ಕೋಟಿಗೆ ಬೆಲೆಯೇ ಇಲ್ವಾ, ಮುಕೇಶ್ ಅಂಬಾನಿ ಕಿರಿ ಸೊಸೆ ಧರಿಸಿದ ಸಿಂಪಲ್‌ ನೆಕ್ಲೇಸ್ ಬೆಲೆ ಭರ್ತಿ 12 ಕೋಟಿ!

Published : Feb 17, 2024, 03:52 PM IST

ಬಿಲಿಯನೇರ್‌ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ, ಕಿರಿಯ ಸೊಸೆ ರಾಧಿಕಾ ಮರ್ಚೆಂಟ್‌. ಯಾವಾಗಲೂ ತಮ್ಮ ಲಕ್ಸುರಿಯಸ್‌ ಲೈಫ್‌ಸ್ಟೈಲ್‌ನಿಂದ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇತ್ತೀಚಿಗೆ ರಾಧಿಕಾ ಕಾರ್ಯಕ್ರಮವೊಂದರಲ್ಲಿ ಧರಿಸಿದ್ದ ಕಾಸ್ಟ್ಲೀ ನೆಕ್ಲೇಸ್ ಧರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

PREV
19
ಕೋಟಿಗೆ ಬೆಲೆಯೇ ಇಲ್ವಾ, ಮುಕೇಶ್ ಅಂಬಾನಿ ಕಿರಿ ಸೊಸೆ ಧರಿಸಿದ ಸಿಂಪಲ್‌ ನೆಕ್ಲೇಸ್ ಬೆಲೆ ಭರ್ತಿ 12 ಕೋಟಿ!

ಬಿಲಿಯನೇರ್‌ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್‌. ಯಾವಾಗಲೂ ತಮ್ಮ ಸ್ಟೈಲಿಶ್ ಲುಕ್‌, ಲಕ್ಸುರಿಯಸ್‌ ಲೈಫ್‌ಸ್ಟೈಲ್‌ನಿಂದ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಕೋಟಿ ಕೋಟಿ ಬೆಲೆಬಾಳುವ ಡ್ರೆಸ್‌, ಆಭರಣಗಳನ್ನು ಧರಿಸುತ್ತಾರೆ.

29

NMACC ಗಾಲಾ ಈವೆಂಟ್‌ನ 3ನೇ ದಿನದಂದು, ರಾಧಿಕಾ ಮರ್ಚೆಂಟ್ ಸುಂದರವಾದ ನೀಲಿ ಬಣ್ಣದ ಕಟ್-ಔಟ್ ಡ್ರೆಸ್ ಮತ್ತು ಹೃದಯದ ಆಕಾರದ ವಜ್ರದ ಕಿವಿಯೋಲೆಗಳು ಮತ್ತು ವಜ್ರದ ನೆಕ್ಲೇಸ್‌ನ್ನು ಆಯ್ಕೆ ಮಾಡಿಕೊಂಡರು. ಆದರೆ ನೋಡೋಕೆ ಸಾಮಾನ್ಯ ನೆಕ್ಲೇಸ್‌ ಸೆಟ್‌ನಂತೆಯೇ ಕಂಡರೂ ಇದರ ಬೆಲೆ ಮಾತ್ರ ಎಲ್ಲರೂ ಬೆರಗಾಗುವಂತಿದೆ. 

39

ಇತ್ತೀಚೆಗೆ, ಆಭರಣ ತಜ್ಞೆ ಜೂಲಿಯಾ ಚೇಫ್, ರಾಧಿಕಾ ಮರ್ಚೆಂಟ್‌ ಹಾರದ ಅಂದಾಜು ಬೆಲೆಯನ್ನು ಬಹಿರಂಗಪಡಿಸಿದ್ದು ಎಲ್ಲರೂ ಬೆರಗಾಗುವಂತೆ ಮಾಡಿತು. ತುಂಬಾ ಸಿಂಪಲ್ ಆಗಿ ಕಾಣಿಸುತ್ತಿದ್ದ ಈ ನೆಕ್ಲೇಸ್ ಸೆಟ್ ಕೋಟಿ ಕೋಟಿ ಮೌಲ್ಯದ್ದಾಗಿದೆ. 

49

ರಾಧಿಕಾ ಮರ್ಚೆಂಟ್ ಅವರ ಹೃದಯ ಆಕಾರದ ವಜ್ರದ ನೆಕ್ಲೇಸ್ ಮೌಲ್ಯ 4.15 ಕೋಟಿ ರೂ. ಆಗಿದೆ. ರಾಧಿಕಾ ಅವರ ಕಿವಿಯೋಲೆಗಳು ಸಹ ಅವರ ಪೆಂಡೆಂಟ್‌ಗೆ ಸಮಾನವಾದ ಗಾತ್ರವನ್ನು ಹೊಂದಿವೆ. ಅವುಗಳಲ್ಲಿ ಪ್ರತಿಯೊಂದನ್ನೂ ಒಂದೇ ಕಟ್ ಡೈಮಂಡ್‌ನಿಂದ ಮಾಡಲಾಗಿದೆ.

59

ಆದ್ದರಿಂದ, ಒಟ್ಟಾರೆಯಾಗಿ, ಆಕೆಯ ವಜ್ರದ ನೆಕ್ಲೇಸ್ ಮತ್ತು ಕಿವಿಯೋಲೆಗಳು USD 1,500,000 ಮೌಲ್ಯದ್ದಾಗಿದೆ. ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು ರೂ. 12,47,35,500. ಅಂದರೆ ಬರೋಬ್ಬರಿ 12 ಕೋಟಿ ರೂ.
 

69

ಕಾರ್ಯಕ್ರಮದಲ್ಲಿ ರಾಧಿಕಾ ಮರ್ಚೆಂಟ್ ಕಪ್ಪು ವರ್ಣದ ಇಂಡೋ-ವೆಸ್ಟರ್ನ್ ಲೇಸ್ ಸೀರೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ಆದರೆ ಇದಕ್ಕಿಂತಲೂ, ಆಕೆಯ ಹರ್ಮ್ಸ್ ಕೆಲ್ಲಿಮಾರ್ಫೋಸ್ ಮಿನಿ ಬ್ಯಾಗ್ ಎಲ್ಲರ ಗಮನ ಸೆಳೆಯಿತು.

79

ಫ್ಯಾಷನಿಸ್ಟ್‌ಗಳು ನೀಡಿದ ಮಾಹಿತಿಯ ಪ್ರಕಾರ ಬೆರಗುಗೊಳಿಸುವ ಆರ್ಮ್ ಕ್ಯಾಂಡಿಯ ಬೆಲೆ ರೂ. ಅಂದಾಜು 2 ಕೋಟಿ ರೂ. ಆಗಿದೆ. ಇದು ತನ್ನ ಸ್ಪೆಷಲ್ ಡಿಸೈನ್‌ನಿಂದಾಗಿ ಎಲ್ಲರ ಗಮನ ಸೆಳೆಯಿತು.

89

ರಾಧಿಕಾ ಮರ್ಚೆಂಟ್ ಸಿಇಒ ಮತ್ತು ಎನ್‌ಕೋರ್ ಹೆಲ್ತ್‌ಕೇರ್‌ನ ಉಪಾಧ್ಯಕ್ಷರಾದ ವೀರೆನ್ ಮರ್ಚೆಂಟ್ ಮತ್ತು ಅವರ ಪತ್ನಿ ಶೈಲಾ ಮರ್ಚೆಂಟ್ ಅವರ ಕಿರಿಯ ಮಗಳು.

99

28 ವರ್ಷದ ರಾಧಿಕಾ ತಮ್ಮ ಶಾಲಾ ಶಿಕ್ಷಣದ ನಂತರ ನ್ಯೂಯಾರ್ಕ್ ವಿಶ್ವವಿದ್ಯಾನಿಲಯಕ್ಕೆ ಹೋದರು ಮತ್ತು ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಪದವೀಧರರಾಗಿ ಭಾರತಕ್ಕೆ ಮರಳಿದರು. 

Read more Photos on
click me!

Recommended Stories