ನನಗೂ ಒಬ್ಬ ಗೆಳೆಯ ಬೇಕು… ಎನ್ನುತ್ತಾ ಬಾಯ್ ಫ್ರೆಂಡ್ ಹುಡುಕೋ ಹುಡುಗಿಯರಿಗೆ ಇಲ್ ಕೇಳಿ!

Published : Jan 12, 2024, 05:22 PM IST

ಟೀನೇಜ್ ಗೆ ಬಂದ್ರು ಅಂದ್ರೆ ತಮಗೆ ಬಾಯ್ ಫ್ರೆಂಡ್ ಬೇಕೇ ಬೇಕು ಅನ್ನೋ ಮನಸ್ಥಿತಿ ಇರೋ ಹುಡುಗೀರ ಸಂಖ್ಯೆ ಹೆಚ್ಚಾದಂತಿದೆ. ನನಗೂ ಒಬ್ಬ ಗೆಳೆಯ ಬೇಕು ಎಂದು ಬಾಯ್ ಫ್ರೆಂಡ್ ಹುಡುಕೋ ಮೊದ್ಲು ನೀವು ರಂಗೀಲಾ ಬೆಡಗಿ ಊರ್ಮಿಳಾ ಮಾತುಗಳನ್ನ ಕೇಳಿಸಿಕೊಳ್ಳಲೇಬೇಕು.   

PREV
111
ನನಗೂ ಒಬ್ಬ ಗೆಳೆಯ ಬೇಕು… ಎನ್ನುತ್ತಾ ಬಾಯ್ ಫ್ರೆಂಡ್ ಹುಡುಕೋ ಹುಡುಗಿಯರಿಗೆ ಇಲ್ ಕೇಳಿ!

ಇತ್ತೀಚಿನ ಟ್ರೆಂಡೋ, ಫ್ಯಾಷನ್ನೋ ಏನೋ ಒಂದೇ ವಯಸ್ಸಿನವರು ಜೊತೆಗಿದ್ದಾಗ, ಅವರು ಹೇಗಿರ್ತಾರೋ ಹಾಗೆ ನಾವು ಇರಬೇಕು ಅನ್ನೋ ಮನಸ್ಥಿತಿ ಜಾಸ್ತಿಯಾಗಿದೆ. ಅದು ಎಷ್ಟ ಮಟ್ಟಿಗೆ ಎಂದರೆ, ಗೆಳತಿಯರಿಗೆ ಬಾಯ್ ಫ್ರೆಂಡ್ (boyfriend) ಇದ್ರೆ ನನಗೂ ಒಬ್ಬ ಬಾಯ್ ಫ್ರೆಂಡ್ ಬೇಕು. ಎನ್ನುವ ಹುಚ್ಚು ಹಂಬಲಕ್ಕೆ ಬಿದ್ದು, ಲವ್ ಮಾಡೋ ಹುಡುಗೀರ ಸಂಖ್ಯೆ ಜಾಸ್ತಿನೇ ಇದೆ. 
 

211

ನೀವು ಇತರರ ಮುಂದೆ ಕೂಲ್ ಆಗಿ ಕಾಣಿಸೋದಕ್ಕೆ ಅಥವಾ ಎಲ್ಲರಿಗೂ ಬಾಯ್ ಫ್ರೆಂಡ್ ಇದ್ದಾರೆ, ನನಗೂ ಬೇಕು ಎನ್ನುವ ಯೋಚನೆಯಲ್ಲಿ ಬಾಯ್ ಫ್ರೆಂಡ್ ಮಾಡ್ಕೊಂಡ್ರೆ ಅದಕ್ಕಿಂತ ದೊಡ್ಡ ತಪ್ಪು ಬೇರಿಲ್ಲ. ಈ ರೀತಿಯ ಒತ್ತಡಕ್ಕೆ ಒಳಗಾಗುವ ಬದಲು ನೀವು ಏನು ಮಾಡಬೇಕೆಂದು ನಿಮಗೆ ಅರ್ಥವಾಗದಿದ್ದರೆ, ನಟಿ ಊರ್ಮಿಳಾ ಮಾತೋಂಡ್ಕರ್ (Urmila Matondkar) ತುಂಬಾನೆ ಉಪಯುಕ್ತ ಎನಿಸೋ ಸಲಹೆ ನೀಡಿದ್ದಾರೆ. 
 

311

ನಟಿ ಹೇಳಿದ್ದೇನು?
ಸಂದರ್ಶನವೊಂದರಲ್ಲಿ, ಊರ್ಮಿಳಾ ರಿಲೇಶನ್ ಶಿಪ್ (Relationship) ವಿಷಯದ ಬಗ್ಗೆ ಧೈರ್ಯದಿಂದ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. "ಕೂಲ್ ಆಗಿ ಕಾಣಲು ಜೀವನದಲ್ಲಿ ಬಾಯ್ ಫ್ರೆಂಡ್ ಹೊಂದಿರೋದು ಬಹಳ ಮುಖ್ಯ ಎಂದು ಯೋಚಿಸೋದು ನಿಜಕ್ಕೂ ದೊಡ್ಡ ತಪ್ಪು  ಎಂದು ಯುವತಿಯರಿಗೆ ಕಿವಿಮಾತು ಹೇಳಿದ್ದಾರೆ ಊರ್ಮಿಳಾ.

411

ಹೌದು, ಜೀವನದ ಒಂದು ಹಂತದಲ್ಲಿ ಬಾಯ್ ಫ್ರೆಂಡ್ (Boy Friend), ಪತಿ ಮತ್ತು ಮಕ್ಕಳು ಬೇಕಾಗಿರೋದು ನಿಜಾ. ಆದರೆ ಮೊದಲು ನಿಮ್ಮ ಜೀವನವನ್ನು ಅನ್ವೇಷಿಸಿ. ಜಗತ್ತಿನಲ್ಲಿ ನೋಡಲು ಮತ್ತು ಅನುಭವಿಸಲು ತುಂಬಾ ಇದೆ. ಎಲ್ಲಕ್ಕಿಂತ ಮೊದಲು ನಿಮ್ಮನ್ನು ನೀವು ಅರ್ಥಮಾಡಿಕೊಳ್ಳಿ. ನೀವು ಏನು ಮಾಡಲು ಬಯಸುತ್ತೀರಿ ಎಂಬುದನ್ನು ಅರ್ಥಮಾಡಿಕೊಳ್ಳಿ. ಜೊತೆ ಯಾವ ವ್ಯಕ್ತಿಯಿಂದ ಅಥವ ಜೀವನದಿಂದ ನೀವು ಏನು ಬಯಸುತ್ತೀರಿ ಅನ್ನೋದನ್ನು ತಿಳಿಯಿರಿ. ನಂತರ ಬಾಯ್ ಫ್ರೆಂಡ್, ಗಂಡ ಎಲ್ಲಾ ಮಾಡ್ಕೊಂಡ್ರೆ ಆಯ್ತು ಅಂತಾರೆ ರಂಗೀಲಾ ಬೆಡಗಿ. 
 

511

ನೀವೇ ನಿರ್ಧಾರ ತೆಗೆದುಕೊಳ್ಳೋದು ಮುಖ್ಯ
ಹಿಂದಿನ ಕಾಲದಲ್ಲಿ, ಮಹಿಳೆಯರಿಗೆ ತನ್ನ ಜೀವನದಲ್ಲಿ ಏನು ಬೇಕು, ಏನು ಬೇಡ ಎಂದು ಯೋಚಿಸುವ ಆಯ್ಕೆಯೂ ಇರಲಿಲ್ಲ, ಆದರೆ ಇಂದು ಅಂತಹ ಪರಿಸ್ಥಿತಿ ಇಲ್ಲ. ಪೋಷಕರು ಸಹ ಮಕ್ಕಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಇನ್ನೊಬ್ಬರನ್ನು ನೋಡಿ ನಿರ್ಧಾರ ತೆಗೆದುಕೊಳ್ಳೋ ಬದಲು ನಿಮ್ಮ ಜೀವನದ ನಿರ್ಧಾರ ನೀವೇ ತೆಗೆದುಕೊಳ್ಳಬೇಕು.
 

611

ತಾನು ತುಂಬಾನೆ ಲೇಟ್ ಆಗಿ ಮದುವೆಯಾಗಿರೋ (marriage) ಬಗ್ಗೆ ಹೇಳಿರೋ ಊರ್ಮಿಳಾ, ನಾನು ಯಾವತ್ತೂ ನನಗೆ ವಯಸ್ಸಾಯ್ತು ಅದಕ್ಕಾಗಿ ಬೇಗ ಮದ್ವೆ ಆಗಬೇಕು ಎಂದು ಯೋಚನೆ ಮಾಡಿ ಮದುವೆಯಾಗೇ ಇಲ್ಲ. ನನ್ನ ಮನಸ್ಸಿಗೆ ಯಾವಾಗ ಮದುವೆ ಆಗಬೇಕು, ನನಗೆ ಸರಿಯಾದ ಹುಡುಗ ಸಿಕ್ಕಿದಾನೆ ಎನಿಸಿತು ಆವಾಗ ಮದುವೆಯಾದೆ ಎಂದಿದ್ದಾರೆ. 
 

711

ಹೆಚ್ಚಿನ ಜನ ಅಂದುಕೊಂಡಿದ್ದಾರೆ 20 - 25 ವಯಸ್ಸಿನ ಒಳಗೆ ಮದುವೆಯಾಗಬೇಕು ಎಂದು. ಆದರೆ ಮದುವೆಯಾಗಲು ವಯಸ್ಸು ನಿರ್ಧರಿಸಿದೋರು ಯಾರು? ಮದುವೆಯಾಗಲು ಇಂತ ವಯಸ್ಸು ಆಗಿರಬೇಕು ಅಂತೇನಿಲ್ಲ. ಈ ಬಗ್ಗೆ ನಿರ್ಧರಿಸುವ ಹಕ್ಕು ಮಹಿಳೆಯರಿಗೆ ಇದೆ. ಮದುವೆ ಮಾತ್ರವಲ್ಲದೆ ಮಕ್ಕಳನ್ನು ಹೊಂದುವ ನಿರ್ಧಾರವನ್ನು ಸಹ ಸಂಪೂರ್ಣವಾಗಿ ಮಹಿಳೆಯರಿಗೆ ಬಿಡಬೇಕು ಎಂದು ನಾನು ನಂಬುತ್ತೇನೆ ಎನ್ನುತ್ತಾರೆ ಊರ್ಮಿಳ. 
 

811

ಹುಡುಗಿಯರಿಗೆ ಊರ್ಮಿಳಾ ನೀಡಿರೋ ಸಲಹೆ ಏನು? 

ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ
ಒಬ್ಬ ಹುಡುಗ ತುಂಬಾನೆ ಚೆನ್ನಾಗಿದ್ದಾನೆ ಅಂತಾ ಆತನನ್ನು ಲವ್ ಮಾಡಿದ್ರೆ, ಅದ್ರಿಂದ ಮುಂದೆ ನಿಮಗೆ ಅಪಾರ ಮಾನಸಿಕ (Mental Stress) ಮತ್ತು ಭಾವನಾತ್ಮಕ ಒತ್ತಡ (Emotional Stress) ಉಂಟಾಗೋದು ಖಚಿತ.  ಚೆನ್ನಾಗಿರೋ ಹುಡುಗರ ಗುಣ ಚೆನ್ನಾಗಿರಬೇಕು ಎಂದು ಹೇಳೋದಕ್ಕೆ ಸಾಧ್ಯವಿಲ್ಲ. ಹಾಗಾಗಿ ಅಂದ, ಚಂದಕ್ಕೂ ಮುನ್ನ ಗುಣಗಳನ್ನು ಇಷ್ಟಪಡಿ, ಇಲ್ಲಾಂದ್ರೆ ಮಾನಸಿಕ ಆರೋಗ್ಯಕ್ಕೆ ಹಾನಿಯಾಗುತ್ತೆ. 

911

ಮೊದಲು ನಿಮ್ಮನ್ನು ಪ್ರೀತಿಸೋಕೆ ಕಲಿಯಿರಿ
ನೀವು ಬೇರೊಬ್ಬರೊಂದಿಗೆ ಸಂಬಂಧ ಬೆಳೆಸುವ ಮೊದಲು ನಿಮ್ಮನ್ನು ಪ್ರೀತಿಸಲು (love yourself) ಕಲಿಯಬೇಕು. ನೀವು ಜೀವನದಿಂದ ಏನು ಬಯಸುತ್ತೀರಿ? ನಿಮ್ಮ ಗುರಿ ಏನು? ನಿಮಗೆ ಯಾವುದು ಮುಖ್ಯ ಮತ್ತು ಯಾವುದು ಮುಖ್ಯವಲ್ಲ? ಯಾವುದು ನಿಮಗೆ ಸಂತೋಷವನ್ನು ನೀಡುತ್ತದೆ ಮತ್ತು ಯಾವುದು ಅಲ್ಲ? ನಿಮಗೆ ನೀವು ಇಂಪಾರ್ಟನ್ಸ್ ಕೋಡ್ತೀರೋ? ಇಲ್ವೋ? ಈ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ.

1011

ಒಮ್ಮೆ ನೀವು ಅಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡ ನಂತರ ಮತ್ತು ನಿಮ್ಮನ್ನು ಪ್ರೀತಿಸಲು ಕಲಿತ ನಂತರ, ನೀವು ಬೇರೊಬ್ಬರೊಂದಿಗೆ ಸಂಬಂಧಕ್ಕೆ ಹೋಗಲು ಸಿದ್ಧರಿದ್ದೀರಾ ಎಂದು ಯೋಚಿಸಿ? ಎಲ್ಲದಕ್ಕೂ ನಿಮ್ಮಲ್ಲಿ ಉತ್ತರ ಸಿಕ್ಕಿದರೆ, ಮತ್ತೆ ರಿಲೇಶನ್ ಶಿಪ್ ನಲ್ಲಿ ಇರೋದಕ್ಕೆ ಯಾರನ್ನೂ ಕೇಳಬೇಕಾಗಿಲ್ಲ.

1111

ಉತ್ತಮ ಸಂಗಾತಿಯನ್ನು ಪಡೆಯುವಿರಿ
ನೀವು ಸಮಾಜದ ಯಾವುದೇ ಒತ್ತಡಕ್ಕೆ ಒಳಗಾಗದೆ ಸಂಗಾತಿಯನ್ನು ಆಯ್ಕೆ ಮಾಡಿದಾಗ, ಪ್ರತಿಯಾಗಿ ಅತ್ಯುತ್ತಮ ಜೀವನ ಸಂಗಾತಿಯನ್ನು ಪಡೆಯುವ ಸಾಧ್ಯತೆಗಳು ತುಂಬಾ ಇವೆ. ಹಾಗಾಗಿ ವಯಸ್ಸಾಯ್ತು ಮದ್ವೆ ಆಗಿ ಅನ್ನೋ ಒತ್ತಡಕ್ಕೆ ತಲೆಕೊಡದೆ, ನಿಮಗೆ ಮದುವೆಯಾಗಬೇಕು ಅನಿಸಿದಾಗ ಒಳ್ಳೆಯ ಹುಡುಗ ಸಿಕ್ಕಾಗ ಮಾತ್ರ ಮದುವೆಯಾಗಿ.

Read more Photos on
click me!

Recommended Stories