ಅರ್ಜುನ್ ರೆಡ್ಡಿಯಂತ ಕೋಪಿಷ್ಠ, ಡಾಮಿನೆಟಿಂಗ್ ವ್ಯಕ್ತಿಯೇ ಕೆಲವರಿಗೆ ಇಷ್ಟವಾಗೋದ್ಯಾಕೆ?

Published : Apr 16, 2024, 05:39 PM IST

ಕೆಲವರು ಲವ್ ಮಾಡೋದಕ್ಕೆ ಅಥವಾ ಮದ್ವೆ ಆಗೋದಕ್ಕೆ ತಪ್ಪಾದ ವ್ಯಕ್ತಿಯನ್ನೇ ಆಯ್ಕೆ ಮಾಡೋದು ಯಾಕೆ? ಎಲ್ಲಾ ಕೆಟ್ಟಗುಣಗಳು ಎದ್ದು ಎದ್ದು ಕಂಡರೂ ಸಹ ಅವರು ಅಂತವರನ್ನೇ ಇಷ್ಟಪಡೋದು ಯಾಕೆ ಗೊತ್ತ?   

PREV
19
ಅರ್ಜುನ್ ರೆಡ್ಡಿಯಂತ ಕೋಪಿಷ್ಠ, ಡಾಮಿನೆಟಿಂಗ್ ವ್ಯಕ್ತಿಯೇ ಕೆಲವರಿಗೆ ಇಷ್ಟವಾಗೋದ್ಯಾಕೆ?

ನಿಮ್ಮ ಸ್ನೇಹಿತರಲ್ಲಿ ಅಥವಾ ಸುತ್ತಲೂ ಕೆಲವು ಕಪಲ್ಸ್  (couples) ನೋಡಿದಾಗ ನೀವು ಸುಲಭದಲ್ಲಿ ಹೇಳು ಬಿಡ್ತೀರಿ 'ಯಾಕೆ ಇವರಿಗೆ ಬೇರೆ ಯಾರೂ ಸಿಕ್ಕಿಲ್ವಾ? ಈ ಹುಡುಗ/ಹುಡುಗಿಯನ್ನೆ ಯಾಕೆ ಲವ್ ಮಾಡಿದ್ರೂ? ಯಾವ ಗುಣ ನೋಡಿ ಇವರನ್ನು ಇಷ್ಟಪಟ್ರು ಎಂದು ಖಂಡಿತವಾಗಿ ಕೇಳುತ್ತೀರಿ ಅಲ್ವಾ?  ಹುಡುಗ ಅಥವಾ ಹುಡುಗಿ ಒಳ್ಳೆಯವರಲ್ಲಿ ಅಂಥಾ ಗೊತ್ತಿದ್ರೂ ಕೆಲವರು ಅಂತಹ ವ್ಯಕ್ತಿ ಜೊತೆ ಪ್ರೀತಿಯಲ್ಲಿ ಬೀಳೋದು ಯಾಕೆ? 
 

29

 ನೀವು 'ಅರ್ಜುನ್ ರೆಡ್ಡಿ' ಸಿನಿಮಾ ನೋಡಿದ್ದೀರಾ? ಅರ್ಜುನ್ ಕೋಪ, ಅವನ ಅತಿಯಾದ ವ್ಯಕ್ತಿತ್ವ, ತಾನು ಇಷ್ಟಪಟ್ಟದ್ದು ತನಗೇ ಬೇಕು ಎನ್ನುವ ಗುಣ, ಯಾವಾಗಲೂ ಕುಡಿಯುವ, ತನ್ನದೇ ಪ್ರಭಾವ ಬೀರುವ ಗುಣ ಅರ್ಜುನ್ ರೆಡ್ಡಿ (Srjun Reddy) ನದ್ದು, ಇವೆಲ್ಲವೂ ಆತನ ಸಂಗಾತಿಗೆ ಸ್ಪಷ್ಟವಾಗಿ ಕಾಣಿಸುತ್ತಿದ್ದರೂ ಆಕೆ ಆ ಸಂಬಂಧದಲ್ಲಿ ಉಳಿಯಲು ಇಷ್ಟಪಡ್ತಾಳೆ. ಇದು ಎಂಟರ್ ಟೈನ್ ಮೆಂಟ್ ಗಾಗಿ ಮಾಡಿದ ಚಿತ್ರವಾಗಿತ್ತು. 

39

ಸಿನಿಮಾ ಮಾತು ಬಿಡಿ, ನೀವು ಗಮನಿಸಿದ್ದೀರಾ, ನಿಮ್ಮ ಸ್ನೇಹಿತರಲ್ಲಿ ಅಥವಾ ಸುತ್ತಲೂ ಇಂತಹ ಅನೇಕ ರಿಲೇಶನ್ ಶಿಪ್ ಗಳನ್ನು ನೋಡಿರಬಹುದು, ಅವರಲ್ಲೂ ಇಂತಹ ಗುಣಗಳು ಇರೋದು ಕಾಣಬಹುದು. ಅಯ್ಯೋ ಯಾಕೆ ಇಂತಹ ವ್ಯಕ್ತಿಯನ್ನು ಇವರು ಲವ್ ಮಾಡಿದ್ರು ಎಂದೂ ಸಹ ನೀವು ಕೇಳಬಹುದು. ತಪ್ಪಾದ ಸಂಗಾತಿ ಆಯ್ಕೆ ಮಾಡೋದು ಯಾಕೆ ಎನ್ನುವ ಬಗ್ಗೆ ತಜ್ಞರು ಏನ್ ಹೇಳ್ತಿದ್ದಾರೆ ನೋಡೋಣ. 

49

ಬಾಲ್ಯದ ಜೀವನಕ್ಕೆ ಒಗ್ಗಿಕೊಳ್ಳುತ್ತೇವೆ
ನೀವು ಬಾಲ್ಯದಲ್ಲಿ ಹಾರರ್ ಚಲನಚಿತ್ರಗಳನ್ನು ಮಾತ್ರ ನೋಡಿರುತ್ತೀರಿ. ಅದನ್ನೇ ಇಷ್ಟಪಡ್ತೀರಿ. ಈಗ ನೀವು ಬೆಳೆದಿದ್ದೀರಿ. ಚಲನಚಿತ್ರಗಳಲ್ಲಿ ಆಕ್ಷನ್, ರೊಮ್ಯಾಂಟಿಕ್, ಹಾಸ್ಯ, ಡ್ರಾಮಾ ಮೊದಲಾದ ಚಲನಚಿತ್ರಗಳಿವೆ. ಆದರೆ ನೀವು ಬಾಲ್ಯದಿಂದಲೂ ಹಾರರ್ ಸಿನಿಮಾ ನೋಡಿರುವುದರಿಂದ ಮತ್ತು ನಿಮ್ಮ ಮನಸ್ಸು ಅಂತಹ ಚಿತ್ರಗಳಿಗಿಂತ ಹೆಚ್ಚು ಕನೆಕ್ಟ್ ಆಗುತ್ತವೆ, ಹಾಗಾಗಿ ನೀವು ಬೆಳೆದ ನಂತರವೂ ಅದೇ ರೀತಿಯ ಸಿನಿಮಾಗಳತ್ತ ಆಕರ್ಷಿತರಾಗುತ್ತೀರಿ. 

59

ನಮ್ಮ ಸಂಬಂಧಗಳಲ್ಲಿಯೂ (relationship) ಇದೇ ರೀತಿ ಆಗುತ್ತೆ, ಬಾಲ್ಯದಲ್ಲಿ ನಿಮ್ಮ ಸಂಬಂಧಗಳಲ್ಲಿ ನಿಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ಭಾವಿಸಿದರೆ, ಜೊತೆಗೆ ನಿಮಗೆ ಯಾರೂ ಸಮಯ ನೀಡೋದಿಲ್ಲ, ನಿಮ್ಮ ಭಾವನೆಗಳಿಗೆ ಪ್ರಾಮುಖ್ಯತೆ ನೀಡೋದಿಲ್ಲ ಎಂದು ನಿಮಗೆ ಅನಿಸಿದರೆ, ನಂತರ ಕ್ರಮೇಣ ಅದಕ್ಕೆ ನೀವು ಒಗ್ಗಿಕೊಂಡು ಬಿಡುತ್ತೇವೆ. ಅದೇ ರೀತಿಯ ಸಂಗಾತಿ ಸಿಕ್ಕಾಗಲು, ಮನಸ್ಸು ಅವರತ್ತ ವಾಲಿಬಿಡುತ್ತದೆ. ಇಂತಹ ವಾತಾವರಣದಲ್ಲಿ ಬೆಳೆದವರಿಗೆ ಸಂಗಾತಿ ಕೆಟ್ಟವರು ಎಂದು ಅನಿಸೋದೆ ಇಲ್ಲ. 
 

69

ಮನಸ್ಸು ಸರಿಯಾದುದನ್ನು ಬಿಟ್ಟು, ನಮಗೆ ಹತ್ತಿರವಾದುದನ್ನು ಆಯ್ಕೆ ಮಾಡುತ್ತೆ
ನೀವು ಪ್ರಬುದ್ಧ ಅಥವಾ ಕೇರಿಂಗ್ ವ್ಯಕ್ತಿಯಾಗಿ (Caring person) ಬೆಳೆದರೂ, ನೀವು ಬಾಲ್ಯದ ಜೀವನದಲ್ಲಿ ಒತ್ತಡದ ಮನಸ್ಥಿತಿಗೆ ಹೆಚ್ಚು ಹತ್ತಿರವಾಗಿರುತ್ತೀರಿ.  ಬಾಲ್ಯದಲ್ಲಿ ನಮ್ಮ ಸುತ್ತಲೂ ಯಾವ ರೀತಿಯ ಸಂಬಂಧಗಳನ್ನು ನೋಡಿರುತ್ತೀರೋ, ನಂತರ ನಾವು ಸಹ ಅದೇ ರೀತಿಯ ಸಂಬಂಧವನ್ನು ರಚಿಸೋದಕ್ಕೆ ಇಷ್ಟಪಡ್ತೀವಿ. ಯಾಕಂದ್ರೆ ನಮ್ಮ ಮೆದುಳು ಅದನ್ನು ನಮ್ಮದೇ ಸಂಬಂಧ ಎಂದು ಒಪ್ಪಿಕೊಳ್ಳುತ್ತೆ.

79

ಹೀಗಿರೋವಾಗ ಯಾರಾದರೂ ಹೊರಗಿನಿಂದ ನೋಡಿದರೆ ನೀವು ತಪ್ಪು ದಾರಿಯಲ್ಲಿದ್ದೀರಿ ಎಂದು ಹೇಳಬಹುದು, ನೀವು ಆಯ್ಕೆ ಮಾಡಿದ ವ್ಯಕ್ತಿ ಸರಿ ಇಲ್ಲ ಎಂದು ಸಹ ಹೇಳಬಹುದು. ಆದರೆ ನಮ್ಮ ಮನಸು ಮಾತ್ರ ನಾವು ಆಯ್ಕೆ ಮಾಡಿದ ವ್ಯಕ್ತಿ ಸರಿಯಾಗಿದ್ದಾರೆ ಎನ್ನುತ್ತಾ ಅದೇ ಸಂಬಂಧದಲ್ಲಿ ಉಳಿಯುತ್ತಾರೆ.

89

ಮೆದುಳಿನ ಬಗ್ಗೆ ಹೇಳೋದಾದ್ರೆ, ಮಾನವನ ಮೆದುಳು ಯಾವಾಗಲೂ ಅವನಿಗೆ ಪರಿಚಿತವೆಂದು ತೋರುವ ವಿಷಯಗಳತ್ತ ಆಕರ್ಷಿತವಾಗಿರುತ್ತದೆಯೇ ಹೊರತು ಅವರಿಗೆ ತಕ್ಕುದಾದ ಅಥವಾ ಸೂಕ್ತವಾದ ವಿಷ್ಯಗಳತ್ತ ಮನಸ್ಸು ಆಕರ್ಷಿತವಾಗೋದಿಲ್ಲ. 

99

ಅದಕ್ಕಾಗಿಯೇ ಮಕ್ಕಳ ಮನಸ್ಸು ತುಂಬಾ ಮೃದುವಾಗಿರುತ್ತದೆ, ಅದನ್ನು ಸರಿಯಾದ ಪರಿಸರದಲ್ಲಿ ಬೆಳೆಸುವುದು ಬಹಳ ಮುಖ್ಯ. ಏಕೆಂದರೆ ಈ ವಿಷಯಗಳು ನಂತರ ಅವನ ವ್ಯಕ್ತಿತ್ವವನ್ನು ರೂಪಿಸುತ್ತವೆ. ತಪ್ಪಾದ ವಾತಾವರಣದಲ್ಲಿ ಬೆಳೆದ ಮಗು ಮತ್ತೆ ಅದೇ ತಪ್ಪನ್ನು ಮಾಡುತ್ತದೆ. 

Read more Photos on
click me!

Recommended Stories