Antarctica Facts: ಇಲ್ಲಿ ಒಂದೇ ಒಂದು ಇರುವೆ ಕೂಡ ಇಲ್ಲ.. ಅಷ್ಟಕ್ಕೂ ಯಾಕೆ ಗೊತ್ತಾ?

Published : Jul 17, 2026, 03:56 PM IST

Why no ants in Antarctica: ಇರುವೆಗಳು ಎಲ್ಲೆಂದರಲ್ಲಿ ಇರುತ್ತವೆ. ಮನೆ, ಅಂಗಳ, ರಸ್ತೆ, ಮರಗಳ ಬಳಿ ಹೀಗೆ ಎಲ್ಲಿ ನೋಡಿದರೂ ಹಿಂಡು ಹಿಂಡಾಗಿ ಕಾಣಿಸುತ್ತವೆ. ಆದರೆ ಒಂದು ಜಾಗದಲ್ಲಿ ಮಾತ್ರ ಒಂದೇ ಒಂದು ಇರುವೆ ಕೂಡ ಕಾಣಸಿಗುವುದಿಲ್ಲ. ಅಲ್ಲಿ ಇರುವೆಗಳು ಯಾಕಿಲ್ಲ? ಆ ಜಾಗ ಯಾವುದು ಅಂತ ತಿಳಿಯೋಣ ಬನ್ನಿ.

PREV
15
ಇರುವೆಗಳೇ ಇಲ್ಲದ ಪ್ರದೇಶ

ಇರುವೆಗಳೇ ಇಲ್ಲದ ಪ್ರದೇಶ
ಜಗತ್ತಿನಲ್ಲಿ ನಮಗೆ ಗೊತ್ತಿಲ್ಲದ ಎಷ್ಟೋ ವಿಚಿತ್ರ, ಅಚ್ಚರಿಯ ಜಾಗಗಳಿವೆ. ಸಾಮಾನ್ಯವಾಗಿ ನಮ್ಮ ಸುತ್ತಮುತ್ತ ಎಲ್ಲೆಲ್ಲೂ ಕಾಣಸಿಗುವ ಇರುವೆಗಳು ಒಂದು ಜಾಗದಲ್ಲಿ ಮಾತ್ರ ಇಲ್ಲವೇ ಇಲ್ಲ. ಅದೇ ಜಗತ್ತಿನ ಅತ್ಯಂತ ಶೀತಲ ಖಂಡವಾದ ಅಂಟಾರ್ಕ್ಟಿಕಾ. ಇಲ್ಲಿನ ಕಠಿಣ ವಾತಾವರಣವು ಜೀವಿಗಳ ಉಳಿವಿಗೇ ದೊಡ್ಡ ಸವಾಲಾಗಿದೆ.

25
ತೀವ್ರವಾದ ಚಳಿಯೇ ಕಾರಣ

ತೀವ್ರವಾದ ಚಳಿಯೇ ಕಾರಣ
ಅಂಟಾರ್ಕ್ಟಿಕಾ ಹಿಮದಿಂದ ಆವೃತವಾದ ಖಂಡ. ಇದು ಜಗತ್ತಿನ ಐದನೇ ಅತಿದೊಡ್ಡ ಖಂಡವಾಗಿದ್ದರೂ, ಇಲ್ಲಿನ ಪರಿಸ್ಥಿತಿ ಬೇರೆ ಖಂಡಗಳಿಗಿಂತ ಸಂಪೂರ್ಣ ಭಿನ್ನ. ಈ ಪ್ರದೇಶದ ಹೆಚ್ಚಿನ ಭಾಗ ಯಾವಾಗಲೂ ಮಂಜುಗಡ್ಡೆಯಿಂದಲೇ ಕೂಡಿರುತ್ತದೆ. ಕೆಲವು ಕಡೆ ತಾಪಮಾನ ಸೊನ್ನೆಗಿಂತಲೂ ತುಂಬಾನೇ ಕೆಳಗೆ ಇಳಿಯುತ್ತದೆ. ಇಂತಹ ಕಠಿಣ ಚಳಿಯಲ್ಲಿ ಇರುವೆಗಳಂತಹ ಕೀಟಗಳು ಬದುಕುವುದು ಬಹಳ ಕಷ್ಟ.

35
ಬದುಕಲು ಬೇಕಾದ ಪರಿಸ್ಥಿತಿ ಇಲ್ಲ

ಬದುಕಲು ಬೇಕಾದ ಪರಿಸ್ಥಿತಿ ಇಲ್ಲ
ಇರುವೆಗಳು ಬದುಕಲು ಒಂದು ನಿರ್ದಿಷ್ಟ ವಾತಾವರಣ ಬೇಕು. ಸಾಮಾನ್ಯವಾಗಿ ಅವು ನೆಲದೊಳಗೆ, ಕಲ್ಲುಗಳ ಕೆಳಗೆ, ಮರದ ತೊಗಟೆಗಳಲ್ಲಿ ವಾಸಿಸುತ್ತವೆ. ಆಹಾರಕ್ಕಾಗಿ ಹೊರಗೆ ಬರುತ್ತವೆ. ತಮ್ಮ ದೇಹದ ಉಷ್ಣಾಂಶವನ್ನು ನಿಯಂತ್ರಿಸಲು ಅವು ಸುತ್ತಲಿನ ತಾಪಮಾನವನ್ನೇ ಅವಲಂಬಿಸಿವೆ. ಆದರೆ ಅಂಟಾರ್ಕ್ಟಿಕಾದಲ್ಲಿನ ದಟ್ಟವಾದ ಹಿಮ, ಹೆಪ್ಪುಗಟ್ಟಿದ ನೆಲ ಮತ್ತು ಬಿರುಸಾದ ಗಾಳಿಯಿಂದಾಗಿ ಇರುವೆಗಳಿಗೆ ಬೇಕಾದ ಹವಮಾನ ಇಲ್ಲ.

45
ದೇಹದ ಶಾಖ ಉಳಿಸಿಕೊಳ್ಳಲು ಆಗಲ್ಲ

ದೇಹದ ಶಾಖ ಉಳಿಸಿಕೊಳ್ಳಲು ಆಗಲ್ಲ
ವಿಜ್ಞಾನಿಗಳ ಪ್ರಕಾರ, ಇರುವೆಗಳು ಚಿಕ್ಕ ಗಾತ್ರದ ಜೀವಿಗಳಾದ್ದರಿಂದ ಅವುಗಳ ದೇಹದಲ್ಲಿ ಶಾಖವನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟ. ಅತಿ ಶೀತ ವಾತಾವರಣದಲ್ಲಿ ಅವುಗಳ ಚಲನವಲನ ನಿಧಾನವಾಗುತ್ತದೆ. ಆಹಾರ ಹುಡುಕುವುದು, ಗೂಡು ಕಟ್ಟುವುದು ಅಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ಅಂಟಾರ್ಕ್ಟಿಕಾದಂತಹ ಸ್ಥಳಗಳು ಇರುವೆಗಳಿಗೆ ಸೂಕ್ತವಲ್ಲ.

55
ಪ್ರತಿಯೊಂದು ಜೀವಿಯ ಬದುಕು ವಿಭಿನ್ನ

ಪ್ರತಿಯೊಂದು ಜೀವಿಯ ಬದುಕು ವಿಭಿನ್ನ
ಭೂಮಿಯ ಮೇಲೆ ಪ್ರತಿಯೊಂದು ಜೀವಿಯೂ ಬದುಕಲು ಅದಕ್ಕೆ ಬೇಕಾದ ಹವಮಾನ ಅಗತ್ಯ. ಒಂದು ಪ್ರದೇಶದಲ್ಲಿ ಸುಲಭವಾಗಿ ಬದುಕುವ ಜೀವಿ, ಇನ್ನೊಂದು ಪ್ರದೇಶದಲ್ಲಿ ಬದುಕುಳಿಯಲು ಸಾಧ್ಯವಾಗದೇ ಇರಬಹುದು. ವಾತಾವರಣ, ತಾಪಮಾನ, ಆಹಾರದ ಲಭ್ಯತೆ ಮತ್ತು ವಾಸಸ್ಥಳದಂತಹ ಅಂಶಗಳು ಜೀವಿಗಳ ಬದುಕಿನ ಮೇಲೆ ಪರಿಣಾಮ ಬೀರುತ್ತವೆ. ಅದಕ್ಕಾಗಿಯೇ ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಯೂ ತನಗೆ ಅನುಕೂಲಕರವಾದ ವಾತಾವರಣದಲ್ಲೇ ಬೆಳೆಯುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories