ಚಿನ್ನ ಲೇಪಿತ ಕಾಂಜೀವರಂ ಸೀರೆ ಧರಿಸಿದ್ದ ಐಶ್ವರ್ಯಾ ರೈ, ಅಭಿಷೇಕ್‌-ಐಶ್‌ ಮದುವೆಗೆ ಖರ್ಚಾಗಿದ್ದೆಷ್ಟು?

Published : Apr 20, 2024, 04:52 PM ISTUpdated : Apr 20, 2024, 04:56 PM IST

ಬಾಲಿವುಡ್‌ನ ಮೋಸ್ಟ್ ಕ್ಯೂಟ್ ಕಪಲ್‌ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ದಂಪತಿ ಇವತ್ತು ತಮ್ಮ 17ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮುಂಬೈನಲ್ಲಿ ನಡೆದಿದ್ದ ಐಶ್ವರ್ಯಾ-ಅಭಿಷೇಕ್ ಮದುವೆ ಬಾಲಿವುಡ್ ಮೋಸ್ಟ್ ಗ್ರ್ಯಾಂಡ್ ಮದ್ವೆಗಳಲ್ಲಿ ಒಂದಾಗಿತ್ತು.ಈ ಮದ್ವೆಗೆ ಬಚ್ಚನ್ ಫ್ಯಾಮಿಲಿ ಖರ್ಚು ಮಾಡಿದ್ದೆಷ್ಟು ಗೊತ್ತಾ?

PREV
19
ಚಿನ್ನ ಲೇಪಿತ ಕಾಂಜೀವರಂ ಸೀರೆ ಧರಿಸಿದ್ದ ಐಶ್ವರ್ಯಾ ರೈ, ಅಭಿಷೇಕ್‌-ಐಶ್‌ ಮದುವೆಗೆ ಖರ್ಚಾಗಿದ್ದೆಷ್ಟು?

ಬಾಲಿವುಡ್‌ನ ಮೋಸ್ಟ್ ಕ್ಯೂಟ್ ಕಪಲ್‌ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ದಂಪತಿ ಇವತ್ತು ತಮ್ಮ 17ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. 2017ರ ಎಪ್ರಿಲ್ 20ರಂದು ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಮದುವೆಯಾದರು.

29

ಮುಂಬೈನಲ್ಲಿ ನಡೆದಿದ್ದ ಐಶ್ವರ್ಯಾ-ಅಭಿಷೇಕ್ ಮದುವೆ ಬಾಲಿವುಡ್ ಮೋಸ್ಟ್ ಗ್ರ್ಯಾಂಡ್ ಮದ್ವೆಗಳಲ್ಲಿ ಒಂದಾಗಿತ್ತು. ಆದರೆ ಅಂತರ್ಜಾಲದಲ್ಲಿ ಕೇವಲ ಮಸುಕಾದ ಫೋಟೋಗಳಷ್ಟೇ ಸದ್ಯ ಲಭ್ಯವಿದೆ.

39

ಐಶ್ವರ್ಯಾ ಮತ್ತು ಅಭಿಷೇಕ್ ಮದುವೆಯನ್ನು ಭಾರೀ ಭದ್ರತೆಯೊಂದಿಗೆ ನಡೆಸಿದರು. ಕುಟುಂಬ ಸದಸ್ಯರು ಮತ್ತು ಆಪ್ತರು ಮಾತ್ರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ತಮ್ಮ ಎಲ್ಲಾ ಮದುವೆ ಸಮಾರಂಭಗಳಿಗೆ ಅಭಿಷೇಕ್ ಮತ್ತು ಐಶ್ವರ್ಯಾ ಬರೋಬ್ಬರಿ6 ಕೋಟಿ ರೂಪಾಯಿ ಖರ್ಚು ಮಾಡಿದರು.

49

ಐಶ್ವರ್ಯಾ 15 ಕೆಜಿ ಚಿನ್ನ ಮತ್ತು ಇತರ ಬೆಲೆಬಾಳುವ ಆಭರಣಗಳನ್ನು ಉಡುಗೊರೆಯಾಗಿ ಪಡೆದರು ಎಂದು ವರದಿಯಾಗಿತ್ತು. ಮಾಧ್ಯಮ ವರದಿಗಳ ಪ್ರಕಾರ ಐಶ್ವರ್ಯಾ ತಮ್ಮ ಮದುವೆಯಲ್ಲಿ ಆ ಕಾಲದಲ್ಲೇ ಬರೋಬ್ಬರಿ 75 ಲಕ್ಷ ರೂಪಾಯಿ ಮೌಲ್ಯದ ಸೀರೆಯನ್ನು ಧರಿಸಿದ್ದರು. 

59

ಮದುಮಗಳಾದ ಐಶ್ವರ್ಯಾ ಮದುವೆಯಲ್ಲಿ ಚಿನ್ನದ ಬಣ್ಣದ ಕಾಂಜೀವರಂ ಸೀರೆಯನ್ನು ಧರಿಸಿದ್ದರು.ಐಶ್ವರ್ಯಾ ಅವರ ಈ ಸೀರೆಯನ್ನು ನೀತಾ ಲೂಲಾ ವಿನ್ಯಾಸಗೊಳಿಸಿದ್ದರು. ಸೀರೆಯ ಗಡಿಗೆ ಚಿನ್ನದ ಲೇಪಿತ ಮತ್ತು ಸ್ವರೋವ್ಸ್ಕಿ ಹರಳುಗಳನ್ನು ಹೊದಿಸಲಾಗಿತ್ತು.

69

ಅಭಿಷೇಕ್ ಮದುವೆಯಲ್ಲಿ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ವಿನ್ಯಾಸಗೊಳಿಸಿದ ಶೇರ್ವಾನಿ ಧರಿಸಿದ್ದರು. ಇದಕ್ಕೂ ಮೊದಲು ನಡೆದ ಎಂಗೇಜ್‌ಮೆಂಟ್‌ಗೂ ಸಹ ಸಾಕಷ್ಟು ಕೋಟಿ ಖರ್ಚು ಮಾಡಲಾಗಿತ್ತು.
 

79

ವರದಿಗಳ ಪ್ರಕಾರ ನಿಶ್ವಿತಾರ್ಥದ ಉಂಗುರಗಳಿಗೆ ಜೋಡಿ ಬರೋಬ್ಬರಿ 50 ಲಕ್ಷ ರೂ. ಖರ್ಚು ಮಾಡಿದ್ದರು. ಮದುವೆಯ ಸಂದರ್ಭದಲ್ಲಿ ಅಭಿಷೇಕ್ ಐಶ್ವರ್ಯಾಗೆ ಮೂರು ವಿಶಿಷ್ಟ ಸರವನ್ನು ಉಡುಗೊರೆಯಾಗಿ ನೀಡಿದ್ರು. ಜೊತೆಗೆ ಮಾಂಗಲ್ಯ ಸೂತ್ರವು ಕರಿಮಣಿಗಳಿಂದ ಕೂಡಿತ್ತು, 2 ಸ್ಟೆಪ್ಸ್ ಚೈನ್ ಇದಾಗಿತ್ತು. 45 ಲಕ್ಷದ ಮಾಂಗಲ್ಯ ಸರವನ್ನು ಅಭಿಷೇಕ್ ಬಚ್ಚನ್ ನಟಿ ಐಶ್ವರ್ಯಾ ರೈಗೆ ತೊಡಿಸಿದ್ದರು.

89

ಸಂದರ್ಶನವೊಂದರಲ್ಲಿ ಅಭಿಷೇಕ್‌, ಜನವರಿ 2007 ಲ್ಲಿ ಟೊರೊಂಟೊದಲ್ಲಿ 'ಗುರು' ಚಿತ್ರದ ಪ್ರದರ್ಶನದ ನಂತರ ಐಶ್ವರ್ಯಾಗೆ ಪ್ರಪೋಸ್ ಮಾಡಿದ್ದಾಗಿ ತಿಳಿಸಿದರು..

99

'ಹೋಟೆಲ್ ಬಾಲ್ಕನಿಯಲ್ಲಿ ಐಶ್ವರ್ಯಾಗೆ ಪ್ರಪೋಸ್ ಮಾಡಿದ್ದೆ. ನಾನು ಐಶ್‌ಗೆ ಪ್ರಪೋಸ್ ಮಾಡುವಾಗ ತುಂಬಾ ನರ್ವಸ್ ಆಗಿದ್ದೆ, ಆದರೆ ಐಶ್ ಹೌದು ಎಂದು ಹೇಳಲು ಒಂದು ಸೆಕೆಂಡ್ ಕೂಡ ತೆಗೆದುಕೊಳ್ಳಲಿಲ್ಲ' ಎಂದು ಅಭಿಷೇಕ್ ಮಾಹಿತಿ ನೀಡಿದರು.

Read more Photos on
click me!

Recommended Stories