Why Mongoose kills Snakes: ಮುಂಗುಸಿ-ಹಾವಿನ ನಡುವಿನ ದ್ವೇಷ ಎಲ್ಲಿಂದ ಪ್ರಾರಂಭವಾಯಿತು ಗೊತ್ತಾ?

Published : Aug 12, 2026, 08:14 PM IST

Why Mongoose kills Snakes: ಇವುಗಳ ನಡುವಿನ ವೈರತ್ವಕ್ಕೆ ಪುರಾಣದ ಶಾಪ ಮತ್ತು ವಂಶವಾಹಿಗಳ ಪ್ರಭಾವ ಎರಡೂ ಕಾರಣ ಎನ್ನುತ್ತಾರೆ ತಜ್ಞರು. ಜನ್ಮಜಾತ ವೈರಿಗಳಾದ ಇವುಗಳ ದ್ವೇಷದ ಇತಿಹಾಸವನ್ನು ಕೆದಕಿದಾಗ ಹೊರಬಂದ ಅಚ್ಚರಿಯ ಸಂಗತಿಗಳು ಇಲ್ಲಿವೆ.

PREV
15
ಈ ಮಟ್ಟದ ದ್ವೇಷ ಎಲ್ಲಿಂದ ಶುರುವಾಯಿತು?

ಈ ಮಟ್ಟದ ದ್ವೇಷ ಎಲ್ಲಿಂದ ಶುರುವಾಯಿತು?
ಹಾವು ಮತ್ತು ಮುಂಗುಸಿ ಕಾಳಗದ ಬಗ್ಗೆ ನಾವು ಬಾಲ್ಯದಿಂದಲೂ ಕೇಳುತ್ತಲೇ ಬಂದಿದ್ದೇವೆ. ಇವೆರಡೂ ಮುಖಾಮುಖಿಯಾದರೆ ಸಾಕು, ಅಲ್ಲಿ ಯುದ್ಧ ಖಚಿತ. ಆದರೆ ಇವೆರಡರ ನಡುವೆ ಈ ಮಟ್ಟದ ದ್ವೇಷ ಎಲ್ಲಿಂದ ಶುರುವಾಯಿತು? ಯಾಕೆ ಇವೆರಡೂ ಒಂದಕ್ಕೊಂದು ಆಗಿಬರುವುದಿಲ್ಲ? ಇದರ ಹಿಂದೆ ಪುರಾಣಗಳ ಕಥೆ ಮತ್ತು ವೈಜ್ಞಾನಿಕ ಕಾರಣಗಳೆರಡೂ ಇವೆ. ಅವುಗಳ ಬಗ್ಗೆ ಇಲ್ಲಿದೆ ವಿವರವಾದ ಮಾಹಿತಿ.

25
ಪುರಾಣ ಹೇಳುವ ಶಾಪದ ಕಥೆ

ಪುರಾಣ ಹೇಳುವ ಶಾಪದ ಕಥೆ
ಪುರಾಣಗಳ ಪ್ರಕಾರ, ಕಶ್ಯಪ ಪ್ರಜಾಪತಿಗೆ ಕದ್ರು ಮತ್ತು ವಿನತೆ ಎಂಬ ಇಬ್ಬರು ಪತ್ನಿಯರಿದ್ದರು. ಕದ್ರು ಹಾವುಗಳ ತಾಯಿಯಾದರೆ, ವಿನತೆ ಗರುಡ ಮತ್ತು ಅರುಣನ ತಾಯಿ. ಕದ್ರುವಿಗೆ ವಿನತೆಯ ಮೇಲೆ ವಿಪರೀತ ದ್ವೇಷವಿತ್ತು. ಒಮ್ಮೆ ಇವರಿಬ್ಬರ ನಡುವೆ ಪಂದ್ಯವೊಂದು ನಡೆಯುತ್ತದೆ. ಆ ಪಂದ್ಯದಲ್ಲಿ ಕದ್ರು ಮೋಸ ಮಾಡಿ ವಿನತೆ ಸೋಲುವಂತೆ ಮಾಡುತ್ತಾಳೆ ಮತ್ತು ಅವಳನ್ನು ತನ್ನ ದಾಸಿಯನ್ನಾಗಿ ಮಾಡಿಕೊಳ್ಳುತ್ತಾಳೆ.

35
ಹಾವುಗಳಿಗೆ ಶಾಪ ನೀಡಿದ ವಿನತೆ

ಹಾವುಗಳಿಗೆ ಶಾಪ ನೀಡಿದ ವಿನತೆ
ನಂತರ ಈ ಮೋಸದ ಬಗ್ಗೆ ತಿಳಿದ ವಿನತೆ, ಹಾವುಗಳಿಗೆ ಶಾಪ ನೀಡುತ್ತಾಳೆ. ಅಂದಿನಿಂದ ವಿನತೆಯ ಮಗನಾದ ಗರುಡನು ಹಾವುಗಳನ್ನು ಕೊಂದು ತಿನ್ನಲು ಪ್ರಾರಂಭಿಸುತ್ತಾನೆ. ಹೀಗೆ ಗರುಡ ಜಾತಿಗೆ ಸೇರಿದ ಪಕ್ಷಿಗಳು ಮತ್ತು ಹಾವುಗಳ ನಡುವೆ ವೈರತ್ವ ಶುರುವಾಯಿತು ಎಂದು ಹೇಳಲಾಗುತ್ತದೆ. ವಿಶೇಷವೆಂದರೆ, ಮುಂಗುಸಿಯನ್ನು ನೆಲ ಗರುಡ (Terrestrial Garuda) ಎಂದು ಕರೆಯಲಾಗುತ್ತದೆ. ಗರುಡನು ಆಕಾಶದಲ್ಲಿ ಹಾವುಗಳನ್ನು ಬೇಟೆಯಾಡಿದರೆ, ಮುಂಗುಸಿಯು ನೆಲದ ಮೇಲೆ ಹಾವುಗಳನ್ನು ಬೇಟೆಯಾಡಿ ಕೊಲ್ಲುತ್ತದೆ ಎಂಬುದು ಪೌರಾಣಿಕ ನಂಬಿಕೆ.

45
ಆಹಾರಕ್ಕಾಗಿ ಸಂಘರ್ಷ

ಆಹಾರಕ್ಕಾಗಿ ಸಂಘರ್ಷ
ಇನ್ನು ವೈಜ್ಞಾನಿಕ ಮತ್ತು ಪ್ರಕೃತಿಯ ದೃಷ್ಟಿಕೋನದಿಂದ ನೋಡುವುದಾದರೆ, ಹಾವು ಮತ್ತು ಮುಂಗುಸಿ ಎರಡೂ ಸಹ ಒಂದೇ ರೀತಿಯ ಆಹಾರವನ್ನು (ಸಣ್ಣ ಪ್ರಾಣಿಗಳು, ಇಲಿಗಳು ಇತ್ಯಾದಿ) ಅವಲಂಬಿಸಿವೆ. ಇವು ಹೆಚ್ಚಾಗಿ ಆಹಾರಕ್ಕಾಗಿ ಬೇಟೆಯಾಡುವ ಸಂದರ್ಭದಲ್ಲೇ ಮುಖಾಮುಖಿಯಾಗುತ್ತವೆ. ತನ್ನ ಆಹಾರದ ಮೇಲೆ ಮತ್ತೊಬ್ಬರು ಹಕ್ಕು ಸಾಧಿಸಬಾರದು ಎಂಬ ಪೈಪೋಟಿಯಿಂದ ಇವುಗಳ ನಡುವೆ ಹೋರಾಟ ನಡೆಯುತ್ತದೆ ಎನ್ನಲಾಗುತ್ತದೆ.

55
ವಿಷವನ್ನು ತಡೆಯುವ ಶಕ್ತಿ

ವಿಷವನ್ನು ತಡೆಯುವ ಶಕ್ತಿ
ಹಾವಿನ ವಿಷವು ಮುಂಗುಸಿಯ ಮೇಲೆ ನೇರವಾಗಿ ಪರಿಣಾಮ ಬೀರುವುದಿಲ್ಲ. ಮುಂಗುಸಿಯ ದೇಹವು ಹಾವಿನ ವಿಷವನ್ನು ತಡೆದುಕೊಳ್ಳುವ ವಿಶೇಷ ಶಕ್ತಿಯನ್ನು ಹೊಂದಿದೆ. ಈ ಧೈರ್ಯದಿಂದಲೇ ಮುಂಗುಸಿಯು ಹಾವಿನ ಜೊತೆ ನೇರವಾಗಿ ಹೋರಾಡುತ್ತದೆ ಮತ್ತು ತನ್ನ ವೇಗದಿಂದ ಹಾವನ್ನು ಸೋಲಿಸಿ ಆಹಾರವನ್ನು ದಕ್ಕಿಸಿಕೊಳ್ಳುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಹಾವು ಮತ್ತು ಮುಂಗುಸಿಯ ವೈರತ್ವಕ್ಕೆ ಶಾಪದ ಕಥೆಯ ಜೊತೆಗೆ ಬದುಕಿನ ಉಳಿವಿಗಾಗಿ ನಡೆಸುವ ಹೋರಾಟವೂ ಒಂದು ಪ್ರಮುಖ ಕಾರಣವಾಗಿದೆ.

Disclaimer: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಜಾನಪದ ಕಥೆಗಳನ್ನು ಆಧರಿಸಿದೆ. ಇದು ಪಂಡಿತರು ಮತ್ತು ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಗಿದೆ. ಇದನ್ನು ಕೇವಲ ಓದುಗರ ಆಸಕ್ತಿಯ ಮೇರೆಗೆ ಒದಗಿಸಲಾಗಿದ್ದು, ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂಬುದನ್ನು ಓದುಗರು ಗಮನಿಸಬೇಕು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories