ಈಗಷ್ಟೇ ಮೀಸೆ ಬಂದ ಯುವಕರ ಹೃದಯ ಆಂಟಿಗಳತ್ತ ಮಿಡಿಯೋದ್ಯಾಕೆ?

First Published | Apr 16, 2024, 6:50 PM IST

ಪ್ರೀತಿ ಮತ್ತು ಆಕರ್ಷಣೆ ಯಾರಿಗೆ ಬೇಕಾದರೂ, ಯಾವಾಗ ಬೇಕಾದರೂ ಸಂಭವಿಸಬಹುದು, ಆದರೆ ಅವಿವಾಹಿತ ಹುಡುಗನು ವಿವಾಹಿತ ಮಹಿಳೆಯತ್ತ ಆಕರ್ಷಿತನಾದರೆ, ಅದು ಯೋಚಿಸುವ ವಿಷಯವಾಗುತ್ತದೆ. ಏಕೆಂದರೆ ನಮ್ಮ ಸಮಾಜ ಅದನ್ನು ಒಪ್ಪೋದಿಲ್ಲ. ಅಂದಹಾಗೆ,  ಯಾಕೆ ಯುವಕರು ಹೆಚ್ಚಾಗಿ ವಿವಾಹಿತ ಮಹಿಳೆಯರತ್ತ ಆಕರ್ಷಿತರಾಗ್ತಾರೆ?

ಸಮಯ ಬದಲಾದ ಹಾಗೆ, ಸಂಬಂಧವೂ ಬದಲಾಗಲು ಪ್ರಾರಂಭಿಸಿದೆ. ಹಿಂದೆ, ಮದುವೆಗೆ, ಕನ್ಯೆ ಹುಡುಗಿ ಹುಡುಗನಿಗಿಂತ ಚಿಕ್ಕವಳಾಗಿರಬೇಕು ಎಂಬುವುದು ಮುಖ್ಯ ವಿಷಯವಾಗಿತ್ತು. ಆದರೀಗ ಹುಡುಗರು ಹುಡುಗಿಯರಿಗಿಂತ ವಿವಾಹಿತ ಮಹಿಳೆಯರನ್ನು (married women) ಹೆಚ್ಚು ಇಷ್ಟಪಡುತ್ತಾರೆ ಅನ್ನೋದನ್ನು ನೀವು ಕೇಳಿರಬಹುದು ಅಥವಾ ನೋಡಿರಬಹುದು, ಇದನ್ನು ಕೇಳಲು ಸ್ವಲ್ಪ ವಿಚಿತ್ರವಾಗಿದೆ ನಿಜ, ಆದರೆ ಇದು ಅಕ್ಷರಶಃ ಸತ್ಯ. ಕನ್ಯೆಯರಿಗಿಂತ ಹುಡುಗರು ವಿವಾಹಿತ ಮಹಿಳೆಯರ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಅದು ಬಿ-ಟೌನ್ ಆಗಿರಲಿ ಅಥವಾ ನಿಜ ಜೀವನವಾಗಿರಲಿ ವಿವಾಹಿತ ಮಹಿಳೆಯರತ್ತ ಆಕರ್ಷಿತರಾಗಿರೋ ಹುಡುಗರ ಕಥೆ ನೀವೂ ನೋಡಿರಬಹುದು. 

ಹುಡುಗರು ಯಾಕೆ ವಿವಾಹಿತ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ? ಇದು ಯಾವ ಕಾರಣಕ್ಕಾಗಿ ನಡೆಯುತ್ತಿದೆ ಎಂಬ ಪ್ರಶ್ನೆ ಈಗ ನಿಮ್ಮ ಮನಸ್ಸಿನಲ್ಲಿ ಬಂದಿರಬಹುದು ಅಲ್ವಾ?. ಇದಕ್ಕೆಲ್ಲಾ ಏನು ಕಾರಣ ಇರಬಹುದು ಅನ್ನೋದನ್ನು ತಜ್ಞರು ತಿಳಿಸಿದ್ದಾರೆ. ನೀವು ಸಹ ಇದರ ಬಗ್ಗೆ ತಿಳಿದುಕೊಳ್ಳೋದು ಒಳ್ಳೇದು. 

Tap to resize

ಆತ್ಮವಿಶ್ವಾಸವು ಹುಡುಗರನ್ನು ಅವರತ್ತ ಸೆಳೆಯುತ್ತದೆ
ವಿವಾಹಿತ ಮಹಿಳೆಯರು ಹುಡುಗಿಯರಿಗಿಂತ ಹೆಚ್ಚು ಆತ್ಮವಿಶ್ವಾಸ (Self confidence) ಹೊಂದಿರುತ್ತಾರೆ. ಮನೆ, ಮಗು ಮತ್ತು ಕಚೇರಿಯ ಎಲ್ಲಾ ಜವಾಬ್ದಾರಿಗಳನ್ನು ಅವರು ಏಕಾಂಗಿಯಾಗಿ ನಿರ್ವಹಿಸುತ್ತಾಳೆ ಅನ್ನೋದು ನಿಜ. ಜೀವನದ ಅನುಭವ ಮತ್ತು ಜವಾಬ್ದಾರಿಯಿಂದ, ಅವರ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ಈ ಆತ್ಮವಿಶ್ವಾಸವು ಹುಡುಗರನ್ನು ಅವರತ್ತ ಸೆಳೆಯುತ್ತದೆ. 

ಕಾಳಜಿ ವಹಿಸುತ್ತಾರೆ
ವಿವಾಹಿತ ಮಹಿಳೆಯರು ಸ್ವಭಾವತಃ ಕಾಳಜಿ (caring) ವಹಿಸುತ್ತಾರೆ. ಸಾಕಷ್ಟು ಜವಾಬ್ದಾರಿ ಹೊಂದಿದ್ದರೂ, ತನ್ನನ್ನು, ತನ್ನ ಸಂಗಾತಿಯನ್ನು ಮತ್ತು ಮನೆಯ ಇತರ ಎಲ್ಲಾ ಸದಸ್ಯರನ್ನು ನೋಡಿಕೊಳ್ಳುವುದು ಆಕೆಗೆ ಚೆನ್ನಾಗಿ ತಿಳಿದಿರುತ್ತದೆ. ಪ್ರತಿಯೊಂದೂ ಸಣ್ಣ ಮತ್ತು ದೊಡ್ಡ ವಿಷಯವನ್ನು ಸಹ ಈ ಮಹಿಳೆಯರು ನೋಡಿಕೊಳ್ಳುತ್ತಾರೆ. ಮತ್ತು ಹುಡುಗರು ಈ ಕಾಳಜಿಯ ಸ್ವಭಾವವನ್ನು ಇಷ್ಟಪಡುತ್ತಾರೆ.
 

ವಿವಾಹಿತ ಮಹಿಳೆಯರು ಚುರುಕಾಗಿರುತ್ತಾರೆ
ವಿವಾಹಿತ ಮಹಿಳೆಯರು ಉತ್ತಮ ತಿಳುವಳಿಕೆಯನ್ನು ಹೊಂದಿರುತ್ತಾರೆ. ಅವರು ಸಣ್ಣ ವಿಷಯಗಳಿಗೆ ಕೋಪಗೊಳ್ಳುವುದಿಲ್ಲ ಮತ್ತು ಹುಡುಗಿಯರಂತೆ ಕುತಂತ್ರಗಳನ್ನು ತೋರಿಸುವುದಿಲ್ಲ. ಮದುವೆಯಾದ ಮಹಿಳೆ ತನ್ನ ಜೀವನವನ್ನು ಬಹಳ ಪ್ರಾಕ್ಟೀಕಲ್ ದೃಷ್ಟಿಕೋನದಿಂದ ನೋಡ್ತಾಳೆ. ಅವರ ನಡವಳಿಕೆ ಮತ್ತು ಆಡು ಮಾತು ಹೆಚ್ಚಾಗಿ ಹುಡುಗರ ಮೇಲೆ ಪರಿಣಾಮ ಬೀರುತ್ತದೆ. ವಿವಾಹಿತ ಮಹಿಳೆಯರು ಅನುಭವದಿಂದ ಯೋಚನೆ ಮಾಡಿ ಮಾತನಾಡುತ್ತಾರೆ.

ದೈಹಿಕ ಸೌಂದರ್ಯವೂ ಒಂದು ಕಾರಣ
ಮದುವೆ ನಂತರ ಮಹಿಳೆಯರಲ್ಲಿ ಹಾರ್ಮೋನುಗಳ ಬದಲಾವಣೆಗಳು ಸಂಭವಿಸುತ್ತವೆ. ಈ ಕಾರಣದಿಂದ ಅವರ ಬಣ್ಣ, ಲುಕ್ ಎಲ್ಲವೂ ಆಕರ್ಷಕವಾಗುತ್ತದೆ (physical beauty), ಇದರಿಂದ ಅವರೂ ಸಂತಸದಿಂದಿರುತ್ತಾರೆ. ಈ ಕಾರಣದಿಂದಾಗಿ ಮದುವೆಯಾದ ಮಹಿಳೆಯರು ಹುಡುಗಿಯರಿಗಿಂತ ಹೆಚ್ಚು ಆಕರ್ಷಕವಾಗಿ ಕಾಣುತ್ತಾರೆ. ಹಾಗಾಗಿಯೇ ಹುಡುಗರು ಅವರತ್ತ ಆಕರ್ಷಿತರಾಗುತ್ತಾರೆ.

ಸಂಬಂಧಗಳನ್ನು ಗೌರವಿಸೋದು ತಿಳಿದಿದೆ
ವಿವಾಹಿತ ಮಹಿಳೆಯರಿಗೆ ಸಂಬಂಧಗಳನ್ನು ಹೇಗೆ ಗೌರವಿಸಬೇಕೆಂದು ತಿಳಿದಿದೆ. ಮದುವೆಯ ನಂತರ, ಅವಳು ಪ್ರತಿ ಸಂಬಂಧವನ್ನು ಆರಾಮದಾಯಕವಾಗಿಡಲು ಹೆಚ್ಚಿನ ಪ್ರಯತ್ನ ಮಾಡುತ್ತಾಳೆ. ಈ ಮಹಿಳೆಯರು ತಮ್ಮ ಕುಟುಂಬಕ್ಕಾಗಿ ಯಾವುದೇ ಪ್ರಮುಖ ನಿರ್ಧಾರವನ್ನು ಸುಲಭವಾಗಿ ತೆಗೆದುಕೊಳ್ಳಬಹುದು. ಜೊತೆಗೆ ಅವರು ತಮ್ಮ ಸಂಗಾತಿಯನ್ನು ಮಾನಸಿಕವಾಗಿ ಬೆಂಬಲಿಸುತ್ತಾರೆ, ಅದನ್ನು ಹುಡುಗರು ಇಷ್ಟಪಡುತ್ತಾರೆ. 
 

Latest Videos

click me!