ಭಾರತದ ಮಹಾನಗರಗಳಲ್ಲಿ ಒಂದು ಮುಂಬೈ. ಈ ಬೃಹತ್ ನಗರಕ್ಕೆ ವಿದ್ಯಾಭ್ಯಾಸ, ಉದ್ಯೋಗದ ನೆಪದಲ್ಲಿ ದಿನಕ್ಕೆ ಸಾವಿರಾರು ಮಂದಿ ಬರುತ್ತಾರೆ. ಪ್ರಖ್ಯಾತ ಉದ್ಯಮಿಗಳು, ಸೆಲೆಬ್ರಿಟಿಗಳು, ರಾಜಕಾರಣಿಗಳು ಇದೇ ನಗರದಲ್ಲಿ ವಾಸಿಸುತ್ತಾರೆ. ಆದ್ರೆ ಮುಂಬೈನಲ್ಲಿ ಐಷಾರಾಮಿ, ಅತ್ಯಂತ ಕಾಸ್ಟ್ಲೀ ಮನೆ ಹೊಂದಿರೋದು ಇವರ್ಯಾರೂ ಅಲ್ಲ..ಮತ್ಯಾರು?
ಭಾರತದ ಕನಸಿನ ನಗರವಾದ ಮುಂಬೈನಲ್ಲಿ ಐಷಾರಾಮಿ ಮನೆಯನ್ನು ಖರೀದಿಸುವುದು ದೇಶದ ಸಾವಿರಾರು ಜನರ ಆಸೆಯಾಗಿದೆ. ಆದರೆ ಅದೆಷ್ಟೋ ಮಂದಿಯ ಪಾಲಿಗೆ ಈ ಮಹಾನಗರದಲ್ಲಿ ಫ್ಲಾಟ್ ಖರೀದಿಸುವುದು ಕೇವಲ ಕನಸಷ್ಟೇ ಆಗಿ ಉಳಿದಿದೆ. ಕೇವಲ ಸೆಲೆಬ್ರಿಟಿಗಳು, ಉದ್ಯಮಿಗಳು ಮಾತ್ರ ಇಂಥಾ ನಗರಗಳಲ್ಲಿ ಮನೆ ಖರೀದಿಸುತ್ತಾರೆ.
ಆದರೆ ಮುಂಬೈನ ಅತೀ ದುಬಾರಿಯ ಒಡೆತನ ಇರೋದು ಯಾವುದೇ ಸೆಲೆಬ್ರಿಟಿ ಅಥವಾ ರಾಜಕಾರಣಿ ಬಳಿಯಲ್ಲ. ಬದಲಿಗೆ, ಐಷಾರಾಮಿ ಗೃಹಾಲಂಕಾರ ಬ್ರಾಂಡ್ ಮೈಸನ್ ಸಿಯಾದ ಫ್ಯಾಶನ್ ಡಿಸೈನರ್ ಮತ್ತು ಸಿಇಒ ಆಗಿರುವ ವ್ರತಿಕಾ ಗುಪ್ತಾ, ಮುಂಬೈನಲ್ಲಿ 116 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.
ಮುಂಬೈನ ಲೋವರ್ ಪರೇಲ್‌ನಲ್ಲಿರುವ ಕಟ್ಟಡ ಸಂಕೀರ್ಣದ 49 ನೇ ಮಹಡಿಯಲ್ಲಿ ಫ್ಲಾಟ್ ಇದೆ. ಮಾರಾಟ ಒಪ್ಪಂದದ ಪ್ರಕಾರ, ಖರೀದಿದಾರರು ಈ ಒಪ್ಪಂದಕ್ಕೆ 5.82 ಕೋಟಿ ರೂ. ಹಣವನ್ನು ಪಾವತಿಸಿದ್ದಾರೆ. ಆಸ್ತಿಯನ್ನು ಜನವರಿ 7, 2024 ರಂದು ನೋಂದಾಯಿಸಲಾಗಿದೆ.
ಮುಂಬೈನ ಐಷಾರಾಮಿ ಪ್ರದೇಶದಲ್ಲಿರುವ ಈ ಫ್ಲಾಟ್ 12,138 ಚದರ ಅಡಿಗಳನ್ನು ಹೊಂದಿದೆ. ಹೆಚ್ಚುವರಿಯಾಗಿ, ಅಪಾರ್ಟ್‌ಮೆಂಟ್ ವಾಹನಗಳಿಗೆ ಎಂಟು ಪಾರ್ಕಿಂಗ್ ಸ್ಥಳಗಳೊಂದಿಗೆ ಬರುತ್ತದೆ.
ಪ್ರತಿಷ್ಠಿತ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (ಎನ್‌ಐಎಫ್‌ಟಿ) ಮತ್ತು ಪರ್ಲ್ ಅಕಾಡೆಮಿ ಆಫ್ ಫ್ಯಾಶನ್‌ನಿಂದ ಪದವಿ ಮುಗಿಸಿದ ವ್ರತಿಕಾ ಗುಪ್ತಾ, ಅಂಜುಮನ್ ಫ್ಯಾಶನ್ಸ್ ಲಿಮಿಟೆಡ್‌ನಲ್ಲಿ ಅಪ್ಯಾರಲ್ ಡಿಸೈನರ್ ಆಗಿ ಫ್ಯಾಶನ್ ಜಗತ್ತಿನಲ್ಲಿ ಕೆರಿಯರ್ ಆರಂಭಿಸಿದರು. ಆ ನಂತರ ಹೆಸರಾಂತ ಬ್ರ್ಯಾಂಡ್‌ಗೆ ವಿನ್ಯಾಸ ಮಾಡಲು ಆರಂಭಿಸಿದರು.
2009ರಿಂದ 2011 ರವರೆಗೆ ಡಿಸೈನರ್ ಆಗಿ ಕೆಲಸ ಮಾಡಿದರು. 2022ರಲ್ಲಿ, ಮೈಸನ್ ಸಿಯಾ, ಐಷಾರಾಮಿ ಮನೆ ಅಲಂಕಾರಿಕ ಬ್ರಾಂಡ್ ಸ್ಥಾಪಿಸಿದರು. ಹೀಗೆ ಸದ್ಯ ವ್ರತಿಕಾ ಗುಪ್ತಾ, ಮುಂಬೈನಲ್ಲಿ 116 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ ಎಂದು ತಿಳಿ