ಕುಟುಂಬದ ಕಾರ್ಯಕ್ರಮವೊಂದರಲ್ಲಿ ಎಲ್ಲರೂ ಖುಷಿಯಾಗಿದ್ದ ದಿನವೇ ಘೋರ ದುರಂತವೊಂದು ನಡೆದಿದೆ. 8 ಮಕ್ಕಳ ತಾಯಿಯೊಬ್ಬರು ದಿಢೀರ್ ನಾಪತ್ತೆಯಾಗಿದ್ದು, ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ. ಅವರು ಒಬ್ಬರೇ ಹೋಗಿಲ್ಲ, ಬದಲಿಗೆ ತನ್ನ ಅಳಿಯನ ಜೊತೆ ಹೋಗಿರಬಹುದು ಎಂಬ ಅನುಮಾನ ಮೂಡಿದೆ.
ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಅಚನೇರಾ ಎಂಬಲ್ಲಿ ಕುಟುಂಬ ಸಂಬಂಧಗಳಿಗೆ ಕಳಂಕ ತರುವ ಘಟನೆಯೊಂದು ಬೆಳಕಿಗೆ ಬಂದಿದೆ. ಎಂಟು ಮಕ್ಕಳ ತಾಯಿಯೊಬ್ಬರು ತನ್ನ ಅಳಿಯನ ಜೊತೆ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಇಡೀ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ.
24
ಕೌಟುಂಬಿಕ ಕಲಹ
ಕುಟುಂಬದ ಕಾರ್ಯಕ್ರಮವೊಂದಕ್ಕಾಗಿ ಅಳಿಯನು ಅತ್ತೆ ಮನೆಗೆ ಬಂದಿದ್ದನು. ಮಧ್ಯಾಹ್ನದ ಸಮಯದಲ್ಲಿ, 'ಮೆಹಂದಿ' ಎಲೆಗಳನ್ನು ತರಬೇಕೆಂದು ಹೇಳಿ, ಮಹಿಳೆಯನ್ನು ಮನೆಯ ಹಿಂದಿನ ಜಮೀನಿಗೆ ಕರೆದೊಯ್ದಿದ್ದಾನೆ. ಬಹಳ ಹೊತ್ತಾದರೂ ಅವರು ಹಿಂತಿರುಗದ ಕಾರಣ, ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದಾರೆ.
ಆಗ ಅವರಿಬ್ಬರೂ ಅಲ್ಲಿಂದ ಪರಾರಿಯಾಗಿರುವುದು ತಿಳಿದುಬಂದಿದೆ. ಈ ಸಂಬಂಧ ಹೊಸದೇನಲ್ಲ, ಸುಮಾರು 12 ವರ್ಷಗಳ ಹಿಂದೆಯೇ ಇವರಿಬ್ಬರೂ ಆತ್ಮೀಯರಾಗಿದ್ದರು ಎನ್ನಲಾಗಿದೆ.
34
ಗ್ರಾಮದಲ್ಲಿ ಭಾರೀ ಚರ್ಚೆ
ಈ ಹಿಂದೆಯೂ ಒಮ್ಮೆ ಅಳಿಯ-ಅತ್ತೆ ಮನೆಯಿಂದ ಓಡಿಹೋಗಿದ್ದರು. ನಂತರ ಕುಟುಂಬಸ್ಥರು ಹುಡುಕಿ ವಾಪಸ್ ಕರೆತಂದಿದ್ದರು ಎಂದು ವರದಿಗಳು ಹೇಳುತ್ತವೆ. ಕುಟುಂಬದ ಗೌರವಕ್ಕಾಗಿ ಆಗ ಆ ವಿಷಯವನ್ನು ಮುಚ್ಚಿಹಾಕಲಾಗಿತ್ತು. ಈ ಘಟನೆ ಎರಡೂ ಕುಟುಂಬಗಳನ್ನು ತೀವ್ರ ಸಂಕಟಕ್ಕೆ ದೂಡಿದೆ. ಎಂಟು ಮಕ್ಕಳ ತಂದೆಯಾದ ಪತಿ ಆಘಾತದಲ್ಲಿದ್ದಾರೆ.
ಅಷ್ಟೇ ಅಲ್ಲ, ಐದು ಮಕ್ಕಳ ತಾಯಿಯಾಗಿರುವ ಅಳಿಯನ ಪತ್ನಿಯೂ ತೀವ್ರ ದುಃಖದಲ್ಲಿದ್ದಾರೆ ಎನ್ನಲಾಗಿದೆ. ಗ್ರಾಮದಲ್ಲಿ ಈ ಘಟನೆಯ ಬಗ್ಗೆ ನಾನಾ ರೀತಿಯ ಮಾತುಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ, ಮಹಿಳೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಪತಿ ನೀಡಿದ ದೂರಿನ ಆಧಾರದ ಮೇಲೆ, ಇಬ್ಬರೂ ನಾಪತ್ತೆಯಾಗಿದ್ದಾರೆಂದು ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಘಟನೆಯ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದು, ಅವರನ್ನು ಪತ್ತೆಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.