ಮಾಜಿ-ಭಾವಿ ಹೆಂಡ್ತೀರು ಹಿಂದೂ; ಮಕ್ಕಳಿಗೆ ಮುಸ್ಲಿಂ ಹೆಸರೇಕೆ? ಆಮೀರ್​ ಖಾನ್​ ಜಾಣ್ಮೆಯ ಉತ್ತರ ಕೇಳಿ

Published : May 01, 2026, 03:12 PM IST

ಬಾಲಿವುಡ್ ಖಾನ್ ನಟರಾದ ಶಾರುಖ್ ಮತ್ತು ಆಮೀರ್ ಖಾನ್ ಹಿಂದೂ ಪತ್ನಿಯರನ್ನು ಹೊಂದಿದ್ದಾರೆ. ಆದರೆ, ತಮ್ಮ ಮಕ್ಕಳಿಗೆ ಮುಸ್ಲಿಂ ಹೆಸರುಗಳನ್ನಿಟ್ಟಿರುವ ಬಗ್ಗೆ ಪ್ರಶ್ನೆ ಎದುರಾದಾಗ, ಆಮೀರ್ ಖಾನ್ ತಮ್ಮ ಮಕ್ಕಳಾದ ಐರಾ ಮತ್ತು ಆಜಾದ್ ಹೆಸರುಗಳ ಹಿಂದೂ ಮೂಲವನ್ನು ವಿವರಿಸಿ ಜಾಣ್ಮೆಯ ಉತ್ತರ ನೀಡಿದ್ದಾರೆ.  

PREV
16
ಖಾನ್​ ನಟರ ಹಿಂದೂ ಪತ್ನಿಯರು

ಎಲ್ಲರಿಗೂ ತಿಳಿದಿರುವಂತೆ ಬಾಲಿವುಡ್​ ಖಾನ್​ ನಟರ ಪತ್ನಿಯರೆಲ್ಲಾ ಹಿಂದೂಗಳೇ. ಶಾರುಖ್ ಖಾನ್​ ಪತ್ನಿ ಗೌರಿ ಖಾನ್​ ಆದ್ರೆ ಆಮೀರ್​ ಖಾನ್​ ಇದಾಗಲೇ ಇಬ್ಬರು ಹೆಂಡ್ತಿಯರಿಗೆ ಡಿವೋರ್ಸ್​ ಕೊಟ್ಟಿದ್ದಾರೆ. ಅವರ ಹೆಸರು ರೀನಾ ಮತ್ತು ಕಿರಣ್​. ಸದ್ಯ ಗೌರಿ ಎನ್ನುವವರ ಜೊತೆ ಸುತ್ತಾಡುತ್ತಿದ್ದು, ಶೀಘ್ರದಲ್ಲಿಯೇ ಇವರ ಮದುವೆ ಎಂದೂ ಹೇಳಲಾಗುತ್ತಿದೆ.

26
ಶಾರುಖ್​ಗೂ ಸೇಮ್​ ಸ್ಟೋರಿ

ಕುತೂಹಲದ ವಿಷಯ ಏಕೆಂದರೆ, ಶಾರುಖ್​ ಖಾನ್​ಗೆ ಒಬ್ಬರೇ ಪತ್ನಿ ಇರುವುದು ಬಿಟ್ಟರೆ, ಅವರ ಮಕ್ಕಳಿಗೂ ಇಟ್ಟಿರುವುದು ಮುಸ್ಲಿಂ ಹೆಸರುಗಳೇ. ಆರ್ಯನ್​ ಖಾನ್​ ಮತ್ತು ಸುಹಾನಾ ಖಾನ್​. ಆರ್ಯನ್​ ಖಾನ್​ ಇದಾಗಲೇ ಡ್ರಗ್ಸ್​ ಕೇಸ್​ನಲ್ಲಿ ಭಾರಿ ಸದ್ದು ಮಾಡಿದ್ದರೆ, ಸುಹಾನಾ ಖಾನ್​ ಬೋಲ್ಡ್​ ಡ್ರೆಸ್​ ಹಾಕುವ ಮೂಲಕ ಸದ್ದು ಮಾಡುತ್ತಿದ್ದಾರೆ.

36
ಮಕ್ಕಳಿಗೇಕೆ ಮುಸ್ಲಿಂ ಹೆಸರು?

ಅದೇ ರೀತಿ, ಆಮೀರ್​ ಖಾನ್​ ಅವರ ಇಬ್ಬರು ಮಾಜಿ ಮತ್ತು ಓರ್ವ ಭಾವಿ ಪತ್ನಿ ಮೂವರೂ ಹಿಂದೂಗಳೇ ಆಗಿದ್ದರೂ, ಮಕ್ಕಳ ಹೆಸರು ಮಾತ್ರ ಮುಸ್ಲಿಂ ಹೆಸರುಗಳೇ. ಈ ಬಗ್ಗೆ ರಜತ್​ ಶರ್ಮಾ ಷೋನಲ್ಲಿ ನಟ ಆಮೀರ್​ ಖಾನ್​ ಅವರಿಗೆ ಪ್ರಶ್ನೆ ಎದುರಾಗಿದೆ. ನಿಮ್ಮ ಭಾವಿ ಪತ್ನಿಯರ ಹೆಸರು ರೀನಾ ಮತ್ತು ಕಿರಣ್​. ಮುಂಬರುವ ಪತ್ನಿಯ ಹೆಸರು ಗೌರಿ. ಹಾಗಿದ್ದ ಮೇಲೆ ಮಕ್ಕಳ ಹೆಸರು ಮಾತ್ರ ಜುನೈದ್​ ಖಾನ್​, ಐರಾ ಖಾನ್ (ಮೊದಲ ಪತ್ನಿ ಮಕ್ಕಳು)​, ಆಜಾದ್​ ಖಾನ್​ (2ನೇ ಪತ್ನಿ ಕಿರಣ್​ ರಾವ್​ ಮಕ್ಕಳು) ಎಂದು ಇಡಲಾಗಿದೆ. ಇದರ ಬಗ್ಗೆನೇ ರಜತ್​ ಶರ್ಮಾ ಅವರು ತಮ್ಮ ಷೋನಲ್ಲಿ ಇದರ ಬಗ್ಗೆ ನಟನನ್ನು ವಿಚಾರಿಸಿದ್ದಾರೆ.

46
ನಟನ ಜಾಣ್ಮೆಯ ಉತ್ತರ

ಅದಕ್ಕೆ ಆಮೀರ್​ ಖಾನ್​, ಜಾಣ್ಮೆಯ ಉತ್ತರ ಕೊಟ್ಟಿದ್ದಾರೆ. ಹೆಸರು ಇಟ್ಟಿದ್ದು ನಾನಲ್ಲ. ಅದು ನನ್ನ ಪತ್ನಿಯರು. ನಿಮಗೇ ಗೊತ್ತಲ್ಲ. ಮಕ್ಕಳ ವಿಷಯದಲ್ಲಿ ಪತ್ನಿಯರ ಮಾತೇ ನಡೆಯುತ್ತದೆ ಎಂದು ಉತ್ತರ ಕೊಟ್ಟಿದ್ದರೂ, ಇದೇ ವೇಳೆ ಮಕ್ಕಳ ಹೆಸರು ಮುಸ್ಲಿಂ ಹೆಸರು ಅಲ್ಲ ಎನ್ನುವ ಸಮಜಾಯಿಷಿಯನ್ನೂ ಕೊಟ್ಟಿದ್ದಾರೆ.

56
ಮುಸ್ಲಿಂ ಹೆಸರು ಎಂದವರಾರು?

ಅಷ್ಟಕ್ಕೂ ನಟ ಹೇಳಿದ್ದು ಏನೆಂದರೆ, ಐರಾ ಎನ್ನುವುದು ಇರಾದಿಂದ ಬಂದಿರುವ ಹೆಸರು. ಇರಾ ಎಂದರೆ ಸರಸ್ವತಿ. ಅದನ್ನೇ ರೀನಾ ಮಗಳಿಗೆ ಇಟ್ಟಿದ್ದು. ಅಲ್ಲಿಗೆ ಐರಾ ಎನ್ನುವುದು ಹಿಂದೂ ಹೆಸರೇ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಆಜಾದ್ ಎನ್ನುವುದು ಮುಸ್ಲಿಂ ಹೆಸರು ಅಲ್ಲವೇ ಅಲ್ಲ. ಚಂದ್ರಶೇಖರ್​ ಆಜಾದ್​ ಇರಲಿಲ್ವಾ? ಅವರು ಹಿಂದೂ. ಹಾಗೂ ಅವರು ದೇಶಕ್ಕಾಗಿ ಮಾಡಿದ ಸೇವೆ, ರಾಷ್ಟ್ರಪ್ರೇಮ ಎಲ್ಲವನ್ನೂ ನೋಡಿ ಕಿರಣ್​ ಅದೇ ಹೆಸರನ್ನು ಇಟ್ಟಿದ್ದು ಎಂದಿದ್ದಾರೆ.

66
ಡಿವೋರ್ಸ್​ ಪತ್ನಿಯರ ಜೊತೆ ಬಾಂಧವ್ಯ

ಹಾಗೆಂದು ನಟ ಆಮೀರ್​ ಖಾನ್​ ಡಿವೋರ್ಸ್​ ಆದರೂ ತಮ್ಮ ಪತ್ನಿಯರ ಜೊತೆ ಒಳ್ಳೆಯ ಸಂಬಂಧದಲ್ಲಿ ಇದ್ದಾರೆ. ಕಿರಣ್​ ರಾವ್​ ಜೊತೆಗೂಡಿ ಈಚೆಗೆ ಸಿನಿಮಾ ಕೂಡ ನಿರ್ಮಾಣ ಮಾಡಿದ್ದರು. ಅಷ್ಟೇ ಅಲ್ಲದೇ ಭಾವಿ ಪತ್ನಿ ಗೌರಿ ಜೊತೆಯಲ್ಲಿ ಇರುವಾಗಲೇ ತಮ್ಮ ಮಾಜಿ ಪತ್ನಿಯರನ್ನೂ ಕರೆದುಕೊಂಡು ಒಟ್ಟಿಗೇ ಫೋಟೋ ಕ್ಲಿಕ್ಕಿಸಿಕೊಳ್ತಾರೆ ನಟ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories