ತೃಪ್ತಿ ಡಿಮ್ರಿ ಬಾಯ್‌ಫ್ರೆಂಡ್ ಅನುಷ್ಕಾ ಸೋದರ: ಕರ್ನೇಶ್ ಶರ್ಮಾ ಜೊತೆ ಲವ್ವಲ್ಲಿದ್ರು ಅನಿಮಲ್ ನಟಿ

First Published | Dec 13, 2023, 4:25 PM IST

ಎನಿಮಲ್ ಸಿನಿಮಾದಿಂದ ಖ್ಯಾತಿಯ ಉತ್ತುಂಗಕ್ಕೆ ಏರಿರುವ ನಟಿ ತೃಪ್ತಿ ಡಿಮ್ರಿ ಈ ಹಿಂದೆ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ನಟಿಯಾಗಿರುವ ಅನುಷ್ಕಾ ಶರ್ಮಾ ಅವರ ಸೋದರ ಕರ್ಣೇಶ್ ಶರ್ಮಾ ಜೊತೆ ಸಂಬಂಧದಲ್ಲಿದ್ದರು, ಇದನ್ನು ಸ್ವತಃ ಅವರೇ ಹಳೆಯ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದು, ಅದೀಗ ಮುನ್ನೆಲೆಗೆ ಬಂದಿದೆ.

ಹಲವು ಸಿನಿಮಾಗಳಲ್ಲಿ ನಟಿಸಿದ್ದರೂ ರಣಬೀರ್ ನಟನೆಯ ಎನಿಮಲ್ ಸಿನಿಮಾದಲ್ಲಿ ಸಂಪೂರ್ಣ ಬೆತ್ತಲೆಯಾಗುವ ಮೂಲಕ ಮುನ್ನೆಲೆಗೆ ಬಂದು ಈಗ ನ್ಯಾಷನಲ್ ಕ್ರಶ್ ಆಗಿರುವ ನಟಿ ತೃಪ್ತಿ ಡಿಮ್ರಿ ಬಗ್ಗೆಯೇ ಈಗ ಎಲ್ಲರೂ ಕುತೂಹಲದಿಂದ ಹುಡುಕಾಡುತ್ತಿದ್ದು, ತೃಪ್ತಿ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲ ವಿಚಾರಗಳು ಇಲ್ಲಿವೆ ನೋಡಿ.

ಎನಿಮಲ್ ಸಿನಿಮಾದಲ್ಲಿ ಸೈಡ್‌ ರೋಲ್ ಮಾಡಿದ್ದರೂ ತೃಪ್ತಿ ಒಂದೇ ಒಂದು ಸೀನ್ ಮೂಲಕ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿದ್ದ ನಟಿ ರಶ್ಮಿಕಾ ಮಂದಣ್ಣ ರಣ್‌ಬೀರ್ ಕಪೂರ್ ಹಿಂದಿಕ್ಕಿ ಇಂಟರ್‌ನೆಟ್ ಸೆನ್ಸೇಷನ್ ಆಗಿದ್ದಾರೆ. ಇಂತಹ ತೃಪ್ತಿ ಡಿಮ್ರಿ ಹಿಂದೆ ಅನುಷ್ಕಾ ಶರ್ಮಾ ಸೋದರನ ಜೊತೆ ಡೇಟಿಂಗ್ ಮಾಡಿದ್ದರು.

Tap to resize

ಕ್ರಿಕೆಟಿಗ ವಿರಾಟ್‌ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ನಟಿಯಾಗಿರುವ ಅನುಷ್ಕಾ ಶರ್ಮಾ ಅವರ ಸೋದರ ಕರ್ಣೇಶ್ ಶರ್ಮಾ ಬಾಲಿವುಡ್‌ನ ಹೆಸರಾಂತ ನಿರ್ಮಾಪಕನಾಗಿದ್ದಾರೆ. ತನ್ನ ಸೋದರಿ ಅನುಷ್ಕಾ ಜೊತೆ ಸೇರಿ  ಕ್ಲೀನ್ ಸ್ಲೇಟ್ ಫಿಲ್ಮ್‌ ಎಂಬ ಪ್ರೊಡಕ್ಷನ್ ಹೌಸ್‌ನ್ನು 2013ರಲ್ಲಿ ಕರ್ಣೇಶ್ ಶರ್ಮಾ ಸ್ಥಾಪಿಸಿದ್ದರು. ಅಲ್ಲದೇ ತ್ರಿಪ್ತಿ ನಟನೆಯ ಬುಲ್‌ಬುಲ್ ಹಾಗೂ ಖಲ ಸಿನಿಮಾವನ್ನು ಕರ್ಣೇಶ್ ಶರ್ಮಾ ನಿರ್ಮಾಣ ಮಾಡಿದ್ದರು

ಬುಲ್ ಬುಲ್ ಸಿನಿಮಾದ ಶೂಟ್ ವೇಳೆಯೇ ಕರ್ಣೇಶ್ ಶರ್ಮಾ ಹಾಗೂ ತೃಪ್ತಿ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು.  2023ರ ಹೊಸ ವರ್ಷಕ್ಕೆ ತುಸು ಮೊದಲಷ್ಟೇ ನಟಿ ತೃಪ್ತಿ ಡಿಮ್ರಿ ತನ್ನ ಹಾಗೂ ಕರ್ಣೇಶ್ ಸಂಬಂಧದ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕುವ ಮೂಲಕ ಅಧಿಕೃತಗೊಳಿಸಿದ್ದರು. 

2022ರ ಡಿಸೆಂಬರ್‌ನಲ್ಲಿ ಆಕೆ ತನ್ನ ಬಾಯ್‌ಫ್ರೆಂಡ್ ಕರ್ಣೇಶ್‌ ಶರ್ಮಾ ಜೊತೆಗಿನ ಮುದ್ದಾದ ಫೋಟೋಗಳನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು.  ಅನುಷ್ಕಾ ಶರ್ಮಾ ಸೋದರ ನಟಿ ತೃಪ್ತಿಯನ್ನು ತಬ್ಬಿ ಹಿಡಿದುಕೊಂಡು ಕೆನ್ನೆಗೆ ಮುತ್ತಿಕ್ಕಿದ ಫೋಟೋ ಇದಾಗಿತ್ತು. 

ಅಲ್ಲದೇ ಇಟೈಮ್ಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ನಟಿ ತೃಪ್ತಿ ಕರ್ಣೇಶ್ ಶರ್ಮಾ ಜೊತೆಗಿನ ಸಂಬಂಧದ ಬಗ್ಗೆ ಮುಚ್ಚು ಮರೆ ಇಲ್ಲದೇ ಹೇಳಿಕೊಂಡಿದ್ದರು. 

ಆದರೆ ಅದೇನಾಯ್ತೋ ಏನು ಇಬ್ಬರ ನಡುವೆ ಬ್ರೇಕಾಫ್ ಆಗಿದೆ ಎಂಬ ಸುದ್ದಿ ಹರಿದಾಡಿತ್ತು, ನಂತರದಲ್ಲಿ ಇಬ್ಬರೂ ಇನ್ಸ್ಟಾಗ್ರಾಮ್‌ನಲ್ಲಿ ಪರಸ್ಪರರನ್ನು ಅನ್‌ಫಾಲೋ ಮಾಡಿದ್ದರು.

ಅಲ್ಲದೇ ಇಬ್ಬರೂ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ತಾವು ಹಾಕಿದ್ದ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಅಲ್ಲದೇ ಇಬ್ಬರೂ ಈ ವಿಚಾರದ ಬಗ್ಗೆ ಮಾತನಾಡದೇ ಸುಮ್ಮನಾಗಿದ್ದಾರು

ಆದಾಗ್ಯೂ ಈ ತೃಪ್ತಿ ದಿಮ್ರಿ ಅವರ ಮೊದಲ ಕ್ರಶ್ ರಣ್‌ಬೀರ್ ಕಪೂರ್ ಅಂತೆ, ಅನಿಮಲ್ ಸಿನಿಮಾದಲ್ಲಿ ನಟಿಸುವ ಮೊದಲೇ ಈ ಲೈಲಾಮಜ್ನು ನಟಿ ತಮ್ಮ ಹಲವು ಸಂದರ್ಶನಗಳಲ್ಲಿ ತನ್ನ ಮೊದಲ ಕ್ರಶ್ ರಣ್‌ಬೀರ್ ಕಪೂರ್ ಎಂದು ಹೇಳಿಕೊಂಡಿದ್ದಾರೆ. 

ಅನಿಮಲ್ ಸಿನಿಮಾದಲ್ಲಿ ರಣ್‌ಬೀರ್ ಕಪೂರ್‌ನ ಬಾಬಿ 2 ಆಗಿರುವ ಈ ತೃಪ್ತಿ ನಟನೆಗೆ ಎಲ್ಲಿ ನೋಡಿದರಲ್ಲಿ ಪ್ರಶಂಸೆಯ ಸುರಿಮಳೆಯೇ ಹರಿದು ಬರುತ್ತಿದೆ. ರಣ್‌ಬೀರ್ ಜೊತೆಗಿನ ಇಂಟಿಮೇಟ್ ಸೀನ್‌ಗಳ ಹೊರತಾಗಿಯೂ ಅವರು ವೀಕ್ಷಕರಲ್ಲಿ ಗಾಢವಾದ ಇಂಪ್ರೆಶನ್ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಅನಿಮಲ್ ಸಿನಿಮಾದಲ್ಲಿ ನಟನೆಗೂ ಮೊದಲು ತೃಪ್ತಿ ಒಟ್ಟು ಆರು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಆ ಪಾತ್ರಗಳ್ಯಾವುದೂ ಕೂಡ ಆಕೆಗೆ ಈ ಮಟ್ಟದಲ್ಲಿ ಹೆಸರು ತಂದು ಕೊಟ್ಟಿಲ್ಲ,

2022ರಲ್ಲಿ ತೃಪ್ತಿ ಖಾಲ ಸಿನಿಮಾದಲ್ಲಿ ನಟಿಸಿದ್ದು,  ಯುವ ಗಾಯಕಿಯ ಪಾತ್ರ ನಿರ್ವಹಿಸಿದ್ದರು, ಇದರಲ್ಲಿನ ನಟನೆಗಾಗಿ ಅವರು ಉತ್ತಮ ನಟಿ ಎಂಬ ನಾಮನಿರ್ದೇಶನಕ್ಕೆ ಪಾತ್ರರಾಗಿದ್ದರು.

ಇದಕ್ಕೂ ಮೊದಲು 2022ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಬುಲ್‌ಬುಲ್‌ನಲ್ಲಿಯೂ ನಟಿಸಿದ್ದು, ಅದರಲ್ಲಿ ಪುಟಾಣಿ(ಅಪ್ರಾಪ್ತ) ವಧುವಿನ ಪಾತ್ರ ನಿರ್ವಹಿಸಿದ್ದರು. ಇದಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಲ್ಲದೇ ಒಟಿಟಿಯಿಂದ ಫಿಲ್ಮ್‌ಫೇರ್ ಪ್ರಶಸ್ತಿ ಗಳಿಸಿದ್ದರು. 

ಅದಕ್ಕೂ ಮೊದಲು ನಟಿಸಿದ 2018ರಲ್ಲಿ ತೆರೆಕಂಡ ಲೈಲಾ ಮಜ್ನು ಸಿನಿಮಾದಲ್ಲೂ ತೃಪ್ತಿ ನಟನೆಗೆ ವೀಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿತ್ತು.

ಆದರೆ  ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ, ಆ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ನಂತರವೂ ಇನ್ನೊಂದು ಅವಕಾಶ ಗಿಟ್ಟಿಸಲು ಅವರು ತಿಂಗಳುಗಟ್ಟಲೇ ಕಾಯಬೇಕಾಗಿತ್ತು ಎಂದು ತೃಪ್ತಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

2014ರಿಂದ 2015ರ ಮಧ್ಯೆ ಮಾಡೆಲಿಂಗ್ ಆರಂಭಿಸಿದ ತೃಪ್ತಿ ಸಿನಿಮಾಗೂ ಬರುವ ಮೊದಲು ಬೆಳ್ಳಿ ಪರದೆ ಮೇಲೂ ಮಿಂಚಿದ್ದಾರೆ. 2017ರಲ್ಲಿ ಪೋಸ್ಟರ್ ಬಾಯ್ ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ತೃಪ್ತಿ ಆರಂಭಿಕ ದಿನಗಳು ಎಲ್ಲ ಅವಕಾಶಕ್ಕಾಗಿ ಹಾತೊರೆಯುವ ಎಲ್ಲ ಹೊಸ ನಟನಟಿಯರಂತೆ ರಂತೆ ಸ್ಟ್ರಗಲಿಂಗ್ ಆಗಿತ್ತು ಅನ್ನೋದು ಅಷ್ಟೇ ಸತ್ಯ. 

Latest Videos

click me!