ್ ಮಾಡಬೇಡಿ: ಅನೇಕ ಬಾರಿ ಜನರು ಯಾರನ್ನಾದರೂ ನೋಡುತ್ತಾರೆ, ಜೊತೆಗೆ ತಕ್ಷಣವೇ ಅವರನ್ನು ಇಷ್ಟಪಡುತ್ತಾರೆ. ಅಂದ್ರೆ ಲವ್ ಅಟ್ ಫಸ್ಟ್ ಸೈಟ್. ಹೀಗಾಗುವಾಗ ಜನರು ತಕ್ಷಣವೇ ತಮ್ಮ ಪ್ರಪೋಸ್ ಮಾಡ್ತಾರೆ. ಇದು ನೀವು ಮಾಡುವ ದೊಡ್ಡ ತಪ್ಪು. ನೀವು ಯಾರನ್ನಾದರೂ ಚೆನ್ನಾಗಿ ಅರ್ಥಮಾಡಿಕೊಳ್ಳದ ಹೊರತು ಮತ್ತು ನಿಮ್ಮಿಬ್ಬರ ನಡುವೆ ಸ್ನೇಹದ ಸಂಬಂಧವು ರೂಪುಗೊಳ್ಳದ ಹೊರತು, ಪ್ರಪೋಸ್ ಮಾಡುವ ತಪ್ಪನ್ನು ಮಾಡಬಾರದು.

ತುಂಬಾ ತಡವಾಗಿ ಪ್ರಪೋಸ್ ಮಾಡೋದು: ನಿಮ್ಮ ಪ್ರೀತಿಯನ್ನು ಬಹಳ ಬೇಗನೆ ಪ್ರಪೋಸ್ ಮಾಡೋದರಿಂದ ಅವರನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತೆ. ಅದೇ ರೀತಿ, ತುಂಬಾ ತಡವಾಗಿ ಪ್ರಪೋಸ್ ಮಾಡೋದು ಸಹ ದೊಡ್ಡ ತಪ್ಪು. ಅನೇಕ ಬಾರಿ ಜನರು ತಮ್ಮ ಮುಂದಿರುವ ವ್ಯಕ್ತಿ ಮೊದಲಿಗೆ ಎಲ್ಲಾ ಹೇಳಲಿ ಎಂದು ಯೋಚಿಸುತ್ತಲೇ ಇರುತ್ತಾರೆ. ಅದಕ್ಕಾಗಿಯೇ ಅವರು ತಮ್ಮ ಮನಸ್ಸು ಬಿಚ್ಚಿ ಸಂಗಾತಿಯೊಂದಿಗೆ ಮಾತನಾಡುವುದಿಲ್ಲ. ಈ ಪರಿಸ್ಥಿತಿಯಲ್ಲಿ, ಮುಂದಿರುವ ವ್ಯಕ್ತಿಯು ಕೆಲವೊಮ್ಮೆ ಬೇರೊಬ್ಬರನ್ನು ಇಷ್ಟಪಡಲು ಪ್ರಾರಂಭಿಸುತ್ತಾರೆ. ಇದರಿಂದ ನಂತರ ನೀವು ಪಶ್ಚಾತ್ತಾಪ ಪಡುತ್ತೀರಿ.

ಉಂಗುರವನ್ನು ತಿನ್ನುವ ಅಥವಾ ಕುಡಿಯುವ ವಸ್ತುಗಳ ಜೊತೆ ಇಡಬೇಡಿ: ಜನರು ತಮ್ಮ ಸಂಗಾತಿಗೆ ಪ್ರಪೋಸ್ ಮಾಡಲು ತಿನ್ನಲು ಅಥವಾ ಕುಡಿಯುವ ವಸ್ತುಗಳ ಜೊತೆಗೆ ಉಂಗುರವನ್ನು ಅಡಗಿಸಿಡುತ್ತಾರೆ. ಆದರೆ ಇದನ್ನ ಮಾಡ್ಲೇಬೇಡಿ., ಹಾಗೆ ಮಾಡುವುದು ಸಾಕಷ್ಟು ಅಪಾಯಕಾರಿಯಾಗಬಹುದು. ಮೊದಲನೆಯದಾಗಿ, ಉಂಗುರವನ್ನು ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಮತ್ತೊಂದೆಡೆ, ನಿಮ್ಮ ಸಂಗಾತಿಯು ಆಕಸ್ಮಿಕವಾಗಿ ಅದನ್ನು ನುಂಗಬಹುದು ಮತ್ತು ಇದು ದೊಡ್ಡ ಆರೋಗ್ಯ ಅಪಾಯವನ್ನು ಉಂಟುಮಾಡಬಹುದು.

click me!