2ನೇ ವಿವಾಹ ವಾರ್ಷಿಕೋತ್ಸವ ಆಚರಿಸ್ತಿರುವ ಬಾಲಿವುಡ್ ಜೋಡಿಗೆ ಡಬ್ಬಲ್ ಖುಷಿ

First Published | Dec 10, 2023, 12:11 PM IST

ಬಾಲಿವುಡ್ ನಟಿ ಕತ್ರೀನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ತಮ್ಮ 2ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಪರಸ್ಪರ ಮುದ್ದಾಗಿ ವಿಶ್ ಮಾಡಿಕೊಂಡಿರುವ ಈ ಜೋಡಿಯ  ವಿವಾಹ ವಾರ್ಷಿಕೋತ್ಸವಕ್ಕೆ ಡಬ್ಬಲ್ ಖುಷಿ ನೀಡಿದೆ ಈ ವಿಚಾರ, ಏನದು ಇಲ್ಲಿದೆ ನೋಡಿ ಡಿಟೇಲ್‌

ಬಾಲಿವುಡ್ ನಟಿ ಕತ್ರೀನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ತಮ್ಮ 2ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಈ ವಿವಾಹ ವಾರ್ಷಿಕೋತ್ಸವಕ್ಕೆ ಡಬ್ಬಲ್ ಖುಷಿ ತಂದು ಕೊಟ್ಟಿರುವುದು ಕತ್ರೀನಾ ಕೈಫ್ ಅವರ ಮಾಲೀಕತ್ವದ ಕೇ ಬ್ಯೂಟಿ.

ಬಾಲಿವುಡ್ ನಟಿ ಕತ್ರೀನಾ ಕೈಫ್ ಈಗ ಬರೀ ನಟಿ ಅಲ್ಲ ಅವರೊಬ್ಬ ಯಶಸ್ವಿ ಬ್ಯುಸಿನೆಸ್ ವುಮನ್ ಕೂಡ ಹೌದು. ಕೆಲ ವರ್ಷಗಳ ಹಿಂದೆ ಅವರು ಸ್ಥಾಪಿಸಿದ ಕೇ ಬ್ಯೂಟಿಗೆ ಈಗ  ಬ್ರೇಕ್ ಔಟ್ ಬ್ರಾಂಡ್  ಆಫ್ ದಿ ಈಯರ್ ಪ್ರಶಸ್ತಿ ಲಭಿಸಿದೆ.

Tap to resize

ಬಾಲಿವುಡ್ ನಟಿ ಕತ್ರೀನಾ ಕೈಫ್ ಈಗ ಬರೀ ನಟಿ ಅಲ್ಲ ಅವರೊಬ್ಬ ಯಶಸ್ವಿ ಬ್ಯುಸಿನೆಸ್ ವುಮನ್ ಕೂಡ ಹೌದು. ಕೆಲ ವರ್ಷಗಳ ಹಿಂದೆ ಅವರು ಸ್ಥಾಪಿಸಿದ ಕೇ ಬ್ಯೂಟಿಗೆ ಈಗ  ಬ್ರೇಕ್ ಔಟ್ ಬ್ರಾಂಡ್  ಆಫ್ ದಿ ಈಯರ್ ಪ್ರಶಸ್ತಿ ಲಭಿಸಿದೆ.

ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿರುವ ಕತ್ರೀನಾ ತಾನು ಈ ಪ್ರಶಸ್ತಿಯಿಂದ ತುಂಬಾ ಖುಷಿ ಥ್ರಿಲ್ ಆಗಿದ್ದು, ನಮ್ಮ ಬ್ರಾಂಡ್‌ನ್ನು ನಂಬಿದ ಗ್ರಾಹಕರಿಗೆ ಧನ್ಯವಾದಗಳು ಎಂದು ಕೇಳಿದ್ದಾರೆ. ಕೇ ಬ್ಯೂಟಿ ಒಂದು ಕಾಸ್ಮೆಟಿಕ್ ಉದ್ಯಮವಾಗಿದ್ದು, ದೇಶಾದ್ಯಂತ ಇಂದು ಹಲವಾರು ಶಾಖೆಗಳನ್ನು ಹೊಂದಿದೆ. 

ಇನ್ನು ಕತ್ರೀನಾ ಪತಿ ನಟ ವಿಕ್ಕಿ ಕೌಶಲ್ ತಮ್ಮ 2ನೇ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮುದ್ದಿನ ಪತ್ನಿಗೆ ಮುದ್ದಾಗಿ ಶುಭ ಕೋರಿದ್ದು,  ವೀಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಫ್ಲೈಟ್‌ನಲ್ಲೇ ಆಗ್ಲಿ ಜೀವನದಲ್ಲೇ ಆಗ್ಲಿ ಸದಾ ಮನೋರಂಜಿಸುತ್ತಿರುವೆ ಲವ್ ಯೂ ಬ್ಯೂಟಿಫುಲ್ ಎಂದು ಶುಭ ಹಾರೈಸಿದ್ದಾರೆ.

ಕತ್ರೀನಾ ಕೂಡ ಗಂಡನನ್ನು ತಬ್ಬಿಕೊಂಡಿರುವ ಫೋಟೋವೊಂದನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿ ಮೈ ಲವ್ ಎಂದು ಹಾರ್ಟ್ ಇಮೋಜಿ ಹಾಕಿದ್ದಾರೆ.  ಇನ್ನು ಬಾಲಿವುಡ್‌ನ ಅನೇಕ ತಾರೆಯರು ಕೂಡ ಈ ಬ್ಯೂಟಿಫುಲ್ ಜೋಡಿಗೆ ಶುಭ ಹಾರೈಸಿದ್ದಾರೆ. 

ನಟಿ ಪ್ರಿಯಾಂಕಾ ಛೋಪ್ರಾ, ಅಮಿತಾಭ್ ಪುತ್ರಿ ಶ್ವೇತಾ ಬಚ್ಚನ್, ನಿರ್ಮಾಪಕಿ ಜೋಯಾ ಅಕ್ತರ್ ಸೇರಿದಂತೆ ಅನೇಕ ಗಣ್ಯರು ಈ ಹೃದಯದ ಇಮೋಜಿಯ ಜೊತೆ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಹಾರೈಸಿದ್ದಾರೆ. 

ಕತ್ರೀನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ಅವರು ರಾಜಸ್ಥಾನದಲ್ಲಿ 20201 ಡಿಸೆಂಬರ್‌ನಲ್ಲಿ ವಿವಾಹವಾಗಿದ್ದರು.  ಇನ್ನು ಇವರ ಸಿನಿಮಾಗೆಬರುವುದಾದರೆ ಕತ್ರೀನಾ ಹಾಗೂ ಸಲ್ಮಾನ್ ಖಾನ್ ನಟನೆಯ ಟೈಗರ್ 3 ಚಿತ್ರ ಬಾಕ್ಸಾಫೀಸ್‌ನಲ್ಲಿ ಒಳ್ಳೆ ಗಳಿಕೆ ಮಾಡಿದೆ.

ಇತ್ತ ನಟ ವಿಕ್ಕಿ ಕೌಶಲ್ ಅವರ ಶಾಮ್ ಬಹದೂರ್ ಸಿನಿಮಾವೂ ಡಿಸೆಂಬರ್ 1 ರಂದು  ಬಿಡುಗಡೆಯಾಗಿದ್ದು ಥಿಯೇಟರ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. 

Latest Videos

click me!