ಮಹಾರಾಷ್ಟ್ರ ಮೂಲದ ಪ್ರಸಿದ್ಧ ಉದ್ಯಮಿ ಮತ್ತು ರಾಜಕಾರಣಿ ಪಂಕಜ್ ಪರಾಖ್, ವಿಶ್ವದ ಅತ್ಯಂತ ದುಬಾರಿ ಶರ್ಟ್‌ನ್ನು ಹೊಂದಿದ್ದಾರೆ. 2016ರಲ್ಲಿ ಗಿನ್ನೆಸ್ ವಿಶ್ವ ದಾಖಲೆಗಳಲ್ಲಿ ಸ್ಥಾನ ಗಳಿಸಿದಾಗ ಪಂಕಜ್ ಹೆಚ್ಚು ಸುದ್ದಿ ಮಾಡಿದರು.
ವಿಶ್ವದ ಅತ್ಯಂತ ದುಬಾರಿ ಚಿನ್ನದ ಅಂಗಿಯನ್ನು ಹೊಂದುವ ಮೂಲಕ ಈ ಸಾಧನೆಯನ್ನು ಸಾಧಿಸಿದರು, ಇದರ ಬೆಲೆ ಬರೋಬ್ಬರಿ 98,35,099 ರೂ. ಆಗಿದೆ. ತನ್ನ ಸ್ನೇಹಿತರಿಂದ 'ಗೋಲ್ಡನ್ ಶರ್ಟ್ ಹೊಂದಿರುವ ಮನುಷ್ಯ' ಎಂದು ಪ್ರೀತಿಯಿಂದ ಕರೆಯಲ್ಪಡುತ್ತಾರೆ.
ಪರಾಖ್ ಹಲವಾರು ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದಾರೆ. ಅದರಲ್ಲಿ ಈ ಗೋಲ್ಡನ್ ಶರ್ಟ್ ಸಹ ಒಂದು. 4.10 ಕೆಜಿ ತೂಕದ ಗೋಲ್ಡನ್ ಶರ್ಟ್ ಈಗ ಬರೋಬ್ಬರಿ 1.30 ಕೋಟಿ ರೂ. ಮೌಲ್ಯದ್ದಾಗಿದೆ. ಪರಾಖ್ ಶ್ರೀಮಂತ ವಸ್ತುಗಳ ಸಂಗ್ರಹದ ಭಾಗವಾಗಿದೆ.
ಪರಾಖ್ ಬಳಿ ಚಿನ್ನದ ಗಡಿಯಾರ, ಹಲವಾರು ಚಿನ್ನದ ಸರಗಳು, ದೊಡ್ಡ ಚಿನ್ನದ ಉಂಗುರಗಳು, ಚಿನ್ನದ ಮೊಬೈಲ್ ಕವರ್ ಮತ್ತು ಚಿನ್ನದ ಚೌಕಟ್ಟಿನ ಕನ್ನಡಕಗಳ ಸಂಗ್ರಹವೂ ಇದೆ. 10 ಕೆಜಿ ತೂಕದ ಚಿನ್ನದ ಉಡುಪು, ಪರವಾನಗಿ ಪಡೆದ ರಿವಾಲ್ವರ್‌ನೊಂದಿಗೆ ಅವರ ನಡಿಗೆ ಎಲ್ಲರ ಗಮನ ಸೆಳೆಯುತ್ತದೆ. ಈ ಎಲ್ಲಾ ದುಬಾರಿ ವಸ್ತುಗಳನ್ನು ಖಾಸಗಿ ಭದ್ರತಾ ಸಿಬ್ಬಂದಿಗಳು ಸುರಕ್ಷಿತವಾಗಿ ನಿರ್ವಹಿಸುತ್ತಾರೆ.
ಈ ದುಬಾರಿ ಶರ್ಟ್‌ನ್ನು ನಾಸಿಕ್‌ನ ಬಫ್ನಾ ಜ್ಯುವೆಲ್ಲರ್ಸ್‌ವಿನ್ಯಾಸಗೊಳಿಸಿದೆ. ಮುಂಬೈನ ಶಾಂತಿ ಜ್ಯುವೆಲ್ಲರ್ಸ್ ರಚಿಸಿದೆ. 20 ಆಯ್ದ ಕುಶಲಕರ್ಮಿಗಳ ತಂಡವು ಎರಡು ತಿಂಗಳುಗಳಲ್ಲಿ 3,200 ಗಂಟೆಗಳ ಕಾಲ ಸಮಯ ತೆಗೆದುಕೊಂಡು ಈ ಎಕ್ಸ್‌ಪೆನ್ಸಿವ್ ಶರ್ಟ್‌ನ್ನು ಸಿದ್ಧಪಡಿಸಿದ್ದಾರೆ. ಯಾವುದೇ ಕಾನೂನು ತೊಂದರೆಯನ್ನು ತಪ್ಪಿಸಲು ಈ ಶರ್ಟ್ ಖರೀದಿಯ ಬಗ್ಗೆ ಸಂಪೂರ್ಣವಾಗಿ ಬಿಲ್ ಮಾಡಲಾಗಿದೆ.
47 ವರ್ಷದ ಪರಾಖ್, ತಾನು ವಿಶ್ವದ ಎಕ್ಸ್‌ಪೆನ್ಸಿವ್ ಶರ್ಟ್ ಹೊಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. 'ನಾನು ಮಹಾರಾಷ್ಟ್ರದ ಸಣ್ಣ ಹಳ್ಳಿಯಿಂದ ಬಂದವನು. ನನ್ನ ಈ ಸಾಧನೆಯು ನನ್ನ ಹೆಸರನ್ನು ಇಡೀ ಜಗತ್ತಿಗೆ ತಲುಪಿಸಿದೆ. ಇದು ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ' ಎಂದು ತಿಳಿಸಿದ್ದಾರೆ.
ಪರಾಖ್ 8ನೇ ತರಗತಿಯ ನಂತರ ಯೋಲಾದಲ್ಲಿ ಕುಟುಂಬದ ಗಾರ್ಮೆಂಟ್ಸ್ ವ್ಯಾಪಾರವನ್ನು ಆರಂಭಿಸಲು ಶಾಲೆಯನ್ನು ತೊರೆದರು. ವರ್ಷಗಳಲ್ಲಿ, ಅವರು ಸ್ವತಂತ್ರವಾಗಿ ಬಿಸಿನೆಸ್ ಆರಂಭಿಸಿದರು. ಬಿಸಿನೆಸ್‌ನಲ್ಲಿನ ಸಕ್ಸಸ್ ಅವರು ರಾಜಕೀಯಕ್ಕೆ ಪ್ರವೇಶಿಸಲು ಕಾರಣವಾಯಿತು. ನಂತರದ ವರ್ಷಗಳಲ್ಲಿ ಮುಂಬೈನಿಂದ ಸುಮಾರು 260 ಕಿಮೀ ದೂರದಲ್ಲಿರುವ ಯೋಲಾ ಪಟ್ಟಣದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಉಪ ಮೇಯರ್ ಆದರು.
ಗೋಲ್ಡನ್ ಹೊರಭಾಗದ ಹೊರತಾಗಿಯೂ ಶರ್ಟ್ ಆರಾಮದಾಯಕವಾಗಿಯೂ ಇದೆ. ಇದು ತೊಳೆಯಲೂ ಬಹುದು. ತನ್ನ ಅತಿರಂಜಿತ ಜೀವನಶೈಲಿಯ ಹೊರತಾಗಿಯೂ ಪರಾಖ್, ಉದಾರ ಮನಸ್ಸಿನವರೂ ಆಗಿದ್ದಾರೆ. ಹಲವು ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.