ವಿಜ್ಞಾನಿಗಳು ತಯಾರಿಸಿದ್ದಾರೆ ಮಾಂಸಾಹಾರಿ ಅಕ್ಕಿ; ಬಿರಿಯಾನಿ ಕೂಡ ಮಾಡಬಹುದು

First Published | Feb 17, 2024, 2:45 PM IST

ವಿಜ್ಞಾನಿಗಳು ಪೂರ್ತಿಯಾಗಿ ಮಾಂಸದ್ದೇ  ರುಚಿಯನ್ನು ಹೊಂದಿರುವ ಅಕ್ಕಿಯನ್ನು ತಯಾರಿಸಿದ್ದಾರೆ. ನೀವು ಇದನ್ನು ಬಿರಿಯಾನಿಯಂತೆ ತಿನ್ನಬಹುದು. ಇದು ಇದ್ದರೆ ಬೇರೆ ಮಟನ್, ಚಿಕನ್ ಮಾಡೋ ಅಗತ್ಯಾನೆ ಇಲ್ಲ. ಇದರ ರುಚಿಯೂ ಅದ್ಭುತವಾಗಿದೆ. ಇದರಲ್ಲಿ ಪ್ರೋಟೀನ್ ಮತ್ತು ಕೊಬ್ಬು ಕೂಡ ಅಧಿಕವಾಗಿದೆ.

ಅನೇಕ ಜನರು ಮಾಂಸ (meat) ತಿನ್ನಲು ಇಷ್ಟಪಡುತ್ತಾರೆ. ಮಾಂಸ ತಿನ್ನೋದಕ್ಕೆ ತುಂಬಾನೆ ರುಚಿಯಾಗಿರುತ್ತೆ, ಅಷ್ಟೇ ಆಲ್ಲ ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸತುವಿನಂತಹ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ. ಆದರೆ ಅದನ್ನು ತಿನ್ನಲು ಮಾತ್ರ ಸ್ವಲ್ಪ ಕಷ್ಟಪಡಬೇಕು. ಆದರೆ ಇದೀಗ ವಿಜ್ಞಾನಿಗಳು ಸಂಪೂರ್ಣವಾಗಿ ಮಾಂಸಭರಿತ ರುಚಿಯ ಅಕ್ಕಿಯನ್ನು ತಯಾರಿಸಿದ್ದಾರೆ. 
 

ಹೌದು ಇದು ಮಾಂಸದ ಅಕ್ಕಿ (meat rice). ನೀವು ಇದನ್ನು ಬಿರಿಯಾನಿಯಂತೆ ತಿನ್ನಬಹುದು. ಇದನ್ನು ತಯಾರಿಸೊದ್ರೆ ನೀವು ಪ್ರತ್ಯೇಕವಾಗಿ ಮಾಂಸವನ್ನು ತಯಾರಿಸುವ ಅಗತ್ಯವಿಲ್ಲ. ಇದರ ರುಚಿಯಂತೂ ಅದ್ಭುತವಾಗಿದೆ. ವಿಜ್ಞಾನಿಗಳು ಇದನ್ನು ಮಾಂಸಾಹಾರಿ ಅಕ್ಕಿ ಎಂದು ಕರೆಯುತ್ತಾರೆ. ಇದು ತುಂಬಾನೆ ಉತ್ತಮ ಕ್ವಾಲಿಟಿಯ ಅಕ್ಕಿಯಾಗಿದೆ. 

Tap to resize

ದಕ್ಷಿಣ ಕೊರಿಯಾದ ಯೋನ್ಸೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಹೈಬ್ರಿಡ್ ಅಕ್ಕಿಯನ್ನು (hybrid rice) ಪ್ರಯೋಗಾಲಯದಲ್ಲಿ ಸಿದ್ಧಪಡಿಸಿದ್ದಾರೆ. ಇದಕ್ಕೆ ಅನೇಕ ರೀತಿಯ ಮಾಂಸವನ್ನು ಸೇರಿಸಲಾಗಿದೆ. ಇದರೊಂದಿಗೆ, ಮೀನಿನ ರುಚಿಯೂ ಇದೆ. 
 

ಸಂಶೋಧಕರ ಪ್ರಕಾರ, ಇದು ಸಾಮಾನ್ಯ ಅಕ್ಕಿಯಂತೆ ಕಾಣುತ್ತದೆ, ಆದರೆ ಇದು ಸಾಮಾನ್ಯ ಮಾಂಸಕ್ಕಿಂತ 8% ಹೆಚ್ಚು ಪ್ರೋಟೀನ್ ಮತ್ತು 7% ಹೆಚ್ಚು ಕೊಬ್ಬನ್ನು ಹೊಂದಿರುತ್ತದೆ. ವಿಶೇಷವೆಂದರೆ ಇದು 11 ದಿನಗಳವರೆಗೆ ಹಾಳಾಗುವುದಿಲ್ಲ ಮತ್ತು ಇದನ್ನು ಸಾಮಾನ್ಯ ತಾಪಮಾನದಲ್ಲಿ ಸುಲಭವಾಗಿ ಸಂಗ್ರಹಿಸಬಹುದು. ಅಷ್ಟೇ ಅಲ್ಲ ಈ ಅಕ್ಕಿ ಸ್ನಾಯುಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.
 

ಕೃಷಿ ಮಾಡುವ ಅಗತ್ಯವಿರುವುದಿಲ್ಲ
ಈ ಅಕ್ಕಿಯನ್ನು ಯುದ್ಧ ಅಥವಾ ತುರ್ತು ಪರಿಸ್ಥಿತಿಯಂತಹ ಸಂದರ್ಭಗಳಲ್ಲಿ (emergency situation)ಬಳಸಬಹುದು. ಸೈನ್ಯಗಳ ಬಳಕೆಗಾಗಿ ಸಹ ನೀಡಬಹುದು. ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಇದು ತುಂಬಾ ಪರಿಣಾಮಕಾರಿ ಅಕ್ಕಿಯಾಗಿದೆ ಎಂದು ಸಹ ಸಂಶೋಧಕರು ತಿಳಿಸಿದ್ದಾರೆ. ಇದು ಪ್ರೋಟೀನ್ ನ ಪರ್ಯಾಯವಾಗಬಹುದು. 

ಇನ್ನು ಮಾಂಸದ ಅಕ್ಕಿಯ ಉತ್ಪಾದನಾ ವಿಧಾನವು ತುಂಬಾ ಸರಳವಾಗಿದೆ ಎಂದು ವಿಜ್ಞಾನಿಗಳು ನಂಬುತ್ತಾರೆ, ಯಾಕಂದ್ರೆ ಇದನ್ನು ಬೆಳೆಸೋದನ್ನು ಹೆಚ್ಚಿನ ಪ್ರಾಣಿಗಳನ್ನು ಸಾಕುವ ಹಾಗೂ ಕೃಷಿ ಮಾಡುವ ಅಗತ್ಯ ಕೂಡ ಇರೋದಿಲ್ಲ. ಮಾರುಕಟ್ಟೆಗೆ ಬಂದರೆ ಗ್ರಾಹಕರು ಇದನ್ನು ಖರೀದಿಸುತ್ತಾರೋ ಇಲ್ಲವೋ ಎಂದು ನೋಡಬೇಕಾಗಿದೆ.
 

ಇಂಗಾಲದ ಹೊರಸೂಸುವಿಕೆಯೂ ಇರೋದಿಲ್ಲ: ಮ್ಯಾಟರ್ ಜರ್ನಲ್ ನಲ್ಲಿನ ಸಾರ್ವಜನಿಕ ವರದಿಯ ಪ್ರಕಾರ, ಈ ಮಾಂಸದ ಉತ್ಪಾದನೆಯಲ್ಲಿ ಇಂಗಾಲದ (carbon dioxide) ಹೊರಸೂಸುವಿಕೆಯೇ ಇರೋದಿಲ್ಲ.  100 ಗ್ರಾಂ ಪ್ರೋಟೀನ್ಗಾಗಿ ಮಾಂಸವನ್ನು ಸೇವಿಸಿದರೆ, 49.89 ಕೆಜಿ ಇಂಗಾಲದ ಡೈಆಕ್ಸೈಡ್ ಹೊರ ಬರುತ್ತೆ, ಆದರೆ ಹೈಬ್ರಿಡ್ ಅಕ್ಕಿ ಕೇವಲ 6.27 ಕೆಜಿ ಕಾರ್ಬಲ್ ಡೈ ಆಕ್ಸೈಡ್ ಉತ್ಪಾದಿಸುತ್ತದೆ. 

ನಾವು ಸಾಮಾನ್ಯವಾಗಿ ಪ್ರಾಣಿಗಳಿಂದ ಅಗತ್ಯವಾದ ಪ್ರೋಟೀನ್ ಪಡೆಯುತ್ತೇವೆ, ಆದರೆ ಪ್ರಾಣಿಗಳನ್ನು ತಯಾರಿಸಲು ಸಾಕಷ್ಟು ಸಂಪನ್ಮೂಲಗಳು ಮತ್ತು ನೀರು ಬೇಕಾಗುತ್ತದೆ. ಅವು ಸಾಕಷ್ಟು  ಗ್ರೀನ್ ಹೌಸ್ ಗ್ಯಾಸ್ ಹೊರಸೂಸುತ್ತವೆ. ಇದಕ್ಕೂ ಮುನ್ನ 2013 ರಲ್ಲಿ ಲಂಡನ್ ವಿಜ್ಞಾನಿಯೊಬ್ಬರು ವಿಶಿಷ್ಟವಾದ ಮಾಂಸಾಹಾರಿ ಬರ್ಗರ್ (nonveg burger) ತಯಾರಿಸಿದ್ದರು ಇತ್ತೀಚೆಗೆ ಇದನ್ನು ಸಿಂಗಾಪುರದಲ್ಲಿ ಮಾರಾಟ ಮಾಡಲಾಯಿತು, ಇದು ಜನರಿಗೆ ತುಂಬಾನೆ ಇಷ್ಟವಾಗಿತ್ತು.
 

Latest Videos

click me!