ಪ್ರತಿ ದಿನ ನಿಂಬೆ ಜ್ಯೂಸ್ ಕುಡಿತೀರಾ? ಹಾಗಿದ್ರೆ ಇದ್ರಿಂದ ಏನಾಗುತ್ತೆ ಅನ್ನೋದನ್ನು ತಿಳ್ಕೊಳಿ

First Published | Feb 20, 2024, 7:01 AM IST

ನಿಮಗೂ ಕೂಡ ಪ್ರತಿದಿನ ಬೆಳಗ್ಗೆ ನಿಂಬೆ ಜ್ಯೂಸ್ ಕುಡಿಯುವ ಅಭ್ಯಾಸ ಇದೇಯೆ? ಇದನ್ನು ಕುಡಿಯೋದು ಆರೋಗ್ಯಕ್ಕೆ ಉತ್ತಮವೋ? ಇಲ್ಲವೋ ಅನ್ನೋದರ ಬಗ್ಗೆ ನಿಮ್ಮ ಮನಸ್ಸಿನಲ್ಲೂ ಪ್ರಶ್ನೆಗಳು ಇರಬಹುದು. ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. 
 

ಕೆಲವು ಆರೋಗ್ಯಕರ ಅಭ್ಯಾಸಗಳು (healthy habits) ಬಹಳ ಜನಪ್ರಿಯವಾಗುತ್ತವೆ. ಅಷ್ಟೇ ಯಾಕೆ ಹೆಚ್ಚಿನ ಜನರು ಕೂಡ ಅದನ್ನು ಫಾಲೋ ಮಾಡ್ತಾರೆ. ಅವುಗಳಲ್ಲಿ ಒಂದು ನಿಂಬೆ ನೀರು ಕುಡಿಯೋದು. ನಿಂಬೆ ನೀರು ತುಂಬಾನೆ ಆರೋಗ್ಯ ಪ್ರಯೋಜನಗಳನ್ನು ಹೊಂದಿರೋದರಿಂದ ಅದನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ (Empty Stomach) ಸೇವಿಸೋದನ್ನು ಜನರು ಇಷ್ಟ ಪಡ್ತಾರೆ. ಇದರಿಂದ ತೂಕ (Weight) ಇಳಿಯುತ್ತೆ, ಜೊತೆಗೆ ಹಲವು ಆರೋಗ್ಯ ಪ್ರಯೋಜನಗಳು (Health Benefits) ಸಹ ಇವೆ ಎಂದು ನಂಬಲಾಗಿದೆ. 

ಪ್ರತಿದಿನ ನಿಂಬೆ ನೀರನ್ನು ಸೇವಿಸೋದರಿಂದ ಉಂಟಾಗುವ ಶಾರೀರಿಕ ಪರಿಣಾಮಗಳ (physical effect) ಬಗ್ಗೆ ತಿಳಿಸುವ ಹಲವಾರು ಸಂಶೋಧನೆಗಳು ನಡೆದಿವೆ. ಇದನ್ನು ಕುಡಿಯೋದರಿಂದವಿಟಮಿನ್ ಸಿ ಸಿಗುತ್ತೆ, ಹೈಡ್ರೇಶನ್ ಗೆ ಉತ್ತಮ,  ಜೀರ್ಣ ಶಕ್ತಿ ಹೆಚ್ಚಿಸುತ್ತೆ, ಉತ್ಕರ್ಷಣ ನಿರೋಧಕವೂ ಆಗಿದೆ ಎಂದು ಹೇಳಲಾಗುತ್ತೆ, ನೀವು ಪ್ರತಿದಿನ ಬೆಳಿಗ್ಗೆ ನಿಂಬೆ ನೀರನ್ನು ಕುಡಿದಾಗ ನಿಮ್ಮ ದೇಹಕ್ಕೆ ಏನಾಗುತ್ತದೆ ಎಂಬುದನ್ನು ಇಲ್ಲಿ ನೋಡೋಣ.

Tap to resize

ಜಲಸಂಚಯನ ವರ್ಧಕ
ಬೆಳಗ್ಗೆ ಎದ್ದು ನಿಂಬೆ ನೀರನ್ನು ಕುಡಿಯುವುದು ರಾತ್ರಿಯ ನಿದ್ರೆಯ ನಂತರ ನಿಮ್ಮ ದೇಹಕ್ಕೆ ಬೇಕಾದ ಹೈಡ್ರೇಶನ್ (hydration) ಹೆಚ್ಚಿಸಲು ಉತ್ತಮ ಮಾರ್ಗ. ದೇಹದ ತಾಪಮಾನವನ್ನು (Body Temperature) ನಿಯಂತ್ರಿಸುವುದು, ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಮತ್ತು ಪೋಷಕಾಂಶಗಳನ್ನು ಸಾಗಿಸುವುದು ಸೇರಿದಂತೆ ದೈಹಿಕ ಕಾರ್ಯಗಳನ್ನು ನಿರ್ವಹಿಸಲು ಹೈಡ್ರೇಟ್ ಆಗಿರೋದು ಅತ್ಯಗತ್ಯ. ನೀರು ಮಾತ್ರ ಜಲಸಂಚಯನಕ್ಕೆ ಸಹಾಯ ಮಾಡುತ್ತದೆ, ನಿಂಬೆಯನ್ನು ನೀರಿಗೆ ಸೇರಿಸುವುದರಿಂದ ಪರಿಮಳವನ್ನು ಸುಧಾರಿಸಬಹುದು ಮತ್ತು ಹೆಚ್ಚು ನೀರು ಕುಡಿಯಲು ಸಹಾಯ ಮಾಡುತ್ತದೆ. ಇದರಿಂದ ನೀವು ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತೆ. 
 

ವಿಟಮಿನ್ ಸಿ ಬೂಸ್ಟ್ ಮಾಡುತ್ತೆ
ನಿಂಬೆಯಲ್ಲಿ ವಿಟಮಿನ್ ಸಿ (Vitamin C)ಸಮೃದ್ಧವಾಗಿದೆ, ಇದು ಪ್ರಬಲ ಉತ್ಕರ್ಷಣ ನಿರೋಧಕ, ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುತ್ತದೆ ಮತ್ತು ಜೀವಕೋಶಗಳನ್ನು ಫ್ರೀ ರಾಡಿಕಲ್ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ನಿಂಬೆ ನೀರಿನಿಂದ ನಿಮ್ಮ ದಿನವನ್ನು ಪ್ರಾರಂಭಿಸೋದರಿಂದ  ನಿಮ್ಮ ದೇಹಕ್ಕೆ ಬೇಕಾದ ವಿಟಾಮಿನ್ ಸಿ ಸಿಗುತ್ತೆ, ಇದರಿಂದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತೆ. 

ಸುಧಾರಿತ ಜೀರ್ಣಕ್ರಿಯೆ (Best for Digestive System)
ಬೆಳಿಗ್ಗೆ ನಿಂಬೆ ನೀರನ್ನು ಕುಡಿಯುವುದರಿಂದ ಹೊಟ್ಟೆಯ ಆಮ್ಲದ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ಇದು ದಿನವಿಡೀ ಆಹಾರದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನಿಂಬೆ ರಸದ ಆಮ್ಲೀಯತೆಯು (acidity) ಹೊಟ್ಟೆಯಲ್ಲಿ ಕಂಡುಬರುವ ನೈಸರ್ಗಿಕ ಆಮ್ಲಗಳನ್ನು ಅನುಕರಿಸಲು ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ನಿರ್ವಿಷೀಕರಣ
ನಿಂಬೆ ನೀರಿನ್ನು ಕುಡೀಯೋದರಿಂದಾ ದೇಹ ಡಿಟಾಕ್ಸ್ (body detox)ಆಗುತ್ತೆ ಅಂತ ಎಲ್ಲರೂ ಹೇಳುತ್ತಾರೆ. ಆದರೆ ನಮ್ಮ ದೇಹದಲ್ಲಿ ಅದರದೇ ಆದ ಅಂತರ್ನಿರ್ಮಿತ ನಿರ್ವಿಷೀಕರಣ ಕಾರ್ಯವಿಧಾನಗಳನ್ನು ಹೊಂದಿದೆ ಅನ್ನೋದನ್ನು ನೆನಪಿಟ್ಟುಕೊಳ್ಳೋದು ಮುಖ್ಯ, ಇದು ಪ್ರಾಥಮಿಕವಾಗಿ ಯಕೃತ್ತು ಮತ್ತು ಮೂತ್ರಪಿಂಡಗಳ (Kidney) ಮೂಲಕ ಸಂಭವಿಸುತ್ತದೆ. ಆದರೂ, ನಿಂಬೆ ನೀರನ್ನು ಕುಡಿಯುವುದರಿಂದ ಮೂತ್ರ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಈ ಅಂಗಗಳ ಕಾರ್ಯಗಳನ್ನು ಉತ್ತಮಗೊಳಿಸಬಹುದು, ಇದು ದೇಹದಿಂದ ವಿಷ ಮತ್ತು ತ್ಯಾಜ್ಯ ಉತ್ಪನ್ನಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಅಧಿಕ ಸೇವನೆ ಹಾನಿಕಾರಕ 
ನಿಂಬೆ ರಸ (lemon water) ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದೇನೋ ನಿಜಾ. ಆದರೆ ಎಲ್ಲವೂ ನಿಯಮಿತವಾಗಿದ್ದರೆ ಉತ್ತಮ. ಯಾಕಂದ್ರೆ ಅಗತ್ಯಕ್ಕಿಂತ ಹೆಚ್ಚು ನಿಂಬೆ ರಸ ಸೇವಿಸಿದರೆ ಅದು ನಮ್ಮ ದೇಹದ ಒಳಗೆ ಹೆಚ್ಚಿನ ಆಸಿಡ್ ಪರಿಣಾಮವನ್ನು ಉಂಟು ಮಾಡಬಹುದು. ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತೆ. 

Latest Videos

click me!