Latest Videos

ನಿನ್ನ ತುಂಬಾ ಮಿಸ್ ಮಾಡ್ತಿದ್ದೇನೆ: ಪ್ರೇಯಸಿ ಜಾಕ್ವೇಲಿನ್‌ಗೆ ಜೈಲಿನಿಂದಲೇ ಮತ್ತೆ ಪತ್ರ ಬರೆದ ವಂಚಕ ಸುಕೇಶ್

First Published Dec 13, 2023, 1:01 PM IST


ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೋಟ್ಯಾಂತರ ರೂ ವಂಚನೆ ಆರೋಪದಲ್ಲಿ ಜೈಲು ಪಾಲಾಗಿರುವ ವಂಚಕ ಸುಕೇಶ್ ಚಂದ್ರಶೇಖರ್ ಜೈಲಿನಿಂದಲೇ ಪ್ರೇಯಸಿ, ಬಾಲಿವುಡ್ ನಟಿ ಜಾಕ್ವೇಲಿನ್ ಫರ್ನಾಂಡಿಸ್‌ಗೆ ಮತ್ತೆ ಪತ್ರ ಬರೆಯುವ ಮೂಲಕ ಸುದ್ದಿಯಾಗಿದ್ದಾನೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೋಟ್ಯಾಂತರ ರೂ ವಂಚನೆ ಆರೋಪದಲ್ಲಿ ಜೈಲು ಪಾಲಾಗಿರುವ ವಂಚಕ ಸುಕೇಶ್ ಚಂದ್ರಶೇಖರ್ ಜೈಲಿನಿಂದಲೇ ಪ್ರೇಯಸಿ, ಬಾಲಿವುಡ್ ನಟಿ ಜಾಕ್ವೇಲಿನ್ ಫರ್ನಾಂಡಿಸ್‌ಗೆ ಮತ್ತೆ ಪತ್ರ ಬರೆಯುವ ಮೂಲಕ ಸುದ್ದಿಯಾಗಿದ್ದಾನೆ. 

ಈ ಹಿಂದೆ ಫೆಬ್ರವರಿಯಲ್ಲಿ ಪ್ರೇಮಿಗಳ ದಿನದಂದು ಕೂಡ ನಟಿ ಜಾಕ್ವೇಲಿನ್‌ಗೆ ಪತ್ರ ಬರೆದು ವಂಚಕ ಸುಕೇಶ್ ಚಂದ್ರಶೇಖರ್ ಸುದ್ದಿಯಾಗಿದ್ದ. 

 ಆದರೆ ಈಗ ಕ್ರಿಸ್‌ಮಸ್‌ ಹಬ್ಬದ ಹಿನ್ನೆಲೆಯಲ್ಲಿ ನಟಿ ಜಾಕ್ವೇಲಿನ್‌ಗೆ ಮತ್ತೆ ಪತ್ರ ಬರೆದಿರುವ ಸುಕೇಶ್ ಆಕೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾನೆ. ಅಲ್ಲದೇ ಧನ್ಯವಾದವನ್ನು ತಿಳಿಸಿದ್ದಾನೆ. 

ವಂಚಕ ಸುಕೇಶ್ ಚಂದ್ರಶೇಖರ್ ತನ್ನ ಬಂಧನವಾಗುವವರೆಗೂ ಜಾಕ್ವೇಲಿನ್ ಜೊತೆ ಉತ್ತಮ ಸಂಬಂಧದಲ್ಲಿದ್ದ. ಈಗ ಜೈಲಿನಲ್ಲಿದ್ದುಕೊಂಡು ಆಕೆಯನ್ನು ನೆನಪು ಮಾಡಿಕೊಳ್ಳುತ್ತಿರುವ ಸುಕೇಶ್, ಮೊದಲಿಗೆ ಆಕೆಗೆ ಪ್ರಶಸ್ತಿ ಗಳಿಸಿರುವುದಕ್ಕೆ ಶುಭ ಹಾರೈಸಿದ್ದಾನೆ. 

ನಿನ್ನ ವಿಚಾರದಲ್ಲಿ ನಾನೆಷ್ಟು ಖುಷಿಯಾಗಿದ್ದೇನೆ ಎಂಬುದರ ಬಗ್ಗೆ ನಿನಗೆ ತಿಳಿದಿರಲಾರದು,  ನಿಜವಾಗಿಯೂ ಭಾರತದ ಸಿನಿಮೋದ್ಯಮ ಹೊಂದಿರುವ ಒಬ್ಬ ಶ್ರೇಷ್ಠ ನಟಿ ನೀನು. ಪ್ರಶಸ್ತಿ ಸಮಾರಂಭದಲ್ಲಿ ನೀನು ಧರಿಸಿದ್ದ ಬಿಳಿ ಬಣ್ಣದ ಗವನ್‌ನಲ್ಲಿ ಬಹಳ ಸುಂದರವಾಗಿ ನೀನು ಕಂಗೊಳಿಸುತ್ತಿದ್ದೆ. ಬೇಬಿ ನಾನು ಮತ್ತೆ ಮತ್ತೆ ನಿನ್ನ ನೆನಪುಗಳಲ್ಲಿ ಸಿಲುಕಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾನೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಜಾಕ್ವೇಲಿನ್ ಫರ್ನಾಂಡಿಸ್‌ನ ಕೆಲ ಫೋಟೋಗಳ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಿದ್ದಾನೆ ಸುಕೇಶ್‌, ಬೇಬಿ ನಿನ್ನ ಬೇರೆ ಎರಡು ಫೋಟೋಗಳು ಕೂಡ ಮನಸೆಳೆಯುತ್ತಿವೆ. ಒಂದು ರೆಡ್‌ ಅರೇಬಿಕ್‌ ಔಟ್‌ಫಿಟ್‌ ಧರಿಸಿ ಮರುಭೂಮಿಯಲ್ಲಿತೆಗೆದ ಫೋಟೋ ಹಾಗೂ ಬೌ ಪಿಂಕ್ ಬಣ್ಣದ ಸಾರಿ ಧರಿಸಿದ ಫೋಟೋ. ಅದರಲ್ಲೂ ಮಿಂಚುತ್ತಿದ್ದ ಲೆಹೆಂಗಾ ಫೋಟೋ ನನ್ನ ಹೃದಯವನ್ನು ಸ್ಥಗಿತಗೊಳಿಸಿದೆ. 

ಬೇಬಿ ನೀನು ಈ ಭೂಮಿ ಮೇಲೆ ಜೀವಂತವಾಗಿರುವ ಏಕೈಕ ದೇವತೆ, ಲೆಹೆಂಗಾದೊಂದಿಗೆ ನೀನು ಬಹಳ ಸುಂದರವಾಗಿ ಕಾಣಿಸುತ್ತಿದ್ದೆ. ಸೋ ಬ್ಯೂಟಿಫುಲ್, ಸೋ ಸ್ಟನ್ನಿಂಗ್ ಜಸ್ಟ್ ಲುಕಿಂಗ್ ಲೈಕ್ ವಾವ್ ಎಂದು ಬರೆದಿರುವ ಆತ ನಿದ್ದೆಯಿಲ್ಲದ ರಾತ್ರಿಗಳು ಎಂದು ಬರೆದುಕೊಂಡಿದ್ದಾನೆ. ನನ್ನ ಯೋಚನೆಯೆಲ್ಲವೂ ನಿನ್ನ ಬಗ್ಗೆಯೇ ಆಗಿದೆ ನನ್ನ ರಾಣಿ ಜೇನು, ನಿನ್ನೊಂದಿಗೆ ಇರುವುದಕ್ಕೆ ಕಾಯುತ್ತಿದ್ದೇನೆ ಎಂದು ಆತ ಬರೆದುಕೊಂಡಿದ್ದಾನೆ. 

ಬರೀ ಇಷ್ಟೇ ಅಲ್ಲ, ಜಾಕ್ವೇಲಿನ್ ಜೊತೆ ಕಳೆದ ದಿನಗಳನ್ನು ನೆನಪು ಮಾಡಿಕೊಂಡಿರುವ ಸುಕೇಶ್‌,  ನಿನ್ನ ಜೊತೆ ನಿನ್ನಿಷ್ಟದ ಟರ್ಕಿ ಗ್ರಿಲ್, ಚಟೌ ಚೆವಲ್ ಬ್ಲಾಂಕ್, 1947 ವೈನ್ ಇವೆಲ್ಲವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನೀನು ಯೋಚನೆ ಮಾಡದೇ ಇರುವುದಕ್ಕಿಂತಲೂ ಬೇಗ ನಾವಿಬ್ಬರೂ ಇವುಗಳನ್ನು ಮತ್ತೆ ಜೊತೆಯಾಗಿ ಸಂಭ್ರಮಿಸುತ್ತೇವೆ ನನ್ನ ಪ್ರೀತಿಯ ಕಪ್ ಕೇಕ್ 

ಅಲ್ಲದೇ ಜೈಲಿನಿಂದ ಹೊರಬಂದ ನಂತರ ಇಡೀ ಜೀವನ ಜೊತೆಯಾಗಿ ಕಳೆಯುವ ಬಯಕೆಯನ್ನು ಆತ ವ್ಯಕ್ತಪಡಿಸಿದ್ದಾನೆ. ನನ್ನ ಖುಷಿ ನೀನು ನಿನ್ನ ಜೊತೆಗಿರುವುದು ನಿನ್ನ ಪ್ರೀತಿಸುವುದೇ ನನಗೆ ನಿಜವಾಗಿಯೂ ಖುಷಿಯ ವಿಚಾರ ಎಂಬುದು ಅರ್ಥವಾಗಿದೆ. 

 ನನ್ನಿಂದ ನೀನು ಅನುಭವಿಸಿದ ಎಲ್ಲಾ ತೊಂದರೆಗಳಿಗೆ ನಾನು  ನಿನ್ನಲ್ಲಿ ಕ್ಷಮೆ ಕೇಳುತ್ತಿದ್ದು,ಕ್ಷಮಿಸಿಬಿಡು ಎಂದು ಕೇಳುತ್ತಿದ್ದೇನೆ. ಜೈಲಿನಿಂದ ಬಂದು ನಿನ್ನೊಡನೆ ಬದುಕಲು ಬಯಸುವೆ.

ಇದಾದ ನಂತರ ನಾ ನಿನ್ನ ತಬ್ಬಿ ಹಿಡಿದುಕೊಂಡು ನಿನ್ನ ಕಣ್ಣುಗಳಲ್ಲಿ ನೋಡುತ್ತಾ ಜೊತೆಯಾಗಿ ಜೀವಿಸುವುದಕ್ಕೆ ನಾನು ನಿನಗೆ ಮತ್ತೆ ಪ್ರಪೋಸ್ ಮಾಡುವೆ ಎಂದು ಬರೆದಿರುವ ಸುಕೇಶ್ ಚಂದ್ರಶೇಕರ್ ಆಕೆಯನ್ನು ಸಿಂಹಿಣಿ ಎಂದು ಕರೆಯುವುದರೊಂದಿಗೆ ಪತ್ರವನ್ನು ಕೊನೆಗೊಳಿಸಿದ್ದಾನೆ. 

Jacqueline Fernandez

ಇತ್ತ ಜಾಕ್ವೇಲಿನ್ ಫರ್ನಾಂಡಿಸ್ ಸಿನಿಮಾ ಬಗ್ಗೆ ಹೇಳುವುದಾದರೆ ಅಟ್ಯಾಕ್, ರಾಮಸೇತು, ಸರ್ಕಸ್, ಬಚ್ಚನ್‌, ಪಾಂಡೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾಳೆ. 

ಸುಕೇಶ್‌ ಚಂದ್ರಶೇಖರ್ ಜೊತೆಗಿನ ಪ್ರೇಮ ಪ್ರಕರಣದಿಂದಾಗಿ  ಶ್ರೀಲಂಕಾ ಮೂಲದ ಈ ಮಾಡೆಲ್ ಜಾಕ್ವೇಲಿನ್ ಫರ್ನಾಂಡಿಸ್‌ಗೂ ಹಲವು ಸಂಕಷ್ಟಗಳು ಎದುರಾಗಿದ್ದವು, ಜಾರಿ ನಿರ್ದೇಶನಾಲಯವೂ ಕೂಡ ವಿಚಾರಣೆಗೆ ಹಾಜರಾಗುವಂತೆ ನಟಿಗೆ ನೋಟೀಸ್ ನೀಡಿತ್ತು. 

click me!