ಗೋಡೆ ಮೇಲೆ ಮಕ್ಕಳು ಗೀಚಿದ್ದಾರಾ? ಬಟ್ಟೆಗೆ ಚ್ಯೂಯಿಂಗ್​ ಗಮ್ ಅಂಟಿದ್ಯಾ? ಚಸ್ಮಕ್ಕೆ ಗೀರು ಬಿದ್ದಿದ್ಯಾ? ಚಿಂತೆ ಬಿಡಿ

Published : Aug 08, 2026, 06:42 PM IST

ಬಟ್ಟೆಗೆ ಅಂಟಿದ ಚ್ಯೂಯಿಂಗ್ ಗಮ್, ಗೋಡೆಯ ಮೇಲಿನ ಗೀಚು, ಕನ್ನಡಕದ ಗೀರು ಮತ್ತು ಬಾಟಲಿಯ ಕೆಟ್ಟ ವಾಸನೆಯಂತಹ ದಿನನಿತ್ಯದ ಸಮಸ್ಯೆಗಳಿಗೆ ಇಲ್ಲಿ ಸುಲಭವಾದ ಮನೆಮದ್ದುಗಳನ್ನು ನೀಡಲಾಗಿದೆ. ಐಸ್, ಕೊಬ್ಬರಿ ಎಣ್ಣೆ, ಆಲೂಗಡ್ಡೆ ರಸ ಮತ್ತು ಉಪ್ಪಿನಂತಹ ಸರಳ ವಸ್ತು ಬಳಸಿ ಹೇಗೆ ಪರಿಹರಿಸಬಹುದು ಎಂದು ವಿವರಿಸಲಾಗಿದೆ

PREV
15
ಪ್ರತಿಯೊಂದು ಸಮಸ್ಯೆಗೆ ಪರಿಹಾರ

ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದೆ ಎನ್ನುವ ಮಾತಿದೆ. ಅದೇ ರೀತಿ, ದಿನನಿತ್ಯ ಮನೆಯಲ್ಲಿ ಆಗುವ ಕೆಲವೊಂದು ಎಡವಟ್ಟುಗಳಿಗೂ ಏನಾದರೂ ಪರಿಹಾರ ಇದ್ದೇ ಇರುತ್ತದೆ. ಮನೆಯಲ್ಲಿ ಮಕ್ಕಳು ಇದ್ದರೆ ಗೋಡೆ ಮೇಲೆ ತಮ್ಮ ಕಲಾಕೃತಿಯನ್ನು ರಚಿಸುವುದು, ಮನಸ್ಸಿಗೆ ಬಂದದ್ದನ್ನೇ ಗೀಚೋದು ಇದ್ದೇ ಇರುತ್ತದೆ. ಇನ್ನು ಚಸ್ಮವನ್ನು ಎಲ್ಲೆಲ್ಲೋ ಇಡುವ ಕಾರಣ, ಗೀರು ಬೀಳುತ್ತದೆ. ಮನೆಯಲ್ಲಿ ಮಕ್ಕಳ ಕಿತಾಪತಿಯಿಂದಲೋ ಅಥವಾ ಶಾಲಾ, ಕಾಲೇಜು, ಕಚೇರಿಗಳಲ್ಲಿ ಸ್ನೇಹಿತರ ಕಿತಾಪತಿಯಿಂದಲೋ ಅಥವಾ ಆಕಸ್ಮಿಕವಾಗಿ ಬಟ್ಟೆಯ ಮೇಲೆ ಚ್ಯೂಯಿಂಗ್​ ಗಮ್​ ಅಂಟಿ ಬಿಟ್ಟರೆ ಸುಲಭದಲ್ಲಿ ಹೋಗುವುದೇ ಇಲ್ಲ. ಅವುಗಳೂ ಸೇರಿದಂತೆ ಕೆಲವೊಂದಕ್ಕೆ ಇಲ್ಲಿ ಸುಲಭದ ಪರಿಹಾರ ನೀಡಲಾಗಿದೆ.

25
ಚ್ಯೂಯಿಂಗ್​ ಗಮ್​ ಅಂಟಿದ್ದರೆ

ಬಟ್ಟೆಯ ಮೇಲೆ ಯಾವುದಾದರೂ ಕಾರಣಕ್ಕೆ ಚ್ಯೂಯಿಂಗ್​ ಗಮ್​ ಅಂಟಿದ್ರೆ, ಅದನ್ನು ಕೀಳಲು ಸಾಧ್ಯವೇ ಇಲ್ಲ. ಎಳೆದಷ್ಟೂ ಎಳೆಯುತ್ತಲೇ ಹೋಗುತ್ತದೆ ಅದು. ಅಂಥ ಸಂದರ್ಭದಲ್ಲಿ, ಒಂದು ಐಸ್​ ತೆಗೆದುಕೊಂಡು ಚ್ಯೂಯಿಂಗ್​ ಗಮ್​ ಮೇಲೆ ಇಟ್ಟು ಉಜ್ಜಿ. ಚ್ಯೂಯಿಂಗ್​ ಗಮ್​ ಗಟ್ಟಿಯಾಗಿ ಮೇಲೆ ಸುಲಭದಲ್ಲಿ ಬರುತ್ತದೆ.

35
ಗೋಡೆ ಮೇಲಿನ ಬರಹ

ಸಾಮಾನ್ಯವಾಗಿ ಮಕ್ಕಳು ಇರುವ ಮನೆಗಳಲ್ಲಿನ ಗೋಡೆಗಳು ಪೆನ್ನು, ಪೆನ್ಸಿಲ್​ಗಳ ತಾಣವಾಗಿರುತ್ತದೆ. ಬೇಡ ಬೇಡ ಎಂದರೂ ಮಕ್ಕಳು ಅದರ ಮೇಲೆ ಗೀಚುವುದು ಸರ್ವೇ ಸಾಮಾನ್ಯ. ಸುಂದರ ಗೋಡೆ ಕಂಡ ತಕ್ಷಣ ಅದರ ಮೇಲೆ ಗೀಚಿಬಿಡೋಣ ಎನ್ನುತ್ತದೆ ಮಕ್ಕಳ ಮನಸ್ಸು. ಇದಕ್ಕಾಗಿ ಪದೇ ಪದೇ ಪೇಂಟ್​ ಮಾಡಿಸುವುದು ಕಷ್ಟವೇ ಸರಿ. ಆದರೆ ಆ ಚಿಂತೆ ಬಿಡಿ. ಇದಕ್ಕೆ ಸುಲಭದ ಉಪಾಯ ಇದೆ. ಅದೇನೆಂದರೆ, ಕೊಬ್ಬರಿ ಎಣ್ಣೆಯನ್ನು ಒಂದು ಬಟ್ಟೆಯ ಮೇಲೆ ಹಾಕಿಕೊಂಡು ಅದನ್ನು ಗೋಡೆಗೆ ಉಜ್ಜಿ. ಇದರಿಂದ ಸುಲಭದಲ್ಲಿ ಎಲ್ಲಾ ಬಣ್ಣಬಣ್ಣದ ಗೀಟುಗಳು ಮಾಯವಾಗುತ್ತವೆ.

45
ಚಸ್ಮದ ಮೇಲೆ ಗೀರು

ಇನ್ನು ಚಸ್ಮದ ವಿಷಯ. ಚಸ್ಮ ಇಲ್ಲದಿದ್ದರೆ ಎಷ್ಟೋ ಮಂದಿಯ ಪಾಡು ಆ ದೇವರೇ ಕಾಪಾಡಬೇಕು. ಆದರೆ ಎಷ್ಟೇ ಚೆನ್ನಾಗಿ ಇಟ್ಟುಕೊಂಡರೂ, ಇದರ ಮೇಲೆ ಗೀರು ಬೀಳುವುದು ಸಹಜ. ಯಾವ್ಯಾವುದೋ ವಸ್ತುಗಳಿಗೆ ತಾಗಿ ಗೀರು ಬಿದ್ದುಬಿಡುತ್ತದೆ. ಅದನ್ನು ಸರಿ ಮಾಡುವ ಉಪಾಯವು ತುಂಬಾ ಸುಲಭ. ಸ್ಪೆಕ್ಟ್​ನ ಗ್ಲಾಸ್​​ಗೆ ಸ್ವಲ್ಪ ಆಲೂಗಡ್ಡೆಯ ರಸವನ್ನು ಹಾಕಿ ಒಣ ಬಟ್ಟೆಯಿಂದ ಉಜ್ಜಿದರೆ ಫಳಫಳ ಹೊಳೆಯುತ್ತದೆ.

55
ಬಾಟಲಿಯಿಂದ ಕೆಟ್ಟ ವಾಸನೆ

ಪ್ಲಾಸ್ಟಿಕ್​ ಬಾಟಲಿಯಿಂದ ಕೆಟ್ಟ ವಾಸನೆ ಬರ್ತಿದ್ಯಾ? ಹಾಗಿದ್ದರೆ ಚಿಂತೆ ಬಿಡಿ. ನೀವು ಮಾಡಬೇಕಿರುವುದು ಇಷ್ಟೇ. ಬಾಟಲಿಗೆ ಸ್ವಲ್ಪ ಉಪ್ಪು ಹಾಕಿ, ಸ್ವಲ್ಪ ಬಿಸಿ ನೀರು ಹಾಕಿ ಅದನ್ನು ಚೆನ್ನಾಗಿ ಅಲ್ಲಾಡಿಸಿ ನೀರು ಎಸೆಯಿರಿ. ವಾಸನೆ ಗಾಯಬ್​.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories