Published : Apr 18, 2020, 03:33 PM ISTUpdated : Apr 18, 2020, 03:37 PM IST
ಫೋಟೋಗ್ರಫಿ ಎನ್ನುವುದೊಂದು ಸುಮಧುರ ಗೀಳು. ಕೈಯಲ್ಲೊಂದು ಎಕ್ಸ್‌ಪೆನ್ಸಿವ್ ಕ್ಯಾಮೆರಾ ಹಿಡಿದು, ಗಂಟೆ ಗಟ್ಟಲೆ ಸಹನೆಯಿಂದ ಕೂತು ಒಂದೊಳ್ಳೆ ಫೋಟೋ ಸಿಕ್ಕಿದಾಗ ಸಿಗೋ ಖುಷಿ ಆ ಫೋಟೋ ತೆಗೆದವನಿಗೇ ಗೊತ್ತು. ಸೆರೆ ಸಿಕ್ಕ ಪಕ್ಷಿಯ ಹೆಸರು, ಕುಲ, ಗೋತ್ರ ಗೊತ್ತಾದಾಗ ಮತ್ತಷ್ಟು ಜ್ಞಾನ ಹೆಚ್ಚಿಸಿಕೊಂಡ ತೃಪ್ತಿ. ಅಬ್ಬಾ, ಈ ಊರಲ್ಲಿ ಇಂಥ ಅದ್ಭುತ ಪಕ್ಷಿಗಳು ಇವೆ ಎಂಬುವುದು ಅಲ್ಲಿಯ ಸ್ಥಳೀಯರಿಗೆ ಗೊತ್ತಾಗುವುದೇ ಕ್ಯಾಮೆರಾದಲ್ಲಿ ಅದ್ಭುತ ಫೋಟೋಗ್ರಾಫರ್ ಅವನ್ನು ಸೆರೆ ಹಿಡಿದಾಗ. ಅಂಥದ್ದೊಂದು ಹುಚ್ಚು ಹೆಚ್ಚಿಸಿಕೊಂಡವರು ಬೆಂಗಳೂರಿನ ಜಯನಗರದಲ್ಲಿರುವ ಉದ್ಯಮಿ ಎ.ಎಸ್. ರಮೇಶ್. ಅವರ ಕ್ಯಾಮೆರಾಗೆ ಸೆರೆ ಸಿಕ್ಕ ಸಾವಿರಾರು ಫೋಟೋಗಳಲ್ಲಿ ಕೆಲವು ಇಲ್ಲಿವೆ. ಅತ್ಯದ್ಭುತ ಬಣ್ಣಗಳೊಂದಿಗೆ ವಿಹರಿಸುವ ಈ ಲೋಹದ ಹಕ್ಕಿಗಳನ್ನು ನೋಡಿದಾಗ ಪ್ರಕೃತಿ ವಿಸ್ಮಯಕ್ಕೆ ಎಂಥವರಾದರೂ ಬೆರಗಾಗೋದು ಗ್ಯಾರಂಟಿ. ಅಂಥ ಬೆರಗು ನಿಮ್ಮದಾಗಲು ಇಲ್ಲಿವೆ ರಮೇಶ್ ಅವರ ಕ್ಯಾಮೆರಾಗೆ ಸೆರೆ ಸಿಕ್ಕ ನಿಸರ್ಗದ ಅದ್ಭುತಗಳು...