ಏಷ್ಯಾದ ಅತ್ಯಂತ ದುಬಾರಿ ನಗರಗಳಿವು, ಭಾರತದ ಯಾವ ನಗರ ಲಿಸ್ಟ್‌ನಲ್ಲಿದೆ?

First Published | Dec 3, 2023, 10:49 AM IST

ವಿಶ್ವದ ಅತ್ಯಂತ ದುಬಾರಿ ನಗರಗಳ ಪಟ್ಟಿಯಲ್ಲಿ ಸಿಂಗಾಪುರವು ಕಳೆದ ಹನ್ನೊಂದು ವರ್ಷಗಳಲ್ಲಿ ಒಂಬತ್ತನೇ ಬಾರಿಗೆ ವಿಶ್ವದ ಅತ್ಯಂತ ದುಬಾರಿ ನಗರವಾಗಿ ಗುರುತಿಸಿಕೊಂಡಿದೆ. ಭಾರತದ ಯಾವ ನಗರ ಲಿಸ್ಟ್‌ನಲ್ಲಿದೆ ತಿಳಿಯೋಣ.

ಜಗತ್ತಿನಲ್ಲಿ ಹಲವಾರು ದೇಶಗಳಿವೆ. ಇದರಲ್ಲಿ ಕೆಲವು ವಾಸಿಸೋಕೆ ಅತ್ಯಂತ ದುಬಾರಿಯಾಗಿರೋ ನಗರವಾದರೆ, ಇನ್ನು ಕೆಲವು ಅಗ್ಗವಾಗಿರುವಂಥವು. ಕೆಲವೊಂದ ನಗರಗಳು ಅಲ್ಲಿನ ಜೀವನಶೈಲಿ, ಬಾಡಿಗೆ, ಅತ್ಯಾಧುನಿಕ ಸೌಕರ್ಯದಿಂದಾಗಿ ಹೆಸರುವಾಸಿಯಾಗಿವೆ.

ಹಾಗೆಯೇ ಕಾಸ್ಟ್ಲೀಯೆಂದು ಸಹ ಗುರುತಿಸಿಕೊಂಡಿವೆ.  ಪ್ರತಿ ಬಾರಿಯೂ ವಿಶ್ವದಲ್ಲಿ ಅತೀ ದುಬಾರಿಯಾದ ನಗರವನ್ನು ಪಟ್ಟಿ ಮಾಡಲಾಗುತ್ತಿದೆ. 

Tap to resize

ಪ್ರತಿ ಬಾರಿಯೂ ವಿಶ್ವದಲ್ಲಿ ಅತೀ ದುಬಾರಿಯಾದ ನಗರವನ್ನು ಪಟ್ಟಿ ಮಾಡಲಾಗುತ್ತಿದೆ. ಇದು ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರುತ್ತದೆ. Worldwide Cost of Living 2023ರ ವರದಿಯ ಪ್ರಕಾರ, ವಿಶ್ವದ ಅತ್ಯಂತ ದುಬಾರಿ ನಗರಗಳ ಪಟ್ಟಿಯಲ್ಲಿ ಸಿಂಗಾಪುರವು ಅಗ್ರಸ್ಥಾನದಲ್ಲಿದೆ

ವಿಶ್ವದ ಅತ್ಯಂತ ದುಬಾರಿ ನಗರಗಳ ಪಟ್ಟಿಯಲ್ಲಿ ಸಿಂಗಾಪುರವು ಕಳೆದ ಹನ್ನೊಂದು ವರ್ಷಗಳಲ್ಲಿ ಒಂಬತ್ತನೇ ಬಾರಿಗೆ ವಿಶ್ವದ ಅತ್ಯಂತ ದುಬಾರಿ ನಗರವಾಗಿ ಗುರುತಿಸಿಕೊಂಡಿದೆ. ಜ್ಯೂರಿಚ್‌ ಎರಡನೇ ಸ್ಥಾನದಲ್ಲಿದೆ. ಅಮೆರಿಕದ ನ್ಯೂಯಾರ್ಕ್ ಈ ವರ್ಷ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. 

ಅಂತೆಯೇ ಏಷ್ಯಾದ ಎರಡನೇ ನಗರ ಹಾಂಗ್ ಕಾಂಗ್ ಸಹ ಅಗ್ರ ಐದರಲ್ಲಿ ಸ್ಥಾನ ಪಡೆದಿದೆ. ಲಾಸ್ ಏಂಜಲೀಸ್ (ಆರನೇ ಸ್ಥಾನ) ಮತ್ತು ಪ್ಯಾರಿಸ್ ಆರನೇ ಸ್ಥಾನದಲ್ಲಿದೆ. ಕೋಪನ್ ಹ್ಯಾಗನ್ ,ಟೆಲ್ ಅವಿವ್, ಸ್ಯಾನ್ ಫ್ರಾನ್ಸಿಸ್ಕೋ ಸತತವಾಗಿ 7,8 ಹಾಗೂ 9 ಸ್ಥಾನದಲ್ಲಿವೆ.

ಸಮೀಕ್ಷೆಯನ್ನು ಆಗಸ್ಟ್ 14 ಮತ್ತು ಸೆಪ್ಟೆಂಬರ್ 11 ರ ನಡುವೆ ನಡೆಸಲಾಯಿತು ಮತ್ತು ಜಾಗತಿಕವಾಗಿ 173 ನಗರಗಳಲ್ಲಿ 400 ಕ್ಕೂ ಹೆಚ್ಚು ವೈಯಕ್ತಿಕ ಬೆಲೆಗಳನ್ನು ಹೋಲಿಸಲಾಗಿದೆ. ಇವುಗಳು 2023 ರ ಶ್ರೇಯಾಂಕದೊಂದಿಗೆ ವಿಶ್ವದ ಟಾಪ್ 10 ಅತ್ಯಂತ ದುಬಾರಿ ನಗರಗಳಾಗಿವೆ. 

2022ರ ಕೊನೆಯಲ್ಲಿ ಚೀನಾ ತನ್ನ ಕೋವಿಡ್-19 ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಎಲ್ಲಾ ದೇಶಗಳಲ್ಲೂ ಆರ್ಥಿಕ ಕುಸಿತವನ್ನು ಕಾಣಬಹುದು. ಹಾಗೆಯೇ ಫೆಬ್ರವರಿ 2022 ರಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಇಂಧನ ಬೆಲೆಗಳ ಏರಿಕೆಯು ಸಹ ಕಡಿಮೆಯಾಗಿದೆ.

ಈ ವರ್ಷದ ಶ್ರೇಯಾಂಕದಲ್ಲಿ ಕೆಳಗಿನ ಹತ್ತು ಸ್ಥಾನಗಳಲ್ಲಿ ಮೂರು ಏಷ್ಯಾದ ನಗರಗಳಾದ ಕರಾಚಿ, ಅಹಮದಾಬಾದ್ ಮತ್ತು ಚೆನ್ನೈ ಕೂಡ ಸ್ಥಾನ ಪಡೆದುಕೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

Latest Videos

click me!