ಉಜ್ಜಿ, ತಿಕ್ಕಿ ತೊಳೆದು ಸಾಕಾಗಿದೆಯಾ? ಈ ಟಿಪ್ಸ್ ಫಾಲೋ ಮಾಡಿದ್ರೆ ಬಾತ್‌ರೂಂ ಗಲೀಜು ನಲ್ಲಿ ಹೊಸದರಂತೆ ಹೊಳೆಯುತ್ತೆ

Published : Jun 03, 2026, 04:47 PM IST

Bathroom maintenance tips: ಎಷ್ಟೇ ಕ್ಲೀನ್ ಮಾಡಿದ್ರೂ ನಲ್ಲಿಗಳ ಮೇಲಿನ ಆ ಗಲೀಜು ಕಲೆಗಳು ಹೋಗುತ್ತಿಲ್ಲ ಎಂದು ಚಿಂತಿಸಬೇಡಿ. ನಿಮ್ಮ ಅಡುಗೆಮನೆಯಲ್ಲಿಯೇ ಇರುವ ವಸ್ತುಗಳನ್ನ ಬಳಸಿ ಕೇವಲ ಐದೇ ನಿಮಿಷದಲ್ಲಿ ಮತ್ತೆ ಹೊಸದರಂತೆ, ಮಿರಮಿರನೆ ಹೊಳೆಯುವಂತೆ ಮಾಡುವ ಸೂಪರ್ ಕಿಚನ್ ಟಿಪ್ಸ್ ಇಲ್ಲಿದೆ! 

PREV
15
ಪರಿಣಾಮಕಾರಿ ಮನೆಮದ್ದುಗಳು

ಪರಿಣಾಮಕಾರಿ ಮನೆಮದ್ದುಗಳು
ಸಾಮಾನ್ಯವಾಗಿ ಜನರು ಬಾತ್‌ರೂಂನ ನೆಲ, ಕಮೋಡ್ ಮತ್ತು ವಾಶ್ ಬೇಸಿನ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಾರೆ. ಆದರೆ ನಲ್ಲಿಗಳನ್ನು (Taps) ಸ್ವಚ್ಛಗೊಳಿಸಲು ಮರೆತುಬಿಡುತ್ತಾರೆ. ನಲ್ಲಿಗಳ ಮೇಲೆ ನಿರಂತರವಾಗಿ ನೀರು ಬೀಳುವುದರಿಂದ ನೀರಿನ ಕಲೆಗಳು ಜಮೆಯಾಗತೊಡಗುತ್ತವೆ. ಇನ್ನು ಕೆಲವು ಬಾರಿ ಸ್ಟೀಲ್ ಗುಣಮಟ್ಟ ಸರಿಯಿಲ್ಲದಿದ್ದರೆ ಅಥವಾ ದೀರ್ಘಕಾಲದವರೆಗೆ ತೇವಾಂಶ ಹಾಗೇ ಉಳಿದರೆ ನಲ್ಲಿಗಳಿಗೆ ತುಕ್ಕು (Rust) ಹಿಡಿಯುತ್ತದೆ. ಈ ತುಕ್ಕು ಬಾತ್‌ರೂಂ ನಲ್ಲಿಗಳು, ಹ್ಯಾಂಡಲ್‌ಗಳು, ಕಿಚನ್ ನಲ್ಲಿಗಳು ಅಥವಾ ನಲ್ಲಿಯ ಫಿಟ್ಟಿಂಗ್ ಇರುವ ಯಾವುದೇ ಜಾಗದಲ್ಲಾದರೂ ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ನಲ್ಲಿಗಳನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ನಲ್ಲಿಗಳ ಮೇಲಿನ ತುಕ್ಕನ್ನು ಸುಲಭವಾಗಿ ನಿವಾರಿಸಿ, ಅವು ಮತ್ತೆ ಹೊಸದರಂತೆ ಹೊಳೆಯುವಂತೆ ಮಾಡಲು ಕೆಲವು ಪರಿಣಾಮಕಾರಿ ಮನೆಮದ್ದುಗಳು ಇಲ್ಲಿದೆ.

25
ನಲ್ಲಿಗಳ ಮೇಲಿರುವ ತುಕ್ಕನ್ನು ನಿವಾರಿಸುವುದು ಹೇಗೆ?

ನಲ್ಲಿಗಳ ಮೇಲಿರುವ ತುಕ್ಕನ್ನು ನಿವಾರಿಸುವುದು ಹೇಗೆ?
ಬಿಳಿ ವಿನೆಗರ್ (White Vinegar)
ಮನೆಯಲ್ಲಿ ಬಳಸುವ ವಿನೆಗರ್ ಸ್ವಚ್ಛಗೊಳಿಸುವ ಕೆಲಸಕ್ಕೆ ಅದ್ಭುತವಾಗಿ ನೆರವಾಗುತ್ತದೆ. ಬಾತ್‌ರೂಂ ನಲ್ಲಿಗೆ ಹಿಡಿದಿರುವ ತುಕ್ಕನ್ನು ಇದರಿಂದ ಸುಲಭವಾಗಿ ಕ್ಲೀನ್ ಮಾಡಬಹುದು. ಇದಕ್ಕಾಗಿ ನಲ್ಲಿಯ ತುಕ್ಕು ಹಿಡಿದ ಜಾಗಕ್ಕೆ ಬಿಳಿ ವಿನೆಗರ್ ಅನ್ನು ಹಚ್ಚಿ ಸ್ವಲ್ಪ ಸಮಯ ಹಾಗೇ ಬಿಡಿ. ನಂತರ ತುಕ್ಕು ಹಿಡಿದ ಭಾಗವನ್ನು ಯಾವುದಾದರೂ ವಸ್ತುವಿನಿಂದ ಹಗುರವಾಗಿ ಕೆರೆದು ತೆಗೆಯಿರಿ. ಬಳಿಕ ಸ್ಕ್ರಬ್ಬರ್ ನೆರವಿನಿಂದ ನಲ್ಲಿಯನ್ನು ಚೆನ್ನಾಗಿ ಉಜ್ಜಿ ತೊಳೆಯಿರಿ. ಇದರಿಂದ ತುಕ್ಕು ಸುಲಭವಾಗಿ ಹಾರ್ಪಾಗುತ್ತದೆ.

35
ನಿಂಬೆಹಣ್ಣು ಮತ್ತು ಉಪ್ಪು (Lemon & Salt)

ನಿಂಬೆಹಣ್ಣು ಮತ್ತು ಉಪ್ಪು (Lemon & Salt)
ತುಕ್ಕು ನಿವಾರಿಸಲು ನಿಂಬೆಹಣ್ಣು ಮತ್ತು ಉಪ್ಪು ಕೂಡ ಒಂದು ಸರಳ ಉಪಾಯವಾಗಿದೆ. ಇದಕ್ಕಾಗಿ ಮೊದಲು ತುಕ್ಕು ಹಿಡಿದಿರುವ ನಲ್ಲಿಯ ಭಾಗಕ್ಕೆ ಉಪ್ಪನ್ನು ಸವರಿ (ಉಪ್ಪಿನಿಂದ ಮುಚ್ಚಿ). ಆ ಉಪ್ಪಿನ ಮೇಲೆ ನಿಂಬೆ ರಸವನ್ನು ಹಿಂಡಿ ಸ್ವಲ್ಪ ಸಮಯ ಹಾಗೇ ಬಿಡಿ. ನಂತರ ಸ್ಕ್ರಬ್ಬರ್ ಬಳಸಿ ಚೆನ್ನಾಗಿ ಉಜ್ಜಿ ಸ್ವಚ್ಛಗೊಳಿಸಿ. ಇದರಿಂದ ತುಕ್ಕು ಹಿಡಿಯುತ್ತಿರುವ ಗಲೀಜು ನಲ್ಲಿಗಳು ಸಂಪೂರ್ಣವಾಗಿ ಕ್ಲೀನ್ ಆಗುತ್ತವೆ.

45
ಬೇಕಿಂಗ್ ಸೋಡಾ (Baking Soda)

ಬೇಕಿಂಗ್ ಸೋಡಾ (Baking Soda)
ಸ್ವಚ್ಛಗೊಳಿಸುವ ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಬೇಕಿಂಗ್ ಸೋಡಾ ಮತ್ತು ನೀರಿನ ಪೇಸ್ಟ್ ಕೂಡ ಒಂದು. ಬೇಕಿಂಗ್ ಸೋಡಾಕ್ಕೆ ಸ್ವಲ್ಪ ನೀರು ಸೇರಿಸಿ ದಪ್ಪನೆಯ ಪೇಸ್ಟ್ ಮಾಡಿಕೊಳ್ಳಿ. ಇದನ್ನು ತುಕ್ಕು ಹಿಡಿದ ಜಾಗಕ್ಕೆ ಚೆನ್ನಾಗಿ ಹಚ್ಚಿ ಕೆಲವು ಗಂಟೆಗಳ ಕಾಲ ಹಾಗೇ ಬಿಡಿ. ಆಮೇಲೆ ಹಳೆಯ ಟೂತ್‌ಬ್ರಷ್ ಬಳಸಿ ಉಜ್ಜಿ ಕ್ಲೀನ್ ಮಾಡಿ. ಇದು ಎಂತಹುದೇ ಹಠಮಾರಿ ತುಕ್ಕನ್ನು ಸಹ ಸುಲಭವಾಗಿ ಹೋಗಲಾಡಿಸುತ್ತದೆ.

55
ಆಲೂಗಡ್ಡೆ ಮತ್ತು ಪಾತ್ರೆ ತೊಳೆಯುವ ಸೋಪ್

ಆಲೂಗಡ್ಡೆ ಮತ್ತು ಪಾತ್ರೆ ತೊಳೆಯುವ ಸೋಪ್
ಕೇಳಲು ಇದು ಸ್ವಲ್ಪ ವಿಚಿತ್ರ ಎನಿಸಿದರೂ, ತುಂಬಾ ಪರಿಣಾಮಕಾರಿ ಉಪಾಯವಾಗಿದೆ. ಇದಕ್ಕಾಗಿ ಒಂದು ಆಲೂಗಡ್ಡೆಯನ್ನು ಮಧ್ಯಕ್ಕೆ ಕತ್ತರಿಸಿಕೊಳ್ಳಿ (ಅರ್ಧ ಕಟ್ ಮಾಡಿ). ಈಗ ಪಾತ್ರೆ ತೊಳೆಯುವ ಸೋಪಿನಲ್ಲಿ (Dishwash bar) ಈ ಆಲೂಗಡ್ಡೆಯನ್ನು ಅದ್ದಿ, ತುಕ್ಕು ಹಿಡಿದ ಜಾಗದ ಮೇಲೆ ಚೆನ್ನಾಗಿ ಉಜ್ಜಿರಿ. ಸ್ವಲ್ಪ ಸಮಯ ಇದನ್ನು ಹಾಗೇ ಬಿಡಿ. ಆಲೂಗಡ್ಡೆ ಮತ್ತು ಸೋಪಿನ ನೊರೆಯ ನಡುವೆ ರಾಸಾಯನಿಕ ಪ್ರಕ್ರಿಯೆ (Chemical Reaction) ನಡೆಯುವುದರಿಂದ ತುಕ್ಕು ಸುಲಭವಾಗಿ ಬಿಟ್ಟುಕೊಳ್ಳುತ್ತದೆ. ಕೊನೆಯಲ್ಲಿ ಒಂದು ಬಟ್ಟೆಯಿಂದ ನಲ್ಲಿಯನ್ನು ಒರೆಸಿ ಕ್ಲೀನ್ ಮಾಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories