ವಿಶ್ವದ ಬಲು ದುಬಾರಿ ದೇಶಗಳಿವು… ಇಲ್ಲಿ ಹೋಗೊ ಮುನ್ನ 100 ಬಾರಿ ಯೋಚ್ನೆ ಮಾಡ್ಬೇಕು

First Published | Dec 2, 2023, 4:59 PM IST

ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ಪ್ರಪಂಚದ ದುಬಾರಿ ದೇಶಗಳ ಬಗ್ಗೆ ಸಮೀಕ್ಷೆ ನಡೆಸಿದೆ. ನ್ಯೂಯಾರ್ಕ್ ಈ ಹಿಂದೆ ವಿಶ್ವದ ಅತ್ಯಂತ ದುಬಾರಿ ನಗರವಾಗಿತ್ತು. ಆದರೆ ಈಗ ನ್ಯೂಯಾರ್ಕನ್ನು ಹಿಂದಿಕ್ಕಿ, ಮತ್ತೆರಡು ದೇಶಗಳು ದುಬಾರಿ ದೇಶಗಳ ಲಿಸ್ಟ್ ಸೇರಿಕೊಂಡಿವೆ.

ವಿಶ್ವದ ಅತ್ಯಂತ ದುಬಾರಿ ನಗರಗಳು ಯಾವುವು ಎಂದು ನಿಮಗೆ ತಿಳಿದಿದೆಯೇ? ಕಡಿಮೆ ಸಂಪಾದನೆ ಮಾಡುವವರು ಬದುಕುಳಿಯಲು ಸಾಧ್ಯವಾಗದ ನಗರಗಳು ಯಾವುವು? ಅಂತಹ ನಗರಗಳ ಪಟ್ಟಿ ಹೊರಬಂದಿದೆ. ನ್ಯೂಯಾರ್ಕ್ ಈ ಹಿಂದೆ ವಿಶ್ವದ ಅತ್ಯಂತ ದುಬಾರಿ ನಗರವಾಗಿತ್ತು. ಆದರೆ ಈಗ ನ್ಯೂಯಾರ್ಕನ್ನು (NewYork) ಹಿಂದಿಕ್ಕಿ, ಮತ್ತೆರಡು ದೇಶಗಳು ದುಬಾರಿ ದೇಶಗಳ ಲಿಸ್ಟ್ ಸೇರಿಕೊಂಡಿವೆ.
 

ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ಪ್ರಪಂಚದ ದುಬಾರಿ ದೇಶಗಳ (most expensive countries) ಬಗ್ಗೆ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯ ಪ್ರಕಾರ, ವಿಶ್ವದ ಎರಡು ಅತ್ಯಂತ ದುಬಾರಿ ನಗರಗಳು ಸಿಂಗಾಪುರ್ ಮತ್ತು ಜ್ಯೂರಿಚ್ ಎಂದು ತಿಳಿದು ಬಂದಿದೆ. ಈ ಎರಡೂ ದೇಶಗಳು ಜಂಟಿಯಾಗಿ ಮೊದಲ ಸ್ಥಾನದಲ್ಲಿವೆ. ಹಾಗಿದ್ರೆ ದುಬಾರಿಯಾಗಿರುವ ಉಳಿದ ದೇಶಗಳು ಯಾವುವು ನೋಡೋಣ. 
 

Tap to resize

ಜಿನೀವಾ (Geneva) ಮತ್ತು ನ್ಯೂಯಾರ್ಕ್ ಜಂಟಿಯಾಗಿ ಮೂರನೇ ಸ್ಥಾನದಲ್ಲಿವೆ. ಹಾಂಗ್ ಕಾಂಗ್ ಐದನೇ ಸ್ಥಾನದಲ್ಲಿದ್ದರೆ, ಲಾಸ್ ಏಂಜಲೀಸ್ ಆರನೇ ಸ್ಥಾನದಲ್ಲಿದೆ. ಪ್ಯಾರಿಸ್ ಏಳನೇ ಸ್ಥಾನದಲ್ಲಿದ್ದರೆ, ಕೋಪನ್ ಹ್ಯಾಗನ್ ಮತ್ತು ಟೆಲ್ ಅವೀವ್ ಜಂಟಿಯಾಗಿ ಎಂಟನೇ ಸ್ಥಾನದಲ್ಲಿವೆ. ಸ್ಯಾನ್ ಫ್ರಾನ್ಸಿಸ್ಕೋ ಹತ್ತನೇ ಸ್ಥಾನದಲ್ಲಿದೆ.
 

ಸಿಂಗಾಪುರ ಏಕೆ ಮೊದಲ ಸ್ಥಾನದಲ್ಲಿದೆ?
ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ವರದಿಯ ಪ್ರಕಾರ, ಹೆಚ್ಚಿನ ಕಾರು ವೆಚ್ಚ, ದುಬಾರಿ ಆಲ್ಕೋಹಾಲ್ ಮತ್ತು ಹೆಚ್ಚುತ್ತಿರುವ ದಿನಸಿ ಬೆಲೆಗಳಿಂದಾಗಿ ಸಿಂಗಾಪುರ (Singapore) ಅಮೆರಿಕದ ನ್ಯೂಯಾರ್ಕ್ ನಗರವನ್ನು ಹಿಂದಿಕ್ಕಿದೆ. ಕಳೆದ ವರ್ಷ ಆರನೇ ಸ್ಥಾನದಲ್ಲಿದ್ದ ಜ್ಯೂರಿಚ್ ಈ ಬಾರಿ ಮೊದಲ ಸ್ಥಾನಕ್ಕೇರಿದೆ.
 

ಜ್ಯೂರಿಚ್‌ನ (Zurich) ಏರಿಕೆಯು ಸ್ವಿಸ್ ಫ್ರಾಂಕ್ನ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ದಿನಸಿ, ಗೃಹೋಪಯೋಗಿ ವಸ್ತುಗಳು ಮತ್ತು ಮನರಂಜನೆಯ ಹೆಚ್ಚಿನ ಬೆಲೆಗಳನ್ನು ಪ್ರತಿಬಿಂಬಿಸುತ್ತದೆ. ಎಲ್ಲಾ ವಸ್ತುಗಳ ಬೆಲೆ ಹೆಚ್ಚಾಗಿರೋದರಿಂದ ಇದು ಜ್ಯೂರಿಚ್ ಜೀವಿಸಲು ಅತ್ಯಂತ ದುಬಾರಿ ಪ್ರದೇಶವಾಗಿದೆ ಎಂದು ತಿಳಿದು ಬಂದಿದೆ. 

ಅಗ್ಗದ ನಗರ ಯಾವುದು?
ಸಿರಿಯಾದ ರಾಜಧಾನಿ ಡಮಾಸ್ಕಸ್ ಅತ್ಯಂತ ಅಗ್ಗದ ನಗರವಾಗಿತ್ತು. ಜಪಾನ್ ರಾಜಧಾನಿ ಟೋಕಿಯೊ 23 ಸ್ಥಾನದಿಂದ 60ನೇ ಸ್ಥಾನಕ್ಕೆ ಕುಸಿದಿದೆ. ಇದಕ್ಕೆ ಕಾರಣ ದುರ್ಬಲ ಜಪಾನಿನ ಯೆನ್ ಎಂದು ಹೇಳಲಾಗುತ್ತಿದೆ. ಒಸಾಕಾ 27 ಸ್ಥಾನ ಕುಸಿದು 70ನೇ ಸ್ಥಾನಕ್ಕೆ ಕುಸಿದಿದೆ. ಇಸ್ರೇಲ್ ನ ಟೆಲ್ ಅವೀವ್ ನಗರ ಟಾಪ್ 10ರಲ್ಲಿ ಸ್ಥಾನ ಪಡೆದಿದೆ.

ವಿಶ್ವದ ಟಾಪ್ 10 ದುಬಾರಿ ನಗರಗಳು ಇವು (ಹೆಚ್ಚಿನ ದೇಶಗಳು ಟೈ ಆಗಿವೆ)
ಸಿಂಗಾಪುರ್ - 1
ಜ್ಯೂರಿಚ್ -1
ಜಿನೀವಾ-3
ನ್ಯೂಯಾರ್ಕ್ - 3
ಹಾಂಗ್ ಕಾಂಗ್ - 5
ಲಾಸ್ ಏಂಜಲೀಸ್ - 6
ಪ್ಯಾರಿಸ್ - 7
ಕೋಪನ್ ಹ್ಯಾಗನ್ - 8
ಟೆಲ್ ಅವೀವ್ - 8
ಸ್ಯಾನ್ ಫ್ರಾನ್ಸಿಸ್ಕೋ - 10

ದೆಹಲಿ, ಚೆನ್ನೈ, ಬೆಂಗಳೂರು, ಹೈದರಾಬಾದ್, ಜೈಪುರ, ಅಹಮದಾಬಾದ್, ಸೂರತ್, ಕೋಲ್ಕತಾ ಮತ್ತು ಪುಣೆಯನ್ನು ಭಾರತದ ಅತ್ಯಂತ ದುಬಾರಿ ನಗರಗಳು ಎಂದು ಪರಿಗಣಿಸಲಾಗಿದೆ. ನೀವು ಭಾರತದ ಈ ನಗರಗಳಲ್ಲಿ ವಾಸಿಸಲು ಬಯಸಿದರೆ, ನೀವು ನಿಮ್ಮ ಜೇಬನ್ನು ತುಂಬಿಸಿರಲೇಬೇಕು. ಅಂದರೆ, ಇಲ್ಲಿ ಕಡಿಮೆ ಹಣದಲ್ಲಿ ಬದುಕುವುದು ಕಷ್ಟ.
 

Latest Videos

click me!