ಮಕ್ಕಳು ತಪ್ಪು ಮಾಡಿದಾಗ ಕಿರುಚಾಡ್ಬೇಡಿ, ಪರಿಸ್ಥಿತಿ ನಿಭಾಯಿಸಲು ಹೀಗ್ಮಾಡಿ

First Published | Feb 22, 2024, 3:04 PM IST

ಎಲ್ಲಾ ಪೋಷಕರು ತಮ್ಮ ಮಕ್ಕಳ ಮೇಲೆ ರೇಗಾಡುವುದು ಸಾಮಾನ್ಯ. ಆದ್ರೆ ಹೀಗೆ ಕೂಗಾಡಿದ ನಂತರ ಪಶ್ಚಾತ್ತಾಪ ಪಡುತ್ತಾರೆ. ಹಾಗಿದ್ರೆ ಮಕ್ಕಳ ಮೇಲೆ ಸಿಟ್ಟುಗೊಳ್ಳದಿರಲು, ರೇಗಾಡದಿರಲು ಪೋಷಕರು ಏನ್ಮಾಡ್ಬೇಕು. ಇಲ್ಲಿದೆ ಸಿಂಪಲ್ ಟಿಪ್ಸ್‌.

ಅನೇಕ ಪೋಷಕರು ಮಕ್ಕಳು ತಮ್ಮ ಮಾತನ್ನು ಕೇಳಬೇಕು ಎಂದು ಭಾವಿಸುತ್ತಾರೆ. ಆ ರೀತಿ ಮಕ್ಕಳು ತಮ್ಮ ಮಾತನ್ನು ಕೇಳದಿದ್ದಾಗ ಅವರ ಮೇಲೆ ರೇಗಾಡುತ್ತಾರೆ, ಕಿರುಚಾಡುತ್ತಾರೆ. ಆದರೆ, ಪ್ರತಿ ವಿಷಯದಲ್ಲೂ ಮಕ್ಕಳನ್ನು ಹಾಗೆ ಬೈಯುವುದು ಅವರ ಮನಸ್ಸಿಗೆ ತುಂಬಾ ನೋವುಂಟು ಮಾಡಬಹುದು. ವಿಶೇಷವಾಗಿ ತುಂಬಾ ಜನರ ಮುಂದೆ ಬೈಯ್ದಾಗ ಅವರನ್ನು ಖಿನ್ನತೆಗೆ ದೂಡಬಹುದು. 

ಪ್ರತಿ ಪೋಷಕರು ಹೀಗೆ ಮಕ್ಕಳ ಮೇಲೆ ರೇಗಾಡಿದ ನಂತರ ಪಶ್ಚಾತ್ತಾಪ ಪಡುತ್ತಾರೆ. ಹಾಗೆ ಮಾಡಬಾರದಿತ್ತು ಎಂದುಕೊಳ್ಳುತ್ತಾರೆ. ಹಾಗಿದ್ರೆ,  ಹೀಗೆ ಮಕ್ಕಳ ಮೇಲೆ ಕೂಗಾಡದೆ ಇರಲು ಪೋಷಕರು ಏನು ಮಾಡಬೇಕು? ಮಕ್ಕಳ ಜೊತೆ ತಾಳ್ಮೆಯಿಂದ ಇರುವುದು ಹೇಗೆ? ಇಲ್ಲಿದೆ ಕೆಲವೊಂದು ಸಲಹೆ

Tap to resize

ಹೇಳುವುದನ್ನು ಕೇಳಿ
ತುಂಬಾ ಮಕ್ಕಳು ಪೋಷಕರು ಜೊತೆ ಭಾವನೆಯನ್ನು ಹಂಚಿಕೊಳ್ಳಲು ಭಯಪಡುತ್ತಾರೆ. ಇದರಿಂದ ಅವರ ಮನಸ್ಸಿನ ಭಾವನೆ ಪೋಷಕರಿಗೆ ಅರ್ಥವಾಗುವುದಿಲ್ಲ.

ಹೀಗಾಗಿ ಮಕ್ಕಳ ಮೇಲೆ ರೇಗಾಡುವ ಬದಲು ಅವರ ಮಾತನ್ನು ಕೇಳಿ. ಕೂಲ್ ಆಗಿ ಅವರ ಜೊತೆ ಮಾತನಾಡಿ. ಇದರಿಂದ ಅದೆಷ್ಟೋ ಸಮಸ್ಯೆಯನ್ನು ಬಗೆಹರಿಸಬಹುದು. ಅನಗತ್ಯವಾಗಿ ಕೂಗಾಡುವುದನ್ನು ತಪ್ಪಿಸಬಹುದು.

ಮಕ್ಕಳ ಸಾಮರ್ಥ್ಯ ವಿಭಿನ್ನವಾಗಿರುತ್ತದೆ
ಹೆಚ್ಚಿನ ಪೋಷಕರು ತಮ್ಮ ಮಕ್ಕಳ ಮೇಲೆ ಹಲವಾರು ನಿರೀಕ್ಷೆಗಳನ್ನು ಇಡುತ್ತಾರೆ. ತಮ್ಮ ಮಕ್ಕಳು ತಮ್ಮ ನಿರೀಕ್ಷೆಗಳನ್ನು ಪೂರೈಸದಿದ್ದಾಗ ಹತಾಶರಾಗುತ್ತಾರೆ. ಆ ಹತಾಶೆಯನ್ನು ಮಕ್ಕಳ ಮೇಲೆ ಕೂಗುವ ಮೂಲಕ ಹೊರಹಾಕುತ್ತಾರೆ.

ಆದರೆ ಎಲ್ಲಾ ಮಕ್ಕಳಲ್ಲಿ ಒಂದೇ ರೀತಿಯ ಪ್ರತಿಭೆ, ಸಾಮರ್ಥ್ಯ ಇರುವುದಿಲ್ಲ ಎಂಬುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು. ತಮ್ಮ ಮಕ್ಕಳಲ್ಲಿರುವ ಸಾಮರ್ಥ್ಯಕ್ಕೆ ಸಮಂಜಸವಾದ ನಿರೀಕ್ಷೆಗಳನ್ನು ಮಾತ್ರ ಮಾಡಬೇಕು. ಆಗ ಮಕ್ಕಳ ಮೇಲೆ ಕೂಗಾಡುವ ಅಗತ್ಯವಿಲ್ಲ.

ಭಾವನೆ ಅರ್ಥ ಮಾಡಿಕೊಳ್ಳಿ
ಬಹುತೇಕ ಸಂದರ್ಭದಲ್ಲಿ ಪೋಷಕರು ತಮ್ಮ ಮಕ್ಕಳ ನಡವಳಿಕೆಯನ್ನಷ್ಟೇ ಟೀಕಿಸುತ್ತಾರೆ. ಅವರ ಅಂಥಾ ನಡವಳಿಕೆಗೆ ಕಾರಣ ಏನು ಅನ್ನೋದನ್ನು ತಿಳಿಯಲು ಪ್ರಯತ್ನಿಸೋದಿಲ್ಲ.

ಮಕ್ಕಳ ನಕಾರಾತ್ಮಕ ನಡವಳಿಕೆಯ ಮೇಲೆ ಮಾತ್ರ ಕೇಂದ್ರೀಕರಿಸುವ ಬದಲು, ಇದಕ್ಕೆ ಕಾರಣವನ್ನು ಗುರುತಿಸಲು ಪ್ರಯತ್ನಿಸಿ. ಮಕ್ಕಳು ಖಿನ್ನತೆಗೆ ಒಳಗಾಗಿದ್ದಾರೆಯೇ, ದಣಿದಿದ್ದಾರೆಯೇ ಎಂಬುದನ್ನು ತಿಳಿಯೋದ್ರಿಂದ ಸ್ವಭಾವವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸುಲಭವಾಗುತ್ತದೆ.

ಕಂಪೇರ್ ಮಾಡಬೇಡಿ
ಮಕ್ಕಳನ್ನು ಬೇರೆಯವರೊಂದಿಗೆ ಕಂಪೇರ್ ಮಾಡುವ ಅಭ್ಯಾಸ ಯಾವಾಗಲೂ ಅಸಮಾಧಾನಕ್ಕೆ ಕಾರಣವಾಗುತ್ತದೆ. ನೀವು ಕೆಟ್ಟವರು ಎಂಬ ಭಾವನೆಯನ್ನು ಮೂಡಿಸಬಾರದು.

ಪ್ರತಿಯೊಂದರಲ್ಲೂ ಹೀಗೆ ಮಾಡದಿದ್ದರೆ ಕೆಟ್ಟವರಾಗುತ್ತೀರಿ ಎಂದು ಬಹಳಷ್ಟು ಜನ ತಮ್ಮ ಮಕ್ಕಳಿಗೆ ಹೇಳುತ್ತಲೇ ಇರುತ್ತಾರೆ. ಹಾಗೆ ಲೇಬಲ್ ಮಾಡದೆ ಅವರಿಗೆ ಸಮಸ್ಯೆಯನ್ನು ವಿವರಿಸಲು ಪ್ರಯತ್ನಿಸಿ. ತಕ್ಷಣವೇ ಕಿರುಚುವ ಬದಲು, ಮಕ್ಕಳಿಗೆ ತಿಳಿಸಿ ಹೇಳಲು ಸ್ವಲ್ಪ ಸಮಯ ತೆಗೆದುಕೊಳ್ಳಿ. 

Latest Videos

click me!