ನಿಮ್ಮ ಸಂಗಾತಿ ಬೆಡ್ಡಲ್ಲಿ ಗುಡ್ ಅಲ್ಲವೆನ್ನೋದನ್ನು ಹೇಳುತ್ತೆ ಈ ಚಿಹ್ನೆಗಳು!

Published : Dec 13, 2023, 02:43 PM IST

ಲೈಂಗಿಕ ಜೀವನ ಸುಂದರವಾಗಿರಬೇಕು ಅಂದ್ರೆ ಸೆಕ್ಸ್ ನಲ್ಲಿ ಇಬ್ಬರಿಗೂ ಆಸಕ್ತಿ ಇರಬೇಕು. ಇಬ್ಬರೂ ಎಂಜಾಯ್ ಮಾಡಿದ್ರೆ, ಸೆಕ್ಸ್ ಲೈಫ್ ಬೊಂಬಾಟ್ ಆಗಿರುತ್ತೆ. ಆದ್ರೆ ಕೆಲವೊಂದು ಚಿಹ್ನೆಗಳು ನಿಮ್ಮ ಸಂಗಾತಿ ರೊಮ್ಯಾನ್ಸ್ ವಿಷಯದಲ್ಲಿ ತುಂಬಾನೆ ವೀಕ್ ಅನ್ನೋದನ್ನು ಹೇಳುತ್ತೆ.    

PREV
19
ನಿಮ್ಮ ಸಂಗಾತಿ ಬೆಡ್ಡಲ್ಲಿ ಗುಡ್ ಅಲ್ಲವೆನ್ನೋದನ್ನು ಹೇಳುತ್ತೆ ಈ ಚಿಹ್ನೆಗಳು!

ಆತ್ಮವಿಶ್ವಾಸದ ಕೊರತೆ (less confidence)
ಆತ್ಮವಿಶ್ವಾಸ ಇದ್ರೆ ಸೆಕ್ಸ್  ಅನ್ನು ಎಂಜಾಯ್ ಮಾಡೊಕೆ ಸಾಧ್ಯ ಆಗುತ್ತೆ. ನಿಮ್ಮ ಸಂಗಾತಿಯು ಕಡಿಮೆ ಆತ್ಮ ವಿಶ್ವಾಸ ಹೊಂದಿದ್ರೆ ಅದು ಅವರ ಕ್ರಿಯೆ ಮೇಲೆ ಪರಿಣಾಮ ಬೀರುತ್ತೆ. ಆತ್ಮವಿಶ್ವಾಸವು ಕೇವಲ ನೋಟದ ಬಗ್ಗೆ ಅಲ್ಲ; ಇದು ಆಪ್ತತೆಯ ಕ್ಷಣಗಳು ಸೇರಿದಂತೆ ಜೀವನದ ವಿವಿಧ ಅಂಶಗಳಲ್ಲಿ ಪ್ರತಿಬಿಂಬಿಸುವ ಆಂತರಿಕ ಗುಣ.

29

ತನ್ನ ಬಗ್ಗೆ ಮಾತ್ರ ಆಸಕ್ತಿ
ನಿಮ್ಮ ಆಸೆಗಳಲ್ಲಿ ಆಸಕ್ತಿ ತೋರಿಸದೆ ತನ್ನ ಬಗ್ಗೆ ಮಾತ್ರ ಹೆಚ್ಚಾಗಿ ಮಾತನಾಡುವ ವ್ಯಕ್ತಿಯು ಇಂಟಿಮೆಸಿಯ ಕ್ಷಣಗಳಿಗೆ ಇದೇ ರೀತಿಯ ಮನೋಭಾವವನ್ನು ತರಬಹುದು. ಸೆಕ್ಸ್ ಎಂಜಾಯ್ ಮಾಡಬೇಕು ಎಂದಾದರೆ ಪರಸ್ಪರ ತಿಳುವಳಿಕೆ ಮತ್ತು ಪರಸ್ಪರರ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳೋದು ಮುಖ್ಯ. 

39

ಕಳಪೆ ಸಂವಹನ ಕೌಶಲ್ಯಗಳು
ಇಂಟಿಮೆಸಿಯ ಕ್ಷಣಗಳು ಸೇರಿ ಸಂಬಂಧದ ಎಲ್ಲಾ ಅಂಶಗಳಲ್ಲಿ ಸಂವಹನವು (communication) ಪ್ರಮುಖವಾಗಿದೆ. ಆಸೆಗಳು ಮತ್ತು ಏನು ಇಷ್ಟ, ಏನು ಇಷ್ಟ ಇಲ್ಲ ಅನ್ನೋದನ್ನು ವ್ಯಕ್ತಪಡಿಸಲು ಅಥವಾ ಸಕ್ರಿಯವಾಗಿ ಆಲಿಸಲು ಹೆಣಗಾಡುತ್ತಿರುವ ಸಂಗಾತಿಯು ನಿಮ್ಮ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಕಷ್ಟ ಪಡಬಹುದು.

49

ಕ್ರಿಯೇಟಿವ್ ಆಗಿರೋದೆ ಇಲ್ಲ
ಇಂಟಿಮೆಸಿ (intimacy) ಚೆನ್ನಾಗಿರಬೇಕು ಅಂದ್ರೆ, ಸ್ವಲ್ಪ ಕ್ರಿಯೇಟಿವ್ ಕೂಡ ಆಗಿರಬೇಕು. ಮುಕ್ತ ಮನಸ್ಸು ಮತ್ತು ಹೊಸದನ್ನು ಟ್ರೈ ಮಾಡೊ ಮನಸ್ಸು, ಸೆಕ್ಸ್ ಲೈಫ್ ಎಂಜಾಯ್ ಮಾಡೊದಿಕ್ಕೆ ಸಹಾಯ ಮಾಡುತ್ತೆ. 

59

ತಾಳ್ಮೆಯೇ ಇಲ್ಲದ ವ್ಯಕ್ತಿ
ದೈನಂದಿನ ಜೀವನದಲ್ಲಿ ಅಸಹನೆಯಿಂದ ವರ್ತಿಸುವ ವ್ಯಕ್ತಿ ಬೆಡ್ ರೂಮ್ ನಲ್ಲೂ ಹಾಗೆ ಇರುತ್ತಾರೆ.. ನಿಮ್ಮ ಸಂಗಾತಿಗೆ ತಾಳ್ಮೆಯೇ ಇರದಿದ್ದರೆ ಅವರು ಸೆಕ್ಸ್ ಸಹ ಚೆನ್ನಾಗಿ ಎಂಜಾಯ್ ಮಾಡಲು ಸಾಧ್ಯವಿಲ್ಲ. 

69

ದೈಹಿಕ ನೋಟಕ್ಕೆ ಪ್ರಾಮುಖ್ಯತೆ ನೀಡುವವರು
ದೈಹಿಕ ಆಕರ್ಷಣೆ (physical attraction) ಮುಖ್ಯವಾಗಿದ್ದರೂ,  ಲೈಂಗಿಕ ಜೀವನ ಎಂದು ಬಂದಾಗ ಭಾವನೆಗಳಿಗೆ ಬೆಲೆ ಕೊಡೋದನ್ನು ಕಲಿಯಬೇಕು. ಇಮೋಷನಲ್ ಇಂಟಿಮೆಸಿ ತೃಪ್ತಿಕರ ಲೈಂಗಿಕ ಸಂಪರ್ಕಕ್ಕೆ ಸಹಾಯ ಮಾಡುತ್ತೆ.

79

ಕಲಿಯಲು ಹಿಂಜರಿಕೆ
ಇಂಟಿಮೆಸಿ ಬಗ್ಗೆ ತಮಗೆ ಎಲ್ಲವೂ ತಿಳಿದಿದೆ ಎಂದು ನಂಬುವ ಜನರು, ತಮ್ಮ ಸಂಗಾತಿಗೆ ಏನು ಬೇಕು? ಏನು ಬೇಡ ಎಂದು ತಿಳಿಯಲು ಬಯಸೋದೆ ಇಲ್ಲ. ಉತ್ತಮ ಸಂಗಾತಿಯು ತಮ್ಮ ಸಂಗಾತಿಯನ್ನು ಸಂತೋಷ ಪಡಿಸಲು ಹೊಸ ಹೊಸ ಮಾರ್ಗವನ್ನು ಕಂಡು ಹಿಡಿಯುತ್ತಾರೆ. 
 

89

ಭಾವನಾತ್ಮಕ ಸಂಪರ್ಕದ ಕೊರತೆ
ನಿಜವಾದ ಇಂಟಿಮೆಸಿ ಭಾವನಾತ್ಮಕ ಸಂಪರ್ಕವನ್ನು ಒಳಗೊಂಡಿರುತ್ತದೆ. ನಿಮ್ಮ ಸಂಗಾತಿಯು ನಿಮ್ಮೊಂದಿಗೆ ಭಾವನಾತ್ಮಕವಾಗಿ ಸಂಪರ್ಕ ಸಾಧಿಸಲು ಹೆಣಗಾಡುತ್ತಿದ್ದರೆ, ಇದರಿಂದ ಸೆಕ್ಸ್ ಲೈಫನ್ನು (sex life)ಮಧುರವಾಗಿಸಲು ಸಾಧ್ಯವಿಲ್ಲ.

99

ಫೀಲಿಂಗ್ ಇಲ್ಲದೇ ಇರೋದು
ಸಂಗಾತಿಯ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಎಡವುದು ಮತ್ತು ಲೈಂಗಿಕ ಸುಖವನ್ನು ಅನುಭವಿಸದೇ ಇರೋದು ನಿಮ್ಮ ಸಂಗಾತಿಯೂ ರೊಮ್ಯಾನ್ಸ್ ವಿಷಯದಲ್ಲಿ ಝೀರೋ ಅನ್ನೋದನ್ನು ತೋರಿಸುತ್ತೆ. 

Read more Photos on
click me!

Recommended Stories