ಚಳಿಗಾಲದಲ್ಲಿ ಕರೆಂಟ್‌ ಬಿಲ್‌ ಕಡಿಮೆಯಾಗ್ಬೇಕಾ?, ಗೀಸರ್ ಬಳಸುವ ಮುನ್ನ ಇಷ್ಟು ಮಾಡಿ ಸಾಕು

Published : Dec 02, 2025, 01:20 PM IST

Geyser Electricity Saving Tips: ಈ ಚಳಿಗಾಲದಲ್ಲಿ ನಿಮ್ಮ ಜೇಬು ಖಾಲಿಯಾಗುವುದನ್ನು ತಪ್ಪಿಸಲು ಬಯಸಿದರೆ ಇಂಧನ ದಕ್ಷತೆಯ ಬ್ಯೂರೋ (BEE) ಮತ್ತು ತಜ್ಞರು ಸೂಚಿಸಿರುವ ಈ 3 ಸುಲಭ ಕ್ರಮಗಳನ್ನು ಬೇಗನೆ ಅಳವಡಿಸಿಕೊಳ್ಳಿ. 

PREV
19
ಬಳಸುವ ವಿಧಾನ ಗೊತ್ತಿರಲಿ

ಚಳಿಗಾಲ ಆರಂಭವಾಗುತ್ತಿದ್ದಂತೆ ಮನೆಯ ವಿದ್ಯುತ್ ಬಿಲ್‌ ಬಗ್ಗೆಯೂ ಚಿಂತೆ ಮಾಡಲು ಪ್ರಾರಂಭಿಸುತ್ತೇವೆ. ಇದಕ್ಕೆ ಮೊದಲ ಕಾರಣ ಗೀಸರ್. ಏಕೆಂದರೆ ಮಾಮೂಲಿ ಸಮಯದಲ್ಲೇ ಗೀಸರ್‌ಗಳು ಹೆಚ್ಚಿನ ವಿದ್ಯುತ್ ಬಳಸುತ್ತವೆ. ಇನ್ನು ಚಳಿಗಾಲದಲ್ಲಿ ಹೆಚ್ಚು ಬಿಸಿ ನೀರು ಉಪಯೋಗಿಸುವುದರಿಂದ ಬಿಲ್ ಮತ್ತಷ್ಟು ಹೆಚ್ಚುತ್ತೆ ಅಂತ ನಾವಂದುಕೊಂಡಿದ್ದೇವೆ. ಆದರೆ ತಜ್ಞರು ವಿದ್ಯುತ್ ಬಳಕೆಯು ಗೀಸರ್‌ಗಿಂತ ಅದನ್ನು ಬಳಸುವ ವಿಧಾನವನ್ನು ಅವಲಂಬಿಸಿರುತ್ತದೆ ಎಂದು ನಂಬುತ್ತಾರೆ.

29
3 ಸುಲಭ ಕ್ರಮ

ಆದ್ದರಿಂದ ಈ ಚಳಿಗಾಲದಲ್ಲಿ ನಿಮ್ಮ ಜೇಬು ಖಾಲಿಯಾಗುವುದನ್ನು ತಪ್ಪಿಸಲು ಬಯಸಿದರೆ ಇಂಧನ ದಕ್ಷತೆಯ ಬ್ಯೂರೋ (BEE) ಮತ್ತು ತಜ್ಞರು ಸೂಚಿಸಿರುವ ಈ 3 ಸುಲಭ ಕ್ರಮಗಳನ್ನು ಬೇಗನೆ ಅಳವಡಿಸಿಕೊಳ್ಳಿ.

39
ವಿದ್ಯುತ್ ಬಿಲ್ ಹೆಚ್ಚಾಗಲು ಕಾರಣ

ಹೆಚ್ಚಿನ ಮನೆಗಳಲ್ಲಿ ವಿದ್ಯುತ್ ಬಿಲ್ ಹೆಚ್ಚಾಗಲು ದೊಡ್ಡ ಕಾರಣವೆಂದರೆ ಗೀಸರ್‌ನ ಡೀಫಾಲ್ಟ್ ತಾಪಮಾನ(Default temperature). ಗೀಸರ್ ಥರ್ಮೋಸ್ಟಾಟ್ ಅನ್ನು ಹೆಚ್ಚಾಗಿ 70°C ನಿಂದ 75°C ಗೆ ಹೊಂದಿಸಲಾಗುತ್ತದೆ.

49
ಹೀಗೆ ಹೊಂದಿಸಿ

ತಜ್ಞರ ಪ್ರಕಾರ, ಗೀಸರ್ ತಾಪಮಾನವನ್ನು 50°C ಮತ್ತು 55°C ನಡುವೆ ಹೊಂದಿಸುವುದು ಉತ್ತಮ. ತಾಪಮಾನವನ್ನು 55°C ಗೆ ಹೊಂದಿಸುವುದರಿಂದ ವಿದ್ಯುತ್ ಉಳಿತಾಯವಾಗುವುದಲ್ಲದೆ, ಸ್ನಾನಕ್ಕೆ ಸಾಕಷ್ಟು ಬಿಸಿನೀರು ದೊರೆಯುತ್ತದೆ ಮತ್ತು ಸುಡುವ ಅಪಾಯವನ್ನು ಕಡಿಮೆ ಮಾಡುತ್ತದೆ.

59
ತಕ್ಷಣ ಆಫ್ ಮಾಡಿ

ಸ್ನಾನ ಮಾಡುವ 15-20 ನಿಮಿಷಗಳ ಮೊದಲು ಮಾತ್ರ ಗೀಸರ್ ಅನ್ನು ಆನ್ ಮಾಡಿ ಮತ್ತು ಬಳಸಿದ ತಕ್ಷಣ ಅದನ್ನು ಆಫ್ ಮಾಡುವುದು ಸರಿಯಾದ ವಿಧಾನವಾಗಿದೆ. ಈ ವಿಧಾನವು ವಿದ್ಯುತ್ ಉಳಿತಾಯದಲ್ಲಿ ಅತ್ಯಂತ ಪರಿಣಾಮಕಾರಿ ಎಂದು ಸಾಬೀತಾಗಿದೆ.

69
BEE ಸ್ಟಾರ್ ರೇಟಿಂಗ್ ಇಲ್ಲ ಅಂದ್ರೆ

ನಿಮ್ಮ ಗೀಸರ್ ತುಂಬಾ ಹಳೆಯದಾಗಿದ್ದರೆ ಅಥವಾ BEE ಸ್ಟಾರ್ ರೇಟಿಂಗ್ ಹೊಂದಿಲ್ಲದಿದ್ದರೆ ಅದು ನಿಮ್ಮ ವಿದ್ಯುತ್ ಬಿಲ್ ಅನ್ನು ಹೆಚ್ಚಿಸಬಹುದು.

79
ಈ ಗೀಸರ್ ಪ್ರಯೋಜನ

ಇಂಧನ ದಕ್ಷತೆಯ ಬ್ಯೂರೋ (BEE) ಪ್ರಕಾರ, 5-ಸ್ಟಾರ್ ರೇಟಿಂಗ್ ಹೊಂದಿರುವ ಗೀಸರ್‌ಗಳು ಉತ್ತಮ ಪಫ್ ಇನ್ಸುಲೇಷನ್ ಅನ್ನು ಹೊಂದಿವೆ. ಈ ಇನ್ಸುಲೇಷನ್ ನೀರನ್ನು ದೀರ್ಘಕಾಲದವರೆಗೆ ಬಿಸಿಯಾಗಿರಿಸುತ್ತದೆ. ಗೀಸರ್ ಅನ್ನು ಆಗಾಗ್ಗೆ ಆನ್ ಮಾಡುವ ಅಗತ್ಯವನ್ನು ಕಡಿಮೆ ಮಾಡುತ್ತದೆ.

89
ಸರ್ವೀಸ್ ಮಾಡಿಸಿ

ನೀವು ಹಳೆಯ ಗೀಸರ್ ಬಳಸುತ್ತಿದ್ದರೆ ಅದನ್ನು ಸರ್ವೀಸ್ ಮಾಡಿಸಿ. ನೀರನ್ನು ಬಿಸಿಮಾಡುವ ಸಮಯ ಮತ್ತು ಶಕ್ತಿ ಹೆಚ್ಚುತ್ತೆ.

99
ಅಗತ್ಯವಿದ್ದಾಗ ಮಾತ್ರ ಆನ್ ಮಾಡಿ

ವಿದ್ಯುತ್ ಉಳಿಸಲು ನೀವು ತಣ್ಣೀರಿನ ಸ್ನಾನ ಮಾಡುವ ಅಗತ್ಯವಿಲ್ಲ. ನಿಮ್ಮ ಗೀಸರ್ ತಾಪಮಾನವನ್ನು 55°C ಗೆ ಹೊಂದಿಸಿ. ಅಗತ್ಯವಿದ್ದಾಗ ಮಾತ್ರ ಅದನ್ನು ಆನ್ ಮಾಡಿ ಮತ್ತು ಹಳೆಯ ಗೀಸರ್‌ಗಳನ್ನು ಸರ್ವೀಸ್ ಮಾಡಿಸಿ. ಈ ಸಣ್ಣ ಬದಲಾವಣೆಗಳು ನಿಮ್ಮ ಚಳಿಗಾಲದ ವಿದ್ಯುತ್ ಬಿಲ್ ಅನ್ನು 20-30% ರಷ್ಟು ಕಡಿಮೆ ಮಾಡಬಹುದು.

Read more Photos on
click me!

Recommended Stories