ಮುಖೇಶ್-ನೀತಾ ವಿವಾಹವು ಆರೆಂಜ್ಡ್ ಕಮ್ ಲವ್ ಮ್ಯಾರೇಜ್.
ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ನೀತಾ, ಮುಕೇಶ್ಭೇಟಿಗಾಗಿ ಅವರ ಮನೆಗೆ ಹೋದಾಗ ಬೆರಗಾಗಿದ್ದರು. ಮನೆಯ ಬಾಗಿಲನ್ನು ಮುಕೇಶ್ ಅವರೇತೆರೆದಿದ್ದರು. ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿ ತುಂಬಾ ಸರಳವಾಗಿದ್ದ ಮುಕೇಶ್ ಅವರನ್ನು ನೋಡಿದಾಗ ಶ್ರೀಮಂತನ ಮಗ ಇಷ್ಡು ಸರಳವಾಗಿರಲುಸಾಧ್ಯವಾ ಎಂದು ನೀತಾರಿಗೆ ನಂಬಲುಸಾಧ್ಯವಾಗಲಿಲ್ಲವಂತೆ.
ನೀತಾ ಅವರಿಗೆ ನೃತ್ಯ ಮತ್ತು ಸಂಗೀತದಲ್ಲಿ ತುಂಬಾ ಆಸಕ್ತಿ ಇತ್ತು. ನವರಾತ್ರಿಯ ಸಂದರ್ಭದಲ್ಲಿ ಮುಂಬೈನ ಬಿರ್ಲಾ ಮಾತೋಶ್ರೀನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಜರಿದ್ದಧೀರೂಭಾಯಿ ಅಂಬಾನಿ ಮತ್ತು ತಾಯಿ ಕೋಕಿಲಾಬೆನ್ ನೀತಾ ನೃತ್ಯವನ್ನು ತುಂಬಾ ಇಷ್ಟಪಟ್ಟರು ಹಾಗೂ ಮನಸಿನಲ್ಲೇ ಅವರ ಮಗ ಮುಕೇಶ್‌ಗೆ ತಂದು ಕೊಡಲು ನಿರ್ಧರಿಸಿದ್ದರು.
ಧೀರೂಭಾಯಿ ಅಂಬಾನಿ ನೀತಾ ಮತ್ತು ಅವಳ ತಂದೆಯನ್ನು ತಮ್ಮ ಕಚೇರಿಗೆ ಕರೆದು ನೀತಾ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿ, ಮುಕೇಶರನ್ನು ಭೇಟಿ ಮಾಡಲು ಬಯಸುತ್ತೀರಾ ಎಂದು ಕೇಳಿದರಂತೆ. ನಂತರ ನೀತಾ ಮನೆಗೆ ಬಂದಾಗ ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ ವ್ಯಕ್ತಿಯೊಬ್ಬರು ಬಾಗಿಲು ತೆರೆದು ನೀತಾಗೆ ಕೈ ಚಾಚಿ 'ನಾನು ಮುಕೇಶ್' ಎಂದು ಪರಿಚಯಿಸಿಕೊಂಡಿದ್ದರಂತೆ.
ಒಮ್ಮೆ ನೀತಾ ಮತ್ತು ಮುಕೇಶ್ ಕಾರಿನಲ್ಲಿ ಮುಂಬೈನಿಂದ ಹೊರ ಹೋಗುವಾಗ ಸಂಜೆ 7:3ರ ಸುಮಾರಿಗೆ ಟ್ರಾಫಿಕ್ ಹೆಚ್ಚಿದ್ದು, ಸಿಗ್ನಲ್‌ನಲ್ಲಿ ಕಾರು ನಿಲ್ಲಿಸಿದಾಗ, ಮುಕೇಶ್ ನೀತಾರಿಗೆ ಪ್ರಪೋಸ್ ಮಾಡಿದ್ದಂತೆ. ಅದೂ ನೇರವಾಗಿ 'ನನ್ನನ್ನು ಮದುವೆಯಾಗುತ್ತೀರಾ?' ಎಂದು ಕೇಳಿದ್ದರಂತೆ!
ಆಗ ನೀತಾ ಫುಲ್ ನಾಚಿ ನೀರಾಗಿದ್ದರಂತೆ. ಕಾರು ಮೂವ್ ಮಾಡಲು ಹೇಳಿದ್ರಂತೆ. ಗ್ರೀನ್ ಸಿಗ್ನಲ್ ಸಿಕ್ಕಿ, ಹಿಂದಿನಿಂದ ಮಂದಿ ಹಾರ್ನ್ ಮಾಡ್ತಾ ಇದ್ದರೂ ಮುಕೇಶ್ ಅಲ್ಲಿಯೇ ಉತ್ತರಿಸುವವರೆಗೂ ಕದಲುವುದಿಲ್ಲವೆಂದು ನಿಂತಿದ್ದರಂತೆ.ಆ ಕ್ಷಣದಲ್ಲಿಯೇ ನೀತಾ ಎಸ್ ಎಂದು ಬಿಟ್ಟರಂತೆ.
ಪ್ರಪೋಸ್ ಮಾಡಿದ ನಂತರ, ಸ್ವಲ್ಪ ದೂರದಲ್ಲಿ ಕಾರನ್ನು ನಿಲ್ಲಿಸಿ ಮುಕೇಶ್ ಕಾರಿನಿಂದ ಇಳಿಯುವಂತೆ ಕೇಳಿ ಕೊಂಡರುನೀತಾ.ನೀವು ಶ್ರೀಮಂತರು ಮತ್ತು ನಾನು ಬಡವಿ, ನೀವು ನಿಜವಾಗಿಯೂ ನನ್ನನ್ನುಪ್ರೀತಿಸುತ್ತಿದ್ದರೆ, ನನ್ನಂತೆ ಬಸ್‌ನಲ್ಲಿ ನನ್ನೊಂದಿಗೆ ಪ್ರಯಾಣಿಸಬೇಕು ಎಂಬ ನೀತಾ ಮಾತಿಗೆ ಮುಕೇಶ್ ತಕ್ಷಣ ಒಪ್ಪಿದ್ದರು. ಬಸ್‌ನಲ್ಲಿ ಇಬ್ಬರೂ ಮುಂಭಾಗದ ಸೀಟಿನಲ್ಲಿ ಕುಳಿತು ಜುಹು ಬೀಚ್‌ಗೆ ಹೋದರು. ಇದರಿಂದ ಇಂಪ್ರೆಸ್ ಆದ ನೀತಾಗೆ ಮುಕೇಶ್ ಮೇಲಿನ ಪ್ರೀತಿ ಬಲವಾಯಿತು.
ಮದುವೆಯ ನಂತರವೂ ಶಾಲೆಯಲ್ಲಿ ಕಲಿಸಲು ಅವಕಾಶ ನೀಡಿದರೆ ಮಾತ್ರ ಮದುವೆಗೆ ಒಪ್ಪುವುದಾಗಿ ಮುಕೇಶ್ ಮುಂದೆ ಒಂದು ಷರತ್ತು ಇಟ್ಟಿದ್ದರಂತೆ ನೀತಾ. ಮುಖೇಶ್ ಅಂಬಾನಿ ಎಸ್ ಎಂದ ನಂತರವೇ ನೀತಾ ಮದುವೆಗೆ ಒಪ್ಪಿಕೊಂಡರು ಎಂಬುದನ್ನು ಹಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಶ್ರೀಮಂತ ಕುಟುಂಬದ ಸೊಸೆಯಾದ ನಂತರವೂ ನೀತಾ ಖಾಸಗಿ ಶಾಲೆಯಲ್ಲಿ ಟೀಚರ್ ಆಗಿದ್ದರು.
ಅತ್ತೆ ಮತ್ತು ಸೊಸೆ ನಡುವೆ ಅತ್ಯುತ್ತಮವಾದ ಸಂಬಂಧವಿದ್ದು ಅತ್ತೆ ಕೋಕಿಲಾಬೆನ್ ಅವರೊಂದಿಗೆ ಆಂಟಿಲಿಯಾದಲ್ಲಿ ವಾಸಿಸುತ್ತಿದ್ದರು ನೀತಾ.
ಅವಳಿ ಮಕ್ಕಳಾದ ಆಕಾಶ್, ಇಶಾ ಮತ್ತು ಅನಂತ್, ಅಂಬಾನಿಯ ಮೂವರು ಮಕ್ಕಳು. ಇಶಾ ಮತ್ತು ಆಕಾಶ್ ಮದುವೆಯಾಗಿದ್ದು, ರಾಧಿಕಾ ಮರ್ಚೆಂಟ್ ಕಿರಿಯ ಮಗ ಅನಂತ್ ಅಂಬಾನಿಯನ್ನು ಮದುವೆಯಾಗಲಿದ್ದಾರೆ.