2005ರಲ್ಲಿ ಕೇವಲ 4 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಸೂಪರ್ ಹಿಟ್ ಕನ್ನಡ ಸಿನಿಮಾ. ಈ ಚಿತ್ರದ ಕ್ಲೈಮ್ಯಾಕ್ಸ್ ವೀಕ್ಷಕರ ಕಣ್ಣಲ್ಲಿ ನೀರು ತರಿಸುತ್ತದೆ. ಈ ಎಮೋಷನಲ್ ಸಿನಿಮಾವನ್ನು ಈಗ ಒಟಿಟಿಯಲ್ಲಿ ವೀಕ್ಷಿಸಬಹುದು.
ಸಿನಿಮಾವೊಂದು ಗೆಲ್ಲಬೇಕಾದ್ರೆ ವೀಕ್ಷಕರು ಥಿಯೇಟರ್‌ನಿಂದ ಹೇಗೆ ಹೊರಗೆ ಹೋಗ್ತಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಸಿನಿಮಾ ಸ್ಟೈಲಿನಲ್ಲಿ ಹೇಳಬೇಕೆಂದ್ರೆ ಬಹುತೇಕ ನಿರ್ದೇಶಕರು ಹ್ಯಾಪಿ ಎಂಡಿಂಗ್ ನೀಡಲು ಪ್ರಯತ್ನಿಸುತ್ತಾರೆ. ಆದ್ರೆ ಕನ್ನಡದ ಒಂದಿಷ್ಟು ಸಿನಿಮಾಗಳು, ವೀಕ್ಷಕರ ಹೃದಯವನ್ನು ಭಾರವಾಗಿಸಿ, ಕಣ್ಣಂಚಲಿ ಕಣ್ಣೀರು ತರಿಸಿ, ನೂರಾರು ಕೋಟಿ ಕಲೆಕ್ಷನ್ ಮಾಡಿರುವ ಉದಾಹರಣೆಗಳಿವೆ.
25
4 ಕೋಟಿಯ ಸಿನಿಮಾ ಗಳಿಸಿದ್ದು 30 ಕೋಟಿ
ಇಂದು ನಾವು ಹೇಳುತ್ತಿರೋದು ಅಂತಹವುದೇ ಒಂದು ಸಿನಿಮಾ ಆಗಿದೆ. 2005ರಲ್ಲಿ ಬಿಡುಗಡೆಯಾದ ಈ ಸಿನಿಮಾ ಕೇವಲ 4 ಕೋಟಿ ಬಜೆಟ್‌ನಲ್ಲಿ ನಿರ್ಮಾಣವವಾಗಿತ್ತು. ವರದಿಗಳ ಪ್ರಕಾರ, ಈ ಸಿನಿಮಾ ಅಂದು 100 ದಿನ ಪ್ರದರ್ಶನ ಕಾಣೋದರ ಜೊತೆಯಲ್ಲಿ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇಂದಿಗೂ ಚಿತ್ರದ ಕ್ಲೈಮ್ಯಾಕ್ಸ್ ನೋಡಿದ್ರೆ ಮನಸ್ಸು ಭಾರವಾಗುತ್ತದೆ.
35
ಯಾವುದು ಈ ಸಿನಿಮಾ?
ಶಿವರಾಜ್‌ಕುಮಾರ್ ಅಭಿನಯದ 'ಜೋಗಿ' ಸಿನಿಮಾ ನೋಡಿದವರು ಕಣ್ಣೀರು ಹಾಕುತ್ತಲೇ ಥಿಯೇಟರ್‌ನಿಂದ ಹೊರ ಬಂದಿದ್ದರು. ಜೋಗಿ ಸಿನಿಮಾದ ನಿರ್ದೇಶಕರಾದ ಪ್ರೇಮ್ ಚಿತ್ರದ ಬಗ್ಗೆ ಮಾತನಾಡುವಾಗ, ಕ್ಲೈಮ್ಯಾಕ್ಸ್ ಬಗ್ಗೆ ಹಲವರು ತಮ್ಮದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಆದ್ರೆ ನಾನು ಮಾತ್ರ ನನ್ನದೇ ಕ್ಲೈಮ್ಯಾಕ್ಸ್‌ಗೆ ಬದ್ಧವಾಗಿದ್ದೆ ಎಂದು ಹೇಳಿದ್ದರು.
ಮಗನನ್ನು ಹುಡುಕಿ ಹಳ್ಳಿಯಿಂದ ಬೆಂಗಳೂರಿಗೆ ತಾಯಿ ಬರುತ್ತಾಳೆ. ಇಬ್ಬರ ಭೇಟಿ ಮೇಲೆಯೇ ಸಿನಿಮಮಾದ ಕಥೆ ನಿಂತಿದೆ. ಅಂತಿಮವಾಗಿ ಮಳೆಯಲ್ಲಿ ನೆನೆದು ಸಾಯುವ ತಾಯಿ, ಅನಾಥ ಹೆಣವಾಗುತ್ತಾಳೆ. ಇಷ್ಟೇ ಮಾತ್ರವಲ್ಲ ಅಂತಿಮ ಮೆರವಣಿಗೆ ವೇಳೆ ಮಗನೇ ನಾಲ್ಕು ಹೆಜ್ಜೆ ಹಾಕುತ್ತಾನೆ. ಆದ್ರೆ ಅದು ತನ್ನ ತಾಯಿಯ ಶವ ಎಂದು ನಾಯಕನಿಗೆ ಗೊತ್ತಿರಲ್ಲ.
55
OTTಯಲ್ಲಿ ಸಿನಿಮಾ ಲಭ್ಯ
ಅಂತಿಮವಾಗಿ ತಾಯಿಯ ಮುಖವನ್ನು ಚಿತ್ರದ ಹೀರೋ ಮಾದೇಶ ನೋಡ್ತಾನಾ ಅಥವಾ ಅದು ತನ್ನ ತಾಯಿಯ ಹೆಣ ಎಂದು ಹೇಗೆ ಗೊತ್ತಾಗುತ್ತೆ ಅನ್ನೋದು ಸಿನಿಮಾ ಸೂಪರ್ ಕ್ಲೈಮ್ಯಾಕ್ಸ್ ಆಗಿದೆ. ಕೊನೆಯ ನಾಲ್ಕೈದು ನಿಮಿಷದ ದೃಶ್ಯ ಮತ್ತು ಶಿವರಾಜ್‌ಕುಮಾರ್ ನಟನೆ ನಿಮ್ಮನ್ನು ಕಣ್ಣೀರಿನ ಬಾಹುಗಳಲ್ಲಿ ಬಂಧಿಸುತ್ತದೆ. ಈ ಸಿನಿಮಾ Zee5 ಅಥವ Airtel Xstream Play ಪ್ಲಾಟ್‌ಫಾರಂನಲ್ಲಿ ವೀಕ್ಷಿಸಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.