1995ರಲ್ಲಿ ಬಿಡುಗಡೆಯಾದ ಈ ಕನ್ನಡ ಸಿನಿಮಾ ಬರೋಬ್ಬರಿ 832 ಬಾರಿ ಮರು ಬಿಡುಗಡೆಯಾಗಿ ಲಿಮ್ಕಾ ದಾಖಲೆ ಬರೆದಿದೆ. 70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರ ಸುಮಾರು 300 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಚಿತ್ರ ಸ್ಯಾಂಡಲ್‌ವುಡ್‌ನ ಟಾಪ್ ಸಿನಿಮಾಗಳಲ್ಲಿ ಒಂದಾಗಿದೆ.
ಸಿನಿಮಾವೊಂದು ಒಂದು, ಎರಡು ಅಥವಾ 10 ಬಾರಿ ಮರುಬಿಡುಗಡೆಯಾಗಬಹುದು. ಇಂದು ನಾವು ಹೇಳುತ್ತಿರುವ ಕನ್ನಡದ ಸಿನಿಮಾ ಬರೋಬ್ಬರಿ 832 ಬಾರಿ ಮರು ಬಿಡುಗಡೆಯಾಗಿದೆ. ಅಂದು ಈ ಸಿನಿಮಾ ಸಿದ್ಧವಾಗೋಕೆ 70 ಲಕ್ಷ ರೂ.ಗಳಷ್ಟು ಖರ್ಚು ಆಗಿತ್ತು. ವೀಕ್ಷಕರ ಒತ್ತಾಯದ ಮೇರೆಗೆ ಮರು ಬಿಡುಗಡೆಯಾದ ಈ ಸಿನಿಮಾದ ಒಟ್ಟು ಕಲೆಕ್ಷನ್ ಅಂದಾಜು 300 ಕೋಟಿ ರೂ. ಆಗುತ್ತದೆ.
25
1995ರಲ್ಲಿ ಬಿಡುಗಡೆಯಾದ ಸಿನಿಮಾ
19ನೇ ಮೇ 1995ರಂದು ಬಿಡುಗಡೆಯಾದ ಈ ಸಿನಿಮಾ ಗಾಂಧಿನಗರದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ಇದಕ್ಕೆ ಕಾರಣ ಹಲವು ಹೊಸತನಗಳಿಗೆ ಈ ಸಿನಿಮಾ ಸಾಕ್ಷಿಯಾಗಿತ್ತು. ಬೆಂಗಳೂರಿನ ಕಪಾಲಿ ಥಿಯೇಟರ್‌ನಲ್ಲಿಯೇ ಈ ಸಿನಿಮಾ ಸುಮಾರು 32 ಬಾರಿ ಮರು ಬಿಡುಗಡೆಯಾಗಿತ್ತು. ಕನ್ನಡದ ಈ ಸಿನಿಮಾ ಇಂದಿಗೂ ಸ್ಯಾಂಡಲ್‌ವುಡ್‌ನ ಟಾಪ್ ಚಲನಚಿತ್ರಗಳಲ್ಲಿ ಒಂದಾಗಿದೆ. ಹಾಗಾದ್ರೆ ಯಾವುದು ಈ ಸಿನಿಮಾ ಎಂದು ನೋಡೋಣ ಬನ್ನಿ.
35
ಶಿವರಾಜ್‌ಕುಮಾರ್-ಉಪೇಂದ್ರ ಕಾಂಬಿನೇಷನ್
ಶಿವರಾಜ್‌ಕುಮಾರ್, ಪ್ರೇಮಾ ನಟನೆಯ 'ಓಂ' ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಅವರೇ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದರು. ನಂತರ 1997ರಲ್ಲಿ 'ಓಂಕಾರ' ಹೆಸರಿನಿಂದ ತೆಲಗು ಭಾಷೆಗೆ ರಿಮೇಕ್ ಆಗಿತ್ತು. ಪ್ರತಿ ಎರಡು ವಾರಗಳಿಗೊಮ್ಮೆ ಮರು ಬಿಡುಗಡೆ ಆಗುವ ಮೂಲಕ ಕನ್ನಡದ ಕಲ್ಟ್ ಸಿನಿಮಾ ಆಗಿದೆ. ಹೆಚ್ಚು ಬಾರಿ ಮರು ಬಿಡುಗಡೆಯಾದ ಲಿಮ್ಕಾ ದಾಖಲೆಯನ್ನು ಓಂ ಸಿನಿಮಾ ಹೊಂದಿದೆ.
ಉಪೇಂದ್ರ ಅವರು ಸಿನಿಮಾದ ನೈಜತೆಯನ್ನು ತೆಗೆದುಕೊಂಡು ಬರುವ ದೃಷ್ಟಿಯಲ್ಲಿ ನಿಜವಾದ ರೌಡಿಶೀಟರ್‌ಗಳನ್ನೇ ಕರೆದುಕೊಂಡು ಕ್ಯಾಮೆರಾ ಮುಂದೆ ನಿಲ್ಲಿಸಲಾಗಿತ್ತು. ಇಷ್ಟು ಮಾತ್ರವಲ್ಲ ನಟಿ ಪ್ರೇಮಾ ಅವರಿಗೆ ದೊಡ್ಡಮಟ್ಟದ ಜನಪ್ರಿಯತೆಯನ್ನು ಸಿನಿಮಾ ತಂದುಕೊಟ್ಟಿತ್ತು. ಪಾರ್ವತಮ್ಮ ರಾಜ್‌ಕುಮಾರ್ ಅವರೇ ಬಂಡವಾಳ ಹೂಡಿಕೆ ಮಾಡಿ, ವಜ್ರೇಶ್ವರಿ ಬ್ಯಾನರ್ ಅಡಿ ಸಿನಿಮಾ ನಿರ್ಮಾಣ ಮಾಡಿದ್ದರು.
ಇತ್ತೀಚೆಗೆ ಸೂಪರ್ ಹಿಟ್ ಸಿನಿಮಾಗಳು ರಿ-ರಿಲೀಸ್ ಆಗುವ ಟ್ರೆಂಡ್ ಶುರುವಾಗಿದೆ. ಇತ್ತೀಚೆಗಷ್ಟೇ ಅಪ್ಪು, ಅಭಿ, ಮೆಜೆಸ್ಟಿಕ್, ಜಗಮೆಚ್ಚಿದ ಮಗ, ಸಂಪತ್ತಿಗೆ ಸವಾಲ್, ಮಯೂರ ಸೇರಿದಂತೆ ಹಲವು ಸಿನಿಮಾಗಳು ಮರು ಬಿಡುಗಡೆಯಾಗಿವೆ. ಕನ್ನಡ ಮಾತ್ರವಲ್ಲ ಹಿಂದಿ ಭಾಷೆಯ ಸಿನಿಮಾಗಳು ಮರು ಬಿಡುಗಡೆಯಾಗುವ ದಾಖಲೆಯನ್ನು ಬರೆಯುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.