ಬ್ರೆಡ್ ಕ್ರಂಬಿಂಗ್…. ಸಂಗಾತಿ ಬೇಕು, ಸೆಕ್ಸ್ ಬೇಕು… ಆದರೆ ಪ್ರೀತಿ , ಕಮಿಟ್ಮೆಂಟ್ ಬೇಡ

First Published | Dec 2, 2023, 4:52 PM IST

ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರು ತಮ್ಮ ಸಂಬಂಧಕ್ಕೆ ಒಂದು ಹೆಸರನ್ನು ನೀಡುವ ಭರವಸೆಯಲ್ಲಿ ತಮ್ಮ ಸಂಗಾತಿಯ ಬಗ್ಗೆ ಹೆಚ್ಚು ಗಮನ ಹರಿಸಲು ಪ್ರಾರಂಭಿಸಿದಾಗ, ಅದನ್ನು ಆನ್ಲೈನ್ ಡೇಟಿಂಗ್ ಜಗತ್ತಿನಲ್ಲಿ ಬ್ರೆಡ್ ಕ್ರಂಬಿಂಗ್ ಎಂದು ಕರೆಯಲಾಗುತ್ತದೆ.
 

ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಡೇಟಿಂಗ್ (online dating trend) ಪ್ರವೃತ್ತಿ ತುಂಬಾನೆ ಹೆಚ್ಚಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಇಂದಿನ ಸಮಯದಲ್ಲಿ, ಜನರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಲು ಡೇಟಿಂಗ್ ಅಪ್ಲಿಕೇಶನ್ಗಳನ್ನು ಆಶ್ರಯಿಸುತ್ತಿದ್ದಾರೆ. ಆದರೆ, ಅದರಲ್ಲಿ ಯಾವುದೇ ತಪ್ಪಿಲ್ಲ. ಏಕೆಂದರೆ ಸ್ವಭಾವತಃ ತುಂಬಾ ನಾಚಿಕೆಪಡುವವರಿಗೆ ಆನ್ಲೈನ್ ಡೇಟಿಂಗ್ ಉತ್ತಮ ಆಯ್ಕೆಯಾಗಿದೆ.
 

ಆದರೆ ಕೆಲವೊಮ್ಮೆ ಈ ಬಗ್ಗೆ ಎಚ್ಚರವಾಗಿರಬೇಕು. ಯಾಕಂದ್ರೆ, ಆನ್ಲೈನ್ ಡೇಟಿಂಗ್ ಬಹಳಷ್ಟು ನಕಲಿ ಪ್ರೊಫೈಲ್ಗಳನ್ನು ಒಳಗೊಂಡಿರುತ್ತದೆ- ಸುಳ್ಳು ಸಂಬಂಧಗಳು, ನಕಲಿ ಸಂದೇಶಗಳು, ಹಗರಣಗಳು ಮತ್ತು ಗೊಂದಲದ ನಡವಳಿಂದ ನಿಮ್ಮನ್ನು ಸಮಸ್ಯೆಯೂ ನೂಕಬಹುದು. ಆನ್ ಲೈನ್ ಡೇಟಿಂಗ್ ನಲ್ಲಿ ಸದ್ಯ ಬ್ರೆಡ್ ಕ್ರಂಬಿಂಗ್ (breadcrumbing) ಸಹ ಹೆಚ್ಚು ಸುದ್ದಿಯಾಗ್ತಿದೆ. ಏನಿದು ಬ್ರೆಡ್ ಕ್ರಂಬಿಂಗ್ ?

Tap to resize

ಬ್ರೆಡ್ ಕ್ರಂಬಿಂಗ್ ಎಂದರೇನು ಎಂದು ಅರ್ಥಮಾಡಿಕೊಳ್ಳಿ?
ಬ್ರೆಡ್ ಕ್ರಂಬಿಂಗ್ ಎಂದರೆ ಯಾವುದೇ ಬದ್ಧತೆಯಿಲ್ಲದೆ ಮುಂದುವರಿಯಲು ಬಯಸುವವನು, ಆದರೆ ಅವರು ಯಾವುದೇ ಬಂಧನದಲ್ಲಿ ಬಂಧಿಸಲ್ಪಡಲು ಬಯಸುವುದಿಲ್ಲ. ಬ್ರೆಡ್ ಕ್ರಂಬಿಂಗ್ ಸಂಬಂಧದಲ್ಲಿ ತೊಡಗಿರುವ ಜನರು ತಮ್ಮ ಸಂಗಾತಿಯ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ.

ಅಂತಹ ಜನರು ತಮ್ಮ ಸಂಗಾತಿಗೆ ಟೆಕ್ಸ್ಟ್ ಮಾಡಲು ಗಂಟೆಗಟ್ಟಲೆ ಅಥವಾ ಕೆಲವೊಮ್ಮೆ ದಿನಪೂರ್ತಿ ವ್ಯಯಿಸೋದೆ ಇಲ್ಲ. ಅಂತಹ ಜನರು ಯಾವುದೇ ರೀತಿಯ ವಿವರಣೆ ಅಥವಾ ಉತ್ತರದಾಯಿತ್ವವನ್ನು ನೀಡಲು ಸಹ ಇಷ್ಟಪಡುವುದಿಲ್ಲ. ವಾಸ್ತವವಾಗಿ, ಈ ಜನರು ಆಗಾಗ್ಗೆ ವಿಷಯವನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ.
 

ಯಾಕೆ ಈ ರೀತಿಯಾಗುತ್ತೆ? 
ಹೆಚ್ಚಿನ ಜನರಿಗೆ ಬ್ರೆಡ್ ಕ್ರಂಬಿಂಗ್ ಬಗ್ಗೆ ತಿಳಿದಿಲ್ಲ ಎಂದು ತಿಳಿದರೆ ಆಶ್ಚರ್ಯವಾಗಬಹುದು. ಯಾವ ರಿಲೇಶನ್ ಶಿಪ್ ನಲ್ಲಿ ಬ್ರೆಡ್ ಕ್ರಂಬಿಂಗ್  ಇರುತ್ತದೆಯೋ? ಅಲ್ಲಿ ಜನರು ತಮ್ಮ ಭಾವನೆಗಳ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ. ತಮ್ಮ ಸಂಬಂಧದಿಂದ ಅವರು ಏನು ಬಯಸುತ್ತಾರೆಂದು ಅನ್ನೋದೆ ತಿಳಿಯೋದಿಲ್ಲ. ಅಂತಹ ಜನರು ಸಂಬಂಧಗಳನ್ನು ನಿರ್ಮಿಸಲು ಮತ್ತು ನಿರ್ವಹಿಸಲು ತುಂಬಾ ಕಷ್ಟಪಡುತ್ತಾರೆ. ಬ್ರೆಡ್ ಕ್ರಂಬಿಂಗ್  ಹೊಂದಿರುವ ಜನರು ತಮ್ಮ ಸಂಗಾತಿ ಯಾವ ರೀತಿ ಅನುಭವಿಸುತ್ತಿದ್ದಾರೆ ಎಂಬುದರ ಬಗ್ಗೆ ಯೋಚನೆ ಮಾಡೋದೆ ಇಲ್ಲ. ಅಂತಹ ಜನರು ಭಾವನಾತ್ಮಕವಾಗಿ ತುಂಬಾ ಒಂಟಿಯಾಗಿರುವುದರಿಂದ (emotionally single) ಮಾತ್ರ ರಿಲೇಶನ್ ಶಿಪ್ ಗೆ ಬರ್ತಾರೆ. 

ಬ್ರೆಡ್ ಕ್ರಂಬಿಂಗ್ ಲಕ್ಷಣಗಳು ಯಾವುವು?
ಬ್ರೆಡ್ ಕ್ರಂಪಿಂಗ್ ಸಂಬಂಧದಲ್ಲಿ ತೊಡಗಿರುವ ಜನರು ತಮ್ಮ ಸಂಗಾತಿಯೊಂದಿಗೆ ಸರಸವಾಡಲು ಇಷ್ಟಪಡುತ್ತಾರೆ, ಆದರೆ ಅವರು ಎಂದಿಗೂ ಅವರೊಂದಿಗೆ ಗಂಭೀರವಾಗಿರುವುದಿಲ್ಲ. ನಿಮ್ಮ ಜೊತೆ ಒಂದು ಸಮಯದಲ್ಲಿ ಕ್ಲೋಸ್ ಆಗಿರುವ ವ್ಯಕ್ತಿ ಲವ್ ಪ್ರಪೋಸ್ (love propose) ಮಾಡಾಬಹುದು, ಮದುವೆ ಬಗ್ಗೆ ಮಾತನಾಡಬಹುದು ಎಂದು ನೀವು ಯೋಚಿಸಿದರೆ ಅದು ತಪ್ಪು. ಯಾಕಂದ್ರೆ ಬ್ರೆಡ್ ಕ್ರಂಬಿಂಗ್ ಹೊಂದಿರುವ ಸಂಗಾತಿಯು ಜೊತೆಗಿದ್ದಾಗ ಮಾತ್ರ ಪ್ರೀತಿ, ರೊಮ್ಯಾನ್ಸ್. ಮತ್ತೆ ಅವರು ತಮ್ಮ ಸಂಗಾತಿಯನ್ನೇ ಮರೆಯುತ್ತಾರೆ. 
 

ಫಿಸಿಕಲ್ ಇಂಟಿಮೆಸಿ ಮಾತ್ರ ಇರುತ್ತೆ
ಬ್ರೆಡ್ ಕ್ರಂಬಿಂಗ್ ಸಂಬಂಧದಲ್ಲಿ ವಾಸಿಸುವ ಜನರು ತಮ್ಮ ಆಸೆಗಳನ್ನು ಪೂರೈಸುವ ಪ್ರಾಥಮಿಕ ಉದ್ದೇಶವನ್ನು ಹೊಂದಿರುತ್ತಾರೆ. ಅವರಿಂದಾಗಿ ತಮ್ಮ ಸಂಗಾತಿ ಎಷ್ಟು ತೊಂದರೆ ಅನುಭವಿಸಬಹುದು ಎಂಬುದರ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಅಂತಹ ಜನರು ಫಿಸಿಕಲ್ ಇಂಟಿಮೆಸಿ (physical intimacy) ಮಾತ್ರ ನಂಬುತ್ತಾರೆ. ಅವರು ತಮ್ಮ ಲೈಂಗಿಕ ಅಗತ್ಯಗಳನ್ನು ಪೂರೈಸಲು ಮಾತ್ರ ರಿಲೇಶನ್ ಶಿಪ್ ನಲ್ಲಿರಲು ಬಯಸುತ್ತಾರೆ.

ಪ್ರೀತಿ ತಕ್ಷಣ ಹೆಚ್ಚಾಗುತ್ತದೆ
ಬ್ರೆಡ್ ಕ್ರಂಬಿಂಗ್ ಮಾಡುವ ಜನರು ನಿಮ್ಮ ಆಸಕ್ತಿ ಕಡಿಮೆಯಾಗಲು ಪ್ರಾರಂಭಿಸುವ ಸಮಯದಲ್ಲಿ ತಮ್ಮ ಸಂಗಾತಿಯ ಬಗ್ಗೆ ಗಮನ ಹರಿಸುತ್ತಾರೆ. ಏಕೆಂದರೆ ತಮ್ಮ ಸಂಗಾತಿಯು ತಮ್ಮಿಂದ ದೂರ ಸರಿಯುತ್ತಿದ್ದಾರೆ ಎಂದು ಅವರು ಇದ್ದಕ್ಕಿದ್ದಂತೆ ಭಾವಿಸುತ್ತಾರೆ. ಈ ಸಮಯದಲ್ಲಿ, ನಿಮ್ಮ ಗಮನವನ್ನು ಮತ್ತೆ ಸೆಳೆಯಲು ಅವರು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಾರೆ. ಆದರೆ ಎಲ್ಲವೂ ಸಾಮಾನ್ಯವಾದಾಗ, ಅವರ ವರ್ತನೆ ಮೊದಲಿನಂತೆಯೇ ಆಗುತ್ತದೆ.

Latest Videos

click me!