ಅಬ್ಬಬ್ಬಾ..55 ಕೋಟಿ ರೂ. ವೆಚ್ಚದಲ್ಲಿ ನಡೆದಿತ್ತು ಕೇರಳದ ಉದ್ಯಮಿಯ ಅದ್ಧೂರಿ ಮದುವೆ

First Published | Mar 31, 2023, 10:44 AM IST

ಮದ್ವೆಗೆ ಅಬ್ಬಬ್ಬಾ ಅಂದ್ರೆ ಎಷ್ಟು ಖರ್ಚು ಮಾಡ್ತಾರೆ. ಜನಸಾಮಾನ್ಯಾರು ಒಂದೆರಡು ಲಕ್ಷ, ಮಧ್ಯಮ ವರ್ಗದವರು ಹತ್ತು ಲಕ್ಷ, ಇಪ್ಪತ್ತು ಲಕ್ಷ ಅಲ್ವಾ. ಶ್ರೀಮಂತರು ಇನ್ನೂ ಸ್ಪಲ್ಪ ಮುಂದಕ್ಕೆ ಹೋಗಿ ಮತ್ತಷ್ಟು ಲಕ್ಷ ಸುರಿಯೋದಿದೆ. ಆದ್ರೆ ಕೇರಳದಲ್ಲಿ ವರ್ಷಗಳ ಹಿಂದೆ ನಡೆದ ಈ ಅದ್ಧೂರಿಗೆ ಮದ್ವೆಗೆ ಬರೋಬ್ಬರಿ 55 ಕೋಟಿ ರೂ. ಖರ್ಚು ಮಾಡಲಾಗಿತ್ತು. ಆ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತೀಯ ಬಿಲಿಯನೇರ್ ಉದ್ಯಮಿ, ಬಿ.ರವಿ ಪಿಳ್ಳೈ ಅವರು 2015ರಲ್ಲಿ ತಮ್ಮ ಪುತ್ರಿ ಆರತಿ ಪಿಳ್ಳೈಯ ವಿವಾಹವನ್ನು ಅದ್ಧೂರಿಯಾಗಿ ನಡೆಸಿದ್ದರು. ಈ ಮದುವೆ ಅದೆಷ್ಟು ಅದ್ಧೂರಿಯಾಗಿ ನಡೆದಿತ್ತು ಎಂದರೆ ಮದ್ವೆ ನಡೆದು ಎಂಟು ವರ್ಷ ಕಳೆದ ನಂತರವೂ ಜನರು ಆ ಮದುವೆ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಕೋಟ್ಯಾಧಿಪತಿ ಉದ್ಯಮಿ ರವಿ ಪಿಳ್ಳೈ ಅವರು ರೂ. ಮಗಳ ಮದುವೆಗೆ ಬರೋಬ್ಬರಿ 55 ಕೋಟಿ ರೂ. ಖರ್ಚು ಮಾಡಿದ್ದರು.

ರವಿ ಪಿಳ್ಳೈ ಅವರ ಮಗಳು, ಆರತಿ ಪಿಳ್ಳೈ ಅವರು ವೃತ್ತಿಯಲ್ಲಿ ವೈದ್ಯರಾದ ಆದಿತ್ಯ ವಿಶು ಅವರನ್ನು ನವೆಂಬರ್ 26, 2015ರಂದು ಕೇರಳದ ಕೊಲ್ಲಂನಲ್ಲಿ ವಿವಾಹವಾದರು. ಮದುವೆಯು ರವಿ ಪಿಳ್ಳೈ ಅವರ ಶ್ರೀಮಂತಿಕೆಯ ಪ್ರದರ್ಶನವಾಗಿತ್ತು. ಮದುವೆ ಸಮಾರಂಭದಲ್ಲಿ 42 ದೇಶಗಳಿಂದ 30,000 ಅತಿಥಿಗಳು ಭಾಗವಹಿಸಿದ್ದರು. ಇದರಲ್ಲಿ ಕತಾರ್‌ನ ರಾಜ ಕುಟುಂಬಗಳೂ ಸೇರಿದ್ದವು.

Tap to resize

ಮೋಹನ್ ಲಾಲ್, ಮಮ್ಮುಟ್ಟಿ ಸೇರಿದಂತೆ ಖ್ಯಾತ ಚಲನಚಿತ್ರ ತಾರೆಯರು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು. ಸ್ಯಾಮ್‌ಸಂಗ್ ಮತ್ತು ಜಪಾನ್ ಗ್ಯಾಸ್ ಕಾರ್ಪೊರೇಷನ್‌ನ ಪ್ರಸಿದ್ಧ ಸಿಇಒಗಳು ಸಹ ತಮ್ಮ ಉಪಸ್ಥಿತಿಯಿಂದ ಕಾರ್ಯಕ್ರಮದ ಹೈಲೈಟ್ ಆಗಿದ್ದರು.

ವಿಶಿಷ್ಟವಾದ ಕಮಲದ ಥೀಮ್‌ನ ಮಂಟಪ
ಅದ್ಧೂರಿ ವಿವಾಹದ ಮತ್ತೊಂದು ವಿಶೇಷವೆಂದರೆ ವಿಶಿಷ್ಟವಾದ ಕಮಲದ ಥೀಮ್‌ನ ಮಂಟಪ. ಕುತೂಹಲಕಾರಿ ಅಂಶವೆಂದರೆ, ಎಸ್‌ಎಸ್ ರಾಜಮೌಳಿ ಅವರ ಬಾಹುಬಲಿ ಚಿತ್ರದ ಪ್ರೊಡಕ್ಷನ್ ಡಿಸೈನರ್ ಸಾಬು ಸಿರಿಲ್ ಅವರು ಮದುವೆಯ ಪೆಂಡಾಲ್‌ನ್ನು ಯೋಜಿಸಿದ್ದರು. ಮಾಧ್ಯಮ ಸಂವಾದದಲ್ಲಿ, ಸಾಬು ಸಿರಿಲ್ ಮದುವೆಯ ಸೆಟ್ ಬಾಹುಬಲಿ ಚಿತ್ರದ ಸೆಟ್‌ಗಿಂತ ದೊಡ್ಡದಾಗಿದೆ ಎಂದು ಬಹಿರಂಗಪಡಿಸಿದರು.

ದೊಡ್ಡ ಹೂವಿನ ಆನೆಯ ಪ್ರತಿಮೆಗಳು ಮತ್ತು ಹೂವಿನ ಗೊಂಚಲುಗಳು ಪೆಂಡಾಲ್‌ನ ಮತ್ತೊಂದು ಪ್ರಮುಖ ಅಂಶವಾಗಿದೆ. 200 ವೃತ್ತಿಪರರ ತಂಡವು 20 ಕೋಟಿ ರೂಪಾಯಿ ಹೂಡಿಕೆಯೊಂದಿಗೆ 20 ಎಕರೆಯಲ್ಲಿ ಹರಡಿರುವ 350,000 ಚದರ ಅಡಿ ವಿಸ್ತೀರ್ಣದ ವಿಶಿಷ್ಟವಾದ ಪೆಂಡಾಲ್‌ನ್ನು ರಚಿಸಿದ್ದರು. ಕೊಲ್ಲಂನಲ್ಲಿ ರಾಜಸ್ಥಾನಿ ವಾತಾವರಣವನ್ನು ಸೃಷ್ಟಿಸಲು ಡಿಸೈನರ್ ಸುಮಾರು 75 ದಿನಗಳನ್ನು ತೆಗೆದುಕೊಂಡರು.

ವಧು, ಡಾ.ಆರತಿ ಪಿಳ್ಳೈ ಅವರು ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಬಹುಕಾಂತೀಯ ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ರೆಡ್‌ ಬ್ರೈಡಲ್‌ ಸೀರೆಯಲ್ಲಿ ಸರಿಸಾಟಿಯಿಲ್ಲದೆ ದಕ್ಷಿಣಭಾರತದ ವಧುವಿನಂತೆ ಕಂಡುಬಂದರು. ಆಕೆಯ ಲುಕ್‌ನ ಅಟ್ರ್ಯಾಕ್ಷನ್ ಎಂದರೆ, ಆಕೆ ಈ ವಿಶೇಷ ದಿನಕ್ಕೆ ಚಿನ್ನಾಭರಣಗಳನ್ನು ಬಿಟ್ಟು ವಜ್ರದ ಆಭರಣಗಳನ್ನು ಧರಿಸಿದ್ದರು. 

ವಧು ಡೈಮಂಡ್ ಚೋಕರ್ ನೆಕ್‌ಪೀಸ್ ಅನ್ನು ಲೇಯರ್ಡ್ ಹಾರ್, ಕಮರ್ ಬಂಧ್, ಬಾಜುಬಂಧ್, ಮಠಪಟ್ಟಿ ಮತ್ತು ಡೈಮಂಡ್ ಬಳೆಗಳನ್ನು ಧರಿಸಿದ್ದರು. ಆನ್‌ಪಾಯಿಂಟ್ ಮೇಕಪ್‌ ಸಂಪೂರ್ಣ ಲುಕ್ ಇನ್ನಷ್ಟು ಬೆರಗಾಗಿ ಕಾಣುವಂತೆ ಮಾಡಿತ್ತು. ಮತ್ತೊಂದೆಡೆ, ಮದುವೆಗೆ ವರನು ಸಾಂಪ್ರದಾಯಿಕ ವೇಷಭೂಷಣ ಮತ್ತು ರೇಷ್ಮೆ ಕುರ್ತಾವನ್ನು ಧರಿಸಿದ್ದರು. ಅದ್ಧೂರಿ ರಥದಲ್ಲಿ ವಧುವಿನ ಪ್ರವೇಶವೇ ಮದುವೆಯ ವಿಶೇಷವಾಗಿತ್ತು.

ಹೆಸರಾಂತ ನಟಿಯರಿಂದ ನೃತ್ಯ ಪ್ರದರ್ಶನಗಳು ಮತ್ತು ಸಂಗೀತ ಕಾರ್ಯಕ್ರಮ
ಅತಿಥಿಗಳ ಮನರಂಜನೆಗಾಗಿ, ಶ್ರೀ ಪಿಳ್ಳೈ ಅವರು ಖ್ಯಾತ ನಟಿಯರಾದ ಮಂಜು ವಾರಿಯರ್ ಮತ್ತು ಶೋಭನಾ ಅವರಿಂದ ಭರತನಾಟ್ಯ ಪ್ರದರ್ಶನವನ್ನು ಏರ್ಪಡಿಸಿದ್ದರು. ಸ್ಟೀಫನ್ ದೇವಸ್ಸಿ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸೂರ್ಯ ಅವರ ನೃತ್ಯ ನಿರ್ದೇಶನದ 'ರಿದಮ್ ಆಫ್ ದಿ ಫಾರೆಸ್ಟ್' ಪ್ರದರ್ಶನವು ವೇದಿಕೆಯಲ್ಲಿ 400 ನೃತ್ಯಗಾರರನ್ನು ಹೊಂದಿತ್ತು. 

ಏಕಕಾಲಕ್ಕೆ 7,000 ಅತಿಥಿಗಳಿಗೆ ಅವಕಾಶ ಕಲ್ಪಿಸುವ ಡೈನಿಂಗ್ ಹಾಲ್‌ಗಳಲ್ಲಿ ಕೇರಳದ ಸಾಂಪ್ರದಾಯಿಕ ಸದ್ಯವನ್ನು ಅತಿಥಿಗಳಿಗಾಗಿ ನೀಡಲಾಯಿತು.
ಬಡತನದಿಂದ ಹೋರಾಡುತ್ತಿರುವ ರೈತನ ಮಗನಾಗಿ ಜನಿಸಿದ ಪಿಳ್ಳೈ ಅವರು, ಆರ್‌ಪಿ ಗ್ರೂಪ್‌ನ ಬಹು-ಮಿಲಿಯನ್ ಡಾಲರ್ ಸಾಮ್ರಾಜ್ಯವನ್ನು ಸ್ಥಾಪಿಸಿದ ಕಾರಣ ಅವರ ಸಂಕಲ್ಪದಿಂದ ಯಶಸ್ವಿಯಾಗಿದ್ದಾರೆ. ಅವರ ಬಳಿ ಐಷಾರಾಮಿ ಹೋಟೆಲ್‌ಗಳು, ಉಕ್ಕು, ಅನಿಲ, ತೈಲ, ಸಿಮೆಂಟ್ ಕಂಪನಿಗಳು ಮತ್ತು ಶಾಪಿಂಗ್ ಮಾಲ್‌ಗಳಿವೆ.

Latest Videos

click me!