ಚೇಳುಗಳು ಆಹಾರವಿಲ್ಲದೆ ಒಂದು ವರ್ಷ ಮತ್ತು ಉಸಿರಾಟವಿಲ್ಲದೆ ಆರು ದಿನಗಳವರೆಗೆ ಬದುಕಬಲ್ಲವು. ಅಲ್ಲದೆ, ಈ ಜೀವಿಗಳು ಯುವಿ ಲೈಟ್‌ನಲ್ಲಿ ಹೊಳೆಯುತ್ತವೆ ಮತ್ತು 400 ಮಿಲಿಯನ್ ವರ್ಷಗಳಷ್ಟು ಹಳೆಯ ಇತಿಹಾಸವನ್ನು ಹೊಂದಿವೆ.
ಚೇಳುಗಳು ಮರಭೂಮಿ, ತಂಪಾದ ಪ್ರದೇಶಗಳಲ್ಲಿಯೂ ವಾಸಿಸುತ್ತದೆ. ಎಲ್ಲಾ ಹವಾಮಾನಕ್ಕೂ ಚೇಳುಗಳು ಸುಲಭವಾಗಿ ಹೊಂದಿಕೊಳ್ಳುತ್ತವೆ. ನಮ್ಮ ಸುತ್ತಮುತ್ತಲಿರುವ ಚೇಳು ಆಹಾರವಿಲ್ಲದೇ 1 ವರ್ಷ ಬದುಕುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಆರು ದಿನಗಳವರೆಗೆ ಚೇಳುಗಳು ಉಸಿರನ್ನು ಹಿಡಿದಿಟ್ಟುಕೊಳ್ಳುತ್ತದೆ. ಚೇಳುಗಳ ಅಸಾಧಾರಣ ಶಕ್ತಿಗೆ ಕಾರಣ ಏನು ಎಂಬುದನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.
25
6 ದಿನ ಉಸಿರಾಟ
ಚೇಳುಗಳ ದೇಹವು ಬುಕ್ ಲಂಗ್ಸ್ (Book Lungs) ಹೆಸರಿನ ಶ್ವಾಸಕೋಶಗಳನ್ನು ಒಳಗೊಂಡಿರುತ್ತವೆ. ಈ ವಿಶಿಷ್ಟ ರಚನೆಯಿಂದಾಗಿ ಚೇಳುಗಳು ಗಮನಾರ್ಹವಾಗಿ ಉಸಿರಾಟವನ್ನು ನಿಧಾನಗೊಳಿಸುತ್ತದೆ. ಇದರಿಂದ ಆಮ್ಲಜನಕದ ತೆಗೆದುಕೊಳ್ಳುವಿಕೆ ಕ್ರಮೇಣ ಕಡಿಮೆಯಾಗುತ್ತದೆ. ಈ ಕಾರಣದಿಂದ ಉಸಿರಾಟವಿಲ್ಲದೇ ಚೇಳುಗಳು ಬದುಕುವ ಸಾಮರ್ಥ್ಯವನ್ನು ಹೊಂದಿದೆ.
35
ಆಹಾರವಿಲ್ಲದೇ ಬದುಕುವ ಜೀವಿ
ಚೇಳುಗಳ ಜೀರ್ಣಕ್ರಿಯೆ ಅಥವಾ ಚಯಾಪಚಯ ಕ್ರಿಯೆ (Metabolism) ತುಂಬಾನೇ ನಿಧಾನವಾಗಿರುತ್ತದೆ. ಇದರಿಂದಾಗಿ ಚೇಳುಗಳು ಅತ್ಯಧಿಕ ದಿನಗಳವರೆಗೆ ಆಹಾರವಿಲ್ಲದೇ ಬದುಕುತ್ತದೆ. ತನ್ನ ಶಕ್ತಿ ಅಥವಾ ಸಾಮರ್ಥ್ಯವನ್ನು ಕಾಯ್ದುಕೊಳ್ಳಲು ಇಂತಹ ಜೀವಿಗಳು ತಮ್ಮ ಚಟುವಟಿಕೆಯನ್ನು ಕಡಿಮೆ ಮಾಡುತ್ತವೆ.
ಚೇಳುಗಳ ಮತ್ತೊಂದು ವಿಶೇಷತೆ ಏನಂದ್ರೆ ಚೇಳುಗಳು ನೇರಳಾತೀತ ಬೆಳಕಿನಲ್ಲಿ (UV Lights) ನೀಲಿ ಅಥವಾ ಹಸಿರು ಬಣ್ಣದಲ್ಲಿ ಹೊಳೆಯುತ್ತವೆ. ಈ ಪ್ರತಿಬಿಂಬಕ್ಕೆ ಕಾರಣ ಚೇಳುಗಳ ದೇಹದ ರಚನೆ ಕಾರಣ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಸಂಬಂಧ ಇನ್ನು ಸಂಶೋಧನೆಗಳು ನಡೆಯುತ್ತಿವೆ.
ಪಳಿಯುಳಿಕೆಗಳ ಪ್ರಕಾರ, ಚೇಳುಗಳು 400 ಮಿಲಿಯನ್ ವರ್ಷಗಳಿಂದಿವೆ ಎಂದು ಹೇಳಲಾಗುತ್ತದೆ. ಪ್ಯಾಲಿಯಂಟೋಲಜಿಸ್ಟ್‌ಗಳು ಸಿಲೂರಿಯನ್ ಅವಧಿಯ ಪಳಿಯುಳಿಕೆಗಳಲ್ಲಿ ಚೇಳುಗಳು ಪುರಾವೆಗಳು ಸಿಕ್ಕಿವೆ ಎಂದು ವರದಿಯಾಗಿದೆ. ಚೇಳುಗಳು ಅತ್ಯಂತ ಹಳೆಯ ಅರಾಕ್ನಿಡ್ ವಂಶಾವಳಿಗಳಿಗೆ ಸೇರಿವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.