ಸೀಲಿಂಗ್ ಫ್ಯಾನ್ ಫಾಸ್ಟ್ ಆಗಿ ಗಾಳಿ ಬೀಸ್ತಿಲ್ವಾ? ಈ 5 ಟಿಪ್ಸ್ ಫಾಲೋ ಮಾಡಿದ್ರೆ ಹೊಸ Fan ತರ ಗಾಳಿ ಬೀಸುತ್ತೆ

Published : Jul 17, 2026, 02:27 PM IST

Ceiling fan maintenance tips: ನಿಮ್ಮ ಮನೆಯ ಸೀಲಿಂಗ್ ಫ್ಯಾನ್ ವೇಗ ಕಡಿಮೆಯಾಗಿ ಗಾಳಿ ಸರಿಯಾಗಿ ಸಿಗುತ್ತಿಲ್ಲವೇ? ಹೊಸ ಫ್ಯಾನ್ ಖರೀದಿಸಲು ಹಣ ಖರ್ಚು ಮಾಡುವ ಮುನ್ನ ಈ 5 ಸಿಂಪಲ್ ಟಿಪ್ಸ್‌ ಟ್ರೈ ಮಾಡಿ. ಇವು ಹಳೆಯ ಫ್ಯಾನ್ ವೇಗವನ್ನ ಮತ್ತೆ ಹೊಸದರಂತೆ ಹೆಚ್ಚಿಸಲು ಸಹಾಯ ಮಾಡುತ್ತವೆ.

PREV
16
ಹೊಸ ಫ್ಯಾನ್‌ನಂತೆ ಗಾಳಿ ಬೀಸುತ್ತೆ

ಹೊಸ ಫ್ಯಾನ್‌ನಂತೆ ಗಾಳಿ ಬೀಸುತ್ತೆ
ಸೀಲಿಂಗ್ ಫ್ಯಾನ್ ವೇಗ ಕಡಿಮೆಯಾದರೆ ಕಿರಿಕಿರಿ ಉಂಟಾಗುವುದು ಸಹಜ. ಆಗ ಅನೇಕರು ಫ್ಯಾನ್ ಹಳೆಯದಾಗಿದೆ ಎಂದು ಹೊಸ ಫ್ಯಾನ್ ಖರೀದಿಸಲು ಮುಂದಾಗುತ್ತಾರೆ. ಆದರೆ, ಸಣ್ಣಪುಟ್ಟ ಕಾರಣಗಳಿಂದಲೂ ಫ್ಯಾನ್ ವೇಗ ತಗ್ಗಿರಬಹುದು. ಈ ಕೆಳಗಿನ 5 ಸಿಂಪಲ್ ಟಿಪ್ಸ್ ಅನುಸರಿಸುವ ಮೂಲಕ ನಿಮ್ಮ ಹಳೆಯ ಫ್ಯಾನ್ ಕೂಡ ಹೊಸದರಂತೆ ವೇಗವಾಗಿ ಗಾಳಿ ನೀಡುವಂತೆ ಮಾಡಬಹುದು.

26
ಫ್ಯಾನ್ ವೇಗ ಹೆಚ್ಚಿಸಲು 5 ಸುಲಭ ಉಪಾಯ

ಫ್ಯಾನ್ ವೇಗ ಹೆಚ್ಚಿಸಲು 5 ಸುಲಭ ಉಪಾಯ
1. ಕೆಪಾಸಿಟರ್ ಬದಲಿಸಿ
ಫ್ಯಾನ್ ವೇಗವಾಗಿ ಸುತ್ತಲು 'ಕೆಪಾಸಿಟರ್' ಪ್ರಮುಖ ಪಾತ್ರ ವಹಿಸುತ್ತದೆ. ಕಾಲಾನಂತರದಲ್ಲಿ ಇದು ದುರ್ಬಲಗೊಳ್ಳುವುದರಿಂದ ಫ್ಯಾನ್ ಸುಸ್ತಾದಂತೆ ಸುತ್ತಲು ಶುರುವಾಗುತ್ತದೆ. ನಿಮ್ಮ ಫ್ಯಾನ್ ಸ್ಲೋ ಆಗಿದ್ದರೆ, ಮೊದಲು ಕೆಪಾಸಿಟರ್ ಅನ್ನು ಪರಿಶೀಲಿಸಿ ಅಥವಾ ಹೊಸದನ್ನು ಅಳವಡಿಸಿ. ಇದು ಫ್ಯಾನ್ ವೇಗವನ್ನು ತಕ್ಷಣವೇ ಹೆಚ್ಚಿಸುತ್ತದೆ.

36
2. ಸರ್ವೀಸ್ ಮತ್ತು ಗ್ರೀಸಿಂಗ್

2. ಸರ್ವೀಸ್ ಮತ್ತು ಗ್ರೀಸಿಂಗ್
ಏರ್ ಕಂಡೀಷನರ್‌ನಂತೆ ಸೀಲಿಂಗ್ ಫ್ಯಾನ್‌ಗಳಿಗೂ ಸರ್ವೀಸ್ ಅಗತ್ಯವಿದೆ. ಮೋಟಾರ್‌ನಲ್ಲಿ ಗ್ರೀಸ್ ಕಡಿಮೆಯಾದಾಗ ಅಥವಾ ವೈರಿಂಗ್ ಸಡಿಲಗೊಂಡಾಗ ಫ್ಯಾನ್ ಶಬ್ದ ಮಾಡುವುದು ಅಥವಾ ನಿಧಾನವಾಗುವುದು ಸಂಭವಿಸುತ್ತದೆ. ಫ್ಯಾನ್ ಮೋಟಾರ್‌ಗೆ ಸರಿಯಾದ ಸಮಯದಲ್ಲಿ ಆಯಿಲಿಂಗ್ ಅಥವಾ ಗ್ರೀಸಿಂಗ್ ಮಾಡಿಸುವುದರಿಂದ ಅದು ಸುಗಮವಾಗಿ ಓಡುತ್ತದೆ.

46
3. ಧೂಳು ಮತ್ತು ಸ್ವಚ್ಛತೆ

3. ಧೂಳು ಮತ್ತು ಸ್ವಚ್ಛತೆ
ಫ್ಯಾನ್ ಬ್ಲೇಡ್‌ಗಳ (ರೆಕ್ಕೆಗಳ) ಮೇಲೆ ಧೂಳು ಶೇಖರಣೆಯಾದಾಗ ಅದರ ತೂಕ ಹೆಚ್ಚಾಗುತ್ತದೆ ಮತ್ತು ಗಾಳಿಯನ್ನು ಬೀಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಆದ್ದರಿಂದ ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಬ್ಲೇಡ್‌ಗಳನ್ನು ಒದ್ದೆ ಬಟ್ಟೆಯಿಂದ ಸ್ವಚ್ಛಗೊಳಿಸಿ. ಇದರಿಂದ ಗಾಳಿಯ ಹರಿವು ಸುಧಾರಿಸುತ್ತದೆ.

56
4. ವೋಲ್ಟೇಜ್ ಏರಿಳಿತ

4. ವೋಲ್ಟೇಜ್ ಏರಿಳಿತ
ವಿದ್ಯುತ್ ವೋಲ್ಟೇಜ್ ಪದೇ ಪದೇ ಏರಿಳಿತವಾಗುತ್ತಿದ್ದರೆ ಮೋಟಾರ್ ಮೇಲೆ ಒತ್ತಡ ಬೀಳುತ್ತದೆ. ಇದರಿಂದಲೂ ಫ್ಯಾನ್ ವೇಗ ತಗ್ಗಬಹುದು. ನಿಮ್ಮ ಏರಿಯಾದಲ್ಲಿ ವೋಲ್ಟೇಜ್ ಸಮಸ್ಯೆ ಇದ್ದರೆ, ಸ್ಟೆಬಿಲೈಸರ್ ಬಳಸುವುದು ಅಥವಾ ವೈರಿಂಗ್ ಸರಿಪಡಿಸುವುದು ಉತ್ತಮ.

66
5. ಬ್ಲೇಡ್‌ಗಳ ಅಲೈನ್‌ಮೆಂಟ್ ಸರಿಪಡಿಸಿ

5. ಬ್ಲೇಡ್‌ಗಳ ಅಲೈನ್‌ಮೆಂಟ್ ಸರಿಪಡಿಸಿ
ಫ್ಯಾನ್‌ನ ಮೂರು ಬ್ಲೇಡ್‌ಗಳು ಒಂದೇ ಮಟ್ಟದಲ್ಲಿ ಇಲ್ಲದಿದ್ದರೆ ಗಾಳಿ ಸರಿಯಾಗಿ ಸಿಗುವುದಿಲ್ಲ. ಫ್ಯಾನ್ ಬ್ಲೇಡ್ ಮೇಲೆ-ಕೆಳಗೆ ಬಾಗಿದ್ದರೆ ಅವು ಗಾಳಿಯನ್ನು ಸಮರ್ಪಕವಾಗಿ ತಳ್ಳಲು ಸಾಧ್ಯವಾಗುವುದಿಲ್ಲ. ಒಂದು ಇಂಚಿಟೇಪ್ ಹಿಡಿದು ಛಾವಣಿಯಿಂದ ಮೂರು ಬ್ಲೇಡ್‌ಗಳ ಅಂತರವನ್ನು ಅಳೆಯಿರಿ. ಈ ಅಂತರ ಸಮವಾಗಿರಬೇಕು. ಬ್ಲೇಡ್ ಬಾಗಿದ್ದರೆ ಅದನ್ನು ಹಗುರವಾಗಿ ನೇರಗೊಳಿಸಿ.

ಈ ಸರಳ ವಿಧಾನ ಪಾಲಿಸುವ ಮೂಲಕ ನೀವು ಹಣವನ್ನು ಉಳಿಸಬಹುದು ಮತ್ತು ನಿಮ್ಮ ಮನೆಯ ಫ್ಯಾನ್‌ನಿಂದ ತಂಪಾದ ಗಾಳಿಯನ್ನು ಪಡೆಯಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories