ಕಿರುತೆರೆ ನಟಿ ವೈಷ್ಣವಿ ಗೌಡ ಸೀರಿಯಲ್ ಪ್ರಿಯರಿಗೆ ಅಚ್ಚುಮೆಚ್ಚು. ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ನಟಿ, ಆಗಾಗ ತಮ್ಮ ಫೋಟೋಗಳನ್ನ ಅಪ್ಲೋಡ್ ಮಾಡುತ್ತಿರುತ್ತಾರೆ.ಇತ್ತೀಚಿಗೆ ಗೋಲ್ಡನ್ ಸೀರೆಯುಟ್ಟು, ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಝೀ ಕನ್ನಡದಲ್ಲಿ ಪ್ರಸಾರವಾಗ್ತಿರೋ 'ಸೀತಾರಾಮ' ಸೀರಿಯಲ್ನಲ್ಲಿ ಮಿಂಚ್ತಿರೋ ವೈಷ್ಣವಿ ಗೌಡ, ಸೋಷಿಯಲ್ ಮೀಡಿಯಾದಲ್ಲಿ ಯಾವಾಗ್ಲೂ ಆಕ್ಟಿವ್ ಆಗಿರ್ತಾರೆ. ಸೀತಾರಾಮ ಧಾರಾವಾಹಿ ಬಹಳ ಮನೋಜ್ಞವಾಗಿ ಮೂಡಿ ಬರುತ್ತಿದೆ. ಸೀತಾ ಪಾತ್ರದಲ್ಲಿ ನಟಿಸುತ್ತಿರುವ ವೈಷ್ಣವಿ ಗೌಡ ಅವರ ಪಾತ್ರವೂ ಅದ್ಭುತವಾಗಿದೆ.
ವೈಷ್ಣವಿ, ಮಾಡರ್ನ್, ಟ್ರೆಡಿಷನಲ್ ಲುಕ್ನಲ್ಲಿ ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಸದ್ಯ ಗೋಲ್ಡನ್ ಕಲರ್ ಸೀರೆಯಟ್ಟು, ಮಲ್ಲಿಗೆ ಮುಡಿದು ಕ್ಯೂಟ್ ಆಗಿ ಮಿಂಚಿದ್ದಾರೆ. ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ನೆಟ್ಟಿಗರು ಫೋಟೋಗೆ ಲೈಕ್ಸ್, ಹಾರ್ಟ್ ಎಮೋಜಿ ಕಳುಹಿಸಿ ಕೊಟ್ಟಿದ್ದಾರೆ. ಬ್ಯೂಟಿಫುಲ್, ಕ್ಯೂಟ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು 'ಅಪ್ಪಟ ಕನ್ನಡತಿ ನಮ್ಮ ವೈಷ್ಣವಿ ಗೌಡ' ಎಂದು ಕಮೆಂಟಿಸಿದ್ದಾರೆ. ಮತ್ತೊಬ್ಬರು, 'ಕ್ಯೂಟ್ ಸ್ಮೈಲ್' ಎಂದಿದ್ದಾರೆ.
ವೈಷ್ಣವಿ ಸಿಂಪಲ್ ಆಗಿರೋ ಇಯರಿಂಗ್, ನೆಕ್ಲೇಸ್ ಸರ ಹಾಕ್ಕೊಂಡು ಸುಂದರವಾಗಿ ಕಾಣುತ್ತಿದ್ದಾರೆ. ವೈಷ್ಣವಿ ಗೌಡ ಲೇಟೆಸ್ಟ್ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಅಭಿಮಾನಿಗಳು ವೈಷ್ಣವಿ ಫೋಟೋಸ್ಗೆ ಲೈಕ್ಸ್, ಹಾರ್ಟ್ ಎಮೋಜಿ ಸೆಂಡ್ ಮಾಡಿದ್ದಾರೆ. ಇನ್ನು ಕೆಲ ಫ್ಯಾನ್ಸ್, ಲುಕ್ಕಿಂಗ್ ಬ್ಯೂಟಿಫುಲ್, ಕ್ಯೂಟಿ ಪೈ, ಡ್ರೀಮ್ ಗರ್ಲ್, ಸೋ ಕ್ಯೂಟ್ ಎಂದೆಲ್ಲಾ ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೈಷ್ಣವಿ ಗೌಡ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದ್ದು ಅಗ್ನಿಸಾಕ್ಷಿ ಧಾರಾವಾಹಿ. ಅದಾದ ಬಳಿಕ ಬಿಗ್ ಬಾಸ್ ನಲ್ಲೂ ಕೂಡ ಸಕ್ಕತ್ತಾಗಿ ಆಟ ಆಡಿದ್ದಾರೆ.
ವೈಷ್ಣವಿ ಗೌಡ. ಇದೀಗ ಸೀತಾ ರಾಮ ಧಾರಾವಾಹಿ ಕೂಡ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ರಾಮ-ಸೀತಾ, ಸಿಹಿಯ ಕಥೆ ಎಲ್ಲರ ಮನ ಗೆಲ್ಲುತ್ತಿದೆ.