ಅನಂತ್ ರಾಧಿಕಾ ಕ್ರೂಸ್ ಪಾರ್ಟಿ ಫೋಟೋಸ್ ಔಟ್; ರಾಣಿಯಂತೆ ಕಂಗೊಳಿಸಿದ ವಧು

First Published Jun 15, 2024, 9:59 AM IST

ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಎರಡನೇ ವಿವಾಹಪೂರ್ವ ಸಮಾರಂಭ ಇಟಲಿಯಲ್ಲಿ ನಡೆದ ಕ್ರೂಸ್ ಪಾರ್ಟಿಯ ಫೋಟೋಗಳು ಕಡೆಗೂ ಹೊರಬಿದ್ದಿವೆ. ಈ ಚಿತ್ರಗಳಲ್ಲಿ ಜೋಡಿಯು ಅತ್ಯಂತ ಸುಂದರವಾಗಿ ಕಾಣುತ್ತಿದ್ದಾರೆ. 

ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಎರಡನೇ ವಿವಾಹಪೂರ್ವ ಸಮಾರಂಭ ಇಟಲಿಯಲ್ಲಿ ನಡೆದ ಕ್ರೂಸ್ ಪಾರ್ಟಿಯ ಫೋಟೋಗಳು ಕಡೆಗೂ ಹೊರಬಿದ್ದಿವೆ. ಈ ಚಿತ್ರಗಳಲ್ಲಿ ಜೋಡಿಯು ಅತ್ಯಂತ ಸುಂದರವಾಗಿ ಕಾಣುತ್ತಿದ್ದಾರೆ. 

ಮೇ 29ರಿಂದ ಜೂ.1ರವರೆಗೆ ಫ್ರಾನ್ಸ್‌ನಲ್ಲಿ ಮುಕ್ತಾಯಗೊಂಡ ಕ್ರೂಸ್‌ನಲ್ಲಿ ಅನಂತ್ ರಾಧಿಕಾ ಜೋಡಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಾಧಿಕಾ ಅನಂತ್ ಅಂಬಾನಿ ಕೊಟ್ಟ ಲವ್ ಲೆಟರ್ ಪ್ರಿಂಟ್ ಹಾಕಿಸಿದ ಗೌನ್ ತೊಟ್ಟಿದ್ದಾರೆ. 

ಬಿಳಿ ಸ್ಲೈವ್‌ಲೆಸ್ ಗೌನ್‌ನಲ್ಲಿ ಯುವತಿಯಂತೆ ಕಾಣುತ್ತಿರುವ ಅಮ್ಮ ನೀತಾ ಅಂಬಾನಿಯಿಂದ ಸಣ್ಣ ಮಗನಿಗೆ ಸಿಹಿಮುತ್ತು. ಒಡವೆಗಳು ಇಲ್ಲದ ಈ ಫೋಟೋದಲ್ಲಿ ನೀತಾ ಕೈಲಿರುವ ಕಪ್ಪು ದೃಷ್ಟಿ ದಾರ ಗಮನ ಸೆಳೆಯುತ್ತದೆ. 

ನೀಲಿ ಹಾಗೂ ಬೆಳ್ಳಿಯ ಬಣ್ಣದ ಗೌನ್‌ನಲ್ಲಿ ಸಾಗರದಿಂದೆದ್ದು ಬಂದ ಅಪ್ಸರೆಯಂತೆ ರಾಧಿಕಾ ಕಾಣುತ್ತಿದ್ದಾರೆ. ಅನಂತ್ ಅಂಬಾನಿಯೂ ವಿವಾಹಕ್ಕಾಗಿ ಕೊಂಚ ತೆಳ್ಳಗಾದಂತೆ ಕಾಣುತ್ತಾರೆ. 

ಗ್ರೇಸ್ ಲಿಂಗ್ ವಿನ್ಯಾಸಪಡಿಸಿದ ಕಸ್ಟಮ್ 3D-ಕೆತ್ತಿದ ಚಿನ್ನದ ಬಸ್ಟ್ ಮತ್ತು ಬಿಳಿ ಸ್ಯಾಟಿನ್ ಸ್ಕರ್ಟ್‌ನಲ್ಲಿ ರಾಧಿಕಾ.  ಚಿನ್ನದ ಕಡಗಗಳು, ಉಂಗುರಗಳು, ಡ್ರಾಪ್ ಕಿವಿಯೋಲೆಗಳು, ಹೊಡೆಯುವ ಮೇಕ್ಅಪ್ ಮತ್ತು ಸಡಿಲವಾದ ಸುರುಳಿಯಾಕಾರದ ಹೇರ್‌ಸ್ಟೈಲ್‌ನೊಂದಿಗೆ ರಾಧಿಕಾ ಅಪ್ಸರೆಯಂತೆ ಕಾಣುತ್ತಿದ್ದಾರೆ.

ಪ್ರಿಯಕರನ ಲವ್ ಲೆಟರ್ ಪ್ರಿಂಟ್‌ನ ಈ ಗೌನ್‌ಗೆ ರಾಧಿಕಾ ಧರಿಸಿರುವ ಸರ, ಕಿವಿಯೋಲೆಗಳು ಅದೆಷ್ಟು ಕೋಟಿಗಳದಿರಬಹುದೆಂಬ ಕುತೂಹಲ ನೋಡುಗರಲ್ಲಿ ಮೂಡುತ್ತಿದೆ. 

ಹೊಸ ಬಾಳಿನ ಹೊಸಿಲಲಿ ನಿಂತಿರುವ ಜೋಡಿಗಳ ಸಂಭ್ರಮ. ಜುಲೈ 12 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಈ ಜೋಡಿ ವಿವಾಹವಾಗಲಿದ್ದಾರೆ. 

ಬೀಚ್ ಪಾರ್ಟಿಗೆ ಸರಿಯಾದ ಉಡುಗೆಯಲ್ಲಿ ರಾಧಿಕಾ ಮತ್ತು ಅನಂತ್. ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಲೇ ಸರಳವಾಗಿ ಕಣ್ಸೆಳೆಯುವ ನೋಟದಲ್ಲಿ ಕಂಗೊಳಿಸುತ್ತಿದ್ದಾರೆ. 

ಸ್ವತಃ ವಜ್ರದ ವ್ಯಾಪಾರಿಯ ಮಗಳಾಗಿರುವ, ಅಂಬಾನಿಯ ಸೊಸೆಯಾಗಲಿರುವ ರಾಧಿಕಾ ಕತ್ತು, ಕಿವಿಯಲ್ಲಿ ವಜ್ರದ ಆಭರಣಗಳಿವೆ ಎಂಬುದರಲ್ಲಿ ಅನುಮಾನವಿಲ್ಲ. ಆಕೆಯ ಬಟ್ಟೆಯಲ್ಲಿ ಕಾಣುವ ಮಿನುಗುಗಳೂ ವಜ್ರದ್ದೇ ಎಂಬುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. 

Latest Videos

click me!